ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೀಟ್ ಪರೀಕ್ಷೆ: ಅಂಗಿ, ಶೂ, ಮೂಗುತಿ ಬಿಚ್ಚಿಸಿದ ಪರೀಕ್ಷಾ ವೀಕ್ಷಕರು

|
Google Oneindia Kannada News

ಬೆಂಗಳೂರು, ಮೇ 05: ವೈದ್ಯಕೀಯ ಮತ್ತು ದಂತವೈದ್ಯಕೀಯ ಕೋರ್ಸ್‌ಗಳಿಗೆ ಪ್ರವೇಶ ದೊರಕಿಸುವ ನೀಟ್ ಪರೀಕ್ಷೆ ಇಂದು ಎರಡು ಗಂಟೆಗೆ ಪ್ರಾರಂಭವಾಗಿದ್ದು, ಪರೀಕ್ಷಾರ್ಥಿಗಳಿಗೆ ಬಹು ಕಠಿಣ ನಿಯಮವನ್ನು ಪರೀಕ್ಷಾ ಕೊಠಡಿಯಲ್ಲಿ ಹೇರಲಾಗಿದೆ.

ಪರೀಕ್ಷೆ ಎದುರಿಸುವ ವಿದ್ಯಾರ್ಥಿಗಳ ಉಡುಪು, ಪಾದರಕ್ಷೆಗಳ ಬಗೆಗೆ ಸಹ ನಿಯಮವನ್ನು ಸೂಚಿಸಿರುವ ನೀಟ್ ಪರೀಕ್ಷೆ ನಡೆಸುವ ಎನ್‌ಟಿಎ ಇನ್ನೂ ಹಲವು ಮಾದರಿಯ ಷರತ್ತುಗಳನ್ನು ನೀಡಿದೆ.

ನೀಟ್ ಪರೀಕ್ಷೆ ಗೊಂದಲ : ಸಿದ್ದರಾಮಯ್ಯ ಟ್ವೀಟ್ನೀಟ್ ಪರೀಕ್ಷೆ ಗೊಂದಲ : ಸಿದ್ದರಾಮಯ್ಯ ಟ್ವೀಟ್

ಪರೀಕ್ಷಾರ್ಥಿಗಳು ಉದ್ದನೆಯ ಅಂಗಿಯ ತೋಳು ತೊಡುವುದು, ಶೂ ಧರಿಸುವುದನ್ನು ನಿಷೇಧಿಸಲಾಗಿದೆ. ಅಷ್ಟೆ ಅಲ್ಲದೆ ಪರೀಕ್ಷಾ ಕೊಠಡಿ ಪ್ರವೇಶಕ್ಕೆ ಮುನ್ನಾ ಸಹ ಭಾರಿ ತಪಾಸಣೆಗೆ ಪರೀಕ್ಷಾರ್ಥಿಗಳನ್ನು ಒಳಪಡಿಸಲಾಗುತ್ತಿದೆ.

NEET exams: shirt, shoe, stud of students removed by invigilators

ಯುವತಿಯರು ಧರಿಸಿದ್ದ ಮೂಗುತಿ, ಕಿವಿ ಓಲೆಗಳನ್ನು ಸಹ ಬಿಚ್ಚಿಸಿ ಪರೀಕ್ಷಾ ಕೊಠಡಿಗೆ ಬಿಡಲಾಗುತ್ತಿದೆ, ಉದ್ದನೆಯ ತೋಳಿನ ಅಂಗಿ ಧರಿಸಿ ಬಂದವರ ಶರ್ಟ್‌ ಕಳಚಿಸಲಾಗುತ್ತಿದೆ, ಅಥವಾ ಅಂಗಿಯ ತೋಳು ಕತ್ತರಿಸಲಾಗಿದೆ. ಶೂಗಳನ್ನು ಕಳಚಿಟ್ಟು ಹೋಗುವಂತೆ ಹೇಳಲಾಗುತ್ತಿದೆ.

