• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಮೀಕ್ಷೆ ಮೀರಿ ಕರ್ನಾಟಕದಲ್ಲಿ ಅಧಿಕಾರಕ್ಕೆ ಬರುತ್ತೇವೆ: ರಾಹುಲ್ ವಿಶ್ವಾಸ

By Sachhidananda Acharya
|

ಬೆಂಗಳೂರು, ಮೇ 10: ಕರ್ನಾಟಕದಲ್ಲಿ ಸಮೀಕ್ಷೆಗಳನ್ನು ಮೀರಿ ಅಧಿಕಾರಕ್ಕೆ ಬರುತ್ತೇವೆ. ಈ ಬಾರಿ ಕಾಂಗ್ರೆಸ್ ಪಕ್ಷಕ್ಕೆ ಭಾರಿ ಬಹುಮತ ಸಿಗಲಿದೆ. ಅತಂತ್ರ ವಿಧಾನಸಭೆ ಸೃಷ್ಟಿಯಾಗುವುದಿಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ತುಂಬು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, "ಕರ್ನಾಟಕದಲ್ಲಿ ಇಲ್ಲಿಯವರೆಗೆ ಹಲವು ತಿಂಗಳುಗಳ ಕಾಲ ನಾನು ಓಡಾಡಿದ್ದೇನೆ. ನಾವೆಲ್ಲಾ ಒಟ್ಟಾಗಿ ಕರ್ನಾಟಕದಲ್ಲಿ ಪ್ರಚಾರ ನಡೆಸಿದ್ದೇವೆ. ನಾವು ಜನರ ಧ್ವನಿಯನ್ನು ಪ್ರತಿಬಿಂಬಿಸುವ ಪ್ರಣಾಳಿಕೆಯನ್ನು ನೀಡಿದ್ದೇವೆ. ಆದರೆ ಪ್ರತಿಪಕ್ಷಗಳು ಕೇವಲ ವೈಯಕ್ತಿಕ ಟೀಕೆಗಳಿಗೆ ಸೀಮಿತವಾದವು," ಎಂದವರು ಬೇಸರ ವ್ಯಕ್ತಪಡಿಸಿದ್ದಾರೆ.

ಬಿಟಿವಿ ಸಮೀಕ್ಷೆ: ಅತಂತ್ರ ವಿಧಾನಸಭೆ, ಕಾಂಗ್ರೆಸ್‌ ದೊಡ್ಡ ಪಕ್ಷ

"ಬಿಜೆಪಿ ನಾಯಕರು ಸಿಎಂ, ಖರ್ಗೆ ಮತ್ತು ನನ್ನ ಮೇಲೆ ವೈಯಕ್ತಿಕ ದಾಳಿಗಳನ್ನು ನಡೆಸಿದರು. ಆದರೆ ಕರ್ನಾಟಕಕ್ಕೆ ಏನನ್ನು ನೀಡುತ್ತೇವೆ ಎಂದು ಅವರು ಹೇಳಲಿಲ್ಲ. ಆದರೆ ನಾವು ಕರ್ನಾಟಕಕ್ಕೆ ಏನು ನೀಡುತ್ತೇವೆ ಎನ್ನುವುದನ್ನು ಹೇಳಿದ್ದೇವೆ. ಪ್ರಣಾಳಿಕೆಯಲ್ಲಿ ಈ ಬಗ್ಗೆ ವಿವರಿಸಿದ್ದೇವೆ," ಎಂದು ರಾಹುಲ್ ಹೇಳಿದರು.

 ಮೋದಿ ಟೀಕೆ ಪ್ರಧಾನಿ ಹುದ್ದೆಗೆ ತಕ್ಕುದಲ್ಲ

ಮೋದಿ ಟೀಕೆ ಪ್ರಧಾನಿ ಹುದ್ದೆಗೆ ತಕ್ಕುದಲ್ಲ

ನಂತರ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, "ರಾಹುಲ್ ಅವರ ನಾಯಕತ್ವದಲ್ಲಿ ಎಲ್ಲಾ ನಾಯಕರು ಒಟ್ಟಾಗಿ ಪ್ರಚಾರವನ್ನು ಕೈಗೊಂಡಿದ್ದೇವೆ. ಪ್ರಚಾರದಲ್ಲಿ ಬಿಜೆಪಿ ನಾಯಕರು ರಾಷ್ಟ್ರ ಮತ್ತು ರಾಜ್ಯಕ್ಕೆ ಬೇಕಾದ ವಿಷಯಗಳ ಬಗ್ಗೆ ಮಾತನಾಡಿಲ್ಲ. ವೈಯಕ್ತಿಕವಾಗಿ ರಾಹುಲ್ ಗಾಂಧಿಯವರ ಮೇಲೆ, ನನ್ನ ಮೇಲೆ, ಖರ್ಗೆಯವರ ಮೇಲೆ ಆರೋಪ ಮಾಡಿದ್ದಾರೆ. ದೇಶದ ಪ್ರಧಾನಿ ಮಾತಾಡುವಾಗ ಆಧಾರ ರಹಿತ ಆರೋಪ ಮಾಡಬಾದು. ಆರೋಪವಿದ್ದು ಮಾತನಾಡಿದರೆ ನಮ್ಮದೇನೂ ಅಭ್ಯಂತರವಿಲ್ಲ. ಆಧಾರ ರಹಿತ ಆರೋಪದಿಂದ ಪ್ರಧಾನಿ ಹುದ್ದೆ ಘನತೆ ಕಡಿಮೆಯಾಗಿದೆ. ಜೊತೆಗೆ ಇದೊಂಥರಾ ಕಾಮಿಡಿ ಶೋ ಥರ ಆಗಿದೆ," ಎಂದು ಅಭಿಪ್ರಾಯಪಟ್ಟರು.

