ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಾಹೀರಾತು ನೋಡಿ ಹಣ ಗಳಿಸಿ ಎಂಬ ಹೊಸ ಸೈಬರ್ ಸ್ಕ್ಯಾಮ್ ಜಾಲ: ಹುಷಾರ್!

|
Google Oneindia Kannada News

ಬೆಂಗಳೂರು,ಅ.23: ಮನೆಯಲ್ಲಿ ಕೂತು ನಾಲ್ಕು ಕಾಸು ಗಳಿಸುವ ಆಸೆ ಎಲ್ಲರಲ್ಲೂ ಇರುತ್ತದೆ. ಅಂತಹವರಿಗೆ ಗಾಳ ಹಾಕಲು ಸೈಬರ್ ವಂಚಕರು ಹೊಸ ಬ್ಲೇಡ್ ಸ್ಕೀಮ್ ಪರಿಚಯಿಸಿ ಬೆಂಗಳೂರಿಗರಿಂದ ಕೋಟ್ಯಂತರ ರೂಪಾಯಿ ಸಂಗ್ರಹಿಸಿ ನಾಮ ಹಾಕುತ್ತಿರುವ ಹೊಸ ಜಾಲ ಹುಟ್ಟಿಕೊಂಡಿದೆ.

ಕೇವಲ ಹದಿನೈದು ದಿನಗಳ ಹಿಂದೆ ರಾಜಧಾನಿಗೆ ಪರಿಚಯಿಸಲ್ಪಟ್ಟಿರುವ ವಿನೂತನ ಮಾದರಿಯ ಮೋಸ ಜಾಲಕ್ಕೆ ಸಿಕ್ಕಿ ಅನೇಕರು ಹಣ ಕಳೆದುಕೊಂಡಿದ್ದಾರೆ. ವಾಟ್ಸಪ್ ಗ್ರೂಪ್ ನಲ್ಲಿಯೇ ನಡೆಯುವ ಈ ವಂಚಕ ಜಾಲದ ಕಾರ್ಯಶೈಲಿ ಒನ್ ಇಂಡಿಯಾ ಕನ್ನಡ ಇಲ್ಲಿ ಪ್ರಸ್ತುತ ಪಡಿಸುತ್ತಿದೆ.

ಏನಿದು ಸೈಬರ್ ವಂಚಕ ಜಾಲ:

ಇದು ಹಳೇ ಬ್ಲೇಡ್ ಸ್ಕೀಮ್. ಈ ಬಾರಿ ವಿನೂತನವಾಗಿ ಪರಿಚಯಿಸಲಾಗಿದೆ. ಪೊಲೀಸರ ಕೈಗೆ ಸಿಗದಂತೆ ಕಾರ್ಯಾಚರಣೆ ನಡೆಸುವುದು, ಪ್ರತಿಯೊಬ್ಬರಿಂದ ಕಡಿಮೆ ದುಡ್ಡು ಪಡೆಯವುದು. ಚೈನ್ ಲಿಂಕ್ ಮೂಲಕ ಹೊಸಬರನ್ನು ಗಾಳಕ್ಕೆ ಎಳೆದು ಕೇವಲ ಹದಿನೈದು ದಿನದಲ್ಲಿ ಮೋಸ ಮಾಡುವುದು ಈ ವಿನೂತನ ಸ್ಕೀಮ್ ನ ವಿಶೇಷತೆ. ಇತ್ತೀಚೆಗೆ ಪರಿಚಯಿಸಿರುವ ಈ ವಂಚಕ ಜಾಲಕ್ಕೆ ಸಿಕ್ಕಿ ಲಕ್ಷಾಂತರ ಮಂದಿ ಕನಿಷ್ಠ 15 ಸಾವಿರ ದಿಂದ 1 ಲಕ್ಷ ರೂ. ವರೆಗೂ ಮೋಸ ಹೋಗಿದ್ದಾರೆ. ಮನೆಯಲ್ಲಿ ಕೂತು ಹಣ ಗಳಿಕೆ ಮಡುವ ಆಸೆ ಹೊಂದಿರುವರನ್ನು ಟಾರ್ಗೆಟ್ ಮಾಡಿ ಈ ಜಾಲ ಮೋಸ ಮಾಡುತ್ತಿದೆ. ಬೆಂಗಳೂರಿನ ಮಟ್ಟಿಗೆ ಈ ವಿನೂತನ ಸೈಬರ್ ಜಾಲದ ಬಗ್ಗೆ ಒಂದು ದೂರು ಪೊಲೀಸ್ ಠಾಣೆಗಳಿಗೆ ದಾಖಲಾಗಿಲ್ಲ ಎಂಬುದು ಮತ್ತೊಂದು ವಿಶೇಷ.

