ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಶಕಗಳ ಹಂಪಿ ಉತ್ಸವಕ್ಕೆ ಸರ್ಕಾರದ ತಿಲಾಂಜಲಿ?

By Nayana
|
Google Oneindia Kannada News

ಬೆಂಗಳೂರು, ಆಗಸ್ಟ್‌ 8: ರೈತರ ಸಾಲಮನ್ನಾಕ್ಕಾಗಿ ರಾಜ್ಯದ ವಿವಿಧ ಆಚರಣೆಗಳು ಹಾಗೂ ಯೋಜನೆಗಳಿಗೆ ಸರ್ಕಾರ ತಿಲಾಂಜಲಿ ಹಾಡಿದೆ. ಬಜೆಟ್‌ನಲ್ಲಿ ಹಣ ಮೀಸಲಿಡದ ಕಾರಣ ಹಂಪಿ ಉತ್ಸವಕ್ಕೂ ತಡೆ ಉಂಟಾಗಿದೆ.

ಹಂಪಿ ವಿಶ್ವಪರಂಪರೆಯ ತಾಣವಾಗಿದೆ. ದಿನನಿತ್ಯ ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಾರೆ, ಹಂಪಿ ಉತ್ಸವಕ್ಕಂತೂ ದೇಶ, ವಿದೇಶಗಳಿಂದ ಲಕ್ಷಾಂತರ ಮಂದಿ ಆಗಮಿಸುತ್ತಾರೆ. ಪ್ರತಿ ವರ್ಷ ನವೆಂಬರ್‌ನಲ್ಲಿ ಮೂರು ದಿನಗಳ ಕಾಲ ಹಂಪಿ ಉತ್ಸವ ಆಯೋಜಿಸಲಾಗುತ್ತದೆ. ಮೂರು ದಿನಗಳ ಕಾಲ ಈ ಉತ್ಸವ ನಡೆಯುತ್ತಿತ್ತು.

 ವೀಕ್ಷಿಸಲೇಬೇಕಾದ 98 ಸ್ಥಳಗಳ ಪಟ್ಟಿಯಲ್ಲಿ ಹಂಪಿ ಇಲ್ಲ, ಏನಿದೆಲ್ಲ? ವೀಕ್ಷಿಸಲೇಬೇಕಾದ 98 ಸ್ಥಳಗಳ ಪಟ್ಟಿಯಲ್ಲಿ ಹಂಪಿ ಇಲ್ಲ, ಏನಿದೆಲ್ಲ?

ಪ್ರಸಿದ್ಧ ಹಂಪಿ ಉತ್ಸವ ಆಚರಿಸಿ ಕಲಾವಿದರನ್ನು ಪ್ರೋತ್ಸಾಹಿಸುವ ಕೆಲಸ ಈ ಬಾರಿ ಆಗುತ್ತೋ ಇಲ್ಲವೋ ಎನ್ನುವ ಅನುಮಾನ ಆರಂಭವಾಗಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಹಂಚಿಕೆಯಾಗಿರುವ ಅನುದಾನ ಗಾತ್ರ ಪರಿಶೀಲಿಸಲು ಮುಂದಾದಾಗ ಬಜೆಟ್‌ನಲ್ಲಿ ಹಣ ಘೋಷಣೆಯಾಗಿಲ್ಲ ಎನ್ನುವ ಮಾಹಿತಿ ಬಹಿರಂಗಗೊಂಡಿದೆ.

ಹಂಪಿ ಉತ್ಸವಕ್ಕೆ ಸರ್ಕಾರ ಇದುವರೆಗೂ ಅನುದಾನ ಬಿಡುಗಡೆ ಮಾಡಿಲ್ಲ, ಈ ಬಗ್ಗೆ ಕೆಲವು ಚುನಾಯಿಸತರು ಮಾಹಿತಿ ಕೇಳಿದ್ದರು ನೀಡಲಾಗಿದೆ ಎಂದು ಕನ್ನಡ ಸಂಸ್ಕೃತಿ ಇಲಾಖೆ ನಿರ್ದೇಶಕರಾದ ವಿಶ್ವನಾಥ ತಿಳಿಸಿದ್ದಾರೆ.

 ಎಂಪಿ ಪ್ರಕಾಶ್‌ ಚಾಲನೆ ನೀಡಿದ್ದ ಉತ್ಸವಕ್ಕೆ ಎಚ್ಡಿಕೆ ಕೊನೆ ಹಾಡಿದರೆ?

ಎಂಪಿ ಪ್ರಕಾಶ್‌ ಚಾಲನೆ ನೀಡಿದ್ದ ಉತ್ಸವಕ್ಕೆ ಎಚ್ಡಿಕೆ ಕೊನೆ ಹಾಡಿದರೆ?

