ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿತ್ಯಾನಂದ ಸ್ವಾಮಿಗೆ ಜಾಮೀನು, ವಿಚಾರಣೆ ನ.26ಕ್ಕೆ

|
Google Oneindia Kannada News

ರಾಮನಗರ, ಅ.27 : ಬಿಡದಿ ಧ್ಯಾನಪೀಠದ ಸ್ವಯಂಘೋಷಿತ ದೇವಮಾನವ ನಿತ್ಯಾನಂದ ಸ್ವಾಮಿಗೆ ಅತ್ಯಾಚಾರ ಹಾಗೂ ರಾಸಲೀಲೆ ಪ್ರಕರಣದಲ್ಲಿ ಜಾಮೀನು ದೊರಕಿದೆ. ಸೋಮವಾರ ಪ್ರಕರಣದ ವಿಚಾರಣೆಯನ್ನು ನ.26ಕ್ಕೆ ಮುಂದೂಡಿರುವ ಕೋರ್ಟ್ ನಿತ್ಯಾನಂದ ಮತ್ತು ಐವರು ಶಿಷ್ಯರಿಗೆ ಜಾಮೀನು ಮಂಜೂರು ಮಾಡಿದೆ.

ಅತ್ಯಾಚಾರ ಮತ್ತು ರಾಸಲೀಲೆ ಪ್ರಕರಣದ ವಿಚಾರಣೆಗಾಗಿ ನಿತ್ಯಾನಂದ ಸ್ವಾಮಿ ಮತ್ತು ಅವರ ಐವರು ಶಿಷ್ಯಂದಿರು ರಾಮನಗರ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಸೋಮವಾರ ಹಾಜರಾಗಿದ್ದರು. ಅರ್ಜಿಯ ವಿಚಾರಣೆಯನ್ನು ಕೋರ್ಟ್‌ ನ.26ಕ್ಕೆ ಮುಂದೂಡಿದೆ.

Nithyananda Swamy

ಇದೇವೇಳೆ ಕೋರ್ಟ್‌ಗೆ ನಿತ್ಯಾನಂದ ಪರ ವಕೀಲರು ಪ್ರಕರಣದಲ್ಲಿ ಹೊಸದಾಗಿ ಜಾಮೀನು ನೀಡುವಂತೆ ಅರ್ಜಿ ಸಲ್ಲಿಸಿದ್ದರು. ಕೋರ್ಟ್‌ ಅರ್ಜಿಯ ವಿಚಾರಣೆ ನಡೆಸಿ ನಿತ್ಯಾನಂದ ಮತ್ತು ಐವರು ಶಿಷ್ಯಂದಿರಿಗೆ ಪ್ರಕರಣದಲ್ಲಿ ಜಾಮೀನು ಮಂಜೂರು ಮಾಡಿದೆ. [ಉಸ್ಸಪ್ಪ, ಅಂತೂ ಆಯ್ತು ನಿತ್ಯಾ ಪುರುಷತ್ವ ಪರೀಕ್ಷೆ!]

ನಿತ್ಯಾನಂದ ಆಶ್ರಮವಾಸಿಯಾಗಿದ್ದ ಆರತಿ ಹಾಗೂ ಇನ್ನಿತರು ನೀಡಿದ್ದ ದೂರನ್ನು ಆಧಾರವಾಗಿಟ್ಟುಕೊಂಡು ಸಿಐಡಿ ಪೊಲೀಸರು ಸಿಆರ್ ಪಿಸಿ 53(ಎ) ಅಡಿಯಲ್ಲಿ ನಿತ್ಯಾನಂದ ಸ್ವಾಮಿ ಮತ್ತು ಇತರ ಐವರು ಶಿಷ್ಯಂದಿರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. [ಪುರುಷತ್ವ ಪರೀಕ್ಷೆ ಎಂದರೇನು? ಏಕೆ ಮಾಡ್ಬೇಕು?]

ಅ.15ರಂದು ನಿತ್ಯಾನಂದ ಸ್ವಾಮಿ ಪ್ರಕರಣದ ವಿಚಾರಣೆಯನ್ನು ನಡೆಸಿದ್ದ ರಾಮನಗರ ಜೆಎಂಎಫ್‌ಸಿ ಕೋರ್ಟ್‌ ಅ.27ಕ್ಕೆ ವಿಚಾರಣೆಯನ್ನು ಮುಂದೂಡಿತ್ತು. ಪ್ರಕರಣದ ಆರೋಪಿಗಳಾದ ನಿತ್ಯಾನಂದ ಮತ್ತು ಆತನ ಐವರು ಶಿಷ್ಯರು ಅ.15ರಂದು ನ್ಯಾಯಾಲಯಕ್ಕೆ ಖುದ್ದು ಹಾಜರಾಗಿದ್ದರು.

English summary
Controversial self-styled god-man Nithyananda Swamy granted bail by a Ramanagara JMFC court on Monday, October 27. Court adjourned assault case hearing to November 26.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X