ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಾಲಾ ವಾರ್ಷಿಕೋತ್ಸವದಲ್ಲಿ ಚಿತ್ರ ಗೀತೆಗಳಿಗೆ ಇನ್ನು ಹೆಜ್ಜೆ ಹಾಕುವಂತಿಲ್ಲ

|
Google Oneindia Kannada News

ಬೆಂಗಳೂರು, ಜನವರಿ 18: ಶಾಲಾ ವಾರ್ಷಿಕೋತ್ಸದಲ್ಲಿ ವಿದ್ಯಾರ್ಥಿಗಳು ಚಲನಚಿತ್ರ ಗೀತೆಗೆ ಹೆಜ್ಜೆಹಾಕುವಂತಿಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಸೂಚನೆ ನೀಡಿದೆ.

ಮಕ್ಕಳ ಮನಸ್ಸಿನ ಮೇಲೆ ದುಷ್ಪರಿಣಾಮ ಬೀರುವ ಹಾಡು, ನೃತ್ಯಗಳನ್ನು ಶಾಲಾ ಕಾಂಪೌಂಡ್‌ನಿಂದ ಹೊರಗಿಡುವಂತೆ ಶಿಕ್ಷಕರಿಗೆ ಇಲಾಖೆ ತಿಳಿಸಿದೆ. ಈ ಆದೇಶವು ಸರ್ಕಾರಿ ಹಾಗೂ ಅನುದಾನಿತ ಖಾಸಗಿ ಶಾಲೆಗಳಿಗೆ ಮುಂದಿನ ಶೈಕ್ಷಣಿಕ ವರ್ಷದಿಂದ ಅನ್ವಯವಾಗಲಿದೆ.

ಛೆ, ಇದೆಂಥ ವಿಡಿಯೋ ನೋಡಿ! ವಿದ್ಯಾರ್ಥಿಗಳ ಕಾಲಿಗೆ ಬಿದ್ದ ಗುರು! ಛೆ, ಇದೆಂಥ ವಿಡಿಯೋ ನೋಡಿ! ವಿದ್ಯಾರ್ಥಿಗಳ ಕಾಲಿಗೆ ಬಿದ್ದ ಗುರು!

ಮಕ್ಕಳು ನೃತ್ಯಕ್ಕಾಗಿ ಆಯ್ಕೆ ಮಾಡಿಕೊಳ್ಳುವ ಗೀತೆಗಳು ಅವರ ವಯಸ್ಸನ್ನು ಮೀರಿದ್ದಾಗಿರುತ್ತದೆ. ಸಿನಿಮಾದಲ್ಲಿ ತೋರಿಸಿರುವಂತೆ ಹಾವಭಾವಗಳನ್ನು ತೋರಿಸಲು ಯತ್ನಿಸುತ್ತಾರೆ. ಇತ್ತೀಚೆಗೆ ಶಾಲಾ ವಾರ್ಷಿಕೋತ್ಸವಕ್ಕೆ ತೆರಳಿದ್ದಾಗ ಮಕ್ಕಳು ಆಯ್ಕೆಮಾಡಿಕೊಂಡಿರುವ ಗೀತೆಗಳು ನೃತ್ಯಗಳನ್ನು ನೋಡಿ ಗಾಬರಿಯಾಯಿತು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

No filmi song and dance on annual days at schools

3 ವರ್ಷಗಳಿಂದ ವರ್ಗಾವಣೆ ಸ್ಥಗಿತ: ಉಪವಾಸಕ್ಕೆ ಮುಂದಾದ ಶಿಕ್ಷಕರು 3 ವರ್ಷಗಳಿಂದ ವರ್ಗಾವಣೆ ಸ್ಥಗಿತ: ಉಪವಾಸಕ್ಕೆ ಮುಂದಾದ ಶಿಕ್ಷಕರು

ವಾರ್ಷಿಕೋತ್ಸವದಲ್ಲಿ ಸ್ವಾತಂತ್ರ್ಯ ಹೋರಾಟ, ಇತಿಹಾಸ, ನಾಟಕ, ಜಾನಪದ ಕಲೆಗೆ ಸಂಬಂಧಿಸಿದಂತಹ ನೃತ್ಯಗಳನ್ನು ಆಯ್ಕೆಮಾಡಿಕೊಳ್ಳಲು ಹುರಿದುಂಬಿಸಬೇಕು ಎಂದು ಇಲಾಖೆ ತಿಳಿಸಿದೆ.

English summary
Bollywood and sandalwood numbers are out, so are the associated gyration, from annual day function in schools.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X