ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋವಿಡ್ - 19 ಪ್ರಕರಣ; ಜಿಲ್ಲಾ ಬುಲೆಟಿನ್‌ಗಳು ಸ್ಥಗಿತ

|
Google Oneindia Kannada News

ಬೆಂಗಳೂರು, ಜುಲೈ 08 : ಕರ್ನಾಟಕದ ಪ್ರತಿ ಜಿಲ್ಲೆಗಳಲ್ಲಿ ಹೊರಡಿಸುತ್ತಿದ್ದ ಆರೋಗ್ಯ ಬುಲೆಟಿನ್ ಸ್ಥಗಿತಗೊಳ್ಳಲಿದೆ. ರಾಜ್ಯಮಟ್ಟದಲ್ಲಿ ಎಲ್ಲಾ ಜಿಲ್ಲೆಗಳ ಮಾಹಿತಿಯನ್ನು ಸೇರಿಸಿ ದಿನಕ್ಕೆ ಒಂದು ಬುಲೆಟಿನ್ ಪ್ರಕಟವಾಗಲಿದೆ.

Recommended Video

Red alert in Kodagu district | Madkeri | Oneindia Kannada

ಆರೋಗ್ಯ ಇಲಾಖೆ ರಾಜ್ಯದ ಕೊರೊನಾ ವೈರಸ್ ಅಂಕಿ ಅಂಶಗಳ ಕುರಿತು ಒಂದು ಬುಲೆಟಿನ್‌ ಅನ್ನು ಪ್ರತಿದಿನ ಸಂಜೆ ಬಿಡುಗಡೆ ಮಾಡುತ್ತದೆ. ಆದರೆ, ಪ್ರತಿ ಜಿಲ್ಲೆಗಳು ಸಹ ಜಿಲ್ಲಾ ಮಟ್ಟದಲ್ಲಿ ಬುಲೆಟಿನ್ ನೀಡುತ್ತಿದ್ದವು. ಇನ್ನು ಜಿಲ್ಲಾ ಬುಲೆಟಿನ್ ಬರುವುದಿಲ್ಲ.

ಬೆಂಗಳೂರಿನ ಜನರಿಗೆ ಆರೋಗ್ಯ ಇಲಾಖೆಯ ಮನವಿ ಬೆಂಗಳೂರಿನ ಜನರಿಗೆ ಆರೋಗ್ಯ ಇಲಾಖೆಯ ಮನವಿ

ಹೊಸ ಪ್ರಕರಣ, ಮರಣ ಹೊಂದಿದವರ ಸಂಖ್ಯೆ, ಸಕ್ರಿಯ ಪ್ರಕರಣಗಳ ಕುರಿತು ಮಾಹಿತಿ ಸಂಗ್ರಹಿಸಿ ಜಿಲ್ಲೆಗಳು 4 ಗಂಟೆ ಸುಮಾರಿಗೆ ಬುಲೆಟಿನ್ ಹೊರಡಿಸುತ್ತಿದ್ದವು. ಜಿಲ್ಲೆಗಳಿಂದ ಬರುವ ಮಾಹಿತಿ ಸಂಗ್ರಹಿಸಿ ರಾಜ್ಯಮಟ್ಟದ ಬುಲೆಟಿನ್ ಸಂಜೆ 7 ಗಂಟೆ ಸುಮಾರಿಗೆ ಬಿಡುಗಡೆ ಆಗುತ್ತಿತ್ತು.

ಸಮುದಾಯ ಹಂತ ತಲುಪಿದ ಕೊರೊನಾ: ಆರೋಗ್ಯ ಸಚಿವ ಎಚ್ಚರಿಕೆ ಸಮುದಾಯ ಹಂತ ತಲುಪಿದ ಕೊರೊನಾ: ಆರೋಗ್ಯ ಸಚಿವ ಎಚ್ಚರಿಕೆ

No District Health Bulletin In Karnataka On COVID Cases

ಜಿಲ್ಲೆ ಮತ್ತು ರಾಜ್ಯ ಮಟ್ಟದಲ್ಲಿ ಬಿಡುಗಡೆ ಮಾಡುವ ಮಾಹಿತಿಯಲ್ಲಿ ಕೆಲವು ಬದಲಾವಣೆಗಳು ಆಗಿ ಗೊಂದಲ ಉಂಟಾಗುತ್ತಿತ್ತು. ರಾಜ್ಯಮಟ್ಟದಲ್ಲಿಯೇ ಜಿಲ್ಲಾ ಮಟ್ಟದ ಮಾಹಿತಿಯನ್ನು ಪ್ರಕಟಿಸುವುದಾಗಿ ಸರ್ಕಾರ ಹೇಳಿದೆ.

ಕೊರೊನಾ ಸೋಂಕಿನಿಂದ ಮೆದುಳಿಗೆ ಹಾನಿಯಾಗಬಹುದು: ಎಚ್ಚರಿಕೆ ಕೊರೊನಾ ಸೋಂಕಿನಿಂದ ಮೆದುಳಿಗೆ ಹಾನಿಯಾಗಬಹುದು: ಎಚ್ಚರಿಕೆ

ಆದ್ದರಿಂದ, ಜಿಲ್ಲೆಗಳು ತಕ್ಷಣದಿಂದಲೇ ಜಾರಿಗೆ ಬರುವಂತೆ ಜಿಲ್ಲಾ ಬುಲೆಟಿನ್ ಸ್ಥಗಿತಗೊಳಿಸಲಿವೆ. ಪ್ರತಿ ದಿನ ಸಂಜೆ 7 ಗಂಟೆ ಸುಮಾರಿಗೆ ಪ್ರಕಟವಾಗುವ ರಾಜ್ಯ ಬುಲೆಟಿನ್‌ನಲ್ಲಿಯೇ ಜಿಲ್ಲೆಯಲ್ಲಿನ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಪ್ರಕಟವಾಗಲಿದೆ.

English summary
All districts of Karnataka to stop health bulletin on COVID -19 cases. Every district numbers will add in state health bulletin which will come on every evening around 7 pm.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X