ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜನರ ನೆಮ್ಮದಿ ಹಾಳು ಮಾಡಲು ಮತ್ತೆ ಚಿಗುರುತ್ತಿದೆ ಕೊರೊನಾ ವೈರಸ್!

|
Google Oneindia Kannada News

ಪಕ್ಕದ ಎರಡು ರಾಜ್ಯಗಳಲ್ಲಿ ಕೊರೊನಾ ಎರಡನೇ ಅಲೆ ಹರಡುತ್ತಿರುವ ರೀತಿ ಮತ್ತೆ ಇಡೀ ಕರ್ನಾಟಕದ ನೆಮ್ಮದಿ ಹಾಳು ಮಾಡಲು ಆರಂಭಿಸಿದೆ. ಎಲ್ಲಿ ಸರಕಾರ ಮತ್ತೆ ಲಾಕ್ ಡೌನ್, ಕರ್ಫ್ಯೂ ಮೊರೆ ಹೋಗುತ್ತೋ ಎನ್ನುವ ಭಯ ಕಾಡಲಾರಂಭಿಸಿದೆ.

ಒಂದು ವರ್ಷದ ಹಿಂದೆ ವಕ್ಕರಿಸಿಕೊಂಡ ಕೊರೊನಾ ವೈರಾಣು ಜನಜೀವನವನ್ನೇ ಅಸ್ತವ್ಯಸ್ತ ಮಾಡಿತ್ತು. ವ್ಯಾಪಾರಸ್ಥರು ಲಾಭದ ವಿಚಾರ ಹಾಗಿರಲಿ, ಸರಿಯಾಗಿ ವ್ಯಾಪಾರ ಸ್ವಲ್ಪಮಟ್ಟಿಗೆ ಕುದುರಲು ಆರಂಭವಾಯಿತು ಎನ್ನುವಷ್ಟರಲ್ಲಿ ಮತ್ತೆ ಈ ಪೆಡಂಭೂತದ ಸದ್ದು ಜೋರಾಗಲು ಆರಂಭವಾಗಿದೆ.

ಹೆಚ್ಚು ಮಂದಿಗೆ ಕೊರೊನಾ ಲಸಿಕೆ ತಲುಪಿಸಲು ಖಾಸಗಿ ಕಂಪನಿಗಳ ನೆರವು ಪಡೆಯುವುದು ಸೂಕ್ತ: ಅಜೀಂ ಹೆಚ್ಚು ಮಂದಿಗೆ ಕೊರೊನಾ ಲಸಿಕೆ ತಲುಪಿಸಲು ಖಾಸಗಿ ಕಂಪನಿಗಳ ನೆರವು ಪಡೆಯುವುದು ಸೂಕ್ತ: ಅಜೀಂ

ಮಹಾರಾಷ್ಟ್ರದ ಕೆಲವು ಜಿಲ್ಲೆಗಳಲ್ಲಿ ಲಾಕ್ ಡೌನ್ ಘೋಷಣೆಯಾಗಿದೆ. ಇಡೀ ರಾಜ್ಯವನ್ನು ಲಾಕ್ ಡೌನ್ ಗೆ ತಳ್ಳುವಿರೋ ಅಥವಾ ಕೋವಿಡ್ ಮಾರ್ಗಸೂಚಿಯನ್ನು ಪಾಲಿಸುತ್ತೀರೋ ಎನ್ನುವ ಆಯ್ಕೆಯನ್ನು ಅಲ್ಲಿನ ಮುಖ್ಯಮಂತ್ರಿಗಳು ಜನರಿಗೇ ಬಿಟ್ಟಿದ್ದಾರೆ.

ಹಳೆಯ ತಪ್ಪಿನಿಂದ ಕೊಂಚ ಅಲರ್ಟ್ ಆದಂತಿರುವ ಕರ್ನಾಟಕ ಸರಕಾರ, ಎರಡು ರಾಜ್ಯಗಳಿಂದ ಬರುವವವರು ಕಡ್ಡಾಯ ನೆಗೆಟಿವ್ ವರದಿ ತರಬೇಕೆನ್ನುವ ಆದೇಶವನ್ನು ಹೊರಡಿಸಿದೆ. ಕರ್ನಾಟಕ-ಕೇರಳದ ಗಡಿ ಚೆಕ್ ಪೋಸ್ಟ್ ನಲ್ಲಿ ಸ್ಕ್ರೀನಿಂಗ್ ಸೆಂಟರ್ ತೆರೆದಿದೆ. 72 ಗಂಟೆ ಮೀರಿದ ಆರ್ ಟಿ-ಪಿಸಿಆರ್ ನೆಗೆಟಿವ್ ವರದಿ ಇಲ್ಲದಿದ್ದರೆ, ರಾಜ್ಯಕ್ಕೆ ಪ್ರವೇಶವಿಲ್ಲ ಎಂದು ಆರೋಗ್ಯ ಇಲಾಖೆ ಸೂಚನೆ ಹೊರಡಿಸಿದೆ. ಮದುವೆ ಸಮಾರಂಭಕ್ಕೆ ಹೊಸ ರೂಲ್ಸ್:

