ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಾವ ಇಲಾಖೆಯಲ್ಲೂ ಮುಖ್ಯಮಂತ್ರಿ ಆದೇಶವಿಲ್ಲದೆ ವರ್ಗಾವಣೆ ಮಾಡುವಂತಿಲ್ಲ: ಇವಿ ರಮಣರೆಡ್ಡಿ

|
Google Oneindia Kannada News

ಬೆಂಗಳೂರು, ಮಾರ್ಚ್ 05: ಇನ್ನುಮುಂದೆ ಸರ್ಕಾರದ ಯಾವುದೇ ಇಲಾಖೆಗಳಲ್ಲಿ ವರ್ಗಾವಣೆ ಮಾಡುವಾಗ ಮುಖ್ಯಮಂತ್ರಿ ಒಪ್ಪಿಗೆ ಪಡೆಯುವುದು ಕಡ್ಡಾಯವಾಗಿರಲಿದೆ.

ಹೌದು, ಯಾವುದೇ ಇಲಾಖೆಯಲ್ಲಿ ಯಾವುದೇ ವರ್ಗಾವಣೆ ಮಾಡುವ ಮುನ್ನ ಮುಖ್ಯಮಂತ್ರಿ ಒಪ್ಪಿಗೆ ಪಡೆಯಲೇಬೇಕು ಎಂದು ಅಪರ ಮಖ್ಯ ಕಾರ್ಯದರ್ಶಿ ಇವಿ ರಮಣರೆಡ್ಡಿ ಹೇಳಿದ್ದಾರೆ.

ಯಾವುದೇ ಇಲಾಖೆಯಲ್ಲಿ ಆಡಳಿತಾತ್ಮಕ ಅವಶ್ಯವಿರುವ ಸ್ಥಾನಗಳನ್ನು ತುಂಬುವುದನ್ನು ಹೊರತುಪಡಿಸಿ ಬೇರೆ ಯಾವುದೇ ವರ್ಗಾವಣೆಗಳನ್ನು ಮಾಡಲು ಮುಖ್ಯಮಂತ್ರಿಗಳ ಅನುಮತಿ ಪಡೆಯುವುದು ಕಡ್ಡಾಯವೆಂದು ಎಲ್ಲ ಇಲಾಖೆಗಳ ಮುಖ್ಯಸ್ಥರಿಗೆ ಮುಖ್ಯಮಂತ್ರಿಗಳ ಅಪರ ಮುಖ್ಯ ಕಾರ್ಯದರ್ಶಿ ಇ.ವಿ.ರಮಣ ರೆಡ್ಡಿ ಸೂಚನೆ ನೀಡಿದ್ದಾರೆ.

BS Yediyurappa

ಈಗಾಗಲೇ ಇಲಾಖೆಗಳಲ್ಲಿ ಕಡತದ ಟಿಪ್ಪಣಿ, ನಡವಳಿ, ಸ್ವೀಕೃತಿ ಮೇಲಿನ ಷರಾ ರೂಪದಲ್ಲಿ ಮುಖ್ಯಮಂತ್ರಿಯವರಿಂದ ಸ್ವೀಕೃತವಾದ ವರ್ಗಾವಣೆ ಆದೇಶಗಳನ್ನೂ ಸಹ ಕಡತ ರೂಪದಲ್ಲಿ ಸಲ್ಲಿಸಿ, ಮುಖ್ಯಮಂತ್ರಿಗಳ ಆದೇಶವನ್ನೂ ಕಡತ ರೂಪದಲ್ಲಿ ಪಡೆದು ವರ್ಗಾವಣೆ ಮಾಡಲು ಸೂಚಿಸಿದ್ದಾರೆ.

ಬಜೆಟ್ ಅಧಿವೇಶನ: ಒಂದು ರಾಷ್ಟ್ರ-ಒಂದು ಚುನಾವಣೆ ಚರ್ಚೆಗೆ ಬಲಿಯಾದ ಮೊದಲ ದಿನದ ಕಲಾಪ!ಬಜೆಟ್ ಅಧಿವೇಶನ: ಒಂದು ರಾಷ್ಟ್ರ-ಒಂದು ಚುನಾವಣೆ ಚರ್ಚೆಗೆ ಬಲಿಯಾದ ಮೊದಲ ದಿನದ ಕಲಾಪ!

ಈ ಕುರಿತು ಎಲ್ಲ ಇಲಾಖೆ ಮುಖ್ಯಸ್ಥರಿಗೆ ಪತ್ರ ಬರೆದಿರುವ ಅವರು, 2021 ಸಾಮಾನ್ಯ ವರ್ಗಾವಣೆವರೆಗೆ ಯಾವುದೇ ವರ್ಗಾವಣೆಗಳನ್ನು ಮಾಡದಿರಲು ಸರ್ಕಾರ ನಿರ್ಧರಿಸಿದೆ.

Recommended Video

10 ದಿನ ಸದನದಿಂದ ಬ್ಯಾನ್ ಮಾಡಿದ್ದು ಯಾಕೆ ?? | Bhadravati | Oneinda Kannada

ಅಂತಹ ವರ್ಗಾವಣೆಗಳನ್ನು ಇಲಾಖೆ ಮಟ್ಟದಲ್ಲಿ ಮಾಡದೇ ಪ್ರತಿಯೊಂದು ವರ್ಗಾವಣೆಗೂ ಮುಖ್ಯಮಂತ್ರಿಗೆ ಕಡತದಲ್ಲಿ ಸಲ್ಲಿಸಿ ಆದೇಶ ಪಡೆದ ನಂತರ ವರ್ಗಾವಣೆ ಮಾಡುವಂತೆ ಸೂಚಿಸಿದ್ದಾರೆ.

English summary
Henceforth, In Karnataka transfer of any of the government departments Chief minister order will be mandatory says EV Ramanareddy.ಇನ್ನುಮುಂದೆ ಸರ್ಕಾರದ ಯಾವುದೇ ಇಲಾಖೆಗಳಲ್ಲಿ ವರ್ಗಾವಣೆ ಮಾಡುವಾಗ ಮು
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X