ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊಪ್ಪಳದಲ್ಲಿ 379 ಚಿನ್ನದ ನಾಣ್ಯ ಪತ್ತೆ, ಇಬ್ಬರ ಬಂಧನ

|
Google Oneindia Kannada News

gold coin
ಕೊಪ್ಪಳ, ನ.7 : ಉತ್ತರ ಪ್ರದೇಶದಲ್ಲಿ ಚಿನ್ನದ ಹುಡುಕಾಟ ಮುಂದುವರೆದಿರುವಂತೆಯೇ ಕರ್ನಾಟಕದ ಕೊಪ್ಪಳ ಜಿಲ್ಲೆಯ ಕಾರಟಗಿಯ ಹಳ್ಳದಲ್ಲಿ ಮರಳು ಅಗೆಯುವಾಗ ಪುರಾತನ ಕಾಲದ 379 ಚಿನ್ನದ ನಾಣ್ಯಗಳು ದೊರಕಿವೆ. ನಾಣ್ಯ ಮಾರಾಟ ಮಾಡಲು ಯತ್ನಿಸುತ್ತಿದ್ದ ವೇಳೆ ಪೊಲೀಸರು ಇಬ್ಬರನ್ನು ಬಂಧಿಸಿ, ನಾಣ್ಯಗಳನ್ನು ವಶಪಡಿಸಿಕೊಂಡಿದ್ದಾರೆ.

ಕಾರಟಗಿ ಸಮೀಪದ ತೊಂಡಿಹಾಳ ಗ್ರಾಮದ ನಿವಾಸಿ ನವೋಧರ ಹಾಗೂ ಮುಂಜುನಾಥ ಎಂಬುವವರು ಕೆಲವು ದಿನಗಳ ಹಿಂದೆ ಹಳ್ಳದಲ್ಲಿ ಮರಳು ಅಗೆಯುವಾಗ, ಸಣ್ಣ ಮಣ್ಣಿನ ಕುಡಿಕೆ ಸಿಕ್ಕಿತ್ತು ಅದರಲ್ಲಿ 379 ಚಿನ್ನದ ನಾಣ್ಯಗಳು ದೊರಕಿದ್ದವು. ವ್ಯಕ್ತಿಯೊಬ್ಬರಿಗೆ ಅದನ್ನು 24 ಸಾವಿರ ರೂ.ಗಳಿಗೆ ಮಾರಾಟ ಮಾಡಲು ಬುಧವಾರ ಇವರು ಯತ್ನಿಸುತ್ತಿದ್ದ ವೇಳೆ ಪೊಲೀಸರು ಬಂಧಿಸಿದ್ದಾರೆ.

ಮಣ್ಣಿನ ಕುಡಿಕೆಯೊಳಗೆ ಸಿಕ್ಕಿದ ಪ್ರತಿ ನಾಣ್ಯಗಳು 0.380 ಮಿಲಿ ಗ್ರಾಂ ಹೊಂದಿದ್ದು, ಒಟ್ಟು ನಾಣ್ಯಗಳ ತೂಕ 144. ಗ್ರಾಂ ಆಗಿದೆ. ಒಟ್ಟು ಚಿನ್ನದ ನಾಣ್ಯಗಳ ಬೆಲೆ ಸುಮಾರು 3 ಲಕ್ಷ ರೂ.ಗಳಾಗಲಿದೆ ಎಂದು ಅಂದಾಜಿಸಲಾಗಿದೆ. ಈ ಇಬ್ಬರಿಂದ ನಾಣ್ಯಗಳನ್ನು ಖರೀದಿಸಲು ಬಂದಿದ್ದ ವ್ಯಕ್ತಿಯೇ ಪೊಲೀಸರಿಗೆ ದೂರು ನೀಡಿದ್ದರಿಂದ ಇಬ್ಬರು ಆರೋಪಿಗಳು ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾರೆ.

ಮರಳು ಅಗೆಯುವಾಗ ಸಿಕ್ಕಿದ ನಾಣ್ಯಗಳನ್ನು ಪುರಾತತ್ವ ಇಲಾಖೆಗೆ ನೀಡರೆ, ಪೊಲೀಸರಿಗೆ ಮಾಹಿತಿಯನ್ನು ನೀಡಿದರೆ ಇಬ್ಬರು ಆರೋಪಿಗಳು ಮಾರಾಟ ಮಾಡಲು ಯತ್ನಿಸಿದ್ದರು. ಬುಧವಾರ 50 ನಾಣ್ಯಗಳನ್ನು 24 ಸಾವಿರ ರೂ.ಗಳಿಗೆ ಅಂದಯ್ಯ ಸ್ವಾಮಿ ಅವರಿಗೆ ಮಾರಲು ಹೊರಟಿದ್ದರು. ಅವರು ನಾಣ್ಯಗಳು ಎಲ್ಲಿ ಸಿಕ್ಕವು ಎಂದು ವಿಚಾರಿಸಿದಾಗ, ಅವರು ಪರಾರಿಯಾಗಿದ್ದರು. ಇದರಿಂದ ಅನುಮಾನಗೊಂಡ ಆತ, ಪೊಲೀಸರಿಗೆ ಮಾಹಿತಿ ನೀಡಿದ್ದ.

ನಿಧಿ ಆಸೆಗಾಗಿ ಬಂದಿ ಸಿಕ್ಕಿ ಬಿದ್ದರು : ನಿಧಿ ಆಸೆಗಾಗಿ ಮಶಮ್ಮಾ ದೇವಾಲಯದ ಗರ್ಭಗುಡಿಯನ್ನು ಅಗೆದ ಆಂಧ್ರ ಮೂಲದ ಹಾಗೂ ಸ್ಥಳೀಯ ಕೆಲವು ಕಿಡಿಗೇಡಿಗಳು ಸ್ಥಳೀಯರ ಕೈಗೆ ಸಿಕ್ಕಿ ಪೊಲೀಸರ ಅತಿಥಿಯಾದ ಘಟನೆ ಗುಲ್ಬರ್ಗ ಜಿಲ್ಲೆ ಸೇಡಂ ತಾಲೂಕಿನ ಚಿಟಕನಪಲ್ಲಿ ಗ್ರಾಮದಲ್ಲಿ ಬುಧವಾರ ನಡೆದಿದೆ.

ಆಂಧ್ರ ಪ್ರದೇಶದ ಮೆಹಬೂಬ ನಗರ ಮೂಲದ ನಾಲ್ವರನ್ನು ಕಂಡ ಗ್ರಾಮಸ್ಥರು ಅವರ ಕುರಿತು ವಿಚಾರಣೆ ನಡೆಸಿದ್ದಾರೆ. ಆದರೆ, ಅವರು ದೇವರ ದರ್ಶನಕ್ಕೆ ಬಂದಿರುವುದಾಗಿ ಉತ್ತರಿಸಿದ್ದರು. ನಂತರ ದೇವಾಲಯದ ಬಳಿ ನಿಧಿಆಸೆಗಾಗಿ ಅಗೆಯುವಾಗ ಗ್ರಾಮಸ್ಥರ ಕೈಗೆ ಸಿಕ್ಕಿಬಿದ್ದಿದ್ದಾರೆ. ಸದ್ಯ ಪೊಲೀಸರು ಅವರ ವಿಚಾರಣೆ ನಡೆಸುತ್ತಿದ್ದಾರೆ.

English summary
Sand mining laborers at the Koppal district Karatagi village discovered 379 gold coins belonging to the Nizam era. they tried to sell coins on Wednesday, November 6. this time police arrest them. gold coin worth of 3 lack in market police said, they registered the case and investigating.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X