"ಪ್ರಧಾನಿ ಹುದ್ದೆ ಬಗ್ಗೆ ನನಗೆ ಗೌರವ ಇದೆ. ಆದರೆ ಅವರು ವೈಯಕ್ತಿಕ ನಿಂದನೆಗಳನ್ನು ಮಾಡಿದಾಗ, ಕಟುವಾದ ಶಬ್ದಗಳಲ್ಲಿ ಅದನ್ನು ಖಂಡಿಸಿದ್ದೇನೆ ಹೊರತು ವೈಯಕ್ತಿಕ ಆರೋಪಗಳನ್ನು ಮಾಡಿಲ್ಲ. ಚುನಾವಣೆಯಲ್ಲಿ ಏನು ಚರ್ಚೆಯಾಗಬೇಕಿತ್ತೋ ಅದು ಆಗಿಲ್ಲ ಎನ್ನುವುದು ನನ್ನ ಭಾವನೆ," ಎಂದು ಸಿದ್ದರಾಮಯ್ಯ ಹೇಳಿದರು.

ಪ್ರಧಾನಿ ಹುದ್ದೆಗೇರಲು ನಾನು ಸಿದ್ಧ ಎಂದ ರಾಹುಲ್ ಗಾಂಧಿ

 ಜನರಿಂದ ಪ್ರಬುದ್ಧ ತೀರ್ಮಾನ

ಜನರಿಂದ ಪ್ರಬುದ್ಧ ತೀರ್ಮಾನ

ನಾನು ಮತ್ತು ರಾಹುಲ್ ಗಾಂಧಿ ರಾಷ್ರ, ರಾಜ್ಯದ ಸಮಸ್ಯೆಗಳು ಜೊತೆಗೆ ಈಗ ಏನು ಮಾಡಿದ್ದೇವೆ, ಮುಂದೆ ಏನು ಮಾಡಲಿದ್ದೇವೆ ಎಂಬುದನ್ನು ಹೇಳಿದ್ದೇವೆ. ರಾಜ್ಯದ ಜನರು ಪ್ರಜ್ಞಾವಂತರು. ಸುಳ್ಳು ಆರೋಪಗಳನ್ನು ಮಾಡಿದರೂ, ಹೇಳಿಕೆ ನೀಡಿದರೂ, ಅದನ್ನು ವಿಮರ್ಶಿಸಿ ಪ್ರಬುದ್ಧ ತೀರ್ಮಾನ ತೆಗೆದುಕೊಳ್ಳುವ ನಂಬಿಕೆ ಇರುವುದಾಗಿ ಸಿಎಂ ತಿಳಿಸಿದರು.

ನಮ್ಮ ಸರಕಾರದ ಮೇಲೆ ಪ್ರಭುತ್ವ ವಿರೋಧಿ ಅಲೆ ಇಲ್ಲ. ಪತ್ರಕರ್ತರೂ ಈ ಮಾತನ್ನು ಹೇಳುತ್ತಿದ್ದಾರೆ. ಜನರಿಗೆ ನಮ್ಮ ಆಡಳಿತ, ಕಾರ್ಯಕ್ರಮಗಳು, ನಡವಳಿಕೆ ಸಮಾಧಾನ ತಂದಿದೆ. ನಮ್ಮ ಕಾರ್ಯಕ್ರಮಗಳು ಎಲ್ಲಾ ಜನರಿಗೆ ತಲುಪಿವೆ. ನಮ್ಮ ಕಾರ್ಯಕ್ರಮಗಳು ಕೇವಲ ಒಂದು ಧರ್ಮಕ್ಕೆ ಸೀಮಿತವಾಗಿಲ್ಲ. ಹೀಗಾಗಿ ಜನರು ಮತ್ತೆ ನಮಗೆ ಆಶೀರ್ವಾದ ಮಾಡುತ್ತಾರೆ. ಸ್ಪಷ್ಟ ಬಹುಮತದಿಂದ ನಾವು ಮತ್ತೆ ಅಧಿಕಾರಕ್ಕೆ ಬರುತ್ತೇವೆ ಎಂಬ ತುಂಬು ವಿಶ್ವಾಸ ನನಗಿದೆ ಎಂದು ಅವರು ಹೇಳಿದರು..

