ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕದಲ್ಲಿ ಹೊಸ ಸೋಂಕಿತರ ಸಂಖ್ಯೆ ಇಳಿಕೆ, ಏಕೆ?

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 24: ಕರ್ನಾಟಕದಲ್ಲಿ ಬುಧವಾರ 6,997 ಹೊಸ ಪ್ರಕರಣಗಳು ದಾಖಲಾಗಿದೆ. ರಾಜ್ಯದಲ್ಲಿನ ಒಟ್ಟು ಸೋಂಕಿತರ ಸಂಖ್ಯೆ 5,40,847ಕ್ಕೆ ಏರಿಕೆಯಾಗಿದೆ. ಪರೀಕ್ಷೆಯ ಸಂಖ್ಯೆ ಇಳಿಮುಖವಾಗಿದ್ದು, ಸೋಂಕಿತರ ಸಂಖ್ಯೆಯೂ ಕಡಿಮೆಯಾಗುತ್ತಿದೆ.

ಸೆಪ್ಟೆಂಬರ್ 16ರಂದು 70,981 ಪರೀಕ್ಷೆಗಳನ್ನು ನಡೆಸಲಾಗಿತ್ತು. ಸೆಪ್ಟೆಂಬರ್ 22ರಂದು 55,707 ಮಾದರಿಗಳ ಪರೀಕ್ಷೆ ಮಾಡಲಾಗಿದೆ. ಬುಧವಾರ ಕರ್ನಾಟಕದಲ್ಲಿ 56,398 ಕೋವಿಡ್ ಪರೀಕ್ಷೆಗಳನ್ನು ಮಾಡಲಾಗಿದೆ ಎಂದು ಆರೋಗ್ಯ ಇಲಾಖೆ ಹೇಳಿದೆ.

ಬೆಂಗಳೂರಲ್ಲಿ 2 ಲಕ್ಷ ದಾಟಿದ ಕೋವಿಡ್ ಸೋಂಕಿತರ ಸಂಖ್ಯೆ ಬೆಂಗಳೂರಲ್ಲಿ 2 ಲಕ್ಷ ದಾಟಿದ ಕೋವಿಡ್ ಸೋಂಕಿತರ ಸಂಖ್ಯೆ

ಕಳೆದ ಏಳು ದಿನಗಳಿಂದ ರಾಜ್ಯದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಿದೆ. ಇದಕ್ಕೆ ಪರೀಕ್ಷೆಗಳನ್ನು ಕಡಿಮೆ ಮಾಡಿರುವುದು ಕಾರಣವಾಗಿದೆ. ಬೆಂಗಳೂರು ನಗರ ಮಾತ್ರವಲ್ಲ. ಜಿಲ್ಲೆಯಲ್ಲಿಯೂ ಪರೀಕ್ಷೆಗಳು ಕಡಿಮೆಯಾಗಿವೆ.

ಕೋವಿಡ್ ನೆಪ: ಅಧಿವೇಶನ ಮೊಟಕುಗೊಳಿಸಿದ ರಾಜ್ಯ ಬಿಜೆಪಿ ಸರ್ಕಾರ!ಕೋವಿಡ್ ನೆಪ: ಅಧಿವೇಶನ ಮೊಟಕುಗೊಳಿಸಿದ ರಾಜ್ಯ ಬಿಜೆಪಿ ಸರ್ಕಾರ!

ಸೆಪ್ಟೆಂಬರ್ 21 ರಂದು 7,339, ಸೆಪ್ಟೆಂಬರ್ 22ರಂದು 6,974 ಮತ್ತು ಸೆಪ್ಟೆಂಬರ್ 23ರಂದು 6,997 ಹೊಸ ಕೋವಿಡ್ ಪ್ರಕರಣಗಳು ಕರ್ನಾಟಕದಲ್ಲಿ ದಾಖಲಾಗಿವೆ. ಇದುವರೆಗೂ ರಾಜ್ಯದಲ್ಲಿ 437910 ಜನರು ಗುಣಮುಖರಾಗಿದ್ದು, 8266 ಜನರು ಮೃತಪಟ್ಟಿದ್ದಾರೆ.

