ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಒಂದೇ ಅಲ್ಲ: ಯಾವ ಕಾಯಿಲೆಗೆ ಯಾವ ಮನೆ ಔಷಧಿ ಉತ್ತಮ? ಇಲ್ಲಿದೆ ಪಟ್ಟಿ

|
Google Oneindia Kannada News

ಕೊರೊನಾ ಹಾವಳಿ ಜಾಸ್ತಿಯಾದ ನಂತರ, ಆಯುರ್ವೇದ, ಮನೆ ಔಷದಿ, ಗಿಡಮೂಲಿಕೆಗಳು, ಕಷಾಯ ಮುಂತಾದವುಗಳ ಬಳಕೆ ಜಾಸ್ತಿಯಾಗಲಾರಂಭಿಸಿತು. ಅದರಲ್ಲೂ, ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬೇಕು ಎನ್ನುವ ಮಾತು ವೈದ್ಯಲೋಕದಿಂದ ಬಂದ ನಂತರ ಇದರ ಪ್ರಭಾವ ತುಸು ಜಾಸ್ತಿಯೇ.

ಹಲವು ಆಯುರ್ವೇದ ಸಂಸ್ಥೆಗಳ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಲಸಿಕೆಗಳನ್ನು ಸಾರ್ವಜನಿಕರು ಬಳಸಲು ಸರಕಾರವು ಅನುಮತಿಯನ್ನು ನೀಡಿತ್ತು. ಈಗ, ಯಾವ ಕಾಯಿಲೆಗೆ ಯಾವ ವಸ್ತುಗಳನ್ನು ಹೆಚ್ಚಾಗಿ ಬಳಸಿದರೆ ಉತ್ತಮ ಎನ್ನುವ ಪಟ್ಟಿಯೊಂದು ಸಾಮಾಜಿಕ ತಾಣದಲ್ಲಿ ವೈರಲ್ ಆಗುತ್ತಿದೆ.

ಡೆಂಗ್ಯೂ ಜ್ವರ ಬಂದು ಹೋಗಿದ್ದರೆ ಕೊರೊನಾ ಬರೋದು ಡೌಟು: ಅಧ್ಯಯನ ಡೆಂಗ್ಯೂ ಜ್ವರ ಬಂದು ಹೋಗಿದ್ದರೆ ಕೊರೊನಾ ಬರೋದು ಡೌಟು: ಅಧ್ಯಯನ

'ನಿತ್ಯ ಬಳಕೆಯ ಗಿಡಮೂಲಿಕೆಗಳು ಮತ್ತು ಮನೆ ಮದ್ದು' ಎನ್ನುವ ಪುಸ್ತಕದಲ್ಲಿ ಈ ಎಲ್ಲಾ ವಿಚಾರವನ್ನು ಸವಿಸ್ತಾರವಾಗಿ ಬರೆಯಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲೂಕಿನ ಶಾಂಭವಿ ಮಯ್ಯ ಎನ್ನುವವರು ಬರೆದಿರುವ ಪುಸ್ತಕ ಇದಾಗಿದೆ.

ಸುಮಾರು ಇಪ್ಪತ್ತು ವರ್ಷದ ಹಿಂದೆ ಪ್ರಕಾಶನಗೊಂಡಿರುವ ಪುಸ್ತಕ ಇದಾಗಿದೆ. ಯಾವ ವಸ್ತು/ಗಿಡಮೂಲಿಕೆಗಳನ್ನು ದಿನ ನಿತ್ಯದ ಆಹಾರವನ್ನಾಗಿ ಬಳಸಿದರೆ ಉತ್ತಮ ಎಂದು ಪುಸ್ತಕದಲ್ಲಿ ಬರೆಯಲಾಗಿದೆ. ಯಾವ ಕಾಯಿಲೆಗೆ ಯಾವ ಮನೆ ಔಷಧಿ ಉತ್ತಮ? ಆ ಪಟ್ಟಿ ಇಲ್ಲಿದೆ:

ಕೊವಿಡ್ 19: ಭಾರತದಂತೆ ರಷ್ಯಾದಲ್ಲೂ ಕೂಡಾ 7 ಲಕ್ಷ ಪ್ಲಸ್ ಕೇಸ್ ಕೊವಿಡ್ 19: ಭಾರತದಂತೆ ರಷ್ಯಾದಲ್ಲೂ ಕೂಡಾ 7 ಲಕ್ಷ ಪ್ಲಸ್ ಕೇಸ್

