ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಜನರನ್ನು ನಿರಾಶೆಗೊಳಿಸಿದರೆ, ಅವರು ಪಕ್ಷದಿಂದ ದೂರವಾಗುತ್ತಾರೆ'

By ಸಂದರ್ಶನ: ಬಾಲರಾಜ್ ತಂತ್ರಿ, ಗುರುರಾಜ
|
Google Oneindia Kannada News

ಇಂದು ಕೆಲವು ಸ್ವಾಮೀಜಿಗಳು ಬೇಡವಾದ ಕಾರಣಕ್ಕೆ ಸುದ್ದಿಯಾಗುತ್ತಿದ್ದಾರಲ್ಲ?
ಎಲ್ಲಾ ಸಮಾಜದಲ್ಲಿಯೂ ಅನಾಚಾರ ನಡೆಯುತ್ತದೆ. ಜಾಗತಿಕ ಮಟ್ಟದಲ್ಲಿಯೂ ಗುಪ್ತವಾಗಿ ನಡೆಸಿದ ಇಂತಹ ಘಟನೆಗಳು ಬೆಳಕಿಗೆ ಬಂದಿವೆ. ಕೆಲವು ಬಹಿರಂಗಗೊಳ್ಳುತ್ತವೆ. ಕೆಲವು ಅಲ್ಲೇ ಉಳಿದುಕೊಳ್ಳುತ್ತವೆ. ಹತ್ತಾರು ಸಾವಿರ ಮಠಗಳು, ಆಶ್ರಮಗಳು ಇವೆ. ಕೆಲವರು ತಪ್ಪು ಮಾಡಿ ತಿದ್ದಿಕೊಳ್ಳುತ್ತಾರೆ. ಕೆಲವರು ಅದನ್ನು ಮುಂದುವರೆಸುತ್ತಾರೆ.

ಒಬ್ಬ ಸನ್ಯಾಸಿ ಮಾದರಿಯಾಗಬೇಕು ಎಂದರೆ ಹೇಗಿರಬೇಕು?
ಉನ್ನತ ಸ್ಥಾನದಲ್ಲಿರುವ ವ್ಯಕ್ತಿಗಳಿಮದ ಜನರು ಯಾವಾಗಲೂ ಹೆಚ್ಚು ನಿರೀಕ್ಷೆ ಮಾಡುತ್ತಾರೆ. ಆದ್ದರಿಂದ ಅವರು ಮೌಲ್ಯಗಳಿಗೆ, ತತ್ವಗಳಿಗೆ ಅನುಗುಣವಾಗಿ ನಡೆದುಕೊಳ್ಳಬೇಕು. ಅಲ್ಲಿರುವವರು ಮನುಷ್ಯರೇ, ಕೆಲವರು ತಪ್ಪು ಮಾಡಿ ತಿದ್ದಿಕೊಳ್ಳುತ್ತಾರೆ. ಕೆಲವು ಕಡೆ ಅದು ಪುನರಾವರ್ತನೆಯಾಗುತ್ತದೆ. ಮಾರ್ದರ್ಶನ ಮಾಡುವವರು ನಡೆ-ನುಡಿಗಳನ್ನು ಸರಿಯಾದ ರೀತಿಯಲ್ಲಿ ಇಟ್ಟುಕೊಳ್ಳಬೇಕು. ಸಮಾಜಕ್ಕೆ ಮಾರ್ಗದರ್ಶಕರಾಗಿರಬೇಕೆ ಹೊರತು ದಾರಿ ತಪ್ಪಿಸಬಾರದು.

Nidumamidi Mutt1

ಸಿದ್ದರಾಮಯ್ಯ ಅವರ ಸರ್ಕಾರದ ಬಗ್ಗೆ ಏನು ಹೇಳುವಿರಿ?
ಹಿಂದುಳಿದ ವರ್ಗದವರು ಹಿಂದೆಯೂ ಮುಖ್ಯಮಂತ್ರಿಗಳಾಗಿದ್ದರು. ಮುಂದೆಯೂ ಆಗುತ್ತಾರೆ. ಬಹಳ ವರ್ಷಗಳ ನಂತರ ಸಂಪೂರ್ಣ ಬಹುಮತದ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಜನರು ಸಹ ಸರ್ಕಾರದ ಮೇಲೆ ಹೆಚ್ಚಿನ ನಿರೀಕ್ಷೆ ಇಟ್ಟು ಕೊಂಡಿದ್ದಾರೆ. ಆದರೆ, ಅವರಿಗೆ ನಿರಾಸೆಯಾದರೆ ಪಕ್ಷದಿಂದ ದೂರ ಸರಿಯಲಿದ್ದಾರೆ. ಈ ಸರ್ಕಾರಕ್ಕೆ ಇನ್ನೂ ಕಾಲಾವಕಾಶ ಬೇಕಾಗುತ್ತದೆ. ಜನರ ಕನಸುಗಳಿಗೆ ಪುಷ್ಠಿ ನೀಡುವ ಉತ್ತಮ ಆಡಳಿತ ನೀಡಿದರೆ ರಾಜ್ಯವೂ ಅಭಿವೃದ್ಧಿಯಾಗುತ್ತದೆ.

ನಿಡುಮಾಮಿಡಿ ಮಠದ ಮೂಲ ಮಠ ಎಲ್ಲಿದೆ?
ನಿಡುಮಾಮಿಡಿ ಮಠದ ಮೂಲ ಸಂಸ್ಥಾನ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಗೂಳೂರು ಗ್ರಾಮ. ಈ ಮಠಕ್ಕೆ ಒಂದು ಸಾವಿರ ವರ್ಷಗಳ ಪ್ರಾಚೀನತೆ ಇದೆ. ಪೀಠದಲ್ಲಿ 39 ಪೀಠಾಧಿಪತಿಗಳಿದ್ದರು. ನಾನು ಇದಕ್ಕೆ 40ನೇ ಪೀಠಾಧಿಪತಿ. ತಮಿಳುನಾಡು ಸೇರಿದಂತೆ ಮೂರು ರಾಜ್ಯಗಳಲ್ಲಿ ಮಠದ ಶಾಖೆಗಳಿದ್ದು, ಲಕ್ಷಾಂತರ ಭಕ್ತರಿದ್ದಾರೆ.

ನಿಡುಮಾಮಿಡಿ ಮಠದ ವಿಶೇಷವೆಂದರೆ ಇಲ್ಲಿ ಜಾತಿ ಮತದ ಭೇದವಿಲ್ಲದೆ ಎಲ್ಲಾ ಸಮುದಾಯಗಳ ಅದರಲ್ಲೂ ಮುಖ್ಯವಾಗಿ ಶೋಷಿತ ಮತ್ತು ದುರ್ಬಲ ವರ್ಗದವರ ಏಳಿಗೆಗಾಗಿ ಕಾರ್ಯಗಳನ್ನು ಮಾಡಲಾಗುತ್ತದೆ.

ಸಂದರ್ಶನ : ಬಾಲರಾಜ್ ತಂತ್ರಿ, ಗುರು ಕುಂಟವಳ್ಳಿ

English summary
Nidumamidi Mutt Veerabhadra Chennamalla Swamiji interview : Swamiji sadi CM Siddaramaiah lead Karnataka Government should work as people wish.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X