ಕೋವಿಡ್ ಭೀತಿಯಲ್ಲಿ ಅಧಿವೇಶನ; ಬದಲಾದ ಚಿತ್ರಗಳುಕೋವಿಡ್ ಭೀತಿಯಲ್ಲಿ ಅಧಿವೇಶನ; ಬದಲಾದ ಚಿತ್ರಗಳು

ಕೋವಿಡ್ ಪರೀಕ್ಷೆಗಳ ಸಂಖ್ಯೆ

ಕೋವಿಡ್ ಪರೀಕ್ಷೆಗಳ ಸಂಖ್ಯೆ

ಸೆಪ್ಟೆಂಬರ್ 16ರಂದು ರಾಜ್ಯದಲ್ಲಿ 70,981 ಪರೀಕ್ಷೆಗಳನ್ನು ನಡೆಸಲಾಗಿದೆ. ಸೆ. 17ರಂದು 72,030, ಸೆ. 18ರಂದು 57,470, ಸೆ. 19ರಂದು 63,784, ಸೆ. 20ರಂದು 60,477, ಸೆ.21ರಂದು 42,691, ಸೆ. 22ರಂದು 55,707 ಮಾದರಿಗಳ ಪರೀಕ್ಷೆ ನಡೆದಿದೆ.

ಜಿಲ್ಲೆಗಳಲ್ಲಿ ಪರೀಕ್ಷೆ ಸಂಖ್ಯೆ ಕಡಿಮೆ

ಜಿಲ್ಲೆಗಳಲ್ಲಿ ಪರೀಕ್ಷೆ ಸಂಖ್ಯೆ ಕಡಿಮೆ

ಜಿಲ್ಲೆಗಳಲ್ಲಿ ರ್‍ಯಾಪಿಡ್ ಆ್ಯಂಟಿಜನ್ ಟೆಸ್ಟ್ ಗಳನ್ನು ನಡೆಸಲು ಕಿಟ್‌ಗಳ ಕೊರತೆ ಎದುರಾಗಿದೆ. ಆದ್ದರಿಂದ, ಪರೀಕ್ಷೆಗಳ ಸಂಖ್ಯೆ ಇಳಿಮುಖವಾಗಿದೆ. ಸೆಪ್ಟೆಂಬರ್ 1ರಂದು ರಾಜ್ಯದಲ್ಲಿ 83,670 ಪರೀಕ್ಷೆ ಮಾಡಲಾಗಿತ್ತು. ಸೆಪ್ಟೆಂಬರ್ 23ರಂದು ಅದು 56,398 ಪರೀಕ್ಷೆಗಳನ್ನು ಮಾಡಲಾಗಿದೆ.

ಹೊಸ ಸೋಂಕಿತರ ಸಂಖ್ಯೆ ಇಳಿಕೆ

ಹೊಸ ಸೋಂಕಿತರ ಸಂಖ್ಯೆ ಇಳಿಕೆ

ಸೆಪ್ಟೆಂಬರ್ 16ರಂದು 9,725 ಹೊಸ ಪ್ರಕರಣಗಳು ಕರ್ನಾಟಕದಲ್ಲಿ ದಾಖಲಾಗಿತ್ತು. ಸೆ. 17ರಂದು 9,336, ಸೆ. 18ರಂದು 8,626, ಸೆ. 19ರಂದು 8,364, ಸೆ.20ರಂದು 8,191, ಸೆ.21ರಂದು 7,339, ಸೆ. 22ರಂದು 6,974 ಹೊಸ ಪ್ರಕರಣಗಳು ವರದಿಯಾಗಿವೆ.

Recommended Video

KG halli , DJ halli ಪ್ರಕರಣದ ಆರೋಪಿ Naveenಗೆ Bail ನಿರಾಕರಣೆ | Oneindia Kannada
ಕರ್ನಾಟಕದ ಕೋವಿಡ್ ವರದಿ

ಕರ್ನಾಟಕದ ಕೋವಿಡ್ ವರದಿ

ಸೆಪ್ಟೆಂಬರ್ 23ರ ಬುಧವಾರ ಕರ್ನಾಟಕದಲ್ಲಿ ಒಟ್ಟು ಕೋವಿಡ್ ಸೋಂಕಿತರ ಸಂಖ್ಯೆ 540847ಕ್ಕೆ ಏರಿಕೆಯಾಗಿದೆ. ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 94652. ಇದುವರೆಗೂ ರಾಜ್ಯದಲ್ಲಿ 8266 ಜನರು ಮೃತಪಟ್ಟಿದ್ದಾರೆ. ಗುಣಮುಖರಾದವರ ಸಂಖ್ಯೆ 437910.

English summary
From past one week new COVID 19 cases in Karnataka downward. Direct outcome for this decrease in testing numbers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X