• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬೆಂಗಳೂರು ಗಲಭೆ ಕುರಿತು ಸಚಿವ ಮಾಧುಸ್ವಾಮಿ ಮಹತ್ವದ ಹೇಳಿಕೆ!

|

ಬೆಂಗಳೂರು, ಸೆ. 27: ಕಾಂಗ್ರೆಸ್ ಪಕ್ಷ ಮಂಡಿಸಿದ್ದ ಅವಿಶ್ವಾಸ ನಿರ್ಣಯವನ್ನು ರಾಜ್ಯ ಬಿಜೆಪಿ ಸರ್ಕಾರ ಗೆದ್ದಿದೆ. ಅವಿಶ್ವಾಸ ನಿರ್ಣಯದ ಮೇಲೆ ನಡೆದ ಚರ್ಚೆಯಲ್ಲಿ ಬೆಂಗಳೂರು ಗಲಭೆ ಕುರಿತು ವಿಸ್ತ್ರತ ಚರ್ಚೆ ನಡೆಯಿತು. ಡಿ.ಕೆ. ರವಿ ಪ್ರಕರಣದ ಪ್ರಸ್ತಾಪಿಸಿದ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು, ಕತ್ತೆ ಮೇಲೆ ಮೆರವಣಿಗೆ ಹೊರಟಿದ್ರಿ. ಸಿಬಿಐ ತನಿಖೆಗೆ ಆಗ್ರಹಿಸಿ ಹೊರಟಿರಲಿಲ್ಲವೆ? ಈಗ ತನಿಖೆಗೆ ಕೊಡೋಕೆ ಹೆದರಿಕೆ ಯಾಕೆ? ತನಿಖೆಗೆ ಕೊಡ್ರಿ ಎಂದು ಸಿದ್ದರಾಮಯ್ಯ ಪ್ರಸ್ತಾಪಿಸಿದರು. ಸಿದ್ದರಾಮಯ್ಯ ಅವರ ಹೇಳಿಕೆಗೆ ಉತ್ತರಿಸಲು ಸಚಿವ ಆರ್. ಆಶೋಕ್ ಅವರು ಪರದಾಡಿದರು.

ಅವಿಶ್ವಾಸ ನಿರ್ಣಯದ ಚರ್ಚೆಯ ಬಳಿಕ ಸದನಕ್ಕೆ ಉತ್ತರ ಕೊಟ್ಟ ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಅವರು, ಡಿಜೆ ಹಳ್ಳಿ ಹಾಗೂ ಕೆಜಿ ಹಳ್ಳಿ ಗಲಭೆಯಲ್ಲಿ ಯಾವುದೇ ಅಮಾಯಕರನ್ನು ಬಂಧಿಸಿಲ್ಲ ಎಂದು ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಹೇಳಿದ್ದಾರೆ. ವಿಧಾನಸಭೆಯಲ್ಲಿ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಮಾಡಿದ ಆರೋಪಕ್ಕೆ ಉತ್ತರ ನೀಡಿದ ಅವರು, ನವೀನ್ ಎನ್ನುವ ವ್ಯಕ್ತಿ ಮೊಹಮದ್ ಪೈಗಂಬರ್ ಬಗ್ಗೆ ಆಕ್ಷೇಪಾರ್ಹ ಪೋಸ್ಟ್ ಮಾಡಿದ್ದರಿಂದ ಅವರನ್ನು ತಮ್ಮ ಕೈಗೆ ಕೊಡಿ ಎಂದು ಗುಂಪಿನಲ್ಲಿ ಜನರು ಪೊಲೀಸರ ಮೇಲೆ ಒತ್ತಡ ಹೇರಿದ್ದಾರೆ. ಬಂಧಿತ ಆರೋಪಿಯನ್ನು ಜನರ ಕೈಗೆ ಕೊಡಲು ಸಾಧ್ಯವೇ?

ಡಿ.ಜೆ ಹಳ್ಳಿ ಗಲಭೆ ಪ್ರಕರಣ: NIAಯಿಂದ 30 ಕಡೆ ದಾಳಿ, ಪ್ರಮುಖ ಆರೋಪಿ ಬಂಧನ

   ರೈತರ ಪ್ರತಿಭಟನೆ ಕುರಿತು C.M BSY ಹೇಳಿದ್ದೇನು | Oneindia Kannada

   ಪೋಲೀಸರು ಒಳಗೆ ಬರಬಾರದು ಎಂದು ಸಂಪೂರ್ಣ ಏರಿಯಾ ಬಂದ್ ಮಾಡಿದ್ದಾರೆ. 92 ಜನ ಪೋಲಿಸರ ಮೇಲೆ ಹಲ್ಲೆ ಮಾಡಿದ್ದಾರೆ. ಪೊಲೀಸ್ ಸ್ಟೇಶನ್ ದ್ವಂಸ ಮಾಡಿದ್ದಾರೆ. ಶಾಸಕರ ಮನೆಗೆ ಬೆಂಕಿ ಹಚ್ಚಿದ್ದಾರೆ. ಎಲ್ಲ ಗಲಭೆಕೊರರ ಬಗ್ಗೆ ಸಿಸಿ ಟಿವಿಯಲ್ಲಿ ದಾಖಲೆ ಪಡೆದು ಬಂಧಿಸಲಾಗಿದೆ. ಅವರ್ಯಾರು ಅಮಾಯಕರಲ್ಲ ಎಂದು ಮಾಧುಸ್ವಾಮಿ ಉತ್ತರಿಸಿದರು.

   English summary
   Law Minister JC Madhuswamy answered the assembly after a no-confidence motion, Madhuswamy said that no innocent persons have been arrested in the riots of DJ Halli and KG Halli
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X