ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಹಣ ಕೊಟ್ಟು ಮಡೆಸ್ನಾನಕ್ಕೆ ಜನರನ್ನು ಕರೆತರಲಾಗುತ್ತಿದೆ'

By ಸಂದರ್ಶನ: ಬಾಲರಾಜ್ ತಂತ್ರಿ, ಗುರುರಾಜ
|
Google Oneindia Kannada News

ಮಡೆ-ಮಡೆಸ್ನಾನಕ್ಕೆ ಜನರು ಬರುತ್ತಿದ್ದಾರಲ್ಲ?
ಕುಕ್ಕೆ ಸುಬ್ರಮಣ್ಯ ದೇವಾಲಯದ ಆಡಳಿತ ಮಂಡಳಿ ಮತ್ತು ಅರ್ಚಕ ವರ್ಗ ಮಡೆಮಡೆಸ್ನಾನ ನಡೆಸಬೇಕು ಎಂಬ ಹಠದಿಂದ ಹಣ ಕೊಟ್ಟು ಜನರನ್ನು ಕರೆಸಿ ಉರುಳು ಸೇವೆ ನಡೆಸುತ್ತಿದ್ದಾರೆ. ಅಲ್ಲಿಗೆ ಜನರು ಸ್ವಯಂ ಪ್ರೇರಿತವಾಗಿ ಬರುತ್ತಿಲ್ಲ. ಇಂತಹ ಪದ್ಧತಿಯನ್ನು ಮುಂದುವರೆಸಲೇಬೇಕು ಎನ್ನುವ ಹಠದಿಂದ ವಾಮಮಾರ್ಗದ ಮೂಲಕ ಜನರನ್ನು ಕರೆತರಲಾಗುತ್ತಿದೆ.

ಇಂದಿನ ದಿನದಲ್ಲಿ ಬ್ರಾಹ್ಮಣರನ್ನು ದೂರುವುದು ಫ್ಯಾಷನ್ ಆಗಿದೆಯೇ?
ಯಾವುದೇ ಸಂದರ್ಭದಲ್ಲಿಯೂ, ಯಾವುದೇ ಸಮಾಜವನ್ನು ಆಧಾರವಿಲ್ಲದೆ ದ್ವೇಷದಿಂದ, ಅಸಹನೆಯಿಂದ ದೂಷಿಸುವುದು ತಪ್ಪು. ಸಮಾಜದ ಹಲವು ಅನಿಷ್ಠ ಪದ್ಧತಿಗಳಿಗೆ ಒಂದು ವರ್ಗದ ಜನರು ಬೆಂಬಲವಾಗಿ ನಿಂತಿದ್ದಾರೆ ಎಂದು ಶೋಷಿತರು ನಂಬಿದ್ದಾರೆ. ಆದ್ದರಿಂದ ಅವರು ದೂಷಣೆ ಮೂಲಕ ತಮ್ಮ ಪ್ರತಿಭಟನೆ ವ್ಯಕ್ತಪಡಿಸುತ್ತಾರೆ.

Nidumamidi Mutt7

ಎಲ್ಳಾ ಬ್ರಾಹ್ಮಣರು ಸಂಕುಚಿತ ಮನಸ್ಸಿನವರಲ್ಲ ಎಂಬುದು ಮುಖ್ಯ. ಅವರಲ್ಲಿಯೂ ವಿಶಾಲ ಮನೋಭಾವನೆಯವರು ಇದ್ದಾರೆ. ಅವರಿಂದ ದೇಶದಲ್ಲಿ ಹಲವಾರು ಬದಲಾವಣೆಗಳಾಗಿವೆ. ಒಂದು ಸಮುದಾಯವನ್ನು ದೂಷಣೆ ಮಾಡುವುದು ತಪ್ಪು ಎನ್ನುವುವುದು ನನ್ನ ಭಾವನೆ.

