ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತುಮಕೂರು ಅಥವ ಕೋಲಾರದಲ್ಲಿ ವಿಮಾನ ನಿಲ್ದಾಣ ಸ್ಥಾಪನೆ

|
Google Oneindia Kannada News

ಬೆಂಗಳೂರು, ಜನವರಿ 23: ತುಮಕೂರು ಅಥವ ಕೋಲಾರದಲ್ಲಿ ವಿಮಾನ ನಿಲ್ದಾಣ ನಿರ್ಮಾಣವಾಗಬೇಕು ಎಂದು ರಾಜ್ಯ ಯೋಜನಾ ಮಂಡಳಿ ಸರ್ಕಾರಕ್ಕೆ ಶಿಫಾರಸು ಮಾಡಿದೆ. ಹೊಸ ವಿಮಾನ ನಿಲ್ದಾಣ ನಿರ್ಮಾಣವಾದರೆ ಬೆಂಗಳೂರು ವಿಮಾನ ನಿಲ್ದಾಣದ ಮೇಲಿನ ಒತ್ತಡ ಕಡಿಮೆಯಾಗಲಿದೆ ಎಂದು ಹೇಳಿದೆ.

ರಾಜ್ಯ ಯೋಜನಾ ಮಂಡಳಿ ಉಪಾಧ್ಯಕ್ಷ ಬಿ. ಜೆ. ಪುಟ್ಟಸ್ವಾಮಿ ಈ ಕುರಿತು ಮಾಹಿತಿ ನೀಡಿದ್ದಾರೆ. "ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಈಗಾಗಲೇ ಜನರ ದಟ್ಟಣೆ ಹೆಚ್ಚಾಗಿದೆ. ಈಗ ಹೆಚ್ಚುವರಿ ರನ್‌ ವೇಗಳನ್ನು ಸಹ ನಿರ್ಮಾಣ ಮಾಡಲಾಗಿದೆ" ಎಂದು ಹೇಳಿದರು.

ಬೆಂಗಳೂರು-ತುಮಕೂರು ರೈಲು ಪ್ರಯಾಣಿಕರಿಗೆ ಸಿಹಿ ಸುದ್ದಿ ಬೆಂಗಳೂರು-ತುಮಕೂರು ರೈಲು ಪ್ರಯಾಣಿಕರಿಗೆ ಸಿಹಿ ಸುದ್ದಿ

ಬೆಂಗಳೂರು ನಗರಕ್ಕೆ ಹತ್ತಿರವಿರುವ ಕೋಲಾರ ಅಥವ ತುಮಕೂರಿನಲ್ಲಿ ವಿಮಾನ ನಿಲ್ದಾಣವನ್ನು ನಿರ್ಮಾಣ ಮಾಡಬೇಕು. ಇದರಿಂದಾಗಿ ಬೆಂಗಳೂರು ವಿಮಾನ ನಿಲ್ದಾಣದ ಮೇಲಿನ ಒತ್ತಡ ಕಡಿಮೆಯಾಗಲಿದೆ ಎಂದು ಮಂಡಳಿ ಶಿಫಾರಸು ಮಾಡಿದೆ.

 ತಾನೇ ಬಾಂಬ್ ಇಟ್ಟಿದ್ದ ಮಂಗಳೂರು ವಿಮಾನ ನಿಲ್ದಾಣದತ್ತ ಆದಿತ್ಯ ರಾವ್‌ ತಾನೇ ಬಾಂಬ್ ಇಟ್ಟಿದ್ದ ಮಂಗಳೂರು ವಿಮಾನ ನಿಲ್ದಾಣದತ್ತ ಆದಿತ್ಯ ರಾವ್‌

New Airport To Come Up In Tumakuru Kolar

ಕಲಬುರಗಿ ಮಾದರಿಯಲ್ಲಿ ವಿಜಯಪುರ ಅಥವ ಬೀದರ್‌ನಲ್ಲಿ ವಿಮಾನ ನಿಲ್ದಾಣ ನಿರ್ಮಾಣವಾಗಬೇಕು. ಇದರಿಂದಾಗಿ ದೊಡ್ಡ ವಿಮಾನ ನಿಲ್ದಾಣವಲ್ಲದಿದ್ದರೂ ಮಿನಿ ನಿಲ್ದಾಣಗಳು ಆಗಬೇಕು ಎಂದು ಮಂಡಳು ವರದಿಯಲ್ಲಿ ಹೇಳಿದೆ.

ಕಲಬುರಗಿ-ಬೆಂಗಳೂರು ಅಲಯನ್ಸ್‌ ಏರ್ ವೇಳಾಪಟ್ಟಿ ಕಲಬುರಗಿ-ಬೆಂಗಳೂರು ಅಲಯನ್ಸ್‌ ಏರ್ ವೇಳಾಪಟ್ಟಿ

ರಾಜ್ಯ ಯೋಜನಾ ಮಂಡಳಿ ವಿವಿಧ ಇಲಾಖೆಗಳ ಕುರಿತ ತನ್ನ ಶಿಫಾರಸುಗಳನ್ನು ಶೀಘ್ರವೇ ಸರ್ಕಾರಕ್ಕೆ ಸಲ್ಲಿಕೆ ಮಾಡಲಿದೆ. ಸರ್ಕಾರ ಯಾವುದಕ್ಕೆ ಒಪ್ಪಿಗೆ ನೀಡಲಿದೆ ಎಂದು ಕಾದು ನೋಡಬೇಕಿದೆ.

English summary
Karnataka state planning board recommends to the government to start a new airport at Tumakuru or Kolar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X