ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭದ್ರಾ ಅರಣ್ಯದಲ್ಲಿ 67 ವರ್ಷಗಳ ನಂತರ ಕಾಣಿಸಿದ ನೀಲ್‌ಗಾಯ್!

By ಚಿಕ್ಕಮಗಳೂರು ಪ್ರತಿನಿಧಿ
|
Google Oneindia Kannada News

ಚಿಕ್ಕಮಗಳೂರು, ಮಾರ್ಚ್ 10: ಭದ್ರಾ ಅರಣ್ಯದಲ್ಲಿ 67 ವರ್ಷಗಳ ಬಳಿಕ ಮೊದಲ ಬಾರಿಗೆ ನೀಲ್ ಗಾಯ್ ಎಂಬ ಅಪರೂಪದ ಪ್ರಾಣಿ ಪ್ರವಾಸಿಗರ ಕ್ಯಾಮರಾದಲ್ಲಿ ಸೆರೆಯಾಗಿದೆ.

ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ಅರವತ್ತೇಳು ವರ್ಷಗಳ ಬಳಿಕ ಇಲ್ಲಿನ ಭದ್ರಾ ಮುತ್ತೋಡಿ ಅರಣ್ಯ ಪ್ರದೇಶದಲ್ಲಿ ಶನಿವಾರ ಜಿಂಕೆ ಪ್ರಭೇದಕ್ಕೆ ಸೇರಿರುವ ನೀಲ್​ಗಾಯ್ ಎಂಬ ಅಪರೂಪದ ಪ್ರಾಣಿ ಪ್ರವಾಸಿಗರಿಗೆ ಕಾಣಿಸಿಕೊಂಡಿದೆ. 1950ರಲ್ಲಿ ಬಂಡೀಪುರ ಅರಣ್ಯದಲ್ಲಿ ಕಾಣಿಸಿಕೊಂಡ ದಾಖಲೆಗಳು ಲಭ್ಯವಿದೆ. ಮಹಾರಾಷ್ಟ್ರ, ಮಧ್ಯಪ್ರದೇಶ ಮೊದಲಾದ ರಾಜ್ಯಗಳಲ್ಲಿ ಮಾತ್ರ ಕಂಡು ಬರುವ ಪ್ರಾಣಿ ಇದಾಗಿದೆ.

ಮದ್ಯದ ಅಮಲಿನಲ್ಲಿ ಅರಣ್ಯಕ್ಕೆ ಬೆಂಕಿ ಹಚ್ಚಿದವರ ಬಂಧನಮದ್ಯದ ಅಮಲಿನಲ್ಲಿ ಅರಣ್ಯಕ್ಕೆ ಬೆಂಕಿ ಹಚ್ಚಿದವರ ಬಂಧನ

ಹುಲಿ-ಚಿರತೆಯಂತಹ ಮಾಂಸಹಾರಿ ಪ್ರಾಣಿಗಳಿಗೆ ಇದು ಸುಲಭವಾಗಿ ಸಿಗುತ್ತದೆ. ಸಫಾರಿ ವೇಳೆ ಪ್ರವಾಸಿಗರೊಬ್ಬರು ತೆಗೆದ ಚಿತ್ರದಲ್ಲಿ ಬ್ಲ್ಯೂ ಬುಲ್​ ಅಂತಲೂ ಕರೆಸಿಕೊಳ್ಳುವ ನೀಲ್​ಗಾಯ್​ ಸೆರೆ ಸಿಕ್ಕಿದ್ದು ಆರು ದಶಕಗಳ ನಂತರ ಕರ್ನಾಟಕದಲ್ಲಿ ಕಾಣಿಸಿಕೊಂಡಿದೆ.

Nilgai sights at Bhadra forest after six decades

ಹುಲ್ಲುಗಾವಲಿನಲ್ಲಿ ವಾಸಿಸುವ ಈ ಪ್ರಾಣಿ ಕಾಡಿನಲ್ಲಿ ಹೆಚ್ಚು ದಿನ ಉಳಿಯುವುದಿಲ್ಲ. ಹಾಗಾಗಿ ಭದ್ರಾ ಹುಲಿ ಯೋಜನೆ ನಿರ್ದೇಶಕ ಕಾಂತರಾಜ್​ ಅವರು ನೀಲ್​ಗಾಯ್​ನನ್ನು ಆದಷ್ಟು ಬೇಗ ಪತ್ತೆ ಮಾಡುವಂತೆ ಅರಣ್ಯ ಸಿಬ್ಬಂದಿಗೆ ಸೂಚಿಸಿದ್ದಾರೆ.

English summary
Nilgai or blue bull was sighted at Bhadra forest in a tourist camera after six decades. This rare species was sighted in Bhandipur forest 67 years ago, forest officals said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X