ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೀದರ್ ಅಭಿವೃದ್ಧಿಗೆ ಸರ್ಕಾರ ಬದ್ಧ: ಸಿದ್ದರಾಮಯ್ಯ ಭರವಸೆ

|
Google Oneindia Kannada News

Recommended Video

ನವಕರ್ನಾಟಕ ನಿರ್ಮಾಣಯಾತ್ರೆಯಲ್ಲಿ ಬೀದರ್ ಅಭಿವೃದ್ಧಿಗೆ ಸರ್ಕಾರ ಬದ್ಧ ಎಂದ ಸಿದ್ದರಾಮಯ್ಯ | Oneindia Kannada

ಬೀದರ್, ಡಿಸೆಂಬರ್ 14: ಕರ್ನಾಟಕ ವಿಧಾನಸಭೆ ಚುನಾವಣೆಗೆ ಇನ್ನು ಕೆಲವೇ ತಿಂಗಳು ಬಾಕಿ ಇರುವುದರಿಂದ ಆಡಳಿತಾರೂಢ ಕಾಂಗ್ರೆಸ್ ಈಗಾಗಲೇ ಪ್ರಚಾರ ಕಾರ್ಯ ಆರಂಭಿಸಿದೆ. 'ನವಕರ್ನಾಟಕ ನಿರ್ಮಾಣಯಾತ್ರೆ' ಎಂಬ ಹೆಸರಿನಲ್ಲಿ ಈಗಾಗಲೇ ಜಿಲ್ಲಾ ಪ್ರವಾಸ ಆರಂಬಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಕರ್ನಾಟಕ ರಾಜ್ಯದ ತುತ್ತತುದಿಯ ಜಿಲ್ಲೆ ಬೀದರ್ ನಲ್ಲಿ ನಿನ್ನೆ(ಡಿ.13) ವಿವಿಧ ಯೋಜನೆಗಳಿಗೆ ಚಾಲನೆ ನೀಡಿದಿದ್ದರು.

ಕೊಪ್ಪಳ ಪೌರಕಾರ್ಮಿಕರಿಗೆ 30x40 ಸೈಟ್ ಭಾಗ್ಯ ನೀಡಿದ ಸಿಎಂ! ಕೊಪ್ಪಳ ಪೌರಕಾರ್ಮಿಕರಿಗೆ 30x40 ಸೈಟ್ ಭಾಗ್ಯ ನೀಡಿದ ಸಿಎಂ!

ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಬೀದರ್ ಜಿಲ್ಲೆಯ ಅಭಿವೃದ್ಧಿಗಾಗಿ ಸರ್ಕಾರ ಕೈಗೊಂಡ ಯೋಜನೆಗಳು, ಕಾಮಗಾರಿಯ ಕುರಿತು ಮಾತನಾಡಿದರು. ಬೀದರ್ ಜಿಲ್ಲೆಯ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ ಎಂದು ಇದೇ ಸಂದರ್ಭದಲ್ಲಿ ಹೇಳಿದರು. ಅವರ ಭಾಷಣದ ಪ್ರಮುಖ ಅಂಶಗಳು ಇಲ್ಲಿವೆ.

Navakarnataka Niramana Yatra in Bidar: Siddaramaiah speaks about his government's ahievement

* ಬೀದರ್ ನಗರದಲ್ಲಿ 1100.09 ಲಕ್ಷ ರೂಪಾಯಿ ವೆಚ್ಚದಲ್ಲಿ 450 ಹಾಸಿಗೆಗಳ ಸುಸಜ್ಜಿತ ಜಿಲ್ಲಾಸ್ಪತ್ರೆ ಕಟ್ಟಡ ನಿರ್ಮಾಣ

* "ಕೃಷಿ ಭಾಗ್ಯ" ಯೋಜನೆಯಡಿ 2013-14ರಿಂದ ಸಾಲಿನಿಂದ ಇಲ್ಲಿಯವರೆಗೆ ಜಿಲ್ಲೆಯಾದ್ಯಂತ ಒಟ್ಟು 2311 ಕೃಷಿ ಹೊಂಡಗಳು ಹಾಗೂ 30 ಪಾಲಿಹೌಸ್ ಗಳ ನಿರ್ಮಾಣ ಪೂರ್ಣಗೊಂಡಿದೆ.

