ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಬಿಎಸ್ವೈ ಮುಕ್ತ ಬಿಜೆಪಿ' ಸಿದ್ದತೆ ಜೋರು: ಬಿಎಸ್ವೈ ಮುಂದಿನ ಹಾದಿ ಮಾರ್ಗದರ್ಶಕ ಮಂಡಳಿಯೋ, ಧವಳಗಿರಿಯೋ?

|
Google Oneindia Kannada News

ಮುಖ್ಯಮಂತ್ರಿ ಸ್ಥಾನದಿಂದ ಯಡಿಯೂರಪ್ಪನವರನ್ನು ಕೆಳಗಿಳಿಸುವ ಸುದ್ದಿ ಇಂದು ನಿನ್ನೆಯದಲ್ಲ. ಆದರೆ, ಇಂತಹ ಸುದ್ದಿ ರಾಜ್ಯ ರಾಜಕೀಯದಲ್ಲಿ ವೇಗ ಪಡೆದುಕೊಳ್ಳುತ್ತಿದ್ದಂತೆಯೇ ಬಿಜೆಪಿಯ ವರಿಷ್ಠರು ಅದಕ್ಕೆ ತೇಪೆ ಹಚ್ಚುವ ಕೆಲಸವನ್ನು ಮಾಡುತ್ತಿರುವುದು ಗೊತ್ತಿರುವ ವಿಚಾರ.

ಇಂತಹ ಸುದ್ದಿಗಳು ಅದು ಬರೀ ಗಾಳಿಸುದ್ದಿಯಲ್ಲ ಎನ್ನುವ ಸಂಶಯ ಮೂಡುವುದಕ್ಕೆ ಕೆಲವು ಉದಾಹರಣೆಗಳು ನಮ್ಮ ಮುಂದಿವೆ. ವಿಜಯಪುರದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಮುಖ್ಯಮಂತ್ರಿಯವರನ್ನು ಟೀಕೆ ಮಾಡಿದಷ್ಟು ಬಹುಷ: ವಿರೋಧ ಪಕ್ಷದವರೂ ಮಾಡಿರಲಿಕ್ಕಿಲ್ಲ.

ರಾಜ್ಯ ಬಿಜೆಪಿಯಲ್ಲಿ ಸಂಚಲನ ಮೂಡಿಸಿದೆ ಕೇಂದ್ರ ಮಂತ್ರಿ ಡಿ.ವಿ. ಸದಾನಂದಗೌಡರ ಆ ಹೇಳಿಕೆ!ರಾಜ್ಯ ಬಿಜೆಪಿಯಲ್ಲಿ ಸಂಚಲನ ಮೂಡಿಸಿದೆ ಕೇಂದ್ರ ಮಂತ್ರಿ ಡಿ.ವಿ. ಸದಾನಂದಗೌಡರ ಆ ಹೇಳಿಕೆ!

ಅದೇನೇ ಇರಲಿ, ಕೇಂದ್ರ ಸಚಿವ ಸದಾನಂದ ಗೌಡ ಅವರು ನೀಡಿರುವ ಹೇಳಿಕೆಯಿಂದಾಗಿ ಮತ್ತೆ ಸಿಎಂ ಬದಲಾವಣೆ ವಿಚಾರ ಮುನ್ನಲೆಗೆ ಬಂದಂತಾಗಿದೆ. ಅವರ ಈ ಹೇಳಿಕೆಗೆ ರಾಜಕೀಯ ವಲಯದಲ್ಲಿ ಹಲವು ವ್ಯಾಖ್ಯಾನಗಳನ್ನು ಅರ್ಥೈಸಲಾಗುತ್ತಿದೆ.

 ವೇಗ ಪಡೆದುಕೊಂಡ ಜಾರಕಿಹೊಳಿ 'ಸಿಡಿ' ಪೊಲೀಸ್ ತನಿಖೆ: ಪಟ್ಟಿಯಲ್ಲಿ ಕಾಂಗ್ರೆಸ್ ನಾಯಕರ ಹೆಸರು! ವೇಗ ಪಡೆದುಕೊಂಡ ಜಾರಕಿಹೊಳಿ 'ಸಿಡಿ' ಪೊಲೀಸ್ ತನಿಖೆ: ಪಟ್ಟಿಯಲ್ಲಿ ಕಾಂಗ್ರೆಸ್ ನಾಯಕರ ಹೆಸರು!

ರಮೇಶ್ ಜಾರಕಿಹೊಳಿಯವರ ಸಿಡಿ ವಿಚಾರದಲ್ಲಿ ಹುರುಳಿದೆಯೋ, ಇಲ್ಲವೋ, ಸದ್ಯದ ಮಟ್ಟಿಗೆ ಮಾತ್ರ ಈ ವಿದ್ಯಮಾನ ಯಡಿಯೂರಪ್ಪ ಸರಕಾರದ ಘನತೆಗೆ ಚ್ಯುತಿ ತಂದಿದ್ದಂತೂ ಹೌದು.