ನಂತರ ರಾಹುಲ್ ಗಾಂಧಿ ಪತ್ರಕರ್ತರ ಪ್ರಶ್ನೆಗೆ ಒಂದೊಂದಾಗಿ ಉತ್ತರಿಸಿದರು.

 ರಾಹುಲ್ ಗಾಂಧಿ ನಾಮಧಾರಿ, ನಾನು ಕಾಮಧಾರಿ ಎಂದು ಪ್ರಧಾನಿ ಹೇಳಿದ್ದಾರಲ್ಲ?

ರಾಹುಲ್ ಗಾಂಧಿ ನಾಮಧಾರಿ, ನಾನು ಕಾಮಧಾರಿ ಎಂದು ಪ್ರಧಾನಿ ಹೇಳಿದ್ದಾರಲ್ಲ?

ಇದು ಕರ್ನಾಟಕ ಚುನಾವಣೆ. ಅವರು ವಿಷಯಾಂತರ ಮಾಡಲು ಈ ರೀತಿ ಹೇಳಿದ್ದಾರೆ. ಇಲ್ಲಿ ರಾಹುಲ್ ಗಾಂಧಿ ಮಾಡುವುದು ಏನೂ ಇಲ್ಲ. ಕರ್ನಾಟಕ ಜನರ ಬಗ್ಗೆ ಅವರು ಏನೂ ಮಾತಾಡಿಲ್ಲ. ಇಲ್ಲಿ ಉತ್ತಮ ಕೆಲಸ ಮಾಡಿದ ಕಾಮಧಾರಿ ಸಿದ್ದರಾಮಯ್ಯ ಇದ್ದಾರೆ, ಇನ್ನೊಂದು ಕಡೆ ಜೈಲಿಗೆ ಹೋಗಿ ಬಂದ ಯಡಿಯೂರಪ್ಪ, 35,000 ಕೋಟಿ ಕರ್ನಾಟಕದ ಜನರ ಹಣವನ್ನು ಲೂಟಿ ಮಾಡಿದವರು ಇದ್ದಾರೆ. ಇಲ್ಲಿ ಹೋಲಿಕೆಯೇ ಇಲ್ಲ.

ಮೋದಿ ಬರುವ ಮುಂಚೆ ಅಭಿವೃದ್ಧಿಯೇ ಆಗಿರಲಿಲ್ಲವಾ : ರಾಹುಲ್ ಪ್ರಶ್ನೆ

 ರಾಫೆಲ್ ಡೀಲ್ ಉತ್ತಮ ಡೀಲ್ ಎಂದು ಪ್ರಧಾನಿ ಹೇಳಿದ್ದಾರೆ. ಈ ವಿಷಯ ಕರ್ನಾಟಕಕ್ಕೆ ಬಹಳ ಮುಖ್ಯವೇ?

ರಾಫೆಲ್ ಡೀಲ್ ಉತ್ತಮ ಡೀಲ್ ಎಂದು ಪ್ರಧಾನಿ ಹೇಳಿದ್ದಾರೆ. ಈ ವಿಷಯ ಕರ್ನಾಟಕಕ್ಕೆ ಬಹಳ ಮುಖ್ಯವೇ?

ಪ್ರಧಾನಿ ನರೇಂದ್ರ ಮೋದಿ ಇದು ಬಹಳ ಒಳ್ಳೆಯ ಡೀಲ್ ಎನ್ನುತ್ತಿದ್ದಾರೆ. ಹೌದು ಇದು ಬಹಳ ಒಳ್ಳೆಯ ಡೀಲ್ ಅದನ್ನು ನಾನು ಒಪ್ಪಿಕೊಳ್ಳುತ್ತೇನೆ. ಆದರೆ ಪ್ರಧಾನಿಯವರಿಗೆ ಮತ್ತು ಅವರ ಉದ್ಯಮಿ ಗೆಳೆಯನಿಗೆ ಇದು ಒಳ್ಳೆಯ ಡೀಲ್. ಅವರು 45 ಸಾವಿರ ಕೋಟಿ ರೂಪಾಯಿ ಸಾಲ ಬಾಕಿ ಉಳಿಸಿಕೊಂಡಿದ್ದಾರೆ. ಜೀವನದಲ್ಲಿ ಒಮ್ಮೆಯೂ ವಿಮಾನ ನಿರ್ಮಿಸಿಲ್ಲ. ಡೀಲ್ ನ್ನು ಎಚ್ಎಎಲ್ ಗೆ ನೀಡದೆ ಕರ್ನಾಟಕದ ಸಾವಿರಾರು ಯುವಕರ ಕೆಲಸವನ್ನು ಕಿತ್ತುಕೊಂಡಿದ್ದಾರೆ. ಅವರು ಸರಿಯಾಗಿ ಪ್ರಕ್ರಿಯೆ ನಡೆಸಿಲ್ಲ. ಯುಪಿಎ ಒಂದು ವಿಮಾನಕ್ಕೆ 700 ಕೋಟಿ ನೀಡಿದ ಜಾಗದಲ್ಲಿ ಅವರು 1500 ಕೋಟಿ ನೀಡಿದ್ದಾರೆ. ನಿಜವಾಗಿಯೂ ಇದು ಅತ್ಯುತ್ತಮ ಡೀಲ್.

