ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಪೇಜಾವರ ಶ್ರೀಗಳು ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಮಾತಾಡ್ತಾರೆ'

By ಸಂದರ್ಶನ: ಬಾಲರಾಜ್ ತಂತ್ರಿ, ಗುರುರಾಜ
|
Google Oneindia Kannada News

ಉಡುಪಿಯ ಪರ್ಯಾಯಕ್ಕೆ ಆಹ್ವಾನ ನೀಡಿದರೆ ಪಾಲ್ಗೊಳ್ಳುತ್ತೀರಾ?
ಉಡುಪಿಯ ಪರ್ಯಾಯಕ್ಕೆ ನನ್ನನ್ನು ಆಹ್ವಾನಿಸುತ್ತಾರೆ ಎಂದು ನಾನು ನಿರೀಕ್ಷಿಸಿಲ್ಲ. ಪರ್ಯಾಯಕ್ಕೆ ನನ್ನ ಅಗತ್ಯವೂ ಇಲ್ಲ. ಪೇಜಾವರ ಶ್ರೀಗಳ ಕುರಿತು ನನಗೆ ಅಪಾರವಾದ ಗೌರವಿದೆ. ಅವರು ನಾಡಿನ ಹಿರಿಯ ಯತಿಗಳು. ಸುಧಾರಣಾ ಪರವಾದ ಅನೇಕ ಮಾತುಗಳನ್ನು ಅನೇಕ ದಶಕಗಳಿಂದ ಅವರು ಆಡುತ್ತಿದ್ದಾರೆ. ದೃಢವಾದ ನಿಲುವನ್ನು ಅವರು ಎಂದೂ ತಾಳಿಲ್ಲ. ಗಂಭೀರವಾದ ಸಮಸ್ಯೆಯನ್ನು ಬಗೆಹರಿಸಿಲ್ಲ, ಮಡೆಸ್ನಾನ ಬೇಡವೆನ್ನುವ ಅವರು ಎಡೆಸ್ನಾನ ಇರಲಿ ಎನ್ನುತ್ತಾರೆ.

ಪೇಜಾವರ ಶ್ರೀಗಳಲ್ಲಿ ದ್ವಂದ ವ್ಯಕ್ತಿತ್ವ ಇರುವುದರಿಂದ ಅವರನ್ನು ಹಿಂದೆ ನಾನು 'ದ್ವಂದಾಚಾರ್ಯ' ಎಂದು ಕರೆದಿದ್ದೆ. ಶ್ರೀಗಳು ಬಹಳ ಬುದ್ಧಿವಂತರು. ಅವರಿಗೆ ಅಪಾರವಾದ ಸಾಮಾಜಿಕ ಕಾಳಜಿ ಇದೆ. ಆದರೆ, ಅವರು ಸಮಸ್ಯೆಗಳನ್ನು ಬಗೆಹರಿಸಿ ಸಾಮರಸ್ಯ ಮೂಡಿಸಲು ಖಚಿತವಾದ ಪ್ರಯತ್ನಗಳನ್ನು ಮಾಡಿಲ್ಲ. ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಮಾತನಾಡುತ್ತಾರೆ. ಸಂಪ್ರದಾಯವಾದಿಗಳ ಪರವಾಗಿ ಅವರ ವಾಲಿಕೆ ಹೆಚ್ಚಿರುತ್ತದೆ.

Nidumamidi Mutt3

ಪೇಜಾವರ ಶ್ರೀಗಳೇ ಈ ಬಾರಿ ಪರ್ಯಾಯ ಸ್ವೀಕಾರ ಮಾಡುತ್ತಿದ್ದಾರೆಲ್ಲವೇ?
ವೃದ್ಧಾಪ್ಯದಲ್ಲಿ ಪೇಜಾವರ ಶ್ರೀಗಳು ಪರ್ಯಾಯ ಸ್ವೀಕಾರ ಮಾಡುತ್ತಿದ್ದಾರೆ. ಅವರು ಉಡುಪಿ ಅಷ್ಟ ಮಠದ ಸಮಸ್ಯೆಗಳನ್ನು ಬಗೆಹರಿಸುವ ಜೊತೆಗೆ ನಾಡಿನ ಇತರ ಸಮಸ್ಯೆಗಳನ್ನು ಬಗೆಹರಿಸಲಿ ಎಂಬುದು ನನ್ನ ಆಶಯ. ಉಡುಪಿ ಅಷ್ಟಮಠದ ಹಲವಾರು ಸಮಸ್ಯೆಗಳು ಇವರ ಕಾಲದಲ್ಲಿಯಾದರೂ ಬಗೆಹರಿಯಲಿ ಎಂದು ಆಶಿಸುತ್ತೇನೆ.

