ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೆಎಸ್ಆರ್‌ಟಿಸಿ; ಶೇ 10ರಷ್ಟು ಪ್ರಯಾಣ ದರ ಏರಿಕೆ ಇಲ್ಲ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 19: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಐಷಾರಾಮಿ ಬಸ್‌ಗಳಲ್ಲಿ ವಾರಾಂತ್ಯದಲ್ಲಿ ಟಿಕೆಟ್ ದರವನ್ನು ಶೇ 10ರಷ್ಟು ಏರಿಕೆ ಮಾಡುತ್ತಿತ್ತು. ಆದರೆ, ಇದನ್ನು ತಾತ್ಕಾಲಿಕವಾಗಿ ವಾಪಸ್ ಪಡೆಯಲಾಗಿದೆ.

ಕೆಎಸ್ಆರ್‌ಟಿಸಿ ಈ ಕುರಿತು ಪ್ರಕಟಣೆ ಹೊರಡಿಸಿದೆ. ಡಿಸೆಂಬರ್ 31ರ ತನಕ ವಾರಾಂತ್ಯದಲ್ಲಿ ಟಿಕೆಟ್ ದರವನ್ನು ಶೇ 10ರಷ್ಟು ಏರಿಕೆ ಮಾಡುವುದಿಲ್ಲ ಎಂದು ಹೇಳಿದೆ. ಇದರಿಂದಾಗಿ ಪ್ರಯಾಣಿಕರಿಗೆ ಹೆಚ್ಚಿನ ಹೊರೆ ತಪ್ಪಲಿದೆ.

ಲಾಕ್ ಡೌನ್ ಅಂತ್ಯ; ಎಲ್ಲಾ ಬಸ್ ಸಂಚಾರ ಆರಂಭಿಸಿದ NWKRTC ಲಾಕ್ ಡೌನ್ ಅಂತ್ಯ; ಎಲ್ಲಾ ಬಸ್ ಸಂಚಾರ ಆರಂಭಿಸಿದ NWKRTC

ಕೋವಿಡ್ ಕಾರಣದಿಂದಾಗಿ ಪ್ರಯಾಣಿಕರ ಕೊರತೆಯನ್ನು ಕೆಎಸ್ಆರ್‌ಟಿಸಿ ಎದುರಿಸುತ್ತಿದೆ. ಖಾಸಗಿ ಬಸ್‌ಗಳಲ್ಲಿ ಸಹ ದರ ಕಡಿಮೆ ಇದೆ. ಆದ್ದರಿಂದ, ವಾರಾಂತ್ಯದಲ್ಲಿ ಐಷಾರಾಮಿ ಬಸ್‌ಗಳ ದರ ಏರಿಕೆಯನ್ನು ತಾತ್ಕಾಲಿಕವಾಗಿ ವಾಪಸ್ ಪಡೆದುಕೊಳ್ಳಲಾಗಿದೆ.

ಬೆಂಗಳೂರಲ್ಲಿ ಅಕ್ಟೋಬರ್ 13ರಿಂದ ಎಲೆಕ್ಟ್ರಿಕ್ ಬಸ್ ಪ್ರಾಯೋಗಿಕ ಸಂಚಾರ ಬೆಂಗಳೂರಲ್ಲಿ ಅಕ್ಟೋಬರ್ 13ರಿಂದ ಎಲೆಕ್ಟ್ರಿಕ್ ಬಸ್ ಪ್ರಾಯೋಗಿಕ ಸಂಚಾರ

No Hike In KSRTC Bus Fare On Weekend

ಡಿಸೆಂಬರ್ 31ರ ತನಕ ವಾರದ ಎಲ್ಲಾ ದಿನಗಳಲ್ಲಿಯೂ ಕೆಎಸ್ಆರ್‌ಟಿಸಿ ಬಸ್‌ಗಳ ದರ ಒಂದೇ ರೀತಿ ಇರಲಿದೆ. ಹಲವು ಪ್ರಯಾಣಿಕರ ವಾರಾಂತ್ಯದಲ್ಲಿ ಶೇ 10ರಷ್ಟು ದರ ಏರಿಕೆ ಮಾಡಲು ವಿರೋಧ ವ್ಯಕ್ತಪಡಿಸಿದ್ದರು.

ಮಂಗಳೂರು-ಹೈದರಾಬಾದ್ ನಡುವೆ ಅಂಬಾರಿ ಬಸ್; ವೇಳಾಪಟ್ಟಿ ಮಂಗಳೂರು-ಹೈದರಾಬಾದ್ ನಡುವೆ ಅಂಬಾರಿ ಬಸ್; ವೇಳಾಪಟ್ಟಿ

ಮಾರ್ಚ್‌ನಲ್ಲಿ ಕೋವಿಡ್ ಹರಡದಂತೆ ತಡೆಯಲು ಲಾಕ್ ಡೌನ್ ಘೋಷಣೆ ಮಾಡಿದ ಬಳಿಕ ಕೆಎಸ್ಆರ್‌ಟಿಸಿ ಬಸ್ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿತ್ತು. ಬಳಿಕ ಹಂತ-ಹಂತವಾಗಿ ಕೆಎಸ್ಆರ್‌ಟಿಸಿ ಬಸ್ ಸೇವೆಯನ್ನು ಆರಂಭಿಸಿದೆ.

ಐಷಾರಾಮಿ ಬಸ್‌ಗಳು ಈಗ ಸಂಚಾರವನ್ನು ಆರಂಭಿಸಿವೆ. ಬಸ್‌ನಲ್ಲಿ ಶೇ 50ರಷ್ಟು ಸೀಟುಗಳು ಮಾತ್ರ ಭರ್ತಿಯಾಗಬೇಕು ಎಂಬ ನಿಯಮವನ್ನು ಈಗ ಸಡಿಲಿಸಲಾಗಿದೆ. ಅಂತರರಾಜ್ಯ ಬಸ್‌ಗಳ ಸಂಚಾರವನ್ನು ಕೆಎಸ್ಆರ್‌ಟಿಸಿ ಈಗ ಆರಂಭವಾಗಿದೆ.

Recommended Video

Political Popcorn with Lavanya : Dr BL Shankar, ಈಗ ಆಗಿರೋದೆ ಸಾಕು ಇನ್ಮೇಲೆ ಚುನಾವಣೆಗೆ ನಿಲ್ಲಲ್ಲಾ!?! Part2

ವಾರಾಂತ್ಯದಲ್ಲಿ ಐಷಾರಾಮಿ ಬಸ್‌ಗಳಲ್ಲಿ ಟಿಕೆಟ್ ದರ ಶೇ 10ರಷ್ಟು ಹೆಚ್ಚಳ ಮಾಡಲಾಗುತ್ತಿತ್ತು. ಈಗ ಅದನ್ನು ಸ್ಥಗಿತಗೊಳಿಸುವ ಮೂಲಕ ಹೆಚ್ಚಿನ ಪ್ರಯಾಣಿಕರನ್ನು ಸೆಳೆಯಲು ಸಂಸ್ಥೆ ಮುಂದಾಗಿದೆ.

English summary
Karnataka State Road Transport Corporation (KSRTC) said that there is no hike in bus fare during the weekend.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X