 ದಲಿತರ ಬಗ್ಗೆ ಕಾಂಗ್ರೆಸ್ ಗೆ ಕಾಳಜಿಯಿಲ್ಲ, ಕೇವಲ ಅವರ ಪ್ರಶ್ನೆಗಳನ್ನು ಮಾತ್ರ ಎತ್ತುತ್ತಿದ್ದಾರೆ ಎಂದು ಪ್ರಧಾನಿ ಆರೋಪಿಸಿದ್ದಾರೆ?

ದಲಿತರ ಬಗ್ಗೆ ಕಾಂಗ್ರೆಸ್ ಗೆ ಕಾಳಜಿಯಿಲ್ಲ, ಕೇವಲ ಅವರ ಪ್ರಶ್ನೆಗಳನ್ನು ಮಾತ್ರ ಎತ್ತುತ್ತಿದ್ದಾರೆ ಎಂದು ಪ್ರಧಾನಿ ಆರೋಪಿಸಿದ್ದಾರೆ?

ಹೌದು ಖಂಡಿತ. ನಾವು ದಲಿತರ ಪರ ಧ್ವನಿ ಎತ್ತುತ್ತಿದ್ದೇವೆ. ನಾವು ದಲಿತರ ಮೇಲೆ ಹಲ್ಲೆ ಮಾಡುತ್ತಿದ್ದೇವೆ, ಒತ್ತಡದಿಂದ ರೋಹಿತ್ ವೇಮುಲಾ ಆತ್ಮಹತ್ಯೆ ಮಾಡಿಕೊಂಡರು, ಆದರೆ ಮೋದಿ ಯಾವುದೇ ಶಬ್ದ ಮಾತನಾಡಲಿಲ್ಲ. ದಲಿತರ ಮೇಲೆ ಭಾರತದ ಬೇರೆ ಬೇರೆ ಭಾಗಗಳಲ್ಲಿ ದಾಳಿಗಳು ನಡೆದಾಗಲೂ ಮೋದಿ ಯಾವುದೇ ಮಾತುಗಳನ್ನು ಆಡಲಿಲ್ಲ. ನರೇಂದ್ರ ಮೋದಿ ಇಡೀ ದೇಶಕ್ಕೆ ನೀಡಿದ ಹಣದ ಅರ್ಧ ಹಣವನ್ನು ಕರ್ನಾಟಕ ನೀಡಿದೆ. ಕೇಂದ್ರ ಸರಕಾರಕ್ಕೆ ನಾಚಿಕೆ ಆಗಬೇಕು. ನಾವು ದಲಿತರ ಹಕ್ಕುಗಳ ಪರ ಧ್ವನಿ ಎತ್ತುತ್ತಲೇ ಇರುತ್ತೇವೆ.

 ಕಥುವಾ, ಉನ್ನಾವೋ ಪ್ರಕರಣದಲ್ಲಿ ನೀವು ರಾಜಕೀಯ ಮಾಡಿದ್ರಿ ಎನ್ನುತ್ತಿದ್ದಾರೆ?

ಕಥುವಾ, ಉನ್ನಾವೋ ಪ್ರಕರಣದಲ್ಲಿ ನೀವು ರಾಜಕೀಯ ಮಾಡಿದ್ರಿ ಎನ್ನುತ್ತಿದ್ದಾರೆ?

ಇದು ರಾಜಕೀಯ ವಿಷಯ ಹೌದು. ಮಹಿಳೆಯ ಮೇಲೆ ಅತ್ಯಾಚಾರವಾದರೆ ಇದು ರಾಷ್ಟ್ರೀಯ ವಿಷಯವಲ್ಲವೇ? ಬುಲೆಟ್ ರೈಲು, ರಾಫೇಲ್ ಎಲ್ಲವೂ ರಾಷ್ಟ್ರೀಯ ವಿಷಯಗಳು, ಇದರ ಬಗ್ಗೆ ಮಾತನಾಡುತ್ತಾರೆ, ಆದರೆ ಮೂಲ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡುವುದಿಲ್ಲ. ಕರ್ನಾಟಕ ರಾಜ್ಯದ ರೈತರ ಸಮಸ್ಯೆಗಳು ಚುನಾವಣಾ ವಿಷಯವಲ್ಲವೇ? ಕರ್ನಾಟಕ ಸರಕಾರ 8000 ಕೋಟಿ ರೈತರ ಸಾಲ ಮನ್ನಾ ಮಾಡಿದೆ. ನರೇಂದ್ರ ಮೋದಿ ಏನು ಮಾಡಿದ್ದಾರೆ? ಒಂದೇ ಒಂದು ರೂಪಾಯಿ ಸಾಲಮನ್ನಾಕ್ಕೆ ನೀಡಿಲ್ಲ. ಇದು ನಾಚಿಕೆಯ ವಿಷಯವಲ್ಲವೇ?

