ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರಲ್ಲಿ ದೇವಾಲಯ ಕಟ್ತಾರೆ ನಿತ್ಯಾನಂದ ಸ್ವಾಮಿ!

|
Google Oneindia Kannada News

ಬೆಂಗಳೂರು, ನ.21 : ಪುರುಷತ್ವ ಪರೀಕ್ಷೆ ನಂತರ ಕರ್ನಾಟಕ ತ್ಯಜಿಸುವುದಾಗಿ ಹೇಳಿಕೊಂಡಿದ್ದ ಬಿಡದಿ ಧ್ಯಾನಪೀಠ ಸ್ವಯಂಘೋಷಿತ ದೇವಮಾನವ ನಿತ್ಯಾನಂದ ಸ್ವಾಮಿ ಬೆಂಗಳೂರಲ್ಲಿ ಶಿವನ ದೇವಸ್ಥಾನ ನಿರ್ಮಿಸಲು ಮುಂದಾಗಿದ್ದಾರೆ. ಇದಕ್ಕಾಗಿ ರಾಜ್ಯದ ಪ್ರಮುಖ ಶಿವನ ದೇವಾಲಯಕ್ಕೆ ಭೇಟಿ ನೀಡುತ್ತಿದ್ದಾರೆ.

ಗುರುವಾರ ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯಕ್ಕೆ ಕೊಳದ ಮಠದ ಶಾಂತವೀರ ಸ್ವಾಮೀಜಿ ಹಾಗೂ ತನ್ನ ಆಪ್ತರ ಜತೆಗೆ ಭೇಟಿ ನೀಡಿದ್ದ ನಿತ್ಯಾನಂದ ಸ್ವಾಮಿ ಬೆಂಗಳೂರಿನಲ್ಲಿ ದೇವಾಲಯ ನಿರ್ಮಿಸುವ ಕುರಿತು ವಿಷಯ ಪ್ರಸ್ತಾಪಿಸಿದ್ದಾರೆ ಎಂದು ತಿಳಿದುಬಂದಿದೆ. [ಆಶ್ರಮದಲ್ಲಿ ಕಟ್ಟಡ ಕಟ್ಟಬೇಡಿ : ಹೈಕೋರ್ಟ್]

Swami Nithyananda

ಬೆಂಗಳೂರಿನಲ್ಲಿ ಶಿವನ ದೇವಾಲಯ ನಿರ್ಮಿಸುವ ಉದ್ದೇಶದಿಂದಲೇ ನಿತ್ಯಾನಂದ ಸ್ವಾಮಿ ದಕ್ಷಿಣ ಭಾರತದ ಎಲ್ಲಾ ಶಿವನ ದೇವಾಲಯಗಳಿಗೂ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ನಂಜನಗೂಡು ದೇವಸ್ಥಾನಕ್ಕೆ ಭೇಟಿ ನೀಡಿದ ಉದ್ದೇಶವೂ ಅದೇ ಎಂದು ನಿತ್ಯಾನಂದ ಸ್ವಾಮಿಯ ಶಿಷ್ಯರು ಹೇಳುತ್ತಿದ್ದಾರೆ. [ನಿತ್ಯಾನಂದ ಸ್ವಾಮಿ ಆಶ್ರಮದ ಭೂ ಸರ್ವೆ]

ನಂಜನಗೂಡಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಲು ನಿತ್ಯಾನಂದ ಹಾಗೂ ಕೊಳದ ಮಠದ ಸ್ವಾಮೀಜಿ ನಿರಾಕರಿಸಿದ್ದಾರೆ. ದೇವಾಲಯ ನಿರ್ಮಿಸಿದರೆ ಅದಕ್ಕೆ ನಿತ್ಯಾನಂದೇಶ್ವರ ದೇಗುಲ ಎಂದು ಹೆಸರಿಡಲಾಗುತ್ತದೆ ಎಂದು ಮಠದಲ್ಲಿನ ಶಿಷ್ಯರು ಹೇಳಿದ್ದಾರೆ.

ನಿತ್ಯಾನಂದ ಸ್ವಾಮಿ ಅವರಿಗೆ ಬಿಡದಿ ಆಶ್ರಮದಲ್ಲಿ ಮಧ್ಯದಲ್ಲಿ ಭಾರಿ ಕಟ್ಟಡ ನಿರ್ಮಾಣ ಮಾಡಬಾರದು ಎಂದು ಹೈಕೋರ್ಟ್ ಎರಡು ದಿನಗಳ ಹಿಂದೆ ಆದೇಶ ನೀಡಿದೆ. ಆದ್ದರಿಂದ ಬೆಂಗಳೂರಿನಲ್ಲಿ ದೇವಾಲಯ ನಿರ್ಮಾಣ ಮಾಡಲಿದ್ದಾರೆ ಎಂಬುದು ಸದ್ಯದ ಮಾಹಿತಿ.

English summary
Self-styled god-man Nithyananda Swamy plan to construct Shiva temple in Bengaluru. Nithyananda Swamy will visit famous shiva temple in south India before this.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X