ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

NEP- ತಿಂಗಳ ಬಳಿಕ ರಾಜ್ಯದ ಶಾಲೆಗಳಲ್ಲಿ ಎನ್‌ಇಪಿ ಜಾರಿ

ಈ ಶೈಕ್ಷಣಿಕ ವರ್ಷದಿಂದಲೇ ಕೇಂದ್ರ ಸರಕಾರದ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರಾಜ್ಯದಲ್ಲಿ ಜಾರಿಗೆ ತರಲು ನಿರ್ಧರಿಸಲಾಗಿತ್ತಾದರೂ ಇದೀಗ ಸ್ವಲ್ಪ ವಿಳಂಬವಾಗುವ ಸಾಧ್ಯತೆ ಇದೆ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ನೀಡಿರುವ ಮಾಹಿತಿ ಪ್ರಕಾರ ಇನ್ನೊಂದು ತಿಂಗಳಲ್ಲಿ ಹೊಸ

|
Google Oneindia Kannada News

ಬೆಂಗಳೂರು, ಮೇ 17: ಈ ಶೈಕ್ಷಣಿಕ ವರ್ಷದಿಂದಲೇ ಕೇಂದ್ರ ಸರಕಾರದ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರಾಜ್ಯದಲ್ಲಿ ಜಾರಿಗೆ ತರಲು ನಿರ್ಧರಿಸಲಾಗಿತ್ತಾದರೂ ಇದೀಗ ಸ್ವಲ್ಪ ವಿಳಂಬವಾಗುವ ಸಾಧ್ಯತೆ ಇದೆ. ಈಗಾಗಲೇ ಶಾಲೆಗಳು ಆರಂಭವಾದರೂ ಎನ್‌ಇಪಿ-2020 ಜಾರಿಗೆ ಬಂದಿಲ್ಲ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ನೀಡಿರುವ ಮಾಹಿತಿ ಪ್ರಕಾರ ಇನ್ನೊಂದು ತಿಂಗಳಲ್ಲಿ ಹೊಸ ಶಿಕ್ಷಣ ವ್ಯವಸ್ಥೆ ಅನುಷ್ಠಾನಕ್ಕೆ ಬರುವ ನಿರೀಕ್ಷೆ ಇದೆ.

ಆದರೆ, ಏಕಾಏಕಿ ಒಟ್ಟಿಗೆ ಎನ್‌ಇಪಿ (National Education Policy) ಜಾರಿ ಮಾಡುವುದರ ಬದಲು ಹಂತಹಂತವಾಗಿ ಅನುಷ್ಠಾನಕ್ಕೆ ತರಲು ಸರಕಾರ ಯೋಜಿಸಿದೆ. ಮೊದಲ ಹಂತದಲ್ಲಿ ಅಂಗನವಾಡಿ ಶಿಕ್ಷಣ ಕೇಂದ್ರಗಳಲ್ಲಿ ಎನ್‌ಇಪಿ ಚಾಲನೆಗೆ ಬರಲಿದೆ.

ಶಾಲಾ ಪ್ರಾರಂಭೋತ್ಸವಕ್ಕೆ ಎತ್ತಿನಗಾಡಿಯಲ್ಲಿ ಶಾಲೆಗೆ ಬಂದ ಮಕ್ಕಳುಶಾಲಾ ಪ್ರಾರಂಭೋತ್ಸವಕ್ಕೆ ಎತ್ತಿನಗಾಡಿಯಲ್ಲಿ ಶಾಲೆಗೆ ಬಂದ ಮಕ್ಕಳು

"ಅಂಗನವಾಡಿಗಳ ಕಾರ್ಯನಿರ್ವಹಣೆಯಲ್ಲಿ ತತ್‌ಕ್ಷಣಕ್ಕೆ ನೀವು ಬದಲಾವಣೆ ಕಾಣುವುದಿಲ್ಲ. ಹಿಂದಿನಂತೆಯೇ ಅದರ ಕಾರ್ಯನಿರ್ವಹಣೆ ಇರುತ್ತದೆ. ಜೂನ್ 16ರ ನಂತರ ಬದಲಾಗಬಹುದು" ಎಂದು ಶಿಕ್ಷಣ ಇಲಾಖೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