 ನೀವು ಹಲವಾರು ದೇವಸ್ಥಾನ ಮಠಗಳಿಗೆ ಪ್ರಚಾರದ ವೇಳೆ ಭೇಟಿ ನೀಡಿದ್ದೀರಿ. ಇದರಿಂದ ನೀವು ಏನು ಸಂದೇಶ ನೀಡಲು ಹೊರಟಿದ್ದೀರಿ. ಲಿಂಗಾಯತ ಸಮುದಾಯವನ್ನು ಸ್ಥಳೀಯ ಸರಕಾರ ಒಡೆದಿದೆ ಎಂಬ ಆರೋಪಕ್ಕೆನಿಮ್ಮ ಪ್ರತಿಕ್ರಿಯೆ ಏನು?

ನೀವು ಹಲವಾರು ದೇವಸ್ಥಾನ ಮಠಗಳಿಗೆ ಪ್ರಚಾರದ ವೇಳೆ ಭೇಟಿ ನೀಡಿದ್ದೀರಿ. ಇದರಿಂದ ನೀವು ಏನು ಸಂದೇಶ ನೀಡಲು ಹೊರಟಿದ್ದೀರಿ. ಲಿಂಗಾಯತ ಸಮುದಾಯವನ್ನು ಸ್ಥಳೀಯ ಸರಕಾರ ಒಡೆದಿದೆ ಎಂಬ ಆರೋಪಕ್ಕೆನಿಮ್ಮ ಪ್ರತಿಕ್ರಿಯೆ ಏನು?

ಮೊದಲ ಪ್ರಶ್ನೆಗೆ ಉತ್ತರ. ನಮ್ಮ ಜನರು ಬೇರೆ ಬೇರೆ ರೀತಿಯಲ್ಲಿ ತಮ್ಮ ಅಭಿವ್ಯಕ್ತಿಸುತ್ತಾರೆ. ಬೇರೆ ಬೇರೆ ನಂಬಿಕೆಗಳನ್ನು ಹೊಂದಿರುತ್ತಾರೆ. ರಾಜಕಾರಣಿಯಾಗಿ ನನ್ನ ಕೆಲಸ ಅವರ ನಂಬಿಕೆಗಳ ಜೊತೆಗೆ ನಿಂತುಕೊಳ್ಳುವುದು. ಯಾರೇ ನನ್ನನ್ನು ಯಾವುದೇ ಸಂಸ್ಥೆಗಳಿಗೆ ಆಹ್ವಾನಿಸಿದರೂ ನಾನು ಹೋಗುತ್ತೇನೆ. ಅವರ ನಂಬಿಕೆಯನ್ನು ಗೌರವಿಸಲು ನಾನು ಹೋಗುತ್ತೇನೆ. ಆದರೆ ಸಮಾಜವನ್ನು ಒಡೆಯುವ, ದ್ವೇಷ ಬಿತ್ತುವ, ಕೊಲೆಯಲ್ಲಿ ತೊಡಗಿಸಿಕೊಂಡಿರುವ ಯಾವುದೇ ಸ್ಥಳಗಳಿಗೆ ನಾನು ಹೋಗುವುದಿಲ್ಲ.

ಕಳೆದ 15 ವರ್ಷಗಳಿಂದ ನಾನು ದೇವಸ್ಥಾನಗಳಿಗೆ ಹೋಗುತ್ತೇನೆ. ಗುರುದ್ವಾರ, ಮಸೀದಿ, ಎಲ್ಲಾ ಧಾರ್ಮಿಕ ಸ್ಥಳಗಳಿಗೆ ಹೋಗುತ್ತೇನೆ. ಆದರೆ ಬಿಜೆಪಿಗೆ ಇದು ಇಷ್ಟವಿಲ್ಲ. ಻ಚುನಾವಣೆ ಹಿಂದೂ ಎನ್ನುತ್ತಾರೆ. ಅವರು ಹಿಂದೂ ಪದದ ಅರ್ಥವನ್ನು ತಿಳಿದುಕೊಂಡಿದ್ದಾರೆ ಎಂದು ನನಗೆ ಅನಿಸುವುದಿಲ್ಲ. ಇದೊಂದು ದೃಷ್ಟಿಕೋನ. ಇದು ನಿಮ್ಮೊಳಗೆ ಜೀವನಪೂರ್ತಿ ಇರುವಂಥಹದ್ದು. ಇದು ಅವರು ಧರ್ಮವನ್ನು ಹೇಗೆ ನೋಡುತ್ತಾರೆ ಎನ್ನುವುದನ್ನು ಹೇಳುತ್ತದೆ. ನಾನು ನನ್ನ ಧರ್ಮವನ್ನು ಹಾಗೆ ನೋಡುವುದಿಲ್ಲ.

