ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಂದು ಕರ್ನಾಟಕದಲ್ಲೂ ವೈದ್ಯರ ಮುಷ್ಕರ, ಯಾವ ಸೇವೆ ಲಭ್ಯ, ಯಾವುದು ಇಲ್ಲ?

|
Google Oneindia Kannada News

ಬೆಂಗಳೂರು, ಜೂನ್ 17: ಕಾರ್ಯನಿರತ ವೈದ್ಯರ ಮೇಲಿನ ಹಲ್ಲೆ ಖಂಡಿಸಿ ಭಾರತೀಯ ವೈದ್ಯ ಸಂಘ ಜೂನ್ 17ರಂದು ದೇಶಾದ್ಯಂತ ಮುಷ್ಕರ ಹಮ್ಮಿಕೊಂಡಿದೆ. ಹೊರರೋಗಿ ಸೇವೆ ಸ್ಥಗಿತಗೊಳಿಸಿ ಮುಷ್ಕರ ನಡೆಸುವಂತೆ ನೀಡಿರುವ ಕರೆಯ ಮೇರೆಗೆ ಸೋಮವಾರ ಕರ್ನಾಟಕಾದ್ಯಂತ ಖಾಸಗಿ ಆಸ್ಪತ್ರೆ, ಕ್ಲಿನಿಕ್ ಹಾಗೂ ಲ್ಯಾಬ್‌ಗಳಲ್ಲಿ ತುರ್ತು ಸೇವೆ ಹೊರತುಪಡಿಸಿ, ಹೊರರೋಗಿ ವೈದ್ಯ ಸೇವೆ ಸ್ಥಗಿತಗೊಳ್ಳಲಿದೆ.

ಸರ್ಕಾರಿ ಆಸ್ಪತ್ರೆಗಳಲ್ಲಿ ಸಾಂಕೇತಿಕ ಪ್ರತಿಭಟನೆ ನಡೆಯಲಿದ್ದು, ಒಂದು ವೇಳೆ ಸರ್ಕಾರಿ ಆಸ್ಪತ್ರೆಯಲ್ಲೂ ಹೊರ ರೋಗಿಗಳ ಸೇವೆ ಬಂದ್ ಮಾಡಿದರೆ ಸೇವೆಯಲ್ಲಿ ತೀವ್ರ ವ್ಯತ್ಯಯವಾಗುವ ಸಾಧ್ಯತೆ ಇದೆ.

ಭಾರತೀಯ ವೈದ್ಯಕೀಯ ಒಕ್ಕೂಟದಿಂದ ಜೂನ್ 17ಕ್ಕೆ ದೇಶಾದ್ಯಂತ ಧರಣಿಭಾರತೀಯ ವೈದ್ಯಕೀಯ ಒಕ್ಕೂಟದಿಂದ ಜೂನ್ 17ಕ್ಕೆ ದೇಶಾದ್ಯಂತ ಧರಣಿ

ಯಾವ ಸೇವೆ ಲಭ್ಯ: ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಎಲ್ಲಾ ಸೇವೆಗಳೂ ಲಭ್ಯ, ಹೊರರೋಗಿ ಸೇವೆ, ಔಷಧಾಲಯಗಳು ಎಂದಿನಂತೆ ತೆರೆದಿರುತ್ತದೆ. ಹೆರಿಗೆ ಹಾಗೂ ಡಯಾಲಿಸಿಸ್ ಸೇವೆಗೆ ತೊಂದರೆ ಇಲ್ಲ, ಸರ್ಕಾಋಇ ವೈದ್ಯರಿಂದ ಕಪ್ಪಿ ಪಟ್ಟಿ ಧರಿಸಿ ಸಾಂಕೇತಿಕ ಪ್ರತಿಭಟನೆ.

National wide doctors protest opds shut in private hospital

ಯಾವ ಸೇವೆ ಇಲ್ಲ: ಖಾಸಗಿ ಆಸ್ಪತ್ರೆಗಳಲ್ಲಿ ರೋಗಿಗಳ ಸೇವೆ ಸ್ಥಗಿತ, ಕ್ಲಿನಿಕ್ ಹಾಗೂ ಪ್ರಯೋಗಾಲಯಗಳು ಸಂಪೂರ್ಣ ಬಂದ್, ಹೆರಿಗೆ , ಅಪಘಾತದಂತಹ ತುರ್ತು ಪ್ರಕರಣಗಳಲ್ಲಿ ಚಿಕಿತ್ಸೆ ಲಭ್ಯವಿರುತ್ತದೆ.

ವೈದ್ಯರ ಮೇಲಿನ ಹಲ್ಲೆ ಖಂಡಿಸಿ ಕಳೆದ ಐದು ದಿನಗಳ ಹಿಂದೆ ಪಶ್ಚಿಮ ಬಂಘಾಳದಲ್ಲಿ ಆರಂಭವಾಗುವ ವೈದ್ಯರ ಮುಷ್ಕರ ದೇಶಾದ್ಯಂತ ವ್ಯಾಪಿಸಿದ್ದು, ವೈದ್ಯರು ಹಾಗೂ ವೈದ್ಯ ಸಿಬ್ಬಂದಿಗೆ ಸೂಕ್ತ ಭದ್ರತೆ ಒದಗಿಸುವಂತೆ ಆಗ್ರಹಿಸಿ ಮುಷ್ಕರ ಹಮ್ಮಿಕೊಳ್ಳಲಾಗಿದೆ.

English summary
Indian Medical Association call for a 24-hour nationwide protest in support with doctors agitating against the alleged attack on their colleagues.OPDs shut in private hospital in Karnataka also.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X