ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೀಟ್‌ ರ‍್ಯಾಂಕಿಂಗ್‌ ಆಧರಿಸಿ ಎಂಬಿಬಿಎಸ್‌ ಸೀಟು ಹಂಚಿಕೆಗೆ ಚಾಲನೆ

By Nayana
|
Google Oneindia Kannada News

ಬೆಂಗಳೂರು,ಜು.14: ನೀಟ್‌ ರ‍್ಯಾಂಕಿಂಗ್‌ ಮತ್ತು ವಿದ್ಯಾರ್ಥಿಗಳು ನೀಡಿರುವ ಕಾಲೇಜುಗಳ ಆಯ್ಕೆ ಮೇರೆಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಶುಕ್ರವಾರ ಮೊದಲ ಸುತ್ತಿನ ಸೀಟು ಹಂಚಿಕೆ ಮಾಡಿದೆ. ತಮಿಳು ಮಾಧ್ಯಮದಲ್ಲಿ ನೀಟ್‌ ಬರೆದವರಿಗೆ ಕೃಪಾಂಕ ನೀಡುವಂತೆ ಮದ್ರಾಸ್‌ ಹೈಕೋರ್ಟ್‌ ತೀರ್ಪು ನೀಡಿತ್ತು.

ಕೋರ್ಟ್ ಸೂಚನೆಯಂತೆ 24 ಸಾವಿರ ವಿದ್ಯಾರ್ಥಿಗಳಿಗೆ 196 ಕೃಪಾಂಕಗಳನ್ನು ಸಿಬಿಎಸ್ ಇ ನೀಡಬೇಕಿದೆ. 720 ಅಂಕಗಳಿಗೆ ಪರೀಕ್ಷೆ ಬರೆದಿದ್ದರು. ಎಂಬಿಬಿಎಸ್ ಮತ್ತು ಬಿಡಿಎಸ್ ಪ್ರವೇಶ ಪ್ರಕ್ರಿಯೆ ಈಗಾಗಲೇ ಆರಂಭಗೊಂಡಿದ್ದು, ವ್ಯವಸ್ಥೆಯಲ್ಲಿ ವ್ಯತ್ಯಯಗೊಳ್ಳಲಿದೆ.

ನೀಟ್ ಬರೆದ ತಮಿಳುನಾಡಿನ ವಿದ್ಯಾರ್ಥಿಗಳಿಗೆ ಶುಭ ಸುದ್ದಿ! ನೀಟ್ ಬರೆದ ತಮಿಳುನಾಡಿನ ವಿದ್ಯಾರ್ಥಿಗಳಿಗೆ ಶುಭ ಸುದ್ದಿ!

ಹೀಗಾಗಿ, ಎಂಬಿಬಿಎಸ್ ಪ್ರವೇಶ ಪ್ರಕ್ರಿಯೆ ಸ್ಥಗಿತಗೊಳಿಸುವಂತೆ ನ್ಯಾಯಾಲಯ ಆದೇಶಿಸಿದೆ. ಜತೆಗೆ ಹೊಸ ಅಭ್ಯರ್ಥಿಗಳ ಪಟ್ಟಿ ಸಿದ್ಧಪಡಿಸಲು ಸಿಬಿಎಸ್‌ಇಗೆ ಎರಡು ವಾರಗಳ ಕಾಲಾವಕಾಶ ನೀಡಲಾಗಿದೆ. ಒಟ್ಟು 196 ಅಂಕದ 49 ಪ್ರಶ್ನೆಗಳು ತಪ್ಪಾಗಿ ಭಾಷಾಂತರಗೊಂಡಿತ್ತು ಹಾಗೂ ನಿಖರವಾಗಿರಲಿಲ್ಲ. ಹೀಗಾಗಿ, ಸಿಬಿಎಸ್‌ಇಯನ್ನು ಹೊಣೆ ಮಾಡಲಾಗಿದೆ.

NEET ranking seats allocation resume

ಆದರೆ ರಾಜ್ಯದ ವಿದ್ಯಾರ್ಥಿಗಳಿಗೆ ಇದು ಅನ್ವಯವಾಗುವುದಿಲ್ಲ ಮತ್ತು ಈ ಸಂಬಂಧ ಯಾವುದೇ ಸಂವಹನ ಕೇಂದ್ರ ಸರ್ಕಾರದ ಹಂತದಲ್ಲಿ ನಡೆದಿಲ್ಲವಾದ್ದರಿಂದ ವೇಳಾಪಟ್ಟಿ ಪ್ರಕಾರ ಸೀಟು ಹಂಚಿಕೆ ಮಾಡಲಾಗಿದೆ.

ಸೀಟು ಹಂಚಿಕೆ ಫಲಿತಾಂಶವನ್ನು ವಿದ್ಯಾರ್ಥಿಗಳು ಕೆಇಎ ವೆಬ್‌ಸೈಟ್‌ http://kea.kar.nic.inನಲ್ಲಿ ನೋಡಬಹುದಾಗಿದೆ. ನಂತರ ವಿದ್ಯಾರ್ಥಿಗಳನ್ನು ಚಾಯ್ಸ್‌ಗಳಲ್ಲಿ ಒಂದನ್ನು ಆಕ್ಯೆ ಮಾಡಬೇಕುದೆ. ಕೆಇಎ ಮುಂದೆ ಇತರೆ ಕೋರ್ಸ್‌ಗಳ ಸೀಟು ಹಂಚಿಕೆ ಮಾಡುವುದರಿಂದ ಚಾಯ್ಸ್‌ ಆಯ್ಕೆ ಮಾಡುವಾಗ ಜಾಗರೂಕತೆವಹಿಸಬೇಕಿದೆ.

English summary
Karnataka Examination Authority has resumed seat allocation according to NEET ranking for MBBS course despite Madras high court order on bonus marks on Tamil medium students.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X