ಬಸವಕಲ್ಯಾಣದಲ್ಲಿ ಯಡಿಯೂರಪ್ಪ ವಿರುದ್ಧ ಸಿದ್ದು ಲೆಫ್ಟ್ ಅಂಡ್ ರೈಟ್ಬಸವಕಲ್ಯಾಣದಲ್ಲಿ ಯಡಿಯೂರಪ್ಪ ವಿರುದ್ಧ ಸಿದ್ದು ಲೆಫ್ಟ್ ಅಂಡ್ ರೈಟ್

* ಈ ಸಾಲಿನಲ್ಲಿ "ಕೃಷಿ ಭಾಗ್ಯ" ಯೋಜನಾ ವ್ಯಾಪ್ತಿಗೆ 5 ತಾಲೂಕುಗಳು ಸೇರಿದ್ದು, ಅದರ ಯೋಜನಾ ಮೊತ್ತ 2143.57 ಲಕ್ಷರೂ ಆಗಿದೆ. 2311 ಜನರು ಯೋಜನೆಯ ಲಾಭ ಪಡೆದ ಫಲಾನುಭವಿಗಳಾಗಿದ್ದಾರೆ.

* "ಸಾಲ ಮನ್ನಾ" ಯೋಜನೆಯಡಿ ರೂ. 50,000 ವರೆಗೆ ಒಟ್ಟು 529.24 ಕೋಟಿ ರೂ.ಸಾಲ ಮನ್ನಾ ಮಾಡಲಾಗಿದ್ದು ಒಟ್ಟು 154459 ಜನ ರೈತರು ಇದರ ಲಾಭ ಪಡೆದಿದ್ದು ರೂ. 50,000 ಒಳಗೆ 109425 ರೈತರು ಪೂರ್ಣ ಸಾಲ ಮನ್ನಾದ ಲಾಭ ಪಡೆದಿದ್ದಾರೆ (304.07 ಕೋಟಿರೂ.)

* ಬೀದರ್ ನಲ್ಲಿ ತಾಂತ್ರಿಕ ಶಿಕ್ಷಣವನ್ನು ಉತ್ತೇಜಿಸಲು ನೂತನ ಎಂಜಿನಿಯರಿಂಗ್ ಕಾಲೇಜನ್ನು ಆರಂಭಿಸಲಾಗಿದೆ.

* ಬೀದರ್ ಜಿಲ್ಲೆಗೆ ಹೊಸದಾಗಿ 12 ವಸತಿ ನಿಲಯಗಳು ಮಂಜೂರಾಗಿದ್ದು ಇದರಿಂದ ಬಡ ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ.

* ವಸತಿ ಯೋಜನೆಯಡಿ 2013-14- 2017-18ರವರೆಗೆ ರೈತರಿಗೆ ಒಟ್ಟು 1017 ಮನೆಗಳ ನಿರ್ಮಾಣ ಮಾಡಲಾಗಿದ್ದು 999 ಮನೆಗಳ ನಿರ್ಮಾಣ ಪ್ರಗತಿಯಲ್ಲಿದೆ.

Navakarnataka Niramana Yatra in Bidar: Siddaramaiah speaks about his government's ahievement

* ಪಶು ಭಾಗ್ಯ ಯೋಜನೆಯಡಿ 2016-17ನೇ ಸಾಲಿನಲ್ಲಿ 600 ಫಲಾನುಭವಿಗಳಿಗೆ ಗರಿಷ್ಠ 182.49 ಲಕ್ಷರೂ.ಅನುದಾನದಲ್ಲಿ ಹೈನು ಘಟಕ / ಕುರಿ-ಮೇಕೆ ಘಟಕಗಳ ಸ್ಥಾಪನೆ ಮಾಡಲಾಗಿದೆ.

* ಬೆಳೆ ಸಾಲ"ದಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಂದ ಶೂನ್ಯ ಬಡ್ಡಿ ದರದಲ್ಲಿ 165685 ಸದಸ್ಯರಿಗೆ ರೂ.740.07 ಕೋಟಿ ವೆಚ್ಚದಲ್ಲಿ ಅಲ್ಪಾವಧಿ ಬೆಳೆ ಸಾಲ ವಿತರಣೆ ಮಾಡಲಾಗಿದೆ.

* 2013-14 ರಿಂದ 2017-18 ರವರೆಗೆ ಒಟ್ಟು 186 ಶುದ್ಧ ಕುಡಿಯುವ ನೀರಿನ ಘಟಕಗಳಿಗೆ ಅನುಮೋದನೆ ದೊರೆತಿದ್ದು ಅದರಲ್ಲಿ 123 ಶುದ್ಧಕುಡಿಯುವ ನೀರಿನ ಘಟಕಗಳ ನಿರ್ಮಾಣ ಪೂರ್ಣಗೊಂಡಿದ್ದು ಉಳಿದವು ನಿರ್ಮಾಣ ಹಂತದಲ್ಲಿದೆ.

