ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾರ್ಕಿಂಗ್ ಪ್ರಾಬ್ಲಂಗೆ ಪರಿಹಾರ ಹುಡುಕಿದ ನಾರಾಯಣ ಭಟ್ಟರು

By ಮಮತಾ ದೇವ, ಸುಳ್ಯ
|
Google Oneindia Kannada News

ದಿನೇ ದಿನೇ ಹೆಚ್ಚುತ್ತಿರುವ ಜನಸಂಖ್ಯೆಯ ಸಮಸ್ಯೆ ಒಂದೆಡೆಯಾದರೆ ನಮ್ಮ ದೇಶದ ಇನ್ನೊಂದು ಸಮಸ್ಯೆ ಹೆಚ್ಚುತ್ತಿರುವ ವಾಹನಗಳ ಸಂಖ್ಯೆ, ಜೊತೆಗೆ ವಾಹನಗಳ ಪಾರ್ಕಿಂಗ್. ನಗರ ಪ್ರದೇಶಗಳಲ್ಲಂತೂ ಎಲ್ಲೆಂದರಲ್ಲಿ ಪಾರ್ಕ್ ಮಾಡುವ ವಾಹನಗಳ ಸಂಖ್ಯೆ ವೃದ್ಧಿಯಾಗುತ್ತಲೇ ಇದೆ.

ಇನ್ನು ಬಹುತೇಕ ಮನೆಗಳ ಎದುರಿನ ರಸ್ತೆಯ ಇಕ್ಕೆಲಗಳಲ್ಲಿ ವಾಹನ ನಿಲ್ಲಿಸಬೇಕಾದ ಅನಿವಾರ್ಯತೆ ಇಂದು ನಮ್ಮಲ್ಲಿದೆ. ಮನೆಯ ಆವರಣದೊಳಗೆ ಪ್ರವೇಶ ಮಾಡಿದ ವಾಹನಕ್ಕೆ ಮತ್ತೆ ಪ್ರಧಾನ ರಸ್ತೆಯತ್ತ ತಿರುಗಿ ಬರಲು ಅವಕಾಶ ಸಿಗುವುದು ಕಷ್ಟ.

New way of parking through Innovative Parking Board System

ಇದಕ್ಕೆ "Innovative Parking Board" ಎನ್ನುವ ಹೊಸ ವಿಧಾನದ ಪರಿಕಲ್ಪನೆಯ ಪ್ರಯೋಗವೊಂದನ್ನು ಇದೇ ಜನವರಿ ತಿಂಗಳಲ್ಲಿ ದಕ್ಷಿಣ ವಲಯ ಅಂತರ ರಾಜ್ಯ ವಿಜ್ಞಾನ ಶಿಕ್ಷಕರ ಮಾದರಿ ಸ್ಪರ್ಧೆಯಲ್ಲಿ ಪ್ರದರ್ಶಿಸಲಾಗಿದೆ.

ಸುಳ್ಯ ತಾಲೂಕಿನ ಬಾಳಿಲದ ವಿದ್ಯಾಬೋಧಿನಿ ಪ್ರೌಢಶಾಲೆಯಲ್ಲಿ ಗಣಿತ ಮತ್ತು ವಿಜ್ಞಾನ ಅಧ್ಯಾಪಕರಾದ ಪುರಂದರ ನಾರಾಯಣ ಭಟ್ ಅವರೇ ಈ ಇನ್ನೋವೇಟಿವ್ ಕಾರ್ ಪಾರ್ಕಿಂಗ್ ಮಾದರಿಯ ಪರಿಕಲ್ಪನೆಯ ಜನಕ. ತನ್ನ ವಿಭಿನ್ನ ಸಂಶೋಧನೆಗಾಗಿ ಹಿಂದಿನ ವರ್ಷ ರಾಜ್ಯ ಮಟ್ಟದ ಅತ್ಯುತ್ತಮ ವಿಜ್ಞಾನ ಅಧ್ಯಾಪಕರೆಂದು ಪುರಸ್ಕೃತರಾಗಿದ್ದವರು ನಾರಾಯಣ ಭಟ್.

