ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಿಕ್ಷಕರಿಗೆ ಸಿಹಿ ಸುದ್ದಿ ಕೊಟ್ಟ ಸಚಿವ ಸುರೇಶ್ ಕುಮಾರ್

|
Google Oneindia Kannada News

Recommended Video

ವರ್ಗಾವಣೆಯ ಶಾಕ್; ಕೋಮಾಕ್ಕೆ ಜಾರಿದ್ದ ಶಿಕ್ಷಕ ಸಾವು | Oneindia Kannada

ಬೆಂಗಳೂರು, ಸೆಪ್ಟೆಂಬರ್ 29 : ಕಡ್ಡಾಯ ವರ್ಗಾವಣೆ ಬಗ್ಗೆ ಆತಂಕಗೊಂಡಿದ್ದ ಶಿಕ್ಷಕರಿಗೆ ಸಿಹಿ ಸುದ್ದಿ ಸಿಕ್ಕಿದೆ. ವರ್ಗಾವಣೆಗೆ ಹೆದರಿ ಹುಬ್ಬಳ್ಳಿಯಲ್ಲಿ ಸರ್ಕಾರಿ ಶಾಲಾ ಶಿಕ್ಷಕರೊಬ್ಬರು ಮೃತಪಟ್ಟಿದ್ದರು.

ಶಿಕ್ಷಣ ಸಚಿವ ಸುರೇಶ್ ಕುಮಾರ್, "ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ಕಡ್ಡಾಯ ವರ್ಗಾವಣೆ ಎಂಬ ಪ್ರಕ್ರಿಯೆಯನ್ನು ಮುಂದಿನ ವರ್ಷದಿಂದ ಸ್ಥಗಿತಗೊಳಿಸಲಾಗುತ್ತದೆ" ಎಂದು ಹೇಳಿದ್ದಾರೆ.

ಕಡ್ಡಾಯ ವರ್ಗಾವಣೆಯ ಶಾಕ್; ಕೋಮಾಕ್ಕೆ ಜಾರಿದ್ದ ಶಿಕ್ಷಕ ಸಾವುಕಡ್ಡಾಯ ವರ್ಗಾವಣೆಯ ಶಾಕ್; ಕೋಮಾಕ್ಕೆ ಜಾರಿದ್ದ ಶಿಕ್ಷಕ ಸಾವು

"ಮುಂದಿನ ಅವಧಿಗೆ ಶಿಕ್ಷಕ ಸ್ನೇಹಿಯಾದ, ಸರಳವಾದ ವರ್ಗಾವಣೆ ಪ್ರಕ್ರಿಯೆಯನ್ನು ರಚನೆ ಮಾಡಲಾಗುತ್ತದೆ. ಈಗಾಗಲೇ ಈ ಕುರಿತು ಕರಡು ಮಸೂದೆ ರಚನೆ ಮಾಡುವ ಕಾರ್ಯ ಆರಂಭವಾಗಿದೆ" ಎಂದು ಸಚಿವರು ತಿಳಿಸಿದ್ದಾರೆ.

ವೀಡಿಯೋ; ಶಾಲೆ ಬಿಟ್ಟು ಹೋಗದಂತೆ ಶಿಕ್ಷಕನ ತಬ್ಬಿ ಕಣ್ಣೀರಿಟ್ಟ ವಿದ್ಯಾರ್ಥಿಗಳುವೀಡಿಯೋ; ಶಾಲೆ ಬಿಟ್ಟು ಹೋಗದಂತೆ ಶಿಕ್ಷಕನ ತಬ್ಬಿ ಕಣ್ಣೀರಿಟ್ಟ ವಿದ್ಯಾರ್ಥಿಗಳು

Suresh Kumar

ಕಡ್ಡಾಯ ವರ್ಗಾವಣೆಗೆ ಹೆದರಿ ಹುಬ್ಬಳ್ಳಿ ಆನಂದ ನಗರದ ಸರ್ಕಾರಿ ಶಾಲಾ ಶಿಕ್ಷಕ ಸುಭಾಷ್ ತರಲಘಟ್ಟ ಎಂಬುವವರು ಕೋಮಾ ಸ್ಥಿತಿಗೆ ಜಾರಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದರು. ಆದ್ದರಿಂದ ಸಚಿವರು ಶಿಕ್ಷಕರು ಆತಂಕಗೊಳ್ಳುವುದು ಬೇಡ ಎಂದು ಹೇಳಿದ್ದಾರೆ.

ರಾಜ್ಯ ಶಿಕ್ಷಣ ಇಲಾಖೆಯಿಂದ ಮೂರು ಮಹತ್ವದ ಆದೇಶರಾಜ್ಯ ಶಿಕ್ಷಣ ಇಲಾಖೆಯಿಂದ ಮೂರು ಮಹತ್ವದ ಆದೇಶ

ಸರ್ಕಾರದ ಬೇರೆ ಯಾವುದೇ ಇಲಾಖೆಯಲ್ಲಿಯೂ ಕಡ್ಡಾಯ ವರ್ಗಾವಣೆ ಇಲ್ಲ. ಶಿಕ್ಷಣ ಇಲಾಖೆಯಲ್ಲಿ 2017ರಿಂದ ಇದು ಜಾರಿಗೆ ಬಂದಿದೆ. ಇದೇ ಕಾರಣದಿಂದಾಗಿ ಗೊಂದಲ ಉಂಟಾಗಿ ಮೂರು ವರ್ಷದಿಂದ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ನಡೆದಿಲ್ಲ.

ಈ ವರ್ಷವೂ ಕೌನ್ಸಿಲಿಂಗ್ ವಿಚಾರದಲ್ಲಿ ಗೊಂದಲ ಉಂಟಾಗಿತ್ತು. ಆದ್ದರಿಂದ, ಕೌನ್ಸಿಲಿಂಗ್ ಅನ್ನು ಕೆಲವು ದಿನಗಳ ಮಟ್ಟಿಗೆ ಮುಂದೂಡಿ ಬಳಿಕ ಮಾಡಿ ಮುಗಿಸಲಾಗಿದೆ.

English summary
Karnataka Primary and Secondary Education Minister S.Suresh Kumar said that no compulsory transfer from next year for teachers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X