ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಕ್ರಿಯ ಪ್ರಕರಣ ಹೆಚ್ಚು; ಕೋವಿಡ್ ಕೇರ್ ಸೆಂಟರ್‌ನಲ್ಲಿ ಬೆಡ್ ಖಾಲಿ!

|
Google Oneindia Kannada News

ಬೆಂಗಳೂರು, ಮೇ 12; ಕರ್ನಾಟಕದಲ್ಲಿನ ಸಕ್ರಿಯ ಕೋವಿಡ್ ಪ್ರಕರಣಗಳ ಸಂಖ್ಯೆ 5,87,452. ಸರ್ಕಾರ ಮತ್ತು ಕೆಲವು ಸಂಘಟನೆಗಳು ಕೋವಿಡ್ ಕೇರ್ ಸೆಂಟರ್ ಆರಂಭಿಸಲು ಪ್ರಯತ್ನವನ್ನು ಕೈಗೊಂಡಿವೆ. ಆದರೆ ಈಗ ಇರುವ ಕೇಂದ್ರಗಳಲ್ಲಿಯೇ ಹಾಸಿಗೆಗಳು ಖಾಲಿ ಉಳಿದಿವೆ.

ಬೆಂಗಳೂರು ನಗರ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಜನರು ಹೋಂ ಐಸೋಲೇಷನ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜನರು ಮೊದಲ ಅಲೆಯಲ್ಲಿ ಕೋವಿಡ್ ಕೇರ್ ಸೆಂಟರ್ ಬಯಸುತ್ತಿದ್ದರು. ಈಗ ಅಲ್ಲಿ ಆಕ್ಸಿಜನ್ ಬೆಡ್ ವ್ಯವಸ್ಥೆ ಮಾಡಿದರೂ ಸಹ ಹಾಸಿಗೆ ಭರ್ತಿಯಾಗಿಲ್ಲ.

ಕಲಬುರಗಿ; ಶಹಾಬಾದ್ ಇಎಸ್‌ಐ ಆಸ್ಪತ್ರೆ ಶೀಘ್ರವೇ ಕೋವಿಡ್ ಕೇರ್ ಸೆಂಟರ್ ಕಲಬುರಗಿ; ಶಹಾಬಾದ್ ಇಎಸ್‌ಐ ಆಸ್ಪತ್ರೆ ಶೀಘ್ರವೇ ಕೋವಿಡ್ ಕೇರ್ ಸೆಂಟರ್

ಆರೋಗ್ಯ ಇಲಾಖೆಯೇ ನೀಡುವ ಮಾಹಿತಿ ಪ್ರಕಾರ ಕಳೆದ 2 ವಾರದಲ್ಲಿ ರಾಜ್ಯದಲ್ಲಿ 10 ಸಾವಿರ ಬೆಡ್‌ಗಳನ್ನು ಕೋವಿಡ್ ಕೇರ್ ಸೆಂಟರ್‌ನಲ್ಲಿ ನಿರ್ಮಾಣ ಮಾಡಲಾಗಿದೆ. ರಾಜ್ಯದಲ್ಲಿ ಕೆಲವು ಆಕ್ಸಿಜನ್ ಬೆಡ್ ಸೇರಿದಂತೆ ಶೇ 30ರಷ್ಟು ಬೆಡ್ ಮಾತ್ರ ಭರ್ತಿಯಾಗಿದೆ.

ಕೋವಿಡ್ ಕೇಂದ್ರವಾಗಿ ಐಟಿಐ ಆಸ್ಪತ್ರೆ ಪರಿವರ್ತನೆ: ಸದಾನಂದ ಗೌಡ ಕೋವಿಡ್ ಕೇಂದ್ರವಾಗಿ ಐಟಿಐ ಆಸ್ಪತ್ರೆ ಪರಿವರ್ತನೆ: ಸದಾನಂದ ಗೌಡ

30 ಕೋವಿಡ್ ಕೇರ್ ಸೆಂಟರ್‌ಗಳಲ್ಲಿ 500 ಆಕ್ಸಿಜನ್ ಬೆಡ್ ಸೇರಿದಂತೆ 750 ಬೆಡ್‌ಗಳು ಮಾತ್ರ ಭರ್ತಿಯಾಗಿವೆ. ಕೋವಿಡ್ ಕೇರ್ ಸೆಂಟರ್‌ಗಳಲ್ಲಿರುವ ಸಿಬ್ಬಂದಿಗಳು ಜನರು ಹೋಂ ಐಸೋಲೇಷನ್‌ಗೆ ಹೆಚ್ಚು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ.

ಜಿಲ್ಲೆಗಳಲ್ಲಿ ಕೋವಿಡ್ ಪ್ರಕರಣ ಹೆಚ್ಚಳ; ಕೇಂದ್ರದ ಆತಂಕ ಜಿಲ್ಲೆಗಳಲ್ಲಿ ಕೋವಿಡ್ ಪ್ರಕರಣ ಹೆಚ್ಚಳ; ಕೇಂದ್ರದ ಆತಂಕ

ಕೋವಿಡ್ ಕೇರ್ ಸೆಂಟರ್

ಕೋವಿಡ್ ಕೇರ್ ಸೆಂಟರ್

ಕರ್ನಾಟಕದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 5,87,452. ಬೆಂಗಳೂರು ನಗರದಲ್ಲಿ 3,62,696. ಆದರೆ ಜನರು ಕುಟುಂಬದೊಂದಿಗೆ ಇರಲು ಹೆಚ್ಚು ಇಷ್ಟಪಡುತ್ತಾರೆ. ಆದ್ದರಿಂದ ಹೋಂ ಐಸೋಲೇಷನ್‌ ಆಯ್ಕೆಯನ್ನು ಬಯಸುತ್ತಿದ್ದಾರೆ. ಕೋವಿಡ್ ಕೇರ್ ಸೆಂಟರ್‌ಗೆ ಬರುವ ಬದಲು ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಇದರಿಂದಾಗಿ ಸೆಂಟರ್‌ಗಳಲ್ಲಿ ಬೆಡ್ ಖಾಲಿ ಇದೆ.