New cyber scam introduced in the name of whatsapp advt view

ಜಾಹೀರಾತು ನೋಡಿ ಹಣ ಗಳಿಸಿ ಸ್ಕೀಮ್ :

ಅರೆಕಾಲಿಕ ಉದ್ಯೋಗ, ಮನೆಯಲ್ಲಿ ಕೂತು ಹಣ ಗಳಿಸುವ ಆಸೆಯಿಂದ ಸಾಮಾಜಿಕ ಜಾಲ ತಾಣದಲ್ಲಿ ಶೋಧ ಮಾಡಿದ್ದರೆ, ಅಂತಹ ವೆಬ್ ತಾಣಗಳಲ್ಲಿ ನೋಂದಣಿ ಮಾಡಿದ್ದರೆ ಅಂತಹ ಮೊಬೈಲ್ ನಂಬರ್ ಗಳನ್ನು ಸಂಗ್ರಹಿಸಿ ಸೈಬರ್ ವಂಚಕರು ವಾಟ್ಸಪ್ ಮೊಬೈಲ್ ಗೆ ಲಿಂಕ್ ಕಳಿಸುತ್ತಾರೆ. ಆ ಲಿಂಕ್ ಒತ್ತಿದರೆ ಸಾಕು ನೋಂದಣಿಗೆ ಹೊಸ ಲಿಂಕ್ ಓಪನ್ ಆಗುತ್ತದೆ. ಎಲ್ಲಾ ವಿವರಗಳನ್ನು ಕೇಳಲಾಗುತ್ತದೆ. ಅವನ್ನು ತುಂಬಿದ ಕೂಡಲೇ ನೀವು ಸದಸ್ಯರಾಗಲು 15 ಸಾವಿರ ರೂ. ಪಾವತಿ ಮಾಡಿ. ಆ ಬಳಿಕ ನಿಮಗೆ ವಾಟ್ಸಪ್ ಗ್ರೂಪ್ ಮೂಲಕವೇ ಲಿಂಕ್ ಬರುತ್ತದೆ. ನೀವು ಆ ಜಾಹೀರಾತು ನೋಡಬೇಕು. ಜಾಹೀರಾತು ಕಂಪನಿಯವರು ನೀಡುವ ಹಣ ನಿಮಗೆ ಬರುತ್ತದೆ. ನೀವು ಬೇರೊಬ್ಬರಿಗೆ ಸದಸ್ಯರನ್ನಾಗಿ ಮಾಡಿಸಿದರೆ, ನಿಮಗೆ ಹೆಚ್ಚುವರಿ ಕಮೀಷನ್ ಸಿಗುತ್ತದೆ ಎಂದು ನಂಬಿಸಲಾಗುತ್ತದೆ. ಒಂದು ದಿನಕ್ಕೆ ಹದಿನೈದು ಜಾಹೀರಾತು ನೋಡಿದರೆ ಸಾಕು ತಿಂಗಳಿಗೆ ಹತ್ತು ಸಾವಿರ ರೂ. ಆದಾಯ ಬರುತ್ತದೆ ಎಂದು ನಂಬಿಸಿ ನೋಂದಣಿ ಮಾಡಿಸಿಕೊಳ್ಳುತ್ತಾರೆ.