 ಶೀಘ್ರದಲ್ಲೇ 2ನೇ ಹಂತದ ಲಸಿಕೆ ಕಾರ್ಯಕ್ರಮ; ಎಲ್ಲರಿಗೂ ಲಸಿಕೆ ಉಚಿತವಿಲ್ಲ ಶೀಘ್ರದಲ್ಲೇ 2ನೇ ಹಂತದ ಲಸಿಕೆ ಕಾರ್ಯಕ್ರಮ; ಎಲ್ಲರಿಗೂ ಲಸಿಕೆ ಉಚಿತವಿಲ್ಲ

ಸವದತ್ತಿ ಯಲ್ಲಮ್ಮ ದೇಗುಲ ಪ್ರವೇಶಕ್ಕೆ ಮತ್ತೆ ಭಕ್ತರಿಗೆ ನಿರ್ಬಂಧ

ಸವದತ್ತಿ ಯಲ್ಲಮ್ಮ ದೇಗುಲ ಪ್ರವೇಶಕ್ಕೆ ಮತ್ತೆ ಭಕ್ತರಿಗೆ ನಿರ್ಬಂಧ

ಜಾತ್ರೆ, ಸಮಾರಂಭಗಳಿಗೆ ಅನುಮತಿ ನೀಡಿದ್ದರಿಂದ ಕೊರೊನಾ ಸೋಂಕು ಹೆಚ್ಚಾಗಲು ಕಾರಣವಾಯಿತು ಎನ್ನುವುದು ಕೋವಿಡ್ ತಜ್ಞ ಕಮಿಟಿಯ ಅಭಿಪ್ರಾಯ. ರೂಪಾಂತರಗೊಂಡಿರುವ ವೈರಸ್ ಅತಿವೇಗದಲ್ಲಿ ಹರಡಬಲ್ಲದು ಎಂದು ಏಮ್ಸ್ ನಿರ್ದೇಶಕರಾದ ಡಾ. ಗುಲೇರಿಯಾ ಅಭಿಪ್ರಾಯ ಪಟ್ಟಿದ್ದಾರೆ. ಬೆಳಗಾವಿ ಜಿಲ್ಲೆಯ ಐತಿಹಾಸಿಕ ಸವದತ್ತಿ ಯಲ್ಲಮ್ಮ ದೇಗುಲ ಪ್ರವೇಶಕ್ಕೆ ಮತ್ತೆ ಭಕ್ತರಿಗೆ ನಿರ್ಬಂಧ ಹೇರಲಾಗಿದೆ.

ಪೂರ್ಣ ತರಗತಿ ಆರಂಭ

ಪೂರ್ಣ ತರಗತಿ ಆರಂಭ

ಕಳೆದ ನಾಲ್ಕು ದಿನಗಳಲ್ಲಿ ಅಂದರೆ ಫೆಬ್ರವರಿ 18ರಿಂದ 21ರವರೆಗೆ ಹೊಸ ಕೇಸುಗಳು ಕ್ರಮವಾಗಿ 406, 386, 490, 413. ಹೊಸ ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಿನ ಏರಿಕೆ ಇಲ್ಲದಿದ್ದರೂ, ರೂಪಾಂತರ ವೈರಸ್ ವೇಗವಾಗಿ ಹರಡುವ ಸಾಧ್ಯತೆ ಇದೆ ಎನ್ನುವುದನ್ನು ವೈದ್ಯಲೋಕ ಒತ್ತಿಒತ್ತಿ ಹೇಳುತ್ತಿದೆ. ಇವೆಲ್ಲದರ ನಡುವೆ ಆರನೇ ಕ್ಲಾಸ್ ನಿಂದ ಎಂಟನೇ ತರಗತಿಯವರೆಗೆ ಪೂರ್ಣ ತರಗತಿ ಆರಂಭಿಸುವ ನಿರ್ಧಾರಕ್ಕೆ ಕರ್ನಾಟಕ ಸರಕಾರ ಬಂದಿದೆ.

