• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಹೇಳಿಕೆಗೆ ಅಪಹಾಸ್ಯ: ನೆಟ್ಟಿಗರು ಗರಂ!

By ಒನ್ಇಂಡಿಯಾ ಡೆಸ್ಕ್
|
Google Oneindia Kannada News

ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶ ಪ್ರಕಟವಾಗಿದ್ದು, ಈ ಬಾರಿ ಎಲ್ಲ ವಿದ್ಯಾರ್ಥಿಗಳನ್ನು ಪಾಸ್ ಮಾಡಿಲಾಗಿದೆ. ಕೊರೊನಾ ವೈರಸ್ ಕಾರಣದಿಂದಾಗಿ ಪರೀಕ್ಷೆ ನಡೆಸದೆ ವಿದ್ಯಾರ್ಥಿಗಳ ಹಿಂದಿನ ಶೈಕ್ಷಣಿಕ ಪ್ರದರ್ಶನ ಗಮನಿಸಿ ಅಂಕಗಳನ್ನು ನೀಡಲಾಗಿದೆ.

ಇದೇ ವೇಳೆ ಓರ್ವ ವಿದ್ಯಾರ್ಥಿನಿ 600ಕ್ಕೆ 600 ಅಂಕಗಳನ್ನು ಗಳಿಸಿ ಸಾಧನೆ ಮಾಡಿದ್ದಾಳೆ. ಖಾಸಗಿ ಮಾಧ್ಯಮವೊಂದು ವಿದ್ಯಾರ್ಥಿನಿಯನ್ನು ಸಂದರ್ಶಿಸಿದಾಗ, 600ಕ್ಕೆ 600 ಅಂಕ ತೆಗೆದುಕೊಂಡಿದ್ದರೂ ಸಮಾಧಾನವಿಲ್ಲ ಎಂದು ಹೇಳಿದ್ದಳು.

ಇದೇ ಮಾತನ್ನು ಖಾಸಗಿ ಸುದ್ದಿ ಸಂಸ್ಥೆಯೊಂದು ಶೀರ್ಷಿಕೆಯನ್ನಾಗಿ ಬಳಸಿಕೊಂಡಿತ್ತು. ಈಗ ಆ ವಿದ್ಯಾರ್ಥಿನಿಯ ಹೇಳಿಕೆ ಮತ್ತು ಶೀರ್ಷಿಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವಿದ್ಯಾರ್ಥಿನಿಯ ಹೇಳಿಕೆಯನ್ನು ಅಪಹಾಸ್ಯ ಮಾಡಲಾಗುತ್ತಿದೆ.

ಒಂದು ಸಾಮಾಜಿಕ ಜಾಲತಾಣದಲ್ಲಿ ವಿದ್ಯಾರ್ಥಿನಿಯ ಹೇಳಿಕೆಯನ್ನು ಕೆಲವು ಕಿಡಿಗೇಡಿಗಳು ಅಪಹಾಸ್ಯ ಮಾಡುತ್ತಿದ್ದರೆ, ಇನ್ನೊಂದೆಡೆ ಕೆಲವು ನೆಟ್ಟಿಗರು ವಿದ್ಯಾರ್ಥಿನಿಯ ಅಪಹಾಸ್ಯಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.

ಶಂಕರ್ ಸಿಹಿಮೊಗೆ ಫೇಸ್‌ಬುಕ್ ಪೇಜ್‌ನಲ್ಲಿ, "ಈ ಮಗುವಿನ ಫೋಟೋ ಹಾಕಿ ಅಪಹಾಸ್ಯ ಮಾಡುತ್ತಿರುವ, ಈ ಟಿವಿಯ ಪತ್ರಿಕೆ headlineಗೂ ಹಾಗೆ ಒಳಗೆ ಹೋಗಿ ವಿವರ ಓದದ ಅವಿವೇಕಿ ಮೂರ್ಖರಿಗೆ ಎರಡು ಬಾರಿಸಬೇಕು ಎಂದು ಅನಿಸುತ್ತಿದೆ, ಕೆಲವರು ಹೇಳಿದ ನಂತರ Post Delete ಮಾಡಿದರು. ಇನ್ನೂ ಕೆಲವರು ಪ್ರಗತಿಪರ ಬಸವಣ್ಣ ಅದು ಇದು ಹಾಕಿಕೊಂಡು ಇನ್ನೂ ಈ ಫೋಸ್ಟ್ Screenshot ತೆಗೆದು ಆ ಮಗುವಿಗೆ ಅಪಹಾಸ್ಯ ಮಾಡುತ್ತಿದ್ದಾರೆ,'' ಎಂದು ಬರೆದುಕೊಂಡಿದ್ದಾರೆ.

Some Netizens Mocked To 2nd PUC Student Statement On Her Results

"ಆ ಹುಡುಗಿ ಹೇಳಿರುವುದು 600ಕ್ಕೆ 600 ಅಂಕ ಬಂದಿದೆ. ಆದರೆ ಪರೀಕ್ಷೆ ಮಾಡದೆ ಇಷ್ಟು ಅಂಕ ಪಡೆದಿರುವುದಕ್ಕೆ ಬೇಸರವಿದೆ ಎಂದು ವಿನಃ ಇಷ್ಟು ಅಂಕ ಬಂದಿರುವುದು ಕಡಿಮೆಯಾಯಿತು ಎಂದಲ್ಲ. ಬೇರೆಯವರ ಮನೆಯ ಮಕ್ಕಳ ಫೋಟೋ ಈ ರೀತಿ ವಿಷಯ ಗ್ರಹಿಸದೆ ಅಪಹಾಸ್ಯ ಮಾಡುವ ಮುನ್ನ ನಿಮ್ಮ Basic Common Sense improve . ಇಲ್ಲ at least ಈ ರೀತಿ ಹಾಕುವ ಮುನ್ನ ಒಳಗೆ ಹೋಗಿ ವಿಷಯ ಸರಿಯಾಗಿ ಓದಿ. ಇಲ್ಲ ನೀವು ವಾಟ್ಸಾಪ್ ಯುನಿವರ್ಸಿಟಿ ವಿದ್ಯಾರ್ಥಿಗಳಿಗಿಂತ ನೀಚರಾಗುತ್ತೀರ.''