ಲಿಂಗಾಯತ ವಿಚಾರಕ್ಕೆ ಬರುವುದಾದರೆ, "ಅವರವರ ನಂಬಿ

ಕೆಗಳಿಗೆ ಬೆಲೆ ಕೊಡುವುದಕ್ಕೂ, ಸಮುದಾಯವನ್ನು ಮೇಲೆತ್ತುವುದಕ್ಕೂ, ಸಮುದಾಯವನ್ನು ತುಳಿಯುವುದಕ್ಕೂ ವ್ಯತ್ಯಾಸವಿದೆ. ಬಿಜೆಪಿ ದಲಿತರು, ಅಲ್ಪಸಂಖ್ಯಾತರಿಗೆ ಮೇಲೆ ದೌರ್ಜನ್ಯ ಮಾಡುವುದು, ಕೊಲ್ಲುವುದು, ಅವಮಾನಿಸುವುದನ್ನು ಮಾಡುತ್ತಿದೆ. ಈ ಮೂಲಕ ದೇಶವನ್ನು ಒಡೆಯುವುದು ಅವರ ಉದ್ದೇಶ. ಅದೇ ಕಾಂಗ್ರೆಸ್ ಪಕ್ಷ ಅವರ ಕಲ್ಯಾಣಕ್ಕೆ ಶ್ರಮಿಸುತ್ತದೆ. ಸಮಾಜ ಒಡೆಯುವುದಕ್ಕೂ ಇದಕ್ಕೂ ವ್ಯತ್ಯಾಸವಿದೆ.

 ಧೋಕ್ಲಾಂ ವಿಚಾರದ ಬಗ್ಗೆ ನಿಮ್ಮ ನಿಲುವೇನು?

ಧೋಕ್ಲಾಂ ವಿಚಾರದ ಬಗ್ಗೆ ನಿಮ್ಮ ನಿಲುವೇನು?

ಚೀನಾ ವಿಚಾರದಲ್ಲಿ ನಾನು ಪ್ರಧಾನಿಯನ್ನು ಬೆಂಬಲಿಸುತ್ತೇನೆ. ಅವರು ದೇಶದ ನಾಯಕ. ಅವರು ಚೀನಾಕ್ಕೆ ಹೋದಾಗ ನಮ್ಮ ದೇಶದ ನಾಯಕರಾಗಿ ಹೋಗಬೇಕು ಎಂದು ಬಯಸಿದ್ದೆ. ಹೋಗಿ ಧೋಕ್ಲಾಂ ಬಗ್ಗೆ ಚರ್ಚೆ ನಡೆಸಬೇಕು ಎಂದು ಬಯಸಿದ್ದೆ. ಆದರೆ ಚೀನಾಕ್ಕೆ ಹೋಗಿ ಧೋಕ್ಲಾಂ ಬಗ್ಗೆ ಯಾವುದೇ ಶಬ್ದವನ್ನು ಮಾತನಾಡಲಿಲ್ಲ. ಯಾವುದೇ ಅಜೆಂಡಾ ಇಲ್ಲದೆ ಚೀನಾಕ್ಕೆ ಹೋದರು ಎನ್ನುತ್ತಿದ್ದಾರೆ. ಅಜೆಂಡಾವೇ ಇರಲಿಲ್ಲವೇ? ಧೋಕ್ಲಾ, ಮಾಲ್ಡೀವ್ಸ್, ನೇಪಾಳ.. ಎಷ್ಟು ವಿಷಯಗಳಿದ್ದವು. ಆದರೆ ವಿಷಯಗಲೇ ಇಲ್ಲದೇ ಇದ್ದು ಹೋದರು ಎಂದರೆ ಏನರ್ಥ.

ನಮ್ಮ ರಾಜತಾಂತ್ರಿಕ ನೀತಿ ಹದಗೆಟ್ಟಿದೆ. ಪ್ರಧಾನಿ ರಾಜತಾಂತ್ರಿಕ ನೀತಿಯನ್ನು ವೈಯಕ್ತಿಕ ವಿಚಾರ ಎಂದುಕೊಂಡಿದ್ದಾರೆ. ಹೋಗಿ ಚೀನಾ, ನೇಪಾಳ ಮುಖ್ಯಸ್ಥರ ಜೊತೆ ವೈಯಕ್ತಿಕವಾಗಿ ಮಾತನಾಡುವುದು ಎಂದು ಅವರು ಅಂದುಕೊಂಡಿದ್ದಾರೆ. ಆದರೆ ಇದರಲ್ಲಿ ಹಲವು ವಿಚಾರಗಳಿರುತ್ತವೆ. ಇಲಾಖೆಯ ಹಿರಿಯ ಻ತಜ್ಞ ಅಧಿಕಾರಿಗಳನ್ನು ಅವರು ಜತೆಗೆ ಕರೆದುಕೊಂಡು ಹೋಗಬೇಕು. ಇದು ಕೇವಲ ಏಕ ವ್ಯಕ್ತಿ ಪ್ರದರ್ಶನ.

ಇತ್ತೀಚೆಗೆ ರಷ್ಯಾ ಪಾಕಿಸ್ತಾನಕ್ಕೆ ಶಸ್ತ್ರಾಸ್ತ್ರಗಳನ್ನು ಪೂರೈಸುತ್ತಿದೆ. ಹಿಂದೆಂದೂ ಹೀಗೆ ಆಗಿರಲಿಲ್ಲ. ನಮ್ಮ ವಿದೇಶಾಂಗ ನೀತಿ ಗಬ್ಬೆದ್ದು ಹೋಗಿದೆ.