ಕಳೆದ ಬಾರಿ ನೀಟ್ ಪರೀಕ್ಷೆ ಕೊಠಡಿಯ ಬಳಿ ನಡೆದ ಅವಮಾನಕಾರಿ ತಪಾಸಣೆಗಳು ದೇಶದಾದ್ಯಂತ ಸುದ್ದಿ ಆಗಿದ್ದವು. ಯುಕವತಿಯರ ಒಳಧಿರಿಸುಗಳನ್ನು ಸಹ ಕಳೆದ ವರ್ಷ ತಪಾಸಣೆ ಮಾಡಲಾಗಿತ್ತು, ಯುಕವರೂ ಇದೇ ಮಾದರಿ ತಪಾಸಣೆಗೆ ಒಳಗಾಗಿದ್ದರು. ಇದು ಭಾರಿ ವಿರೋಧಕ್ಕೆ ಕಾರಣವಾಗಿತ್ತು.

ವರ್ಷದಲ್ಲಿ ಎರಡು ಬಾರಿ ನೀಟ್, ಜೀ ಪರೀಕ್ಷೆ: ಜಾವಡೇಕರ್ವರ್ಷದಲ್ಲಿ ಎರಡು ಬಾರಿ ನೀಟ್, ಜೀ ಪರೀಕ್ಷೆ: ಜಾವಡೇಕರ್

ಆದರೆ ಎನ್‌ಟಿಎ (ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ) ತನ್ನ ನಿಯಮಗಳಲ್ಲಿ ಹೆಚ್ಚೇನೂ ಬದಲಾವಣೆ ಮಾಡಿಕೊಂಡಂತಿಲ್ಲ, ಈ ಬಾರಿಯೂ ಇದೇ ಮಾದರಿಯ ಕಠಿನ ನಿಯಮಗಳನ್ನು ಪರೀಕ್ಷಾರ್ಥಿಗಳ ಮೇಲೆ ಹೇರಿದೆ. ಪರೀಕ್ಷೆಯು ಇಂದು ಎರಡು ಗಂಟೆಗೆ ಪ್ರಾರಂಭವಾಗಿದ್ದು, ಸಂಜೆ ಐದು ಗಂಟೆಗೆ ಮುಗಿಯಲಿದೆ.

ಈ ಮಧ್ಯೆ ರಾಜ್ಯದ ಕೆಲವು ವಿದ್ಯಾರ್ಥಿಗಳು ನೀಟ್ ಪರೀಕ್ಷೆಯಿಂದ ವಂಚಿತರಗುವ ಸಾಧ್ಯತೆ ಇದ್ದು, ಭಾರಿ ಆತಂಕ ತಂದಿದೆ. ಹಂಪಿ ಎಕ್ಸ್‌ಪ್ರೆಸ್ ರೈಲಿನಲ್ಲಿ ನೂರಾರು ವಿದ್ಯಾರ್ಥಿಗಳು ಪರೀಕ್ಷೆಗಾಗಿ ಆಗಮಿಸುತ್ತಿದ್ದರು. ಆದರೆ, ರೈಲ್ವೆ ಇಲಾಖೆ ಮಾರ್ಗ ಬದಲಾವಣೆ ಮಾಡಿದ್ದು, ಅರಸೀಕೆರೆ ಮೂಲಕ ರೈಲು ಬೆಂಗಳೂರಿಗೆ ಆಗಮಿಸುತ್ತಿದೆ, ಇದರಿಂದ ನೂರಾರು ವಿದ್ಯಾರ್ಥಿಗಳು ಪರೀಕ್ಷೆ ತಪ್ಪಿಸಿಕೊಳ್ಳುವ ಆತಂಕದಲ್ಲಿದ್ದಾರೆ.

English summary
NEET exams going on today. Exam invigilators removed shirts, shoes and studs of students. NTA following strict rules to prevent malpractice in exams.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X