Child Abuse act ಅಂತಾ ಒಂದಿದೆ ಬೇರೆಯವರ ಮನೆಯ ಮಗುವಿನ ಫೋಟೋ ಈ ರೀತಿ ಬಳಸಿ ಅಪಹಾಸ್ಯ ಮಾಡುವುದು ತಪ್ಪಾಗುತ್ತದೆ. ವಿಷಯ ಸರಿಯಾಗಿ ಗ್ರಹಿಸದೆ, ಮೊದಲು ಈ headline ಕೊಟ್ಟವನಿಗೆ ಉಗಿಯಬೇಕು,'' ಎಂದು ಬರೆದುಕೊಂಡಿದ್ದಾರೆ.

ಶಂಕರ್ ಸಿಹಿಮೊಗೆ ಫೇಸ್‌ಬುಕ್‌ ಪೋಸ್ಟ್‌ಗೆ ಕಮೆಂಟ್ ಮಾಡಿ ನೆಟ್ಟಿಗರು ವಿದ್ಯಾರ್ಥಿನಿ ಹೇಳಿಕೆಗೆ ಅಪಹಾಸ್ಯ ಮಾಡಿದವರ ವಿರುದ್ಧ ಕಿಡಿಕಾರಿದ್ದಾರೆ.

ಕಮೆಂಟ್‌ಗಳು
'ಆ ರೀತಿ ಬರೆದವನ ಬುದ್ಧಿಗಿಷ್ಟು, ಈ ಯೂಟ್ಯೂಬ್ ಚಾನಲ್ ಮತ್ತು ಕೆಲವು ಇಂತಹ ನ್ಯೂಸ್ ಚಾನಲ್‌ನವರು ವೀವ್ಸ್ ಹೆಚ್ಚಿಸಲು ಬಳಸುವ ವಕ್ರ ದಾರಿಯೇ ಇಂತದು' ಎಂದಿದ್ದಾರೆ.

ಇನ್ನೊಬ್ಬರು, 'ಹೌದು ಯಾರದೋ ಪೋಸ್ಟ್‌ನಲ್ಲಿ ನಾನು ಹಾಗೇ ಹೇಳಿದೆ, ಆಕೆಯ ಇಂಗಿತ ಪರೀಕ್ಷೆ ಬರೆದು ಅಂಕ ಬಂದಿದ್ದರೆ ಸಮಾಧಾನ ಆಗುತ್ತಿತ್ತು ಅಂತ.'

ಚಿದಾನಂದಮೂರ್ತಿ ಆನಂದ್ ಎನ್ನುವವರು, 'ಎಂತಹ ಜನಗಳು ಸರ್, ಆ ಮಗುವಿನ ಮನಸ್ಥಿತಿಯ ಬಗ್ಗೆಯೂ ಆಲೋಚಿಸಿಲ್ಲ. ತಾನು ಮಾಡದ ತಪ್ಪಿಗೆ ಅಪಹಾಸ್ಯಕ್ಕೆ ಒಳಗಾಗುವುದು ಎಂದರೆ ಏನು ಸರ್? ಎಂದು ಪ್ರಶ್ನಿಸಿದ್ದಾರೆ.

ಮತ್ತೊಬ್ಬರು ಕಮೆಂಟ್ ಮಾಡಿ, 'ಇದಕ್ಕೆ ಹೆಚ್ಚಿನ ಬುದ್ಧಿವಂತಿಕೆಯ ಅಗತ್ಯ ಇಲ್ಲ. ಸ್ವಲ್ಪ ಹೃದಯವಂತಿಕೆ ಇದ್ದರೆ ಸಾಕು. ಆ ಸಾಲನ್ನು ಓದಿದ ಕೂಡಲೇ ಪರೀಕ್ಷೆ ಇಲ್ಲದೇ ಅಂಕ ಬಂದದ್ದು ಸಮಾಧಾನ ಇಲ್ಲ ಎಂಬ ಅರ್ಥ ಮೇಲ್ನೋಟಕ್ಕೇ ಕಾಣುತ್ತದೆ,' ಎಂದು ಬರೆದಿದ್ದಾರೆ.

   ಚೀನಾದಲ್ಲಿ ಸುರಿಯುತ್ತಿರುವ ಮಳೆಗೆ ಜನ ಜೀವನ ಅಸ್ತವ್ಯಸ್ತ | Oneindia Kannada

   ಒಟ್ಟಿನಲ್ಲಿ ಪರೀಕ್ಷೆ ಬರೆಯದೇ 600ಕ್ಕೆ 600 ಅಂಕಗಳನ್ನು ಪಡೆದಿದ್ದರೂ ತನಗೆ ಸಮಾಧಾನವಿಲ್ಲ. ಪರೀಕ್ಷೆ ಬರೆದು ಇಷ್ಟು ಅಂಕ ತೆಗೆದುಕೊಂಡಿದ್ದರೆ ಸಮಾಧಾನವಾಗುತ್ತಿತ್ತು ಎನ್ನುವುದು ವಿದ್ಯಾರ್ಥಿನಿಯ ಮನದಾಳವಾಗಿದೆ.

   English summary
   When a private media interviewed the student, she said that even though she scored 600 out of 600 in 2nd PUC result, there was no consolation.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X