 ಪೆಟ್ರೋಲ್ ವಿಚಾರದಲ್ಲಿ ನೀವು ಕೋಲಾರದಲ್ಲಿ ಪ್ರತಿಭಟನೆ ನಡೆಸಿದ್ದೀರಿ. ಯುಪಿಎ ನೀತಿಯನ್ನೇ ಬಿಜೆಪಿ ಪಾಲಿಸುತ್ತಿಲ್ಲವೇ? ಮಹದಾಯಿ ವಿಚಾರದಲ್ಲಿ ನಿಮ್ಮ ನಿಲುವೇನು?

ಪೆಟ್ರೋಲ್ ವಿಚಾರದಲ್ಲಿ ನೀವು ಕೋಲಾರದಲ್ಲಿ ಪ್ರತಿಭಟನೆ ನಡೆಸಿದ್ದೀರಿ. ಯುಪಿಎ ನೀತಿಯನ್ನೇ ಬಿಜೆಪಿ ಪಾಲಿಸುತ್ತಿಲ್ಲವೇ? ಮಹದಾಯಿ ವಿಚಾರದಲ್ಲಿ ನಿಮ್ಮ ನಿಲುವೇನು?

ಕಾಂಗ್ರೆಸ್ ಪೆಟ್ರೋಲ್ ನ ಲಾಭವನ್ನು ಜನರಿಗೆ ಹಸ್ತಾಂತರಿಸುತ್ತಿತ್ತು. ಯುಪಿಎ ಅವಧಿಯಲ್ಲಿ ಬ್ಯಾರಲ್ ಗೆ 140 ಡಾಲರ್ ಇತ್ತು. ಇವತ್ತು 70 ಡಾಲರ್ ಇದೆ.

ಇದರಿಂದ ಸರಕಾರಕ್ಕೆ ದೊಡ್ಡ ಹಣ ಉಳಿತಾಯವಾಗಲಿ. ನಾವು ಹಣ ಉಳಿದಾಗ ಸಾಲ ಮನ್ನಾ, ನರೇಗಾ ಕಾರ್ಯಕ್ರಮಗಳಿಗೆ ಉಪಯೋಗಿಸುತ್ತಿದ್ದೆವು. ದೊಡ್ಡ ಮಟ್ಟಕ್ಕೆ ಹಣ ಬರುತ್ತದೆ. ಇದನ್ನು ತಮ್ಮ ಗೆಳೆಯರಿಗೆ ನೀಡುತ್ತಿದ್ದಾರೆ. ನೀವು ಹಣ ಯಾರಿಗೆ ನೀಡುತ್ತಿದ್ದೀರಿ ಎಂಬುದರಲ್ಲಿ ವ್ಯತ್ಯಾಸವಿದೆ. ಹಣ ಹಂಚಿಕೆಯಾಗಬೇಕಿದೆ.

ಮಹಾದಾಯಿ ವಿಚಾರ ಆದಷ್ಟು ಬೇಗ ಪರಿಹಾರವಾಗಬೇಕಿದೆ.

 ಕರ್ನಾಟಕ ಚುನಾವಣೆ 2019ಕ್ಕೆ ನಿಮ್ಮ ಅವಕಾಶವನ್ನು ಹೆಚ್ಚಿಸಲಿದೆಯೇ?

ಕರ್ನಾಟಕ ಚುನಾವಣೆ 2019ಕ್ಕೆ ನಿಮ್ಮ ಅವಕಾಶವನ್ನು ಹೆಚ್ಚಿಸಲಿದೆಯೇ?

ಇದು ನನ್ನ ಬಗೆಗಿನ ಚುನಾವಣೆಯಲ್ಲ. ಇದು ಪ್ರಧಾನಿ ಸ್ಥಾನದ ಬಗೆಗಿನ ಚುನಾವಣೆ ಅಲ್ಲ. ಇದು ಕರ್ನಾಟಕ ಅಸ್ಮಿತೆ, ಗೌರವದ ಬಗೆಗಿನ ಚುನಾವಣೆ. ನಿಮಗೆ ಬೇಕಾದ ಉದ್ಯೋಗಗಳನ್ನು ನಾವು ಇಲ್ಲಿ ನೀಡಲಿದ್ದೇವೆ. ಕಳೆದ 5 ವರ್ಷಗಳಲ್ಲಿ ನಾವಿದನ್ನು ಸಾಧಿಸಿ ತೋರಿಸಿದ್ದೇವೆ.

 ಬೆಂಗಳೂರಿಗೆ ಕಾಂಗ್ರೆಸ್ ಏನು ಮಾಡುತ್ತದೆ?

ಬೆಂಗಳೂರಿಗೆ ಕಾಂಗ್ರೆಸ್ ಏನು ಮಾಡುತ್ತದೆ?