 ಯುಗಾದಿಯ ನಂತರ ಸಿಎಂ ಸ್ಥಾನದಲ್ಲಿ ಬದಲಾವಣೆಯಾಗಲಿದೆ ಎಂದಿದ್ದ ಯತ್ನಾಳ್

ಯುಗಾದಿಯ ನಂತರ ಸಿಎಂ ಸ್ಥಾನದಲ್ಲಿ ಬದಲಾವಣೆಯಾಗಲಿದೆ ಎಂದಿದ್ದ ಯತ್ನಾಳ್

ಯಡಿಯೂರಪ್ಪನವರ ಕುರ್ಚಿ ಬಿಡಬೇಕಾಗಿ ಬರಬಹುದು ಎನ್ನುವ ಸುದ್ದಿ ಮೊನ್ನೆ ಶಿವರಾತ್ರಿಯಂದು ಮತ್ತೆ ವೇಗ ಪಡೆದುಕೊಂಡಿದೆ. ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಅವರು ನೀಡಿರುವ ಬಿಜೆಪಿ ವಲಯದಲ್ಲಿ ಸಂಚಲನ ಮೂಡಿಸಿದೆ. ಯುಗಾದಿಯ ನಂತರ ಸಿಎಂ ಸ್ಥಾನದಲ್ಲಿ ಬದಲಾವಣೆಯಾಗಲಿದೆ ಎಂದು ಯತ್ನಾಳ್ ಹೇಳಿದ್ದನ್ನು ಕೂಡಾ ಇಲ್ಲಿ ಸ್ಮರಿಸಿಕೊಳ್ಳಬಹುದು.

 ಅಶ್ವಥ್ ನಾರಾಯಣ ಅವರ ಪದವಿ ಮುಂದಿರುವ ʼಉಪʼ ಹೋಗಿ ʼಮುಖ್ಯಮಂತ್ರಿʼ ಎಂಬಂತಾಗಲಿ

ಅಶ್ವಥ್ ನಾರಾಯಣ ಅವರ ಪದವಿ ಮುಂದಿರುವ ʼಉಪʼ ಹೋಗಿ ʼಮುಖ್ಯಮಂತ್ರಿʼ ಎಂಬಂತಾಗಲಿ

ಬೆಂಗಳೂರಿನ ಮಲ್ಲೇಶ್ವರದಲ್ಲಿ ಶಿವರಾತ್ರಿ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡುತ್ತಿದ್ದ ಸದಾನಂದ ಗೌಡ್ರು, "ಕರ್ತವ್ಯ ಪ್ರಜ್ಞೆ ಹಾಗೂ ತಮ್ಮ ಪಾಡಿಗೆ ತಾವು ನಿಷ್ಠೆಯಿಂದ ಕೆಲಸ ಮಾಡಿಕೊಂಡು ಹೋಗುತ್ತಿರುವ ಅಶ್ವಥ್ ನಾರಾಯಣ ಅವರ ಪದವಿ ಮುಂದಿರುವ ʼಉಪʼ ಹೋಗಿ ಆದಷ್ಟು ಬೇಗ ʼಮುಖ್ಯಮಂತ್ರಿʼ ಎಂಬ ಪದನಾಮ ಬರುವಂತಾಗಲಿ. ಅದಕ್ಕೆ ಬೇಕಾದ ಎಲ್ಲ ಕೃಪೆ-ಚೈತನ್ಯವನ್ನು ಆ ಪರಮಶಿವ ನೀಡಲಿ" ಎಂದು ಗೌಡ್ರು ಹೇಳಿದ್ದರು.

 ಸದನದಲ್ಲಿ ಯಡಿಯೂರಪ್ಪ

ಸದನದಲ್ಲಿ ಯಡಿಯೂರಪ್ಪ

ಎರಡು ದಿನಗಳ ಹಿಂದೆ ಸದನದಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ಅವರು ಮೀಸಲಾತಿ ವಿಚಾರದಲ್ಲಿ ಯಡಿಯೂರಪ್ಪನವರ ವಿರುದ್ದ ಮಾತನಾಡಿದ್ದು, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರನ್ನು ಹೊಗಳಿದ್ದು, ಇದರ ನಡುವೆ, ಸದಾನಂದ ಗೌಡ ಅವರ ಹೇಳಿಕೆ ಮಹತ್ವವನ್ನು ಪಡೆದುಕೊಂಡಿದೆ. ಈ ವಿಚಾರಕ್ಕೆ ತುಪ್ಪ ಸುರಿಯುವಂತೆ ಕೆಪಿಸಿಸಿ ಕೂಡಾ ಟ್ವೀಟ್ ಮಾಡಿದೆ.

Recommended Video

ಅಶ್ವತ್ಥ ನಾರಾಯಣ ಪರ ಡಿವಿಎಸ್ ಬ್ಯಾಟಿಂಗ್ !! | Oneindia Kannada
 ಬಿಎಸ್ವೈ ಮುಂದಿನ ಹಾದಿ ಮಾರ್ಗದರ್ಶಕ ಮಂಡಳಿಯೋ, ಧವಳಗಿರಿಯೋ?

ಬಿಎಸ್ವೈ ಮುಂದಿನ ಹಾದಿ ಮಾರ್ಗದರ್ಶಕ ಮಂಡಳಿಯೋ, ಧವಳಗಿರಿಯೋ?

"ಅತ್ತ ಸಿಎಂ ಸದನದಿಂದ ಸ್ವಪಕ್ಷದ ಶಾಸಕ @BasanagoudaBJP ಅವರಿಗೆ ಉತ್ತರಿಸಲಾಗದೆ ನಾಪತ್ತೆಯಾಗಿದ್ದರು! ಇತ್ತ @DVSadanandGowda ಅವರು ಸಿಎಂ ಗಾದಿಗೆ @drashwathcn ಹೆಸರನ್ನು ತೇಲಿ ಬಿಡುತ್ತಿದ್ದಾರೆ. #BSYmuktaBJP ಸಿದ್ಧತೆ ಜೋರಾಗಿದೆ. @BSYBJP ಅವರ ಮುಂದಿನ ದಾರಿ ಮಾರ್ಗದರ್ಶಕ ಮಂಡಲವೋ ಅಥವಾ ಧವಳಗಿರಿಯೋ @BJP4Karnataka ?!

English summary
Recent Developments In Karnataka BJP Leads To Change BS Yediyurappa From Leadership, What Is His Next Move. Read on
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X