ಜಿಲ್ಲಾ ಕೇಂದ್ರದಲ್ಲೂ ಹೀಗೆ

ಜಿಲ್ಲಾ ಕೇಂದ್ರದಲ್ಲೂ ಹೀಗೆ

ಧಾರವಾಡದಲ್ಲಿ ಸೋಮವಾರ ಕೋವಿಡ್ ಸೋಂಕಿತನಿಗೆ ಕೋವಿಡ್ ಕೇರ್ ಸೆಂಟರ್‌ಗೆ ಬರುವಂತೆ ಸೂಚಿಸಲಾಗಿತ್ತು. ಅವರಿಗೆ ಆಕ್ಸಿಜನ್ ಬೆಡ್ ವ್ಯವಸ್ಥೆ ಸಹ ಇತ್ತು. ಆದರೆ ಅವರು ಸೆಂಟರ್‌ಗೆ ಬಂದು ದಾಖಲಾಗಲಿಲ್ಲ ಎಂದು ಕೋವಿಡ್ ಕೇರ್ ಸೆಂಟರ್ ಸಿಬ್ಬಂದಿ ಹೇಳಿದ್ದಾರೆ. ಹಲವು ಜಿಲ್ಲೆಗಳಲ್ಲಿ ಇದೇ ಪರಿಸ್ಥಿತಿ ಇದೆ. ಕೋವಿಡ್ ಕೇರ್ ಸೆಂಟರ್‌ಗೆ ಸೋಂಕಿತರು ಬರುತ್ತಿಲ್ಲ.

ನೇಮಕಾತಿಗೆ ಗಮನ ಕೊಡಿ

ನೇಮಕಾತಿಗೆ ಗಮನ ಕೊಡಿ

ಸರ್ಕಾರ ಕೋವಿಡ್ ಕೇರ್ ಸೆಂಟರ್ ಸ್ಥಾಪನೆ ಮಾಡಲು ಬಳಸುವ ವೆಚ್ಚವನ್ನು ಆಕ್ಸಿಜನ್ ಬೆಡ್, ವೈದ್ಯರು, ನರ್ಸ್‌ಗಳ ನೇಮಕಾತಿಗೆ ಬಳಕೆ ಮಾಡಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಸಾಮಾನ್ಯ ರೋಗದ ಲಕ್ಷಣಗಳಿರುವ ಸೋಂಕಿತರಿಗೆ ಮನೆಯಲ್ಲಿಯೇ ಚಿಕಿತ್ಸೆ ನೀಡಬಹುದು ಎಂದು ಹೇಳಿದ್ದಾರೆ.

ಸರ್ಕಾರ ಮೊದಲ ಮತ್ತು ದ್ವಿತೀಯ ಹಂತದ ನಗರದಲ್ಲಿ ಕೋವಿಡ್ ಕೇರ್ ಸೆಂಟರ್ ನಿರ್ಮಾಣಕ್ಕೆ ಸುಮಾರು 6 ಲಕ್ಷ ಖರ್ಚು ಮಾಡುತ್ತಿದೆ. ಇದನ್ನು ನಿರ್ವಹಣೆ ಮಾಡುವುದು ಸಹ ಸರ್ಕಾರಕ್ಕೆ ಹೊರೆಯಾಗಿದೆ.

ಸಚಿವರು ಹೇಳುವುದೇನು?

ಸಚಿವರು ಹೇಳುವುದೇನು?

ಕೋವಿಡ್ ಟಾಸ್ಕ್ ಫೋರ್ಸ್ ಅಧ್ಯಕ್ಷರೂ ಆಗಿರುವ ವೈದ್ಯಕೀಯ ಶಿಕ್ಷಣ ಸಚಿವ ಡಾ. ಅಶ್ವಥ್ ನಾರಾಯಣ್ ಈ ಕುರಿತು ಮಾತನಾಡಿದ್ದಾರೆ. "ಪ್ರತಿದಿನ ಬೆಂಗಳೂರಿನಲ್ಲಿ ಸುಮಾರು 7000 ಬೆಡ್‌ಗಾಗಿ ಬೇಡಿಕೆ ಬರುತ್ತದೆ. ಆಸ್ಪತ್ರೆಗೆ ದಾಖಲಾಗುವುದಕ್ಕಿಂತ ಕೋವಿಡ್ ಕೇರ್ ಸೆಂಟರ್‌ಗಳಲ್ಲಿ ಅವರು ಚಿಕಿತ್ಸೆ ಪಡೆಯಬಹುದು" ಎಂದು ಹೇಳಿದ್ದಾರೆ.

Recommended Video

Ganga ನದಿಯ ಪರಿಸ್ಥಿತಿ ಈಗ ಹೇಗಿದೆ ನೋಡಿ | Oneindia Kannada

English summary
As per health department data 10,000 beds set up across Karnataka. But 750 normal, 500 oxygenated beds occupied in state.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X