 ಅಸ್ತಮ ಕಾಯಿಲೆ: ತುಳಸಿ, ಬಿಲ್ವ, ಬೆಳ್ಳುಳ್ಳಿ, ಗರಿಕೆ, ಶುಂಠಿ

ಅಸ್ತಮ ಕಾಯಿಲೆ: ತುಳಸಿ, ಬಿಲ್ವ, ಬೆಳ್ಳುಳ್ಳಿ, ಗರಿಕೆ, ಶುಂಠಿ

ಸಕ್ಕರೆ ಕಾಯಿಲೆ: ಬಿಲ್ವ, ತುಳಸಿ, ಬೇವು, ಕರಿಬೇವು, ಹಾಗಲಕಾಯಿ, ಅಮೃತಬಳ್ಳಿ, ಗರಿಕೆ
ಗ್ಯಾಸ್ಟಿಕ್: ಬೂದುಗುಂಬಳಕಾಯಿ, ಶುಂಠಿ, ತುಳಸಿ, ಗರಿಕೆ, ಸೌತೆಕಾಯಿ, ಮೂಲಂಗಿ
ಅಜೀರ್ಣ: ಶುಂಠಿ, ಲಿಂಬೆ, ಕರಿಬೇವು, ಮೂಲಂಗಿ, ಸೌತೆಕಾಯಿ, ಈರುಳ್ಳಿ

 ಬೆಳ್ಳುಳ್ಳಿ, ಗರಿಕೆ, ಜೇನುತುಪ್ಪ

ಬೆಳ್ಳುಳ್ಳಿ, ಗರಿಕೆ, ಜೇನುತುಪ್ಪ

ಬಿ.ಪಿ: ಬೆಳ್ಳುಳ್ಳಿ, ಗರಿಕೆ, ಜೇನುತುಪ್ಪ, ಶುಂಠಿ, ಈರುಳ್ಳಿ, ಸೌತೆಕಾಯಿ, ಬ್ರಾಹ್ಮಿ
ಹೃದಯ ತೊಂದರೆ: ಬಿಲ್ವ, ಗರಿಕೆ, ಅಮೃತಬಳ್ಳಿ, ಸೌತೆಕಾಯಿ, ಲಿಂಬೆ
ಮೂಲವ್ಯಾಧಿ, ಮಲಬದ್ದತೆ: ಬೂದುಗುಂಬಳಕಾಯಿ, ಶುಂಠಿ, ಸೌತೆಕಾಯಿ, ಗರಿಕೆ, ಬಿಲ್ವ, ಅಮೃತಬಳ್ಳಿ

 ತುಳಸಿ, ಶುಂಠಿ, ಸೌತೆಕಾಯಿ, ಜೇನುತುಪ್ಪ

ತುಳಸಿ, ಶುಂಠಿ, ಸೌತೆಕಾಯಿ, ಜೇನುತುಪ್ಪ

ಬೊಜ್ಜು: ನಿಂಬೆ, ಗರಿಕೆ, ಕರಿಬೇವು, ತುಳಸಿ, ಶುಂಠಿ, ಸೌತೆಕಾಯಿ, ಜೇನುತುಪ್ಪ
ಚರ್ಮರೋಗ: ಬೇವು, ಬಿಲ್ವ, ಗರಿಕೆ
ರಕ್ತಹೀನತೆ: ಬೀಟ್ರೂಟ್, ಗರಿಕೆ

Recommended Video

Karnataka ಬಂದ್ ಯಾವಾಗ ಅನ್ನೋದು ಕೊನೆಗೂ ನಿಗದಿ | Oneindia Kannada
 ಕಣ್ಣಿನ ತೊಂದರೆ

ಕಣ್ಣಿನ ತೊಂದರೆ

ಕಣ್ಣಿನ ತೊಂದರೆ: ಕ್ಯಾರೆಟ್, ಗರಿಕೆ, ಹೊನೆಗೊನೆ ಸೊಪ್ಪು
ನೆಗಡಿ: ತುಳಸಿ, ಗರಿಕೆ, ಜೇನುತುಪ್ಪ, ನಿಂಬೆಹಣ್ಣು
ನರಗಳ ದೌರ್ಬಲ್ಯ: ಗರಿಕೆ, ಬೀಟ್ರೂಟ್, ಬ್ರಾಹ್ಮಿ
ಮಕ್ಕಳ ಬುದ್ದಿಶಕ್ತಿಗೆ: ಬ್ರಾಹ್ಮಿ, ಬೀಟ್ರೂಟ್, ಕ್ಯಾರೆಟ್

English summary
Here are the list of natural home remedies for common ailments like asthma, diabetes, acidity, gastric,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X