ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಂಜಿನಿಯರಿಂಗ್ ಕೋರ್ಸ್ ಶುಲ್ಕ ಹೆಚ್ಚಳವಿಲ್ಲ: ಕಾಲೇಜುಗಳಲ್ಲೂ ನಯಾಪೈಸೆ ಕಟ್ಟುವಂತಿಲ್ಲ

|
Google Oneindia Kannada News

ಬೆಂಗಳೂರು, ನವೆಂಬರ್ 16: ಕರ್ನಾಟಕ ಪರೀಕ್ಷಾ ಪ್ರಾಧಿಕಾರ 2021ನೇ ಸಾಲಿನ ಎಂಜಿನಿಯರಿಂಗ್/ ಆರ್ಕಿಟೆಕ್ಚರ್ ಕೋರ್ಸ್‌ ಶುಲ್ಕ ಪ್ರಕಟಿಸಿದೆ. ಕಳೆದ ವರ್ಷಕ್ಕಿಂತ ಶುಲ್ಕದಲ್ಲಿ ಯಾವುದೇ ಹೆಚ್ಚಳ ಮಾಡಿಲ್ಲ.

ಸಿಇಟಿ ಮೂಲಕ ವಿದ್ಯಾರ್ಥಿಗಳು ಎಂಜಿನಿಯರಿಂಗ್ ಸೀಟು ಪಡೆದು, ಕರ್ನಾಟಕ ಪರೀಕ್ಷಾ ಪ್ರಾಧಿಕಾರದಲ್ಲಿಯೇ ಶುಲ್ಕ ಪಾವತಿಸಿ ಕಾಲೇಜುಗಳಿಗೆ ದಾಖಲಾದ ಬಳಿಕ, ಕಾಲೇಜುಗಳು ಮತ್ತೆ ಮನಬಂದಂತೆ ಶುಲ್ಕ ವಿಧಿಸುತ್ತಿದ್ದವು. ಈ ಬಾರಿ ಅದಕ್ಕೆ ಕಡಿವಾಣ ಹಾಕಲಾಗಿದೆ. ಕಾಲೇಜುಗಳು ನಯಾಪೈಸೆ ಶುಲ್ಕ ವಿದ್ಯಾರ್ಥಿಗಳನ್ನು ಕೇಳಬಾರದು ಎಂದು ಸೂಚನೆ ನೀಡಲಾಗಿದೆ.

ಪಿಯು ಪರೀಕ್ಷೆ, ಮೌಲ್ಯಮಾಪನ: ಉಪನ್ಯಾಸಕರ ಸಂಘ ಹೇಳಿದ್ದೇನು?ಪಿಯು ಪರೀಕ್ಷೆ, ಮೌಲ್ಯಮಾಪನ: ಉಪನ್ಯಾಸಕರ ಸಂಘ ಹೇಳಿದ್ದೇನು?

ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳು ಶೇ.15ರಿಂದ ಶೇ.20ರಷ್ಟು ಶುಲ್ಕ ಹೆಚ್ಚಳಕ್ಕೆ ಮನವಿ ಮಾಡಿದ್ದವು. ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರು ಖಾಸಗಿ ಕಾಲೇಜುಗಳ ಮುಖ್ಯಸ್ಥರೊಂದಿಗೆ ಸಭೆ ನಡೆಸಿ ಈ ಬಾರಿ ಶುಲ್ಕ ಹೆಚ್ಚಳ ಮಾಡದಂತೆ ಮನವೊಲಿಸಿದ್ದರು. ಕೊರೋನಾ ಮತ್ತು ಲಾಕ್‌ಡೌನ್‌ಗಳಿಂದಾಗಿ ಪೋಷಕರು ಆರ್ಥಿಕ ಸಂಕಷ್ಟದಲ್ಲಿ ಇದ್ದಾರೆ. ಈ ಸಂದರ್ಭದಲ್ಲಿ ಶುಲ್ಕ ಹೆಚ್ಚಳ ಮಾಡುವ ನಿರ್ಧಾರ ಸರಿಯಲ್ಲ ಎಂದು ಮನವಿ ಮಾಡಿದ್ದರು. ಈ ಪ್ರಯತ್ನ ಯಶಸ್ವಿಯಾಗಿದ್ದು, ಎಂಜಿನಿಯರಿಂಗ್ ಶುಲ್ಕದಲ್ಲಿ ಯಾವುದೇ ಹೆಚ್ಚಳ ಮಾಡಿಲ್ಲ.

