ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಮಠಗಳ ಮೇಲೆ ಕಾನೂನಿನ ನಿಯಂತ್ರಣ ಬೇಕು'

By ಸಂದರ್ಶನ: ಬಾಲರಾಜ್ ತಂತ್ರಿ, ಗುರುರಾಜ
|
Google Oneindia Kannada News

ಮಠಗಳ ಮೇಲೆ ಸರ್ಕಾರದ ನಿಯಂತ್ರಣ ಅಗತ್ಯವೇ?
ನಮ್ಮಲ್ಲಿ ಕಾನೂನಿಗಿಂತ ಮೇಲಿನವರು ಯಾರೂ ಇಲ್ಲ. ಎಲ್ಲರೂ ಸಂವಿಧಾನಕ್ಕೆ ಅನುಗುಣವಾಗಿ ನಡೆದುಕೊಳ್ಳಬೇಕು. ಪ್ರತಿಯೊಬ್ಬ ವ್ಯಕ್ತಿ, ಸಂಸ್ಥೆಯೂ ಕಾನೂನಿನಂತೆ ನಡೆದುಕೊಳ್ಳಬೇಕು. ಮಠಗಳು ಹಾಗೆಯೇ. ಅಲ್ಲಿಯೂ ಅಧಿಕಾರ ದುರುಪಯೋಗವಾದಾಗ ಸರ್ಕಾರ ಮಧ್ಯ ಪ್ರವೇಶಿಸಬಹುದು. ಆದ್ದರಿಂದ ನಿಯಂತ್ರಣ ಅಗತ್ಯ ಎನ್ನುವುದು ನನ್ನ ಅಭಿಪ್ರಾಯ.

ಒಂದು ಸಮುದಾಯಕ್ಕೆ ಸೇರಿದ ಮಠದಿಂದ ಅದರ ಭಕ್ತರು ಹಲವಾರು ನಿರೀಕ್ಷೆಗಳನ್ನು ಇಟ್ಟುಕೊಂಡಿರುತ್ತಾರೆ. ಮಠದಲ್ಲಿ ಅನಾಚಾರವಾದಾಗ, ಅಧಿಕಾರ ದುರುಪಯೋಗವಾದಾಗ ಸರ್ಕಾರ ಅದನ್ನು ಕೂಲಂಕುಷವಾಗಿ ಪರಿಶೀಲಿಸಿ ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಕೆಲಸ ಮಾಡಬೇಕು. ಆದ್ದರಿಂದ ಮಠಗಳಿಗೂ ಒಂದು ಕಣ್ಗಾವಲು ಶಕ್ತಿ ಬೇಕು.

Nidumamidi Mutt2

ಮಠಗಳು ರಾಜಕೀಯ ಪ್ರಭಾವಗಳಿಗೆ ಒಳಗಾಗುತ್ತಿದೆಯೇ?
ಪ್ರಬಲ ಶಕ್ತಿ ಇರುವ ಮಠಾಧೀಶರು ಅಧಿಕಾರ ಕೇಂದ್ರಕ್ಕೆ ಹತ್ತಿರವಾಗಲು ಬಯಸುತ್ತಾರೆ. ಏಕೆಂದರೆ, ಸರ್ಕಾರಿಂದ ಅವರಿಗೆ ಅನುಕೂಲ ಬೇಕಾಗಿರುತ್ತದೆ. ಹಾಗೆಯೇ ಮಠಗಳ ಸಹಾಯ ಆಡಳಿತ ನಡೆಸುವವರಿಗೆ ಬೇಕು. ಆದ್ದರಿಂದ ಚರಿತ್ರೆಯಿಂದಲೂ ಆಡಳಿತ ವರ್ಗ ಮತ್ತು ಪುರೋಹಿತ ಶಾಹಿ ವರ್ಗ ಕೈ ಜೋಡಿಸಿಕೊಂಡು ಬಂದಿವೆ. ಪ್ರಬಲ ಮಠಾಧೀಶರ ಪ್ರಭಾವ ಸರ್ಕಾರದಲ್ಲಿ ನಡೆಯುತ್ತದೆ.

ಆದರೆ, ಮಹಾತ್ಮಾ ಗಾಂಧಿಜೀ ಯವರು ಹೇಳಿದಂತೆ ಧರ್ಮ ಮತ್ತು ರಾಜಕಾರಣ ಬೇರೆ-ಬೇರೆಯಾಗಿರಬೇಕು. ಪರಸ್ಪರ ನೆರವಿನ ಆಶಯದಿಂದಾಗಿ ಈ ಅಪವಿತ್ರ ಮೈತ್ರಿ ಮುಂದುವರೆದಿದೆ. ಧರ್ಮ ಮತ್ತು ರಾಜಕಾರಣ ಪ್ರತ್ಯೇಕವಾದರೆ, ಸಮಾಜದಲ್ಲಿನ ಅಶಾಂತಿ, ಗೊಂದಲ ಇರುವುದಿಲ್ಲ. ಒಟ್ಟಿಗೆ ಹೋದರೆ ಇವುಗಳು ಹೆಚ್ಚಾಗುತ್ತವೆ.

English summary
Nidumamidi Mutt Veerabhadra Chennamalla Swamiji interview : Swamiji said Government will take control of the mutt.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X