ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಫ್ಐಆರ್ ಕುರಿತು ದೃಢಪಡಿಸಿಕೊಳ್ಳದೇ ವರದಿ ಮಾಡಿದರೆ ಮಾನನಷ್ಟ ಆಗಲ್ಲ: ಬಾಂಬೆ ಹೈಕೋರ್ಟ್

By ವಸಂತ ಕೊಡಗು
|
Google Oneindia Kannada News

ಮುಂಬೈ, ಜು. 05: 'ಎಫ್ಐಆರ್ ಕುರಿತು ದೃಢಿಪಡಿಸಿಕೊಳ್ಳದೇ ವರದಿ ಮಾಡಿದರೆ ಮಾನನಷ್ಟ ಮೊಕದ್ದಮೆ ಆಗುವುದಿಲ್ಲ. ಪ್ರಥಮ ವರ್ತಮಾನ ವರದಿ ದಾಖಲಾತಿ, ಪ್ರಕರಣ ಸಂಬಂಧ ವರದಿ ಮಾಡುವ ಹಕ್ಕು ಮಾಧ್ಯಮಗಳಿಗೆ ಇದೆ. ಇಂತಹ ವರದಿಗಳ ಮೇಲೆ ಮಾನನಷ್ಟ ಮೊಕದ್ದಮೆ ಹೂಡಲು ಸಾಧ್ಯವಿಲ್ಲ'.

ಮಾನನಷ್ಟ ಮೊಕದ್ದಮೆ ಹೆಸರಿನಲ್ಲಿ ಮಾಧ್ಯಮಗಳ ಮೇಲೆ ನಿಯಂತ್ರಣ ಹೇರಲು ಯತ್ನಿಸುವ ಶಕ್ತಿಗಳ ಬಗ್ಗೆ ಬಾಂಬೆ ಹೈಕೋರ್ಟ್ ನಾಗಪುರ ಪೀಠ ಇತ್ತೀಚೆಗೆ ನೀಡಿರುವ ತೀರ್ಪು ಇದು. ಎಫ್ಐಆರ್ ನಲ್ಲಿ ಸತ್ಯ ಇರಲೀ, ಇಲ್ಲದಿದ್ದರೆ, ಮಾಧ್ಯಮಗಳು ಮಾಡುವ ವರದಿ ಸತ್ಯವಾಗಿದ್ದಲ್ಲಿ ಮಾನನಷ್ಟ ಮೊಕದ್ದಮೆ ಹೂಡುವಂತಿಲ್ಲ ಎಂದು ನಾಗಪುರ ಪೀಠ ಮಹತ್ವದ ತೀರ್ಪು ನೀಡಿದೆ.

ಮಾನನಷ್ಟ ಮೊಕದ್ದಮೆ ಕೇಸು:

ವ್ಯಕ್ತಿಯೊಬ್ಬರು ಮುಂಬೈನ ಲೋಕಮಾತ್ ಮೀಡಿಯಾ ಪ್ರೈವೇಟ್‌ನ ಅಧ್ಯಕ್ಷ ವಿಜಯ್ ದರ್ದಾ ಮತ್ತು ಮುಖ್ಯ ಸಂಪಾದಕ ರಾಜೇಂದ್ರ ದರ್ದಾ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದು, ಅರ್ಜಿಯ ವಿಚಾರಣೆ ಅಧೀನ ನ್ಯಾಯಾಲಯದಲ್ಲಿ ನಡೆಯುತ್ತಿದೆ. ತಮ್ಮ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳನ್ನು ರದ್ದು ಗೊಳಿಸುವಂತೆ ಕೋರಿ ಪತ್ರಕರ್ತರು ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ಪತ್ರಿಕೆಯಲ್ಲಿ ಪ್ರಕಟಿಸಿದ ಸುದ್ದಿಯು ತಮ್ಮ ಮತ್ತು ತಮ್ಮ ಕುಟುಂಬದ ವಿರುದ್ಧ ಸುಳ್ಳು ಆರೋಪ ಮತ್ತು ಮಾನಹಾನಿಕರ ವಾಗಿದೆ ಏಕೆಂದರೆ ಸುದ್ದಿಯನ್ನು ಪ್ರಕಟಿಸುವ ಮೊದಲು ಸತ್ಯವನ್ನು ಪತ್ರಿಕೆ ಧೃಢಪಡಿಸಿಕೊಳ್ಳಲಿಲ್ಲ ಎಂದು ವಾದಿಸಿದರು.

No defamation in case of fair reporting of FIR : Bombay High Court

ವರದಿಯಾದ ಸುದ್ದಿಯಲ್ಲಿ ಎಫ್ಐಆರ್ ನಲ್ಲಿ ಹೆಸರು ಇಲ್ಲದಿದ್ದರೂ ಅವರ ಬಗ್ಗೆ ಪತ್ರಿಕೆಯಲ್ಲಿ ಬರೆಯಲಾಗಿದೆ ಎಂದು ಉಲ್ಲೇಖಿಸಿ ದೂರುದಾರ ಪರ ವಕೀಲರು ವಾದ ಮಂಡಿಸಿದ್ದರು.