No Fee Increase Private Engineering Colleges this year

ಕಾಲೇಜು ಶುಲ್ಕವೂ ಸಿಇಟಿಯಲ್ಲೇ ಅಡಕ:

ಎಂಜಿನಿಯರಿಂಗ್ ಕೋರ್ಸ್‌ಗೆ ಸರ್ಕಾರ ಶುಲ್ಕ ನಿಗದಿ ಮಾಡುತ್ತದೆ. ವಿದ್ಯಾರ್ಥಿಗಳು ಸೀಟು ಆಯ್ಕೆಯ ಮೊದಲೇ ಎಲ್ಲ ಶುಲ್ಕ ಪಾವತಿಸಿ ಕೌನ್ಸೆಲಿಂಗ್ ಹಾಜರಾಗುತ್ತಾರೆ. ತಮ್ಮ ರ್ಯಾಂಕ್‌ಗೆ ಅನುಗುಣವಾಗಿ ದೊರೆತ ಕಾಲೇಜಿನಲ್ಲಿ ಸೀಟು ಆಯ್ಕೆ ಮಾಡಿಕೊಂಡು ಬಳಿಕ ಆ ಕಾಲೇಜಿಗೆ ತೆರಳಿ ಪ್ರವೇಶ ಪಡೆಯುತ್ತಾರೆ. ಹೀಗೆ ಕಾಲೇಜು ಸೇರಿದ ಬಳಿಕ ಕಾಲೇಜುಗಳು ಕೌಶಲ ತರಬೇತಿ ಹೆಸರಿನಲ್ಲಿ ವಿವಿಧ ಶುಲ್ಕಗಳನ್ನು ವಿಧಿಸಲಾಗುತ್ತಿತ್ತು. ಈ ಬಗ್ಗೆ ಸಾಕಷ್ಟು ದೂರುಗಳು ಸಹ ದಾಖಲಾಗುತ್ತಿತ್ತಿತ್ತು. ಖಾಸಗಿ ಕಾಲೇಜುಗಳಲ್ಲಿ ವಾರ್ಷಿಕವಾಗಿ ಪಡೆಯುವ ಎಲ್ಲ ರೀತಿಯ ಶುಲ್ಕಗಳ ಬಗ್ಗೆ ವಿವರವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಮೊದಲೇ ತಿಳಿಸಬೇಕು ಎಂದೂ ಸೂಚಿಸಲಾಗಿತ್ತು. ಹೀಗೆ ಅಗತ್ಯ ಶುಲ್ಕಗಳನ್ನು ಸಿಇಟಿ ಶುಲ್ಕದ ಜೊತೆ ಸೇರಿಸಲಾಗಿದೆ. ಅಲ್ಲದೆ, ಯಾವುದೇ ಕಾಲೇಜುಗಳು ವಿದ್ಯಾರ್ಥಿಗಳಲ್ಲಿ ಯಾವುದೇ ಶುಲ್ಕವನ್ನು ಮತ್ತೊಮ್ಮೆ ಕೇಳಬಾರದು ಎಂದು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

ಶುಲ್ಕದ ವಿವರ ಹೀಗಿದೆ:

ಎಂಜಿನಿಯರಿಂಗ್ ಕೋರ್ಸ್‌ಗೆ ವರ್ಗವಾರು ಸರ್ಕಾರ ನಿಗದಿಪಡಿಸಿದ ಶುಲ್ಕದ ವಿವರ ಹೀಗಿದೆ.

