ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನ್ನಡದಲ್ಲಿಯೂ ಪ್ರಸಾರವಾಗಲಿದೆ ನ್ಯಾಷನಲ್ ಜಿಯೊಗ್ರಾಫಿಕ್ ವಾಹಿನಿ

|
Google Oneindia Kannada News

ಬೆಂಗಳೂರು, ಜನವರಿ 29: ವನ್ಯಜೀವಿಗಳು, ವಿಜ್ಞಾನ, ತಂತ್ರಜ್ಞಾನ, ಬಾಹ್ಯಾಕಾಶ ಸೇರಿದಂತೆ ಅನೇಕ ಕ್ಷೇತ್ರಗಳ ಕುರಿತು ಮಾಹಿತಿ-ಮನರಂಜನೆ ನೀಡುವ ಕಾರ್ಯಕ್ರಮಗಳನ್ನು ಬಿತ್ತರಿಸುವ ನ್ಯಾಷನಲ್ ಜಿಯೊಗ್ರಾಫಿಕ್ ವಾಹಿನಿಯು ಇನ್ನು ಮುಂದೆ ಕನ್ನಡದಲ್