ದೂರುದಾರರು ಪ್ರತಿಪಾದಿಸಿರುವ ಮಾನನಷ್ಟ ಅಪರಾಧದಲ್ಲಿ ಅರ್ಜಿದಾರರು ತಪ್ಪಿತಸ್ಥರಲ್ಲ ಎಂದು ಬಾಂಬೆ ಉಚ್ಚ ನ್ಯಾಯಾಲಯ ನಿರ್ಧರಿಸಿ ತೀರ್ಪು ಪ್ರಕಟಿಸಿದೆ. ಸಂಪಾದಕರ ಕರ್ತವ್ಯವೆಂದರೆ ಅವರ ಪ್ರಕಟಣೆಗಳಲ್ಲಿ ಸತ್ಯವನ್ನು ಮಾತ್ರ ಪ್ರಕಟಿಸುವುದು. ಎಫ್‌ಐಆರ್ ನಲ್ಲಿರುವ ವಿಷಯಗಳ ಸತ್ಯಾಸತ್ಯತೆಯನ್ನು ಪರಿಶೀಲಿಸಬೇಕೆಂದಿಲ್ಲ ಮತ್ತು ಎಫ್‌ಐಆರ್ ಸತ್ಯಾಸತ್ಯತೆಯನ್ನು ದೃಢೀಕರಿಸುವ ಅಗತ್ಯವಿಲ್ಲ ಎಂದು ಹೇಳಿದ ಪೀಠವು ಅರ್ಜಿದಾರರ ವಿರುದ್ಧದ ಕ್ರಿಮಿನಲ್ ಮೊಕದ್ದಮೆಯನ್ನು ರದ್ದುಗೊಳಿಸಿದೆ.

ಪ್ರಥಮ ಮಾಹಿತಿ ವರದಿಗಳ (ಎಫ್‌ಐಆರ್)ದಾಖಲಾತಿ ಮತ್ತು ದಾಖಲಾದ ಪ್ರಕರಣಗಳ ಕುರಿತು ವರದಿ ಮಾಡುವ ಹಕ್ಕು ಮಾಧ್ಯಮಗಳಿಗೆ ಇದೆ. ಇಂತಹ ವರದಿಗಳ ಮೇಲೆ ಮಾನನಷ್ಟ ಮೊಕದ್ದಮೆ ಹೂಡಲು ಸಾದ್ಯವಿಲ್ಲ ಎಂದು ಹೇಳಿದ ಪೀಠ ಪತ್ರಕರ್ತರಾದ ವಿಜಯ್‌ ದರ್ದಾ ಮತ್ತು ರವೀಂದ್ರ ದರ್ದಾ ಅವರ ವರದಿ ವಿರುದ್ದ ಹೂಡಿದ್ದ ಮಾನನಷ್ಟ ಮೊಕದ್ದಮೆಯನ್ನು ವಜಾಗೊಳಿಸಿದೆ. ದಿನ ಪತ್ರಿಕೆಯ ಮಾಲೀಕರ ವಿರುದ್ಧದ ಮಾನನಷ್ಟ ಮೊಕದ್ದಮೆಯನ್ನು ವಜಾಗೊಳಿಸುವಾಗ, ನ್ಯಾಯಮೂರ್ತಿ ವಿನಯ್ ಜೋಶಿ ಅವರು ಮಾಧ್ಯಮ ಸ್ವಾತಂತ್ರ್ಯದ ಮೌಲ್ಯ ಮತ್ತು ಅದು ನೀಡುವ ಮಾಹಿತಿಯನ್ನು ಒತ್ತಿ ಹೇಳಿದರು.