school children

ಎನ್‌ಇಪಿ ಪಠ್ಯಕ್ರಮ ಅಳವಡಿಕೆ ಹೇಗೆ?
"ಎನ್‌ಇಟಿ ಪ್ರಕಾರವಾಗಿ ಶಾಲೆಪೂರ್ವ ವಿದ್ಯಾರ್ಥಿಗಳಿಗೆ ಹೊಸ ಪಠ್ಯಕ್ರಮ ಇರಲಿದೆ. ತರಬೇತಿ ಪಡೆದ ಅಂಗನವಾಡಿ ಕಾರ್ಯಕರ್ತರು ಈ ಪಠ್ಯಕ್ರಮ ಬೋಧಿಸುತ್ತಾರೆ. ಅಲ್ಲಿಯವರೆಗೂ ವಿದ್ಯಾರ್ಥಿಗಳು ಹಿಂದಿನಂತೆ ಚಟುವಟಿಕೆ ಆಧಾರಿತವಾಗಿ ಕಲಿಕೆ ಮಾಡಲಿದ್ದಾರೆ. ಅಂಗನವಾಡಿಗಳಲ್ಲಿ ಜಾರಿಗೆ ಬರಲಿರುವ ಎನ್‌ಇಪಿ ಆಧಾರಿತ ಪಠ್ಯಕ್ರಮದಲ್ಲಿ ಒಂದನೇ ತರಗತಿ ಸೇರ್ಪಡೆಗೆ ಅಗತ್ಯವಾಗುವ ನಿಟ್ಟಿನಲ್ಲಿ ಕಲಿಕೆಗಳು ಇರುತ್ತವೆ" ಎಂದು ಎನ್‌ಇಪಿ ಕಾರ್ಯಪಡೆಯ ಸದಸ್ಯರೊಬ್ಬರು ಮಾಹಿತಿ ನೀಡಿದ್ದಾರೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ರಚಿಸಿದ ಒಂದು ಉಪಸಮಿತಿ ಮತ್ತು ಪ್ರಾಥಮಿಕ ಪ್ರೌಢ ಶಿಕ್ಷಣ ಇಲಾಖೆ ಸೇರಿ ಹೊಸ ಪಠ್ಯಕ್ರಮವನ್ನು ರಚಿಸುವ ಕಾರ್ಯ ಮುಂದುವರಿದಿದೆ. ಅದರೆ, ಈಗ ಅಂಗನವಾಡಿ ಶಾಲೆಗಳಿಗೆ ಕೊಡಲಾಗುತ್ತಿರುವುದು ತಾತ್ಕಾಲಿಕ ಪಠ್ಯಕ್ರಮವಾಗಿರುತ್ತದೆ. ಎನ್‌ಸಿಇಆರ್‌ಟಿಯವರು ಅಕ್ಟೋಬರ್‌ನಲ್ಲಿ ಹೊಸ ಪಠ್ಯಕ್ರಮದ ರೂಪುರೇಖೆ ಪ್ರಕಟಿಸಲಿದ್ದಾರೆ. ಅದನ್ನು ಆಧರಿಸಿ ಪಠ್ಯಕ್ರಮವನ್ನು ಪರಿಷ್ಕರಿಸಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಕೋವಿಡ್‌ನಲ್ಲೂ ಮಕ್ಕಳು ಕಲಿತಿದ್ದಾರೆ- ಅದಕ್ಕೂ ಬೆಲೆ ಕೊಡಿ: ನಿರಂಜನಾರಾದ್ಯಕೋವಿಡ್‌ನಲ್ಲೂ ಮಕ್ಕಳು ಕಲಿತಿದ್ದಾರೆ- ಅದಕ್ಕೂ ಬೆಲೆ ಕೊಡಿ: ನಿರಂಜನಾರಾದ್ಯ

ಇತ್ತ, ಎನ್‌ಇಪಿ ಪಠ್ಯಕ್ರಮ ಜಾರಿಗೆ ತರಲಿರುವ ಅಂಗನವಾಡಿ ಕಾರ್ಯಕರ್ತರು ಈಗಲೂ ತರಬೇತಿಯಲ್ಲಿ ನಿರತರಾಗಿದ್ದಾರೆ. ಒಟ್ಟು 20 ಸಾವಿರ ಅಂಗನವಾಡಿ ಶಿಕ್ಷಕರ ಪೈಕಿ ಎಂಟು ಸಾವಿರ ಮಂದಿಗೆ ತರಬೇತಿ ಬಾಕಿ ಇದೆ.

school children

ರಾಜ್ಯದಲ್ಲಿ ಈ ಶೈಕ್ಷಣಿಕ ವರ್ಷಕ್ಕೆ ಮುನ್ನವೇ ಎನ್‌ಇಪಿ ಮಾದರಿಯಲ್ಲಿ ಪಠ್ಯಕ್ರಮ ಅಳವಡಿಸಲು ವಿಳಂಬವಾಗಲು ಇಲಾಖೆಗಳ ನಡುವೆ ಸಮನ್ವಯತೆ ಕೊರತೆ ಕಾರಣ ಎನ್ನಲಾಗಿದೆ. ಎನ್‌ಇಪಿ ಯೋಜನೆಯಲ್ಲಿ ಅಂಗನವಾಡಿ ಕೇಂದ್ರಗಳನ್ನು ಕೆಳ ಪ್ರಾಥಮಿಕ ಶಾಲೆಗಳ (ಒಂದು ಮತ್ತು ಎರಡನೇ ತರಗತಿ) ಜೊತೆ ವಿಲೀನ ಮಾಡುವ ಪ್ರಸ್ತಾವ ಇದೆ. ಹೀಗಾಗಿ, ಅಂಗನವಾಡಿ ಕಾರ್ಯಕರ್ತೆಯರು ಕೆಲಸ ಕಳೆದುಕೊಳ್ಳುವ ಭಯದಲ್ಲಿ ಎನ್‌ಇಪಿ ಅಳವಡಿಕೆಗೆ ಮನಸ್ಸು ಮಾಡಿರಲಿಲ್ಲ. ಅವರನ್ನು ಒಪ್ಪಿಸಿ ತರಬೇತಿ ನೀಡುವ ಕೆಲಸ ವಿಳಂಬವಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

(ಒನ್ಇಂಡಿಯಾ ಸುದ್ದಿ)

English summary
As Schools are opened in Karnataka, the implementation of new National Education Policy has been delayed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X