ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇನ್ನು 48 ಗಂಟೆಗಳಲ್ಲಿ ಕರ್ನಾಟಕದಲ್ಲಿ ಮುಂಗಾರು ಚುರುಕು

|
Google Oneindia Kannada News

ಬೆಂಗಳೂರು, ಜೂನ್ 16: ಮುಂದಿನ 48 ಗಂಟೆಗಳಲ್ಲಿ ಕರ್ನಾಟಕದಲ್ಲಿ ಭಾರಿ ಮಳೆ ಬರುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.

ರಾಜ್ಯಕ್ಕೆ ತಡವಾಗಿ ಪ್ರವೇಶಿರುವ ಮುಂಗಾರು ಇನ್ನೆರೆಡು ದಿನಗಳಲ್ಲಿ ದಕ್ಷಿಣ ಒಳನಾಡಿನಾದ್ಯಂತ ಚುರುಕುಗೊಳ್ಳು ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಮೋಡಹೊದ್ದ ಆಗಸದಿಂದ ಕೊನೆಗೂ ಬಿತ್ತು ಮುಂಗಾರಿನ ಪುಟ್ಟ ಹನಿಗಳುಮೋಡಹೊದ್ದ ಆಗಸದಿಂದ ಕೊನೆಗೂ ಬಿತ್ತು ಮುಂಗಾರಿನ ಪುಟ್ಟ ಹನಿಗಳು

ಶುಕ್ರವಾರವಷ್ಟೇ ಮುಂಗಾರು ಪ್ರವೇಶವಾಗಿದೆ. ಶನಿವಾರ ಅದಕ್ಕೆ ಪೂರಕವಾಗಿರುವ ವಾತಾವರಣ ಕಂಡು ಬಂದಿತ್ತು. ಮುಂದಿನ 48 ಗಂಟೆಗಳಲ್ಲಿ ವಾಯು ಚಂಡಮಾರುತಕ್ಕೆ ಮತ್ತೆ ತನ್ನ ದಿಕ್ಕು ಬದಲಿಸಿ ಗುಜರಾತ್‌ನ ಕಚ್ ಕರಾವಳಿ ಭಾಗಕ್ಕೆ ಅಪ್ಪಳಿಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

Next 48 hours heavy rainfall in Karnataka

ಈ ಬಾರಿ ಮುಂಗಾರು ವಿಳಂಬವಾಗಿರುವುದರಿಂದ ಏಕದಳ, ದ್ವಿದಳ ಆಹಾರ ಧಾನ್ಯ ಹಾಗೂ ಎಣ್ಣೆ ಕಾಳುಗಳ ಬಿತ್ತನೆ ಕೂಡ ಕುಂಠಿತವಾಗಿದೆ. ಕೇವಲ ಶೇ.42 ಬಿತ್ತನೆಯಷ್ಟೇ ಆಗಿದೆ. ಕೇವಲ ಶೇ.42 ಬಿತ್ತನೆಯಷ್ಟೇ ಆಗಿದೆ.

ಶುಕ್ರವಾರವಷ್ಟೇ ಮುಂಗಾರು ರಾಜ್ಯ ಪ್ರವೇಶಿಸಿದ್ದು ಹಲವೆಡೆ ಮಳೆಯಾಗುತ್ತಿದೆ. ಮುಂಗಾರು ಬಲಗೊಳ್ಳುವುದಕ್ಕೆ ಪೂರಕವಾದ ವಾತಾವರಣ ಕಂಡುಬಂದಿರುವುದರಿಂದ ಉತ್ತಮ ಮಳೆ ನಿರೀಕ್ಷಿಸಲಾಗುತ್ತಿದೆ. ಮುಂಗಾರು ಚುರುಕುಗೊಂಡರೆ ಮಾತ್ರ ಕೃಷಿ ಚಟುವಟಿಕೆ ಕೂಡ ಚುರುಕುಗೊಳ್ಳಲಿದೆ.

ಮಂಗಳೂರು ಕಡಲ ತಡಿಯಲ್ಲಿ ಸನ್ನದ್ಧವಾಗಿದೆ ಜೀವರಕ್ಷಕ ಪಡೆ ಮಂಗಳೂರು ಕಡಲ ತಡಿಯಲ್ಲಿ ಸನ್ನದ್ಧವಾಗಿದೆ ಜೀವರಕ್ಷಕ ಪಡೆ

ರಾಜ್ಯದ ಬಹುತೇಕ ಭಾಗಗಳಲ್ಲಿ ಭಾನುವಾರ ಒಣಹವೆ ಕಂಡು ಬಂದಿದ್ದು, ಕೆಲ ಜಿ್ಲಲೆಗಳಲ್ಲಿ ಮಾತ್ರವೇ ಮಳೆಯಾಗಿದೆ. ಉತ್ತರ ಕನ್ನಡ ಜಿ್ಲಲೆಯ ಕಾರವಾರದಲ್ಲಿ ಮಳೆ ಇಳಿಮುಖವಾಗಿದ್ದು, ರೈತರಿಗೆ ಮತ್ತೆ ಆತಂಕ ಆರಂಭವಾಗಿದೆ.

ರಾಜ್ಯದಲ್ಲಿ ಇನ್ನೆರೆಡು ದಿನಗಳಲ್ಲಿ ನೈಋತ್ಯ ಮುಂಗಾರು ಚುರುಕುಗೊಳ್ಳುವ ಸೂಚನೆ ಇದೆ. ಶನಿವಾರ ಕೊಲ್ಲೂರಿನಲ್ಲಿ 10 ಸೆಂಮೀ, ಚಿಕ್ಕಮಗಳೂರಿನ ಕೊಟ್ಟಿಗೆಹಾರದಲ್ಲಿ 8 ಸೆಂ.ಮೀನಷ್ಟು ಮಳೆಯಾಗಿದೆ. ಕೊಡಗಿನ ಭಾಗಮಂಡಲದಲ್ಲಿ 6 ಸೆಂ.ಮೀ, ಮೂಡಬಿದಿರೆ , ಕಾರ್ಕಳ, ಆಗುಂಬೆಯಲ್ಲಿ ತಲಾ 5 ಸೆಂ.ಮೀನಷ್ಟು ಮಳೆಯಾಗಿದೆ. ಶಿವಮೊಗ್ಗದ ತಾಳಗುಪ್ಪ, ಸಾಗರದಲ್ಲಿ ತಲಾ 2 ಸೆಂ.ಮೀ ಮಳೆಯಾಗಿದೆ.

English summary
Conditions are becoming favorable for further advance of Southwest Monsoon into some more parts of Karnataka in One or Two days.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X