No defamation in case of fair reporting of FIR : Bombay High Court

ವರದಿಯಾಗುತ್ತಿರುವ ಅಪರಾಧಗಳು, ನ್ಯಾಯಾಲಯದಲ್ಲಿ ದಾಖಲಾಗುವ ಪ್ರಕರಣಗಳು, ತನಿಖೆಯ ಸ್ಥಿತಿಗತಿ, ಬಂಧನಗಳು ಇತ್ಯಾದಿಗಳಿಗೆ ಸಂಬಂಧಿಸಿದ ಸುದ್ದಿಗಳಿಗೆ ದಿನಪತ್ರಿಕೆಗಳು ಕನಿಷ್ಠ ಸ್ಥಳಾವಕಾಶವನ್ನು ವಿನಿಯೋಗಿಸುತ್ತವೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ.ಸುದ್ದಿಯೋಗ್ಯ ಘಟನೆಗಳ ಕುರಿತು ಸಾರ್ವಜನಿಕರಿಗೆ ತಿಳಿಯುವ ಹಕ್ಕಿದೆ ಎಂದು ನ್ಯಾಯಾಲಯ ಹೇಳಿದೆ. ಇದು ತನಿಖೆಗಳ ವರದಿಯನ್ನು ಕೇವಲ ಅಂತಿಮ ಫಲಿತಾಂಶಕ್ಕೆ ಸೀಮಿತಗೊಳಿಸುವುದಕ್ಕೆ ಸಮನಾಗಿರುತ್ತದೆ. ಏನಾಗುತ್ತಿದೆ ಎಂಬುದನ್ನು ತಿಳಿದುಕೊಳ್ಳುವ ಸಾರ್ವಜನಿಕರ ಹಕ್ಕನ್ನು ಕಸಿದುಕೊಳ್ಳುವುದು, ಪ್ರಕರಣಗಳ ದಾಖಲಾತಿಯಲ್ಲಿ ವಾಸ್ತವಿಕ ವರದಿಯನ್ನು ಮಾನನಷ್ಟ ಎಂದು ಪರಿಗಣಿಸಲು ಅಗುವುದಿಲ್ಲ ಎಂದು ಹೇಳಿರುವ ಪೀಠ ತನ್ನ 21 ಪುಟಗಳ ತೀರ್ಪಿನಲ್ಲಿ, ನಿಖರವಾದ ಸುದ್ದಿಗಳನ್ನು ಪ್ರಕಟಿಸಲು ಮಾಧ್ಯಮಗಳ ವಿರುದ್ಧ ಮಾನನಷ್ಟ ಮೊಕದ್ದಮೆಗಳನ್ನು ವಿಚಾರಣೆಗೆ ಎತ್ತಿಕೊಳ್ಳುವುದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅನಾರೋಗ್ಯಕರ ಮತ್ತು ನಿಖರವಾದ ಮಾಹಿತಿಯನ್ನು ನೀಡುವುದು ಪತ್ರಿಕೆಗಳ ಮೂಲಭೂತ ಹಕ್ಕು ಆಗಿದೆ ಎಂದು ಒತ್ತಿ ಹೇಳಿದೆ.

ಸಾರ್ವಜನಿಕ ವಿಷಯಗಳ ಬಗ್ಗೆ ನಿಖರವಾಗಿ ವರದಿ ಮಾಡುವ ಸ್ವಾತಂತ್ರ್ಯವು ಮುಕ್ತ ಅಭಿವ್ಯಕ್ತಿಯ ಹಕ್ಕಿನಿಂದ ಪಡೆದ ಹಕ್ಕು. ಪ್ರಜಾಪ್ರಭುತ್ವ ವ್ಯವಸ್ಥೆಯು ಸತ್ಯ ಮತ್ತು ವಿಶ್ವಾಸಾರ್ಹ ಮಾಹಿತಿಯನ್ನು ದೂಷಿಸುವುದು ಅನಾರೋಗ್ಯಕರ ಎಂದು ನ್ಯಾಯಾಲಯವು ತೀರ್ಮಾನಿಸಿದೆ. ಅಂತಹ ಸುದ್ದಿಗಳಿಗೆ ಸಂಬಂಧಿಸಿದಂತೆ ಮಾನನಷ್ಟ ಮೊಕದ್ದಮೆಗಳನ್ನು ದಾಖಲಿಸುವುದು ವರದಿಗಾರರು ಮತ್ತು ಮಾಹಿತಿದಾರರನ್ನು ನಿರ್ಬಂಧಿಸುವ ಪ್ರಯತ್ನವಲ್ಲದೆ, ಅವರು ಈ ಹಿಂದೆ ಉದ್ದೇಶಪೂರ್ವಕವಾಗಿ ಮಾನಹಾನಿ ಮಾಡಿದವರ ವಿರುದ್ಧ ನೀಡಿದ ದೂರನ್ನು ಹಿಂತೆಗೆದುಕೊಳ್ಳುವಂತೆ ಒತ್ತಡ ಹೇರುತ್ತಾರೆ ಎಂದು ಅದು ಹೇಳಿದೆ. ಸಾರ್ವಜನಿಕ ಅಭಿಪ್ರಾಯವನ್ನು ರೂಪಿಸುವ ಪತ್ರಿಕಾ ಸಾಮರ್ಥ್ಯವನ್ನು ನ್ಯಾಯಾಲಯವು ಒತ್ತಿ ಹೇಳಿದ್ದು ವದಂತಿ ಅಥವಾ ವದಂತಿಗಳನ್ನು ಆಧರಿಸಿ ಸುದ್ದಿಗಳನ್ನು ಪ್ರಕಟಿಸುವುದು ಯಾವುದೇ ಪತ್ರಕರ್ತರಿಗೆ ಮಾರಕವಾಗಿದೆ ಎಂದು ಹೇಳಿದೆ.

Recommended Video

ಚಂದ್ರಶೇಖರ್ ಗುರೂಜಿ ಹತ್ಯೆ ಹಿಂದೆ ಆಸ್ತಿ ಗಲಾಟೆ?? ಕೊಲೆ ಮಾಡಿದ್ದು ಇವರೇನಾ? | OneIndia Kannada

English summary
Bombay High Court made a significant ruling which states that the fair reporting of FIR may not attract action for Defamation. Know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X