ಬೆಂಗಳೂರು ನಗರದಲ್ಲಿ ಇನ್ನೂ 4,315 ಸಕ್ರಿಯ ಪ್ರಕರಣ

ಬೆಂಗಳೂರು ನಗರದಲ್ಲಿ ಇನ್ನೂ 4,315 ಸಕ್ರಿಯ ಪ್ರಕರಣ

ಬೆಂಗಳೂರು ನಗರದಲ್ಲಿ ಇನ್ನೂ 4,315 ಸಕ್ರಿಯ ಪ್ರಕರಣಗಳಿವೆ. ಅಪಾರ್ಟ್ಮೆಂಟ್ ಒಂದರಲ್ಲಿ ನೂರಕ್ಕೂ ಹೆಚ್ಚು ಸೋಂಕು ಕಾಣಿಸಿಕೊಂಡ ನಂತರ, ಆರೋಗ್ಯ ಇಲಾಖೆ ಕಟ್ಟೆಚ್ಚರ ವಹಿಸಿದೆ. ಸಮಾರಂಭ ನಡೆಯುವ ಜಾಗದ ವಿಸ್ತೀರ್ಣದ ಮೇಲೆ ಎಷ್ಟು ಜನ ಸೇರಬಹುದು ಎಂದು ಸರಕಾರ ನಿರ್ಧರಿಸಿತ್ತು. ಆದರೆ, ಜನರಾಗಲಿ, ಆಯೋಜಕರಾಗಲಿ ಇದರ ಬಗ್ಗೆ ತಲೆಕೆಡಿಸಿಕೊಂಡಿಲ್ಲದ ಕಾರಣ ಹೊಸ ರೂಲ್ಸ್ ಜಾರಿಗೆ ತರಲಾಗಿದೆ.

ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್

ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್

ಮದುವೆ ಮತ್ತು ಶುಭ ಸಮಾರಂಭದ ಸೀಸನ್ ಆಗಿರುವುದರಿಂದ ಬೆಂಗಳೂರು ನಗರ ವ್ಯಾಪ್ತಿಯಲ್ಲಿನ ಪ್ರತೀ ಕಲ್ಯಾಣ ಮಂಟಪ ಅಥವಾ ಇತರ ಜಾಗಗಳಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಒಬ್ಬರು ಮಾರ್ಷಲ್ ಗಳನ್ನು ನೇಮಿಸಲು ಬಿಬಿಎಂಪಿ ನಿರ್ಧರಿಸಿದೆ. ಇವರುಗಳು ಸರಕಾರದ ಕೋವಿಡ್ ನಿಯಮಗಳನ್ನು ಜನರು ಪಾಲಿಸುತ್ತಾರೋ ಎನ್ನುವುದರ ಮೇಲೆ ಕಣ್ಣಿಡಲಿದ್ದಾರೆ. "ಕೋವಿಡ್ ಪಸರಿಸುವುದನ್ನು ತಡೆಯಲು ಈ ನಿಯಮವನ್ನು ಜಾರಿಗೆ ತರಲು ನಿರ್ಧರಿಸಲಾಗಿದೆ. ನಾನೇ ರ‍್ಯಾಂಡಮ್ ಆಗಿ ಯಾವುದಾದರೂ ಕಾರ್ಯಕ್ರಮ ನಡೆಯುವ ಜಾಗಕ್ಕೆ ತೆರಳಿ ಪರಿಶೀಲಿಸಲಿದ್ದೇನೆ"ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಹೇಳಿದ್ದಾರೆ.

ಸರಕಾರಕ್ಕೂ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳದೇ ಬೇರೆ ದಾರಿ ಇರುವುದಿಲ್ಲ

ಸರಕಾರಕ್ಕೂ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳದೇ ಬೇರೆ ದಾರಿ ಇರುವುದಿಲ್ಲ

ಸರಕಾರ ಏನೇ ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡರೂ ಅದನ್ನು ಪಾಲಿಸಬೇಕಾದವರು ಸಾರ್ವಜನಿಕರು. ಈಗಾಗಲೇ ಒಂದು ವರ್ಷದಿಂದ ಹೈರಾಣವಾಗಿರುವ ಜನರು, ಇನ್ನೆಷ್ಟು ದಿನಾಂತ ಭಯಪಟ್ಟು ಇರಲು ಸಾಧ್ಯ ಎನ್ನುವುದು ಸಾಮಾನ್ಯವಾದ ವಾದ. ಆದರೆ, ರೂಪಾಂತರ ವೈರಸಿನ ವೇಗ ಜಾಸ್ತಿಯಾದರೆ, ಸರಕಾರಕ್ಕೂ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳದೇ ಬೇರೆ ದಾರಿ ಇರುವುದಿಲ್ಲ.

Recommended Video

ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಬಗ್ಗೆ ಸಮುದಾಯದ ಸಚಿವರೇ ತಿಳಿಸ್ತಾರೆ ಎಂದ ಸಿಎಂ ಬಿಎಸ್ ವೈ | Oneindia Kannada

English summary
New Corona Cases Increasing: Karnataka Government May Take Tough Decision,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X