ಸರ್ಕಾರಿ ಎಂಜಿನಿಯರಿಂಗ್ ಕಾಲೇಜುಗಳಿಗೆ 23,810 ರೂ. ಮತ್ತು ಅನುದಾನಿತ ಕಾಲೇಜುಗಳಿಗೆ 43,810 ರೂ. ಶುಲ್ಕ ನಿಗದಿ ಮಾಡಲಾಗಿದೆ. (ಇದು ಸಾಮಾನ್ಯ, 2A, 2B, 3A, 3B, 10 ಲಕ್ಷಕ್ಕಿಂತ ಹೆಚ್ಚಿನ ಆದಾಯ ಹೊಂದಿರುವ ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳು ಹಾಗೂ 2.5 ಲಕ್ಷಕ್ಕಿಂತ ಹೆಚ್ಚಿನ ವಾರ್ಷಿಕ ಆದಾಯ ಹೊಂದಿರುವ ಕೆಟಗೆರಿ-1 ವಿದ್ಯಾರ್ಥಿಗಳಿಗೆ)

No Fee Increase Private Engineering Colleges this year

ಎಸ್‌ಎನ್‌ಕ್ಯೂ ಕೋಟಾದವರಿಗೆ ಸರ್ಕಾರಿ ಕಾಲೇಜುಗಳಲ್ಲಿ 8220 ರೂ. ಮತ್ತು ಅನುದಾನಿತ ಕಾಲೇಜುಗಳಲ್ಲಿ 28,220 ರೂ. ನಿಗದಿ ಮಾಡಲಾಗಿದೆ. ವಾರ್ಷಿಕ 10 ಲಕ್ಷ ರೂ. ಗಿಂತ ಕಡಿಮೆ ಆದಾಯ ಹೊಂದಿರುವ ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳಿಗೆ ಹಾಗೂ 2.5 ಲಕ್ಷ ರೂ.ಗಿಂತ ಕಡಿಮೆ ಆದಾಯ ಹೊಂದಿರುವ ಕೆಟಗೆರಿ 1 ವಿದ್ಯಾರ್ಥಿಗಳಿಗೆ ಸರ್ಕಾರಿ ಕಾಲೇಜುಗಳಲ್ಲಿ 500 ರೂ. ಮತ್ತು ಅನುದಾನಿತ ಕಾಲೇಜುಗಳಲ್ಲಿ 20,500 ರೂ. ನಿಗದಿ ಮಾಡಲಾಗಿದೆ. ಈ ಶುಲ್ಕಗಳು ವಿಶ್ವವಿದ್ಯಾಲಯದ ಶುಲ್ಕ ಒಳಗೊಂಡಿಲ್ಲ ಎಂದು ಹೇಳಲಾಗಿದೆ.

ಖಾಸಗಿ (ಅನುದಾನ ರಹಿತ) ಮತ್ತು ಅಲ್ಪಸಂಖ್ಯಾತ ಕಾಲೇಜುಗಳು: ಟೈಪ್-1 ಕಾಲೇಜುಗಳಿಗೆ - 83,526 ರೂ. ಮತ್ತು ಟೈಪ್ 2- ಕಾಲೇಜುಗಳಿಗೆ 90,060 ರೂ. ಹಾಗೂ ಡೀಮ್ಡ್/ಖಾಸಗಿ ವಿಶ್ವವಿದ್ಯಾಲಯಗಳಲ್ಲಿ 97,293 ರೂ. ಶುಲ್ಕ ನಿಗದಿ ಮಾಡಲಾಗಿದೆ. ಇದು ಸಾಮಾನ್ಯ, 2A, 2B, 3A, 3B, 10 ಲಕ್ಷಕ್ಕಿಂತ ಹೆಚ್ಚಿನ ಆದಾಯ ಹೊಂದಿರುವ ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳು ಹಾಗೂ 2.5 ಲಕ್ಷಕ್ಕಿಂತ ಹೆಚ್ಚಿನ ವಾರ್ಷಿಕ ಆದಾಯ ಹೊಂದಿರುವ ಕೆಟಗೆರಿ-1 ವಿದ್ಯಾರ್ಥಿಗಳಿಗೆ ಮಾತ್ರ ಅನ್ವಯ.