ಕಾಂಗ್ರೆಸ್ ಯಾವತ್ತೂ ಬೆಂಗಳೂರಿನ ಅಭಿವೃದ್ಧಿಗೆ ಬೆಂಬಲ ನೀಡುತ್ತದೆ. ಆದರೆ ನಾವು ಹೇಳಿದ್ದನ್ನೇ ಮಾಡಬೇಕು ಎಂದು ಬಯಸುವುದಿಲ್ಲ. ಇಲ್ಲಿ ಕರ್ನಾಟಕ ಮುಖ್ಯಮಂತ್ರಿ ಇದ್ದಾರೆ ಅವರೇ ಉತ್ತರ ನೀಡುತ್ತಾರೆ.

ಸಿದ್ದರಾಮಯ್ಯ ಉತ್ತರ: ಮೂಲಭೂತ ಸೌಕರ್ಯ ಒದಗಿಸಲು ನಾವು ಬೆಂಗಳೂರಿಗೆ ಸುಮಾರು 13,000 ಕೋಟಿ ಹಣವನ್ನು ಮಂಜೂರು ಮಾಡಿದ್ದೇವೆ. ಈ ಎಲ್ಲಾ ಕೆಲಸಗಳು ಈಗಾಗಲೇ ಆರಂಭವಾಗಿವೆ. ಈ ಎಲ್ಲಾ ಕೆಲಸಗಳು ನಡೆಯುತ್ತಿವೆ. ಇದಾದ ಮೇಲೆ ಬೆಂಗಳೂರಿನ ಸ್ವರೂಪ ಬದಲಾಗಲಿದೆ.

 ಸಮೀಕ್ಷೆಗಳು ಕರ್ನಾಟಕದಲ್ಲಿ ಅತಂತ್ರ ವಿಧಾನಸಭೆ ಸೃಷ್ಟಿಯಾಗಲಿದೆ ಎನ್ನುತ್ತಿದ್ದಾರೆ. ಅತಂತ್ರ ವಿಧಾನಸಭೆಯಾದರೆ ನೀವು ಯಾವುದಾರೂ ಪಕ್ಷದ ಜೊತೆ ಕೈ ಜೋಡಿಸಲು ಸಿದ್ದವಿದ್ದೀರಾ? ಒಂದೊಮ್ಮೆ ದಲಿತ ಮುಖ್ಯಮಂತ್ರಿಯಾಗಬೇಕು ಎಂದರೆ ಅದಕ್ಕೆ ಸಿದ್ದವಿದ್ದೀರಾ?

ಸಮೀಕ್ಷೆಗಳು ಕರ್ನಾಟಕದಲ್ಲಿ ಅತಂತ್ರ ವಿಧಾನಸಭೆ ಸೃಷ್ಟಿಯಾಗಲಿದೆ ಎನ್ನುತ್ತಿದ್ದಾರೆ. ಅತಂತ್ರ ವಿಧಾನಸಭೆಯಾದರೆ ನೀವು ಯಾವುದಾರೂ ಪಕ್ಷದ ಜೊತೆ ಕೈ ಜೋಡಿಸಲು ಸಿದ್ದವಿದ್ದೀರಾ? ಒಂದೊಮ್ಮೆ ದಲಿತ ಮುಖ್ಯಮಂತ್ರಿಯಾಗಬೇಕು ಎಂದರೆ ಅದಕ್ಕೆ ಸಿದ್ದವಿದ್ದೀರಾ?

ಗುಜರಾತ್ ನಲ್ಲಿಯೂ ನಮ್ಮ ಪತ್ರಕರ್ತರು ನಾವು 20-30 ಸೀಟು ಗೆಲ್ಲಲ್ಲ ಎಂದಿದ್ದರು. ನಾವು ಬಿಜೆಪಿಗೆ ಉತ್ತಮ ಸ್ಪರ್ಧೆ ನೀಡಿದ್ದೆವು. ಇಲ್ಲಿಯೂ ನಾವು ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರಲಿದ್ದೇವೆ. ಇಲ್ಲಿ ಎರಡು ಸಿದ್ದಾಂತಗಳ ನಡುವೆ ಚುನಾವಣೆ ನಡೆಯುತ್ತಿದೆ. ಒಂದು ಆರ್.ಎಸ್.ಎಸ್ ಸಿದ್ಧಾಂತ ಇನ್ನೊಂದು ಕನ್ನಡಿಗರ ಹೆಮ್ಮೆಯ ವಿಚಾರ. ಕನ್ನಡಿಗರು ತಮ್ಮ ಭಾಷೆ, ಆಹಾರದ ಮೇಲೆ ಗೌರವನ್ನು ಹೊಂದಿದ್ದಾರೆ. ನಾನು ನೀಡುವ ಒಂದೇ ಉತ್ತರ ಎಂದರೆ, ನಾವು ಬಸವಣ್ಣನ ಮಾತನ್ನು (ನುಡಿದಂತೆ ನಡೆ) ಅನುಸರಿಸುತ್ತಿತ್ತೇವೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Karnataka assembly elections 2018: While addressing a press conference in Bengaluru, Congress president Rahul Gandhi told that Congress will come to power with absolute mejority in the state.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more