* ಬಸವ ಕಲ್ಯಾಣ ತಾಲ್ಲೂಕಿನ ಕೋಹಿನೂರ ಮತ್ತು ಇನ್ನಿತರೆ 18 ಗ್ರಾಮಗಳಲ್ಲಿ ಎಸ್.ಎಲ್.ಎಸ್.ಎಸ್.ಸಿ. ಯಿಂದ ರೂ.4900.00 ಲಕ್ಷ ವೆಚ್ಚದಲ್ಲಿ ಅನುಮೋದಿತಗೊಂಡಿರುವ ಬಹು ಗ್ರಾಮ ಕುಡಿಯುವ ನೀರು ಸರಬರಾಜು ಕಾಮಗಾರಿಯು ಪ್ರಗತಿಯಲ್ಲಿದೆ.

* ಭಾಲ್ಕಿ ತಾಲ್ಲೂಕಿನ ನಿಟ್ಟೂರ(ಬಿ) ಮತ್ತುಇತರೆ 4 ಗ್ರಾಮಗಳಲ್ಲಿ ಎಸ್.ಎಲ್.ಎಸ್.ಎಸ್.ಸಿ. ಯಿಂದ ಅನುಮೋದನೆಯಾದ ರೂ.600.00 ಲಕ್ಷ ವೆಚ್ಚದ ಬಹು ಗ್ರಾಮಕುಡಿಯುವ ನೀರು ಸರಬರಾಜು ಕಾಮಗಾರಿಯು ಪ್ರಗತಿಯಲ್ಲಿದೆ.

* ಅಲ್ಪಸಂಖ್ಯಾತರ ಶೈಕ್ಷಣಿಕ ಉತ್ತೇಜನಕ್ಕಾಗಿ ವಿದ್ಯಾಸಿರಿ ಯೋಜನೆಯಡಿ 2880 ವಿದ್ಯಾರ್ಥಿಗಳಿಗೆ 245.08 ಲಕ್ಷರೂ. ವಿದ್ಯಾರ್ಥಿವೇತನ ವಿತರಣೆ ಮಾಡಲಾಗಿದೆ.

* ಶಾದಿ ಭಾಗ್ಯ (ಬಿದಾಯಿ) ಯೋಜನೆಯಡಿ ವಿವಾಹಿತರಾದ 2209 ಮಹಿಳೆಯರಿಗೆ 1105.00 ಲಕ್ಷರೂ. ಸಹಾಯಧನವನ್ನು ನೀಡಲಾಗಿದೆ.

* 2013-14ರಿಂದ 2016-17ರವರೆಗೆ "ನಮ್ಮ ಗ್ರಾಮ ನಮ್ಮ ರಸ್ತೆ" ಯೋಜನೆಯ ಹಂತ-2 ಮತ್ತು 3 ರ ಅಡಿಯಲ್ಲಿ 131.12ಕೋಟಿ ರೂ.ವೆಚ್ಚದಲ್ಲಿ ಬೀದರ್‍ನ 6 ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 294.16 ಕಿ.ಮೀ. ರಸ್ತೆಗೆ ಸುಸಜ್ಜಿತ ಡಾಂಬರೀಕರಣ ಕಾಮಗಾರಿ ಪೂರ್ಣಗೊಂಡಿದ್ದು ಕೆಲವು ಇನ್ನೂ ಪ್ರಗತಿಯಲ್ಲಿವೆ.

* ಹೈದ್ರಾಬಾದ್ ಕರ್ನಾಟಕ ಪ್ರಾದೇಶಿಕ ಅಭಿವೃದ್ಧಿ ಮಂಡಳಿಯಡಿ 2013-14 ರಿಂದ 2016-17ರವರೆಗೆ ರೂ.30.05 ಕೋಟಿ ವೆಚ್ಚದ 84.26 ಕಿ.ಮೀ. ರಸ್ತೆ ಅಭಿವೃದ್ಧಿ ಕೆಲಸಕ್ಕೆ ಅನುಮೋದನೆ ನೀಡಲಾಗಿದೆ.

English summary
As a part of Karnataka Congress' Navakarnataka Nirmana Yatra, chief minister of Karnataka Siddaramaiah has travelled to Bidar on Dec 13th. Whle addressing people here, he quoted his government's various projects for development of Bidar district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X