ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯದಲ್ಲಿ ರಾತ್ರಿ ಕರ್ಫ್ಯೂ: ಏನು ಇರುತ್ತದೆ? ಏನು ಇರುವುದಿಲ್ಲ?

|
Google Oneindia Kannada News

ಬೆಂಗಳೂರು, ಡಿಸೆಂಬರ್ 23: ಕ್ರಿಸ್ ಮಸ್‌ ಮತ್ತು ಹೊಸ ವರ್ಷಾಚರಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿಯೇ ಮುಂಜಾಗ್ರತೆ ಕ್ರಮವಾಗಿ ರಾಜ್ಯ ಸರ್ಕಾರ ಕರ್ನಾಟಕದಾದ್ಯಂತ ರಾತ್ರಿ ನಿಷೇಧಾಜ್ಞೆಯನ್ನು ಘೋಷಿಸಿದೆ. ಬುಧವಾರದಿಂದ ಅನ್ವಯವಾಗುವಂತೆ ರಾತ್ರಿ 10 ಗಂಟೆಯಿಂದ ಬೆಳಗಿನ 6 ಗಂಟೆಯವರೆಗೆ ರಾತ್ರಿ ಕರ್ಫ್ಯೂ ಜಾರಿಯಲ್ಲಿರಲಿದೆ.

Recommended Video

Night Curfew ನಿರ್ಧಾರಕ್ಕೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಟೀಕೆ | Oneindia Kannada

ಬ್ರಿಟನ್‌ನಲ್ಲಿ ಹೊಸ ಪ್ರಭೇದದ ಸೋಂಕು ಕಾಣಿಸಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಅದರ ಹರಡುವಿಕೆ ತಡೆಯಲು ಈ ಕ್ರಮ ತೆಗೆದುಕೊಳ್ಳಲಾಗಿದೆ. ಮುಖ್ಯವಾಗಿ ಕ್ರಿಸ್ ಮಸ್ ಮತ್ತು ಹೊಸ ವರ್ಷಾಚರಣೆಗಾಗಿ ಜನರು ರಾತ್ರಿ ವೇಳೆ ಗುಂಪುಗೂಡುವುದನ್ನು ತಡೆಯಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

Breaking News: ಡಿ.23ರಿಂದ ಕರ್ನಾಟಕದಲ್ಲಿ ನೈಟ್ ಕರ್ಫ್ಯೂ ಜಾರಿBreaking News: ಡಿ.23ರಿಂದ ಕರ್ನಾಟಕದಲ್ಲಿ ನೈಟ್ ಕರ್ಫ್ಯೂ ಜಾರಿ

ಹೀಗಾಗಿ ಇಂದಿನಿಂದ ಜನರು ರಾತ್ರಿ 10 ಗಂಟೆಯ ಬಳಿಕ ಅನಗತ್ಯವಾಗಿ ಹೊರಗೆ ಓಡಾಡುವಂತಿಲ್ಲ. ಮನೆಯಿಂದ ಜನರು ಹೊರಗೆ ಬರುವಂತಿಲ್ಲ. ಹಾಗೆ ಮನೆಯಿಂದ ಹೊರಗೆ ಬಂದರೆ ಪ್ರಕರಣ ದಾಖಲಾಗಲಿದೆ. ಆದರೆ ತುರ್ತು ಸೇವೆಗಳಿಗೆ ಮಾತ್ರ ಅವಕಾಶ ಇರುತ್ತದೆ. ಅದಕ್ಕೆ ಸೂಕ್ತ ದಾಖಲೆಗಳನ್ನು ಒದಗಿಸಬೇಕಾಗುತ್ತದೆ. ನಿಯಮ ಮೀರಿ ಪಾರ್ಟಿಗಳನ್ನು ನಡೆಸಿದರೆ ಕಠಿಣ ಕ್ರಮ ಜರುಗಿಸಲಾಗುತ್ತದೆ. ಮುಂದೆ ಓದಿ.

ಹೋಟೆಲ್, ಬಾರ್ ಇಲ್ಲ

ಹೋಟೆಲ್, ಬಾರ್ ಇಲ್ಲ

ಇಂದಿನಿಂದ ಎಲ್ಲ ಹೋಟೆಲ್, ರೆಸ್ಟೋರೆಂಟ್, ಪಬ್, ಕ್ಲಬ್, ಬಾರ್, ಅಂಗಡಿ ಸೇರಿದಂತೆ ಎಲ್ಲ ಚಟುವಟಿಕೆಗಳು ರಾತ್ರಿ 10 ಗಂಟೆ ನಂತರ ಬಂದ್ ಆಗಲಿವೆ. ಬುಧವಾರದ ಮಟ್ಟಿಗೆ ರಾತ್ರಿ ಬಸ್ ಸಂಚಾರ ಇರಲಿದೆ. ಗುರುವಾರದಿಂದ ರಾತ್ರಿ ವೇಳೆ ಬಸ್ ಸೌಲಭ್ಯಗಳು ಕೂಡ ರದ್ದಾಗಲಿದೆ. ಮೊದಲೇ ಟಿಕೆಟ್ ಕಾಯ್ದಿರಿಸಿದ ಪ್ರಯಾಣಿಕರಿಗೆ ಬಸ್ ವ್ಯವಸ್ಥೆ ಇದೆಯೋ ಇಲ್ಲವೋ ಎಂಬ ಮಾಹಿತಿ ನೀಡಲಾಗುತ್ತದೆ ಎಂದು ಸಚಿವ ಲಕ್ಷ್ಮಣ ಸವದಿ ಹೇಳಿದ್ದಾರೆ.