ಹಣ ಪಾವತಿ ಮಾಡಿ ವಾಟ್ಸಪ್ ಗ್ರೂಪ್ ಸೇರಿದ ಕೂಡಲೇ ಪ್ರತಿ ನಿತ್ಯ ಜಾಹೀರಾತುಗಳು ಬರುತ್ತಿರುತ್ತವೆ. ಅವುಗಳನ್ನು ವೀಕ್ಷಿಸಿದರೆ ನಿಮಗೆ ವಂಚಕರು ನೀಡಿರುವ ಖಾತೆಯಲ್ಲಿ ಹಣ ಬರುತ್ತಿರುತ್ತದೆ. ವಾಸ್ತವದಲ್ಲಿ ಅದು ಹಣ ಆಗಿರುವುದಿಲ್ಲ. ಪಾಯಿಂಟ್ಸ್ ನೀಡಿರುತ್ತಾರೆ. ಕೇವಲ ಹದಿನೈದು ದಿನದಲ್ಲಿ ನಿಮ್ಮ ಖಾತೆ ಸ್ಥಗಿತಗೊಳ್ಳುತ್ತದೆ. ವಾಟ್ಸಪ್ ಗ್ರೂಪ್ ಕೂಡ ಸ್ಥಗಿತಗೊಂಡಿರುತ್ತದೆ. ಹೀಗೆ ಲಕ್ಷಾಂತರ ಮಂದಿಯಿಂದ ಹದಿನೈದು ಸಾವಿರ ರೂ. ನಿಂದ ಹಿಡಿದು ಒಂದು ಲಕ್ಷ ರೂ. ವರೆಗೂ ಪೀಕಿ ನಾಮ ಹಾಕಲಾಗುತ್ತಿದೆ. ಹೀಗೆ ನೂರಾರು ಮಂದಿಗೆ ಮೋಸ ಮಾಡತ್ತಿರುವ ಜಾಲ ಬೆಂಗಳೂರಿನಲ್ಲಿ ಕೆಲ ದಿನಗಳಿಂದ ಸಕ್ರಿಯವಾಗಿದ್ದು ಸಾವಿರಾರು ಮಂದಿ ಮೋಸ ಹೋಗುತ್ತಿದ್ದಾರೆ.

New cyber scam introduced in the name of whatsapp advt view

ಒಮ್ಮೆ ಮೋಸ ಮಾಡಿದ ಬಳಿಕ ಅದೇ ಗ್ರೂಪ್ ನ ಕೆಲವು ಸದಸ್ಯರಂತೆ ಬಿಂಬಿಸಿ ಮತ್ತೆ ಅದೇ ಸದಸ್ಯರನ್ನು ಸೇರಿಸಿಕೊಂಡು ವಾಟ್ಸಪ್ ನಲ್ಲಿ ಗ್ರೂಪ್ ಮಾಡಲಾಗುತ್ತಿದೆ. ಕಳೆದುಕೊಂಡ ಹಣವನ್ನು ಮತ್ತೆ ವಾಪಸು ಗಳಿಸುವ ಆಸೆ ಹುಟ್ಟಿಸಿ ಮತ್ತೆ ನಾಮ ಹಾಕುತ್ತಿದ್ದಾರೆ. ಅಂತಹ ಬೋಗಸ್ ಕಂಪನಿಯೊಂದರ ಲಿಂಕ್ ಒನ್ ಇಂಡಿಯಾ ಕನ್ನಡಕ್ಕೆ ಸಿಕ್ಕಿದೆ. https://www.ph1010.com/secondary/xml/index.html#/register/2208415915 ಈ ಲಿಂಕ್ ಬಳಿಸಿ ಇದೀಗ ವಾಟ್ಸಪ್ ಗ್ರೂಪ್ ಗಳ ಮೂಲಕ ಮುಗ್ಧ ಜನರಿಂದ ಹೂಡಿಕೆ ಮಾಡಿಸಿಕೊಂಡು ಮೋಸ ಮಾಡಲಾಗುತ್ತಿದೆ. ಈ ಲಿಂಕ್ ಮೂಲಕ ವ್ಯಕ್ತಿಯೊಬ್ಬರು ಹದಿನೈದು ಸಾವಿರ ರೂ. ಕಳೆದುಕೊಂಡಿದ್ದಾರೆ.

