ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಂಜಿನಿಯರಿಂಗ್ ಶುಲ್ಕ, ಕೌನ್ಸಲಿಂಗ್ ಬಗ್ಗೆ ಡಿಸಿಎಂ ಮಹತ್ವದ ಆದೇಶ

|
Google Oneindia Kannada News

ಬೆಂಗಳೂರು, ಆ. 17: ಬೆಂಗಳೂರಿನಲ್ಲಿ ಸೋಮವಾರ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯ ಕುರಿತು ರಚಿಸಲಾಗಿರುವ ಕಾರ್ಯಪಡೆಯ ಜತೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.‌ ಸುರೇಶ್‌ ಕುಮಾರ್‌ ಜತೆ ಸೇರಿ ಮಹತ್ವದ ಮಾತುಕತೆ ನಡೆಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಉನ್ನತ ಶಿಕ್ಷಣ ಸಚಿವರೂ ಉಪ ಮುಖ್ಯಮಂತ್ರಿ ಡಾ. ಸಿ.ಎನ್.‌ ಅಶ್ವತ್ಥನಾರಾಯಣ ಅವರು ಸಿಇಟಿ ಕೌನ್ಸಲಿಂಗ್, ಇಂಜಿನಿಯರಿಂಗ್ ಶುಲ್ಕದ ಬಗ್ಗೆ ವಿವರ ನೀಡಿದರು.

Recommended Video

ಗಣಪತಿ ವಿಗ್ರಹ ತಯಾರಿಸುವ ಧಾರವಾಡದ ಕಲಾವಿದನ ಕೂಗು | Oneindia Kannada

ಸಿಇಟಿ ಪರೀಕ್ಷೆಯ ಫಲಿತಾಂಶದ ಮುಂಚೆ ಪ್ರತೀ ವರ್ಷವೂ ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳ ಆಡಳಿತ ಮಂಡಳಿಗಳ ಸಭೆ ನಡೆಸಲಾಗುತ್ತದೆ. ಕಾಲೇಜು ಮಂಡಳಿಗಳ ಜೊತೆ ಶುಲ್ಕದ ಬಗ್ಗೆ ಒಪ್ಪಂದ ಮಾಡಿಕೊಳ್ಳಲಾಗುತ್ತದೆ.

ಕರ್ನಾಟಕ ಸಿಇಟಿ 2020 ಫಲಿತಾಂಶ ದಿನಾಂಕ ಪ್ರಕಟಿಸಿದ ಡಿಸಿಎಂಕರ್ನಾಟಕ ಸಿಇಟಿ 2020 ಫಲಿತಾಂಶ ದಿನಾಂಕ ಪ್ರಕಟಿಸಿದ ಡಿಸಿಎಂ

ಕಳೆದ ವರ್ಷ ಏನು ಶುಲ್ಕ ಇತ್ತೋ ಅದೇ ಶುಲ್ಕ ಈ ವರ್ಷವೂ ಮುಂದುವರಿಕೆ ಆಗಲಿದೆ. ಹೀಗಾಗಿ, ಇಂಜಿನಿಯರಿಂಗ್ ಕೋರ್ಸ್ ನ ಶುಲ್ಕದಲ್ಲಿ ಹೆಚ್ಚಳ ಇಲ್ಲ ಎಂದು ಅಶ್ವತ್ಥನಾರಾಯಣ ಹೇಳಿದರು.

No Hike in Engineering Course Fees in Karnataka for This Academic Year: Ashwath Narayan

ಇಂಜಿನಿಯರಿಂಗ್ ಸೀಟ್ ಗಳ ಶುಲ್ಕ:

* ಸರ್ಕಾರಿ ಶುಲ್ಕ 58,806 ರು.
* ಕಾಮೆಡ್ ಕೆ ಸೀಟಿನ ಶುಲ್ಕ 7,01,956 ರು.

ಅಕ್ಟೋಬರ್ ನಲ್ಲಿ ಆನ್ ಲೈನ್ ಮೂಲ ಕೌನ್ಸೆಲಿಂಗ್ ನಡೆಸಲಾಗುತ್ತದೆ. ಮೊದಲಿಗೆ ಮೆಡಿಕಲ್ ಕೌನ್ಸಿಲಿಂಗ್ ಮುಗಿಸುತ್ತೇವೆ
ಎರಡೇ ರೌಂಡ್ ಕೌನ್ಸಿಲಿಂಗ್ ಮಾಡೋಕೆ ಅವಕಾಶವಿದೆ. ಒಂದು ಹೆಚ್ಚುವರಿ ಕೌನ್ಸಿಲಿಂಗ್ ಮಾಡಬಹುದು ಎಂದರು.
ಈ ಮೂಲಕ ಸೀಟು ವರ್ಗಾವಣೆ ಮಾಡಿಕೊಡ್ತೇವೆ

ಸೀಟು ಹಂಚಿಕೆ ಅನುಪಾತ:

ಕಳೆದ ಭಾರಿ ಒಟ್ಟು 27 ಸಾವಿರ ಸೀಟು ಹಾಗೆಯೇ ಉಳಿದಿತ್ತು. ಈ ಬಾರಿಯೂ ಸ್ವಲ್ಪ ಉಳಿಯಬಹುದು, ಸರ್ಕಾರಿ ಸೀಟು ಉಳಿಯುವುದಿಲ್ಲ
ಶುಲ್ಕದ ಏರುಪೇರಿನಿಂದ ಕಾಮೆಡ್ ಕೆ ನಡಿ ಸೀಟುಗಳು ಉಳಿಯಬಹುದು ಎಂದು ಹೇಳಿದರು.

ಸಿಇಟಿ - 40%
ಕೆಆರ್ಸಿಎಂ - 30%
ಎನ್ನಾರೈ ಮತ್ತು ಮ್ಯಾನೇಜ್ಮೆಂಟ್ -30%

ಭಾಷಾ ಅಲ್ಪಸಂಖ್ಯಾತ ಮತ್ತು ಅಲ್ಪಸಂಖ್ಯಾತ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಸೀಟು ಹಂಚಿಕೆ ಅನುಪಾತ ಮೇಲ್ಕಂಡಂತೆ ಇರಲಿದೆ.

English summary
No Hike in Engineering Course Fees in Karnataka for This Academic Year said DCM, Higher education minister Ashwath Narayan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X