ಮನೆಮನೆ ಮಾತಾದ ಗೋಲ್ಡ್ ವಿನ್ನರ್‌ನಿಂದ ಎಲ್ಡಿಯಾ ಶುದ್ಧ ಕೊಬ್ಬರಿ ಎಣ್ಣೆಮನೆಮನೆ ಮಾತಾದ ಗೋಲ್ಡ್ ವಿನ್ನರ್‌ನಿಂದ ಎಲ್ಡಿಯಾ ಶುದ್ಧ ಕೊಬ್ಬರಿ ಎಣ್ಣೆ

ತುರ್ತು ಅಗತ್ಯ ಸೇವೆಗಳು

ತುರ್ತು ಅಗತ್ಯ ಸೇವೆಗಳು

ಆಸ್ಪತ್ರೆಗಳು ಮತ್ತು ಮೆಡಿಕಲ್ ಶಾಪ್‌ಗಳು ಸೇರಿದಂತೆ ತುರ್ತು ಅಗತ್ಯ ಸೇವೆಗಳು ರಾತ್ರಿ ತೆರೆದಿರಲಿವೆ. ಆಟೊಗಳು, ಟ್ಯಾಕ್ಸಿ ಸೇರಿದಂತೆ ವಾಣಿಜ್ಯ ಓಡಾಟದ ಹಾಗೂ ಖಾಸಗಿ ವಾಹನಗಳು ರಸ್ತೆಗೆ ಇಳಿಯುವಂತಿಲ್ಲ. ಜನರು ಹೊಸವರ್ಷ ಮತ್ತು ಕ್ರಿಸ್ ಮಸ್ ಹಬ್ಬದ ಆಚರಣೆಗೆ ರಾತ್ರಿ ಸೇರುವುದನ್ನು ನಿಷೇಧಿಸಲಾಗಿದೆ. ಜನವರಿ 2ರವರೆಗೂ ಈ ನಿರ್ಬಂಧ ಇರಲಿದೆ.

ಮಾರ್ಗಸೂಚಿಗೆ ಅನುಗುಣವಾಗಿ ಬಸ್

ಮಾರ್ಗಸೂಚಿಗೆ ಅನುಗುಣವಾಗಿ ಬಸ್

ಸರ್ಕಾರದ ಮಾರ್ಗಸೂಚಿ ಪ್ರಕಾರ ಬಸ್ ಸಂಚಾರ ಇರಲಿದೆ. ಅಗತ್ಯ ಸೇವೆಗಳಿಗೆ ಮಾತ್ರ ಬಸ್ ಸೌಲಭ್ಯ ಇರಲಿದೆ. ಸರ್ಕಾರದ ಮಾರ್ಗಸೂಚಿಗಳಿಗೆ ಅನುಗುಣವಾಗಿ ಕೆಎಸ್‌ಆರ್‌ಟಿಸಿಯ ನಾಲ್ಕೂ ನಿಗಮಗಳಲ್ಲಿ ಬಸ್ ಸಂಚಾರದ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ಪ್ರಯಾಣಿಕರ ಸಂಖ್ಯೆ ಹೆಚ್ಚಾದರೆ ಬಸ್ ವ್ಯವಸ್ಥೆ ಕಲ್ಪಿಸುವ ಸಾಧ್ಯತೆ ಇದೆ ಎಂದು ಕೆಎಸ್‌ಆರ್‌ಟಿಸಿ ಮೂಲಗಳು ತಿಳಿಸಿವೆ.

ಶಾಲೆ ಕಾಲೇಜು ತೆರೆಯಲಿವೆ

ಶಾಲೆ ಕಾಲೇಜು ತೆರೆಯಲಿವೆ

ನೈಟ್ ಕರ್ಫ್ಯೂಗೆ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಲಾಗುತ್ತದೆ. ಈಗಾಗಲೇ ನಿಗದಿಯಾಗಿರುವಂತೆ ಶಾಲಾ ಕಾಲೇಜು ಜನವರಿ 1 ರಿಂದ ಆರಂಭವಾಗಲಿದೆ. ಅಗತ್ಯವಿದ್ದಲ್ಲಿ ಮಾತ್ರ ಮುಂದಿನ ಬೆಳವಣಿಗೆ ನೋಡಿ ನಿರ್ಧಾರ ಪರಿಶೀಲನೆ ಮಾಡಲಾಗುವುದು ಎಂದು ರಾಜ್ಯ ಸರ್ಕಾರ ತಿಳಿಸಿದೆ.

English summary
Night curfew imposed in Karnataka from December 23. What is allowed and what not allowed after 10 PM? Here is the details.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X