ಎಸ್‌ಎನ್‌ಕ್ಯೂ ಕೋಟಾದವರಿಗೆ ಖಾಸಗಿ (ಅನುದಾನ ರಹಿತ) ಮತ್ತು ಅಲ್ಪಸಂಖ್ಯಾತ ಕಾಲೇಜುಗಳು: ಟೈಪ್-1, ಟೈಪ್-2 ಹಾಗೂ ಡೀಮ್ಡ್/ಖಾಸಗಿ ವಿಶ್ವವಿದ್ಯಾಲಯಗಳಲ್ಲಿ ಅನ್ವಯವಾಗುವಂತೆ 28,220 ರೂ. ನಿಗದಿಪಡಿಸಲಾಗಿದೆ. ಅದೇ ರೀತಿ ವಾರ್ಷಿಕ 10 ಲಕ್ಷ ರೂ. ಗಿಂತ ಕಡಿಮೆ ಆದಾಯ ಹೊಂದಿರುವ ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳಿಗೆ 20,500 ರೂ. ಹಾಗೂ 2.5 ಲಕ್ಷಕ್ಕಿಂತ ಹೆಚ್ಚಿನ ವಾರ್ಷಿಕ ಆದಾಯ ಹೊಂದಿರುವ ಕೆಟಗೆರಿ-1 ವಿದ್ಯಾರ್ಥಿಗಳಿಗೆ ಟೈಪ್-1 ಕಾಲೇಜುಗಳಲ್ಲಿ 67,166, ಟೈಪ್-2 ಕಾಲೇಜುಗಳಲ್ಲಿ 73,970 ಮತ್ತು ಡೀಮ್ಡ್/ ಖಾಸಗಿ ವಿಶ್ವವಿದ್ಯಾಲಯಗಳಲ್ಲ 81,203 ರೂ. ಶುಲ್ಕ ನಿಗದಿ ಮಾಡಲಾಗಿದೆ.

ವಿದ್ಯಾರ್ಥಿಗಳ ಸಂಖ್ಯೆ ಎಷ್ಟಿದೆ?

2020-21ನೇ ಸಾಲಿನಲ್ಲಿ 1.93 ಲಕ್ಷ ವಿದ್ಯಾರ್ಥಿಗಳು ಸಿಇಟಿ ಪರೀಕ್ಷೆ ಬರೆದಿದ್ದರು. ಅದರಲ್ಲಿ 1,83,231 ವಿದ್ಯಾರ್ಥಿಗಳಿಗೆ ಎಂಜಿನಿಯರಿಂಗ್ ಕೋರ್ಸ್‌ಗೆ ರ್ಯಾಂಕ್ ನೀಡಲಾಗಿದೆ. ಕೃಷಿ ಕೋರ್ಸ್‌ಗೆ 1.52,518 ಅಭ್ಯರ್ಥಿಗಳು, 1,55,760 ಪಶು ಸಂಗೋಪನೆ, 1,55,910 ಆಯುಷ್ ಕೋರ್ಸ್ ಅಭ್ಯರ್ಥಿಗಳಿದ್ದಾರೆ. ಈ ವಿದ್ಯಾರ್ಥಿಗಳ ಎಂಜಿನಿಯರಿಂಗ್ ಪ್ರವೇಶಕ್ಕೆ ಕೌನ್ಸೆಲಿಂಗ್ ನಡೆಸಲಾಗಿದೆ. ಈ ಮಧ್ಯೆ ಕಾಮೆಡ್-ಕೆ ಮೂಲಕ 44,111 ಅಭ್ಯರ್ಥಿಗಳು ರ್ಯಾಂಕ್ ಪಡೆದಿದ್ದಾರೆ.

Recommended Video

T20 ವಿಶ್ವಕಪ್ ಕಿರೀಟ ಆಸ್ಟ್ರೇಲಿಯಾ ಮುಡಿಗೆ: ಕಿವೀಸ್ ಗೆ ನಿರಾಸೆ | Oneindia Kannada

English summary
No fee increase in private engineering colleges in this academic year. Colleges have been instructed not to ask for fee students.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X