"ನನಗೆ ನನ್ನ ಸ್ನೇಹಿತರೊಬ್ಬರು ಆನ್‌ಲೈನ್ ನಲ್ಲಿ ಜಾಹೀರಾತು ನೋಡುವ ಮೂಲಕ ಹಣ ಗಳಿಸುವ ಬಗ್ಗೆ ಮಾಹಿತಿ ನೀಡಿದರು. ನನ್ನ ಸ್ನೇಹಿತನಿಗೆ ಹಣ ಬರುತ್ತಿದ್ದನ್ನು ತೋರಿಸಿದ. ಅದನ್ನು ನಂಬಿ ನಾನು ಕೂಡ ಹೂಡಿಕೆ ಮಾಡಿದೆ. ಆದರೆ ಹಣ ಹೂಡಿಕೆ ಮಾಡಿದ ಹದಿನೈದು ದಿನದ ಬಳಿಕ ಗ್ರೂಪ್ ಇಲ್ಲದಂತಾಯಿತು. ಆ ಬಳಿಕ ಮೋಸ ಹೋಗಿರುವುದು ಗೊತ್ತಾಯಿತು" ಎಂದು ಈ ಲಿಂಕ್ ಮೂಲಕ ಹಣ ಕಳೆದುಕೊಂಡ ಬಗ್ಗೆ ಸುಮಂತ್ ತನ್ನ ಅನುಭವ ಹಂಚಿಕೊಂಡಿದ್ದಾರೆ.

New cyber scam introduced in the name of whatsapp advt view

ಸಾರ್ವಜನಿಕರಿಗೆ ಮನವಿ:

ವಾಟ್ಸಪ್ ಗ್ರೂಪ್ ಮೂಲಕ ಹಣ ಗಳಿಕೆ ಮಾಡುವ ಆಸೆ ಹುಟ್ಟಿಸಿ ಜನರಿಗೆ ಮೋಸ ಮಾಡುತ್ತಿದ್ದಾರೆ. ಜಾಹೀರಾತು ನೋಡುವ ಆಸೆಗೆ ಬಿದ್ದು ಯಾರೂ ಹಣ ಹೂಡಿಕೆ ಮಾಡಬಾರದು. ಹೂಡಿಕೆ ಮಾಡಿ ಮೋಸ ಹೋಗಿದ್ದವರು ಮೊದಲು ಪೊಲೀಸ್ ಠಾಣೆಗೆ ದೂರು ಕೊಡಬೇಕು. ಆನ್ ಲೈನ್ ನಲ್ಲಿ ವಂಚನೆ ಹಾದಿಗಳು ಹೊಸ ಸ್ವರೂಪ ಪಡೆದುಕೊಳ್ಳುತ್ತಿದ್ದು, ಸುಖವಾಗಿ ಹಣ ಗಳಿಸುವ ಆಸೆಗೆ ಬಿದ್ದು ಮೋಸ ಹೋಗಬಾರದು ಎಂದು ಸೈಬರ್ ತಜ್ಞ ಪೊಲೀಸ್ ಅಧಿಕಾರಿಗಳು ಮನವಿ ಮಾಡಿದ್ದಾರೆ.

English summary
Beware of whatsapp advt view cyber Scam; Cheating from a new cyber network making money at Whats App Group,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X