ಮಾಜಿ ಉಪಮುಖ್ಯಮಂತ್ರಿ ದಿ. ಎಂಪಿ ಪ್ರಕಾಶ್‌ ಅವರು ಹಂಪಿ ಉತ್ಸವದ ರೂವಾರಿಯಾಗಿದ್ದರು. ಉತ್ಸವಕ್ಕೆ ಅನೇಕ ಭಾಗಗಳಿಂದ ಲಕ್ಷಾಂತರ ಮಂದಿ ಆಗಮಿಸುತ್ತಿದ್ದರು. ಆದರೆ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಉತ್ಸವಕ್ಕೆ ಮಂಕು ಕವಿದಿದೆ ಎಂದೇ ಹೇಳಬಹುದು.

 ಉತ್ಸವಕ್ಕೆ ಬಜೆಟ್‌ನಲ್ಲೇ ಹಣ ಮೀಸಲಿಡದ ಸಮ್ಮಿಶ್ರ ಸರ್ಕಾರ

ಉತ್ಸವಕ್ಕೆ ಬಜೆಟ್‌ನಲ್ಲೇ ಹಣ ಮೀಸಲಿಡದ ಸಮ್ಮಿಶ್ರ ಸರ್ಕಾರ

ಪ್ರತಿ ವರ್ಷ ರಾಜ್ಯ ಸರ್ಕಾರ ಮಂಡಿಸುವ ಮುಂಗಡ ಪತ್ರದಲ್ಲಿಯೇ ಹಹಂಪಿ ಉತ್ಸವಕ್ಕಾಗಿ 1ರಿಂದ 1.50 ಕೋಟಿ ರೂ ಘೋಷಣೆಯಾಗುತ್ತಿತ್ತು.ಈ ಬಾರಿ ಪುರಂಧರ ಉತ್ಸವ ಹಾಗೂ ಹಂಪಿ ಉತ್ಸವಗಳಿಗೆ ನಯಾಪೈಸೆ ಅನುದಾನ ಘೋಷಣೆಯಾಗಿಲ್ಲ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಹಂಚಿಕಯಾಗಿರುವ ಅನುದಾನ ಗಾತ್ರ ಪರಿಶೀಲಿಸಿದಾಗ ಈ ಅಂಶ ಬೆಳಕಿಗೆ ಬಂದಿದೆ.

 ತಡವಾಗಿ ಬಹಿರಂಗಗೊಂಡ ಮಾಹಿತಿ

ತಡವಾಗಿ ಬಹಿರಂಗಗೊಂಡ ಮಾಹಿತಿ

ಕನ್ನಡ ಪತ್ತು ಸಂಸ್ಕೃತಿ ಇಲಾಖೆ ಖಾತೆಗೆ ಹಣ ಜಮಾ ಮಾಡಲಾಗುತ್ತಿತ್ತು. ಪ್ರತಿ ವರ್ಷ ಜನವರಿಯಲ್ಲಿ ಎರಡು ದಿನಗಳ ಕಾಲ ನಡೆಯುವ ಪುರಂದರ ಉತ್ಸವಕ್ಕೂ 10 ಲಕ್ಷ ರೂ. ನಿಗದಿಪಡಿಸಿ ಆದೇಶ ಹೊರಡಿಸಲಾಗುತ್ತಿತ್ತು. ಆದರೆ, ಈ ಬಾರಿ ಎರಡು ಉತ್ಸವಗಳಿಗೆ ನಯಾಪೈಸೆ ಅನುದಾನನ ಘೋಷಣೆಯಾಗಿಲ್ಲ.

 ಹೊರಗಿನವರಿಗೆ ಹಂಪಿ ಉತ್ಸವದ ಉಸ್ತುವಾರಿ

ಹೊರಗಿನವರಿಗೆ ಹಂಪಿ ಉತ್ಸವದ ಉಸ್ತುವಾರಿ

ಹಂಪಿ ಉತ್ಸವಕ್ಕೆ ಸರ್ಕಾರ ಅನುದಾನ ಘೋಷಣೆ ಆಡಿದ ಬಳಿಕ ಜಿಲ್ಲಾಡಳಿತದಿಂದ ಸೆಪ್ಟೆಂಬರ್‌ ಇಲ್ಲವೇ ಅಕ್ಟೋಬರ್‌ನಲ್ಲಿ ಪೂರ್ವಭಾವಿ ಸಭೆ ನಡೆಸಲಾಗುತ್ತಿತ್ತು. ಸರ್ಕಾರ ಬಿಡುಗಡೆ ಮಾಡಿದ ಅನುದಾನ ಜತೆಗೆ ಜಿಲ್ಲಾ ಪಂಚಾಯ್ತಿ, ತಾಲೂಕು ಪಂಚಾಯ್ತಿ ಹಾಗೂ ಗ್ರಾಮ ಪಂಚಾಯ್ತಿ ಸ್ಥಳೀಯ ಸಂಸ್ಥೆಗಳಿಂದ ನೆರವು ಪಡೆಯಲಾಗುತ್ತಿತ್ತು. ಆದರೆ ಈ ಸಮ್ಮಿಶ್ರ ಸರ್ಕಾರದಲ್ಲಿ ಜಿಲ್ಲೆಯವರಿಗೆ ಸಚಿವ ಸ್ಥಾನ ದೊರೆತಿಲ್ಲ.

English summary
As state government has not reserved fund for holistical Hampi Utsav decade old cultural event would not be celebrated this year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X