ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಕ್ಷದಲ್ಲಿ ಭಿನ್ನಾಭಿಪ್ರಾಯವಿಲ್ಲ; ಅರುಣ್ ಸಿಂಗ್

|
Google Oneindia Kannada News

ಬೆಂಗಳೂರು, ಜೂನ್ 16; "ನಮ್ಮ ಪಕ್ಷದಲ್ಲಿ ಎಲ್ಲವೂ ಸರಿಯಿದೆ. ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ ಕೆಲವು ಸಣ್ಣಪುಟ್ಟ ಸಮಸ್ಯೆ ನಾನು ಬಗೆಹರಿಸುತ್ತೇನೆ" ಎಂದು ಕರ್ನಾಟಕ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಹೇಳಿದರು.

ಬಿಜೆಪಿ ಪ್ರಧಾನ ಕಾರ್ಯದರ್ಶಿ ಮತ್ತು ಕರ್ನಾಟಕ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಮೂರು ದಿನಗಳ ಭೇಟಿಗಾಗಿ ರಾಜ್ಯಕ್ಕೆ ಬುಧವಾರ ಆಗಮಿಸಿದ್ದಾರೆ. ಕುಮಾರಕೃಪ ಅತಿಥಿ ಗೃಹದಿಂದ ಅವರು ಮಲ್ಲೇಶ್ವರಂನಲ್ಲಿರುವ ರಾಜ್ಯ ಬಿಜೆಪಿ ಕಚೇರಿಗೆ ತೆರಳಿದ್ದಾರೆ.

ಕಟ್ಟೆ ಪಂಚಾಯ್ತಿ ನಡೆಸಲು ಓಡೋಡಿ ಬಂದ ಅರುಣ್ ಸಿಂಗ್! ಕಟ್ಟೆ ಪಂಚಾಯ್ತಿ ನಡೆಸಲು ಓಡೋಡಿ ಬಂದ ಅರುಣ್ ಸಿಂಗ್!

ಮಾಧ್ಯಮಗಳ ಜೊತೆ ಮಾತನಾಡಿದ ಅರುಣ್ ಸಿಂಗ್, "ಮೂರು ದಿನದ ಕಾರ್ಯಕ್ರಮ ನಿಮಿತ್ತ ಬಂದಿದ್ದೇನೆ. ಪಕ್ಷ ಸಂಘಟನೆ ಕುರಿತು ಚರ್ಚಿಸುತ್ತೇನೆ. ಕೋವಿಡ್ ಸಂದರ್ಭದಲ್ಲಿ ತೆಗೆದುಕೊಂಡ ನಿಲುವು ಸರ್ಕಾರದ ಕಾರ್ಯಕ್ರಮಗಳ ಬಗ್ಗೆ ಚರ್ಚಿಸುತ್ತೇವೆ" ಎಂದರು.

ಅರುಣ್‌ ಸಿಂಗ್‌ಗೆ ದೂರು; ಬಿಎಸ್‌ವೈ ವಿರುದ್ಧದ 5 ಆರೋಪಗಳು! ಅರುಣ್‌ ಸಿಂಗ್‌ಗೆ ದೂರು; ಬಿಎಸ್‌ವೈ ವಿರುದ್ಧದ 5 ಆರೋಪಗಳು!

No Disagreement With In Party Says Arun Singh

"ಸಿಎಂ, ಮಂತ್ರಿಗಳು ಜನರ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು. ಇದರ ಬಗ್ಗೆ ನಾನು ಅವರಿಗೆ ಸೂಚಿಸುತ್ತೇನೆ. ಕೋವಿಡ್‌ನಿಂದ ಮೃತಪಟ್ಟವರಿಗೆ 1 ಲಕ್ಷ ಘೋಷಿಸಲಾಗಿದೆ" ಎಂದು ಹೇಳಿದರು.