ಮೂಢ ನಂಬಿಕೆ ಹೋಗಲಾಡಿಲು ಸಚಿವರು ಪ್ರಯತ್ನ ಮಾಡುತ್ತಿದ್ದಾರಲ್ಲ?
ಅಬಕಾರಿ ಸಚಿವ ಮತ್ತು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರ ಪ್ರಯತ್ನಕ್ಕೆ ನನ್ನ ಪೂರ್ಣ ಸಹಮತವಿದೆ. ಇಂದು ಮೂಢ ನಂಬಿಕೆಗಳಿಂದ ಅಭಿವೃದ್ಧಿ ಕುಂಠಿತವಾಗುತ್ತಿದೆ. ಕೆಳವರ್ಗದವರ ಶೋಷಣೆ ಯಾಗುತ್ತಿದೆ, ಬಡತನ ಹೆಚ್ಚಾಗುತ್ತಿದೆ. ಇಂತಹವುಗಳಿಗೆ ಖರ್ಚು ಮಾಡುವ ಹಣವನ್ನು ಅವರು ಮಕ್ಕಳ ವಿದ್ಯಾಭ್ಯಾಸಕ್ಕೆ, ಪೌಷ್ಠಿಕ ಆಹಾರಕ್ಕೆ ಖರ್ಚು ಮಾಡಿದರೆ ಅಭಿವೃದ್ಧಿ ಸಾಧ್ಯ.

ಮೂಢನಂಬಿಕೆಗಳನ್ನು ಲಾಭಕ್ಕಾಗಿ ಬಳಸಿಕೊಂಡು ಜನರನ್ನು ಶೋಷಿಸಲಾಗುತ್ತಿದೆ. ಇದರಿಂದ ಮುಕ್ತವಾದಲ್ಲಿ ಮಾತ್ರ ಅಭಿವೃದ್ಧಿ ಸಾಧ್ಯ. ಸರ್ಕಾರದ ಪ್ರತಿನಿಧಿಯಾಗಿ ಅವರು ಉತ್ತಮ ಕೆಲಸ ಮಾಡುತ್ತಿದ್ದಾರೆ.

Nidumamidi Mutt9

ಮೂಢ ನಂಬಿಕೆ ಹೋಗಲಾಡಿಸಲು ಮಾಧ್ಯಮವೂ ಸಹಕರಿಸಬೇಕೆ?
ಇಂದು ದೃಶ್ಯವಾಹಿನಿಗಳು ತಮ್ಮಲ್ಲಿ ಪ್ರಸಾರವಾಗುವ ಕಾರ್ಯಕ್ರಮಗಳ ಬಗ್ಗೆ ಮರುಚಿಂತನೆ ಮಾಡಬೇಕು. ರಾಷ್ಟ್ರ ಮತ್ತು ಅಂತಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಕಾರ್ಯಕ್ರಮಗಳು ಪ್ರಸಾರವಾಗುತ್ತಿವೆ. ಪ್ರಕೃತಿಯ ನಿಗೂಢ ತೋರಿಸುತ್ತೇವೆ ಎಂದು ಸಮಾಜದ ಸ್ವಾಥ್ಯ ಕೆಡಿಸುವ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವುದಕ್ಕಿಂತ ಸಸ್ಯ, ಪಾಣಿ, ಜೀವಿಗಳ ಸೂಕ್ಷತೆ ಬಗ್ಗೆ ಕಾರ್ಯಕ್ರಮ ಬಿತ್ತರಿಸಬಹುದು.

ಜನಪ್ರಿಯತೆ ಮತ್ತು ಟಿಆರ್‌ಪಿ ಮುಂತಾದ ವಾಣಿಜ್ಯ ಉದ್ದೇಶಕ್ಕಾರಿ ಇಂತಹ ಕಾರ್ಯಕ್ರಮ ಪ್ರಸಾರ ಮಾಡುವ ಮಾಧ್ಯಮಗಳು ತಮ್ಮ ಇಂದು ಮರುಚಿಂತನೆ ಮಾಡಬಹುದು. ವಿವಾದಗಳು, ಸಮಾಜದ ಸ್ವಾಥ್ಯ ಕೆಡಿಸುವ ವಿಚಾರಗಳ ಪ್ರಸಾರ ನಿಲ್ಲಿಸಿದರೆ ಖಂಡಿತ ಅವರಿಗೆ ನಷ್ಟ ಆಗುವುದಿಲ್ಲ, ಈ ಬಗ್ಗೆ ಮಾಧ್ಯಮಗಳು ಗಂಭೀರವಾಗಿ ಆಲೋಚಿಸಬೇಕು.

English summary
Nidumamidi Mutt Veerabhadra Chennamalla Swamiji interview : Swamiji said, Government ban practices like Madey Snana and Yede Snana, which sees devotees rolling on leftovers on banana leaves.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X