ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋಳಿ ಮಾಂಸದಿಂದ ಕೊರೊನಾ ವೈರಸ್? ರಾಜ್ಯ ಸರ್ಕಾರ ಸ್ಪಷ್ಟನೆ

|
Google Oneindia Kannada News

Recommended Video

Deadly Coronavirus still haunting China | Oneindia Kannada

ಬೆಂಗಳೂರು, ಫೆಬ್ರವರಿ 15: ಕೋಳಿ ಮಾಂಸ ತಿಂದರೆ ಕೊರೊನಾ ವೈರಸ್ ಬರುತ್ತದೆ ಎಂಬ ಸುದ್ದಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು, ಈ ಬಗ್ಗೆ ರಾಜ್ಯ ಸರ್ಕಾರ ಸ್ಪಷ್ಟನೆ ನೀಡಿದೆ.

ಕೋಳಿ ಮಾಂಸದಿಂದ ಕೊರೊನಾ ವೈರಸ್ ಬರುವುದಿಲ್ಲ ಎಂದು ರಾಜ್ಯ ಆರೋಗ್ಯ ಇಲಾಖೆ ಹೇಳಿದ್ದು, ಯಾರೂ ಆತಂಕ್ಕೆ ಒಳಗಾಗಬೇಡಿ ಎಂದು ಮನವಿ ಮಾಡಿದೆ.

ಕೋಳಿ ಮಾಂಸದಿಂದ ಕೊರೊನಾ ವೈರಸ್ ಹರಡುತ್ತದೆ ಎಂಬುದಕ್ಕೆ ವೈಜ್ಞಾನಿಕ ಆಧಾರವಿಲ್ಲ. ವೈರಸ್ ಸೋಂಕಿತ ಮನುಷ್ಯರ ಸಂಪರ್ಕದಿಂದ ವೈರಸ್ ಹರಡುತ್ತದೆ. ವೈರಸ್ ಹರಡುವಿಕೆಯಲ್ಲಿ ಕೋಳಿಗಳ ಪಾತ್ರವಿಲ್ಲ ಎಂದು ಸರ್ಕಾರ ಹೇಳಿದೆ.

No Coronavirus Did Not Spread From Chicken

ಕೋಳಿ ಮಾಂಸದಿಂದ ವೈರಸ್ ಹರಡುತ್ತದೆ ಎಂಬುದು ಸತ್ಯವಲ್ಲ. ಯಾರೂ ವದಂತಿಗಳನ್ನು ನಂಬಬಾರದು ಮತ್ತು ಹರಡಿಸಬಾರದು ಎಂದು ಪಶು ಸಂಗೋಪನೆ ಹಾಗೂ ಮೀನುಗಾರಿಕೆ ಇಲಾಖೆ ಕಾರ್ಯದರ್ಶಿ ಇಬ್ರಾಹಿಂ ಮನವಿ ಮಾಡಿದ್ದಾರೆ.

ಕರ್ನಾಟಕವು ಇತ್ತೀಚೆಗೆ ಕೊರೊನಾ ವೈರಸ್ ಪ್ರಕರಣಗಳ ಬಗ್ಗೆ ಅಂಕಿ-ಅಂಶ ಹಂಚಿಕೊಂಡಿತ್ತು. ರಾಜ್ಯದಲ್ಲಿ ಈವರೆಗೆ ಯಾವುದೇ ಕೊರೊನಾ ವೈರಸ್ ಪ್ರಕರಣ ಪತ್ತೆ ಆಗಿಲ್ಲ. ಕೆಲವು ಶಂಕಿತರನ್ನು ಗುರುತಿಸಿ ನಿಗಾ ವಹಿಸಲಾಗಿತ್ತು. ಆದರೆ ಅವು ಕೊರೊನಾ ವೈರಸ್ ಪ್ರಕರಣಗಳಲ್ಲ ಎಂಬುದು ಖಾತ್ರಿ ಆಯಿತು.

English summary
Government give clarification about a fake news which spread in social media that coronavirus spread by chicken. It says coronavirus did not spread by chicken.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X