ವಿಡಿಯೋ; ನಾಯಕತ್ವ ಬದಲಾವಣೆ ಕುರಿತು ಬಿಎಸ್‌ವೈ ಮಾತು ವಿಡಿಯೋ; ನಾಯಕತ್ವ ಬದಲಾವಣೆ ಕುರಿತು ಬಿಎಸ್‌ವೈ ಮಾತು

"ನಾಯಕತ್ವ ಬದಲಾವಣೆ ಬಗ್ಗೆ ಪುಕಾರು ನಡೆದಿವೆ ಎಂದು ಕಾಂಗ್ರೆಸ್ ಆರೋಪ ಮಾಡುತ್ತಿದೆ. ನಮ್ಮ ಪಕ್ಷದಲ್ಲಿ ಎಲ್ಲವೂ ಸರಿಯಿದೆ, ಪಕ್ಷದಲ್ಲಿ ಯಾವುದೇ ಭಿನ್ನಾಬಿಪ್ರಾಯಗಳಿಲ್ಲ. ಕೆಲವು ಸಣ್ಣಪುಟ್ಟ ಸಮಸ್ಯೆ ನಾನು ಬಗೆಹರಿಸುತ್ತೇನೆ" ಎಂದು ತಿಳಿಸಿದರು.

"ಸಮಸ್ಯೆ ಬಗೆಹರಿಸುವುದಕ್ಕಾಗಿಯೇ ನಾನು ಒಬ್ಬೊಬ್ಬರ ಜೊತೆ ಮಾತುಕತೆ ನಡೆಸುತ್ತೇನೆ. ಯಡಿಯೂರಪ್ಪ ನೇತೃತ್ವದಲ್ಲಿ ಸರ್ಕಾರ ಉತ್ತಮ ಕೆಲಸ ಮಾಡುತ್ತಿದೆ" ಎಂದು ಅರುಣ್ ಸಿಂಗ್ ಹೇಳಿದರು.

ಸಚಿವರಿಗೆ ಮಾತ್ರ ಪ್ರವೇಶ; ಬಿಜೆಪಿ‌ ಕಚೇರಿಯಲ್ಲಿ ಅರುಣ್ ಸಿಂಗ್ ಸಚಿವರ ಜೊತೆ ಪ್ರತ್ಯೇಕವಾಗಿ ಮಾತುಕತೆ ನಡೆಸಲಿದ್ದಾರೆ. ಸಚಿವರು ಮಾತ್ರ ಆಗಮಿಸಬೇಕು ಎಂದು ಸೂಚನೆ ನೀಡಲಾಗಿದೆ. ಆಪ್ತ ಸಹಾಯಕರು, ಗನ್‌ಮ್ಯಾನ್‌ಗಳಿಗೆ ಕಚೇರಿಗೆ ಪ್ರವೇಶವಿಲ್ಲ.

ಮುಖ್ಯಮಂತ್ರಿ ಯಡಿಯೂರಪ್ಪ ಜೊತೆ ಬಿಜೆಪಿ ಕಚೇರಿಯೊಳಗೆ ಬಂದಿದ್ದ ಗನ್‌ಮ್ಯಾನ್‌ಗಳನ್ನು ಪಕ್ಷದ ನಿಯೋಜಿತ ಸ್ವಯಂ ಸೇವಕರು ವಾಪಸ್ ಕಳಿಸಿದರು. ಬಿಜೆಪಿ ಕಚೇರಿಗೆ 31 ಸಚಿವರು ಆಗಮಿಸಿದ್ದಾರೆ.

Recommended Video

ಮಲೆನಾಡಿನಲ್ಲಿ ಧಾರಾಕಾರ ಮಳೆ ಮುಳುಗಡೆ ಭೀತಿಯಲ್ಲಿದೆ ಹೆಬ್ಬಾಳೆ ಸೇತುವೆ | Oneindia Kannada

ಪ್ರತಿ ಸಚಿವರ ಜೊತೆ 30 ನಿಮಿಷಗಳ ಕಾಲ ಅರುಣ್ ಸಿಂಗ್ ಮಾತುಕತೆ ನಡೆಸಲಿದ್ದಾರೆ. ಈ ಸಂದರ್ಭದಲ್ಲಿ ಯಡಿಯೂರಪ್ಪ ಮತ್ತು ಕರ್ನಾಟಕ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಉಪಸ್ಥಿತರಿರುವರು.

English summary
No disagreement with in party said Arun Singh. Karnataka BJP state in charge Arun Singh in Bengaluru for three days visit.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X