ಕನಕನ ಮೂರ್ತಿ ಪ್ರತಿಷ್ಠಾಪಿಸಿ : ಶ್ರೀ ಕೃಷ್ಣ, ಶಿವ, ವಿಷ್ಣು, ಬ್ರಹ್ಮ ಮುಂತಾದವರು ನಮ್ಮ ಸಂಸ್ಕೃತಿಯ ನಾಯಕರು.
ಕನಕನ ಪ್ರವೇಶದಿಂದಾಗಿ ಉಡುಪಿಯ ಮಹತ್ವ ಹೆಚ್ಚಾಗಿದೆ. ರಾಮ ಮಂದಿರಗಳಲ್ಲಿ ಲಕ್ಷಣ, ಹನುಮಂತನ ಮೂರ್ತಿ ಇರುವಂತೆ, ಕೃಷ್ಣನ ಜೊತೆ ಕನಕನ ಮೂರ್ತಿಯನ್ನು ಇಟ್ಟು ಅದಕ್ಕೆ ಪೂಜೆ ಸಲ್ಲಿಸಿ ಎಂದು ಹಿಂದೆ ನಾನು ಹೇಳಿದ್ದೆ. ದೇವರಿಗೆ ಸಲ್ಲುವ ಪೂಜೆ ಅವರ ಪರಮ ಭಕ್ತರಿಗೂ ಸಲ್ಲಬೇಕು ಎಂಬುದು ನನ್ನ ಅಭಿಪ್ರಾಯ.

Nidumamidi Mutt4

ಕಪಟ ಜ್ಯೋತಿಷಿಗಳ ಬಗ್ಗೆ ಜನರಿಗೆ ಅರಿವು ಮೂಡಿಸುವು ಹೇಗೆ?
ಹಿಂದಿನಿಂದಲೂ ಜ್ಯೋತಿಷ್ಯವಿತ್ತು. ವಾಸ್ತುವಿನ ಪರಿಕಲ್ಪನೆ ಇತ್ತೀಚಿಗೆ ಬಂದಿದೆ. ಆದರೆ, ಇಂದು ಜ್ಯೋತಿಷ್ಯ ಮತ್ತು ವಾಸ್ತುಗಳು ತಮ್ಮ ಎಲ್ಲೆಯನ್ನು ಮೀರಿ ಬೆಳೆದಿವೆ. ಆಧುನಿಕ ಮಾಧ್ಯಮಗಳು ಬಂದ ಬಳಿಕ ಜ್ಯೋತಿಷ್ಯ, ವಾಸ್ತುಶಾಸ್ತ್ರ ಎಂದು ಮೂಢ ನಂಬಿಕೆ ಹುಟ್ಟುಹಾಕಿ ಲಾಭ ಮಾಡಿಕೊಳ್ಳುವ ವರ್ಗ ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿದೆ.

ಜ್ಯೋತಿಷ್ಯ, ವಾಸ್ತುಗಳು ವ್ಯಾಪಾರೀಕರಣಗೊಂಡು ಸಾಂಕ್ರಮಿಕ ರೋಗದಂತೆ ಹರಡುತ್ತಿವೆ. ಆಧುನಿಕ ವಿಜ್ಞಾನದ ಫಲಶ್ರುತಿಗಳಾದ ಮಾಧ್ಯಮಗಳು ಇಂದು ಇದನ್ನು ಪ್ರಸಾರ ಮಾಡಿ ಜನರಲ್ಲಿ ಮೌಢ್ಯವನ್ನು ಬಿತ್ತುತ್ತಿವೆ. ಪ್ರಭಾವಶಾಲಿಯಾದ ಮಾಧ್ಯಮಗಳು ವೈಚಾರಿಕತೆ, ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಪ್ರಸಾರ ಮಾಡುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಬಹುದು.

English summary
Nidumamidi Mutt Veerabhadra Chennamalla Swamiji interview : Swamiji said he had very respect about Pejavar Mutt Sri Vishweshateertha Swamiji.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X