ಏನಿದು ಇನ್ನೋವೇಟಿವ್ ಪಾರ್ಕಿಂಗ್ : ಪ್ರತಿಯೊಬ್ಬನಿಗೂ ತನ್ನ ಕಾರನ್ನು ತನ್ನ ಮನೆಯ ಆವರಣದೊಳಗೆ ಪಾರ್ಕ್ ಮಾಡಬೇಕೆಂಬ ಬಯಕೆ ಇದ್ದೇ ಇರುತ್ತದೆ. ಕೆಲವೆಡೆ ಇದಕ್ಕೆ ಅವಕಾಶವೇ ಇಲ್ಲವಾದರೆ ಇನ್ನು ಕೆಲವರಿಗೆ ಕಾರು ಪಾರ್ಕ್ ಮಾಡಲು ಜಾಗವಿದ್ದರೂ ಪ್ರಧಾನ ರಸ್ತೆಗೆ ಬರಬೇಕಾದರೆ ಹಿಮ್ಮುಖವಾಗಿಯೇ ವಾಹನ ಚಲಾಯಿಸಬೇಕು. ಏಕೆಂದರೆ ವಾಹನ ತಿರುಗಿಸುವಷ್ಟು ಜಾಗ ಅಲ್ಲಿ ಇರುವುದಿಲ್ಲ.

New way of parking through Innovative Parking Board System

ಹೀಗೆ ಹಿಮ್ಮುಖ ಚಾಲನೆಯಿಂದ ವಾಹನಗಳಿಗೆ ಅಪಘಾತವಾಗುವ ಸಾಧ್ಯತೆಯೂ ಇಲ್ಲದಿಲ್ಲ, ಜೊತೆಗೆ ಇಂಧನವೂ ಜಾಸ್ತಿ ಬಳಕೆಯಾಗುತ್ತದೆ. ಜನ ಸಾಮಾನ್ಯರ ಈ ಸಮಸ್ಯೆಗೆ ಪರಿಹಾರವೇನೆಂದು. ಯೋಚಿಸಿದಾಗ ತನಗೆ ಬಂದ ಪರಿಕಲ್ಪನೆಯೇ ಇನ್ನೋವೇಟಿವ್ ಪಾರ್ಕಿಂಗ್ ಬೋರ್ಡ್ ಎನ್ನುತ್ತಾರೆ ನಾರಾಯಣ ಭಟ್.

ಈ ಮಾದರಿಯ ಪ್ರಕಾರ ಕಾರನ್ನು ನೇರವಾಗಿ ಆವರಣದೊಳಗಿನ ಕಾರು ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಬಹುದು. ಶಕ್ತಿ ನೀಡುವ ಬಾಲ್ ಬೇರಿಂಗ್ ಗಳ ಚಕ್ರವನ್ನು ಅಳವಡಿಸಿದ ಚಕ್ರಾಕಾರದ ಪೀಠದಂತಹ ಈ ವೇದಿಕೆಯನ್ನು ಕಾರು ಪಾರ್ಕ್ ಮಾಡುವಲ್ಲಿ ಅಳವಡಿಸಿದರೆ ಕಾರು ಬಂದು ಅದನ್ನು ಏರಿ ನಿಲ್ಲುತ್ತದೆ.

ಕಾರನ್ನು ಹೊರ ತೆಗೆಯಲು ಮತ್ತೆ ರಿವರ್ಸ್ ಚಾಲನೆ ಮಾಡುವ ಬದಲು, ಆ ಚಕ್ರವನ್ನು ತಿರುಗಿಸುವ ವ್ಯವಸ್ಥೆ ಮಾಡಿದರೆ, ಅದರ ಮೇಲೆ ನಿಂತಿದ್ದ ವಾಹನ ಪ್ರಧಾನ ರಸ್ತೆಗೆ ಮುಖವಾಗಿ ಚಾಲನೆ ಮಾಡುವಂತೆ ನಿಲ್ಲುವುದು ಎಂದು ನಾರಾಯಣ ಭಟ್ ವಿವರಿಸುತ್ತಾರೆ.

ವಿದ್ಯಾರ್ಥಿಗಳಿಗೆ ಗಣಿತವನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳುವ ಸಲುವಾಗಿ ಮೂರು ಆಯಾಮದ ಮಾದರಿಗಳನ್ನು ರೂಪಿಸಿದ ನಾರಾಯಣ ಭಟ್, ರಾಜ್ಯದ ಹಾಗೂ ಅಂತರ ರಾಜ್ಯ ಮಟ್ಟದ ವಿಜ್ಞಾನ ಮಾದರಿಗಳ ಸ್ಪರ್ಧೆಗಳಲ್ಲಿ ಅನೇಕ ವಿನೂತನ ಪ್ರಯೋಗಗಳನ್ನು ಮಾಡಿ ಉತ್ತಮ ಸಂಪನ್ಮೂಲ ವ್ಯಕ್ತಿಯಾಗಿ ಗುರುತಿಸಲ್ಪಟ್ಟಿದ್ದಾರೆ.

English summary
New way of parking system through Innovative Parking Board System by Maths and Science teacher of Vidyabhodhini School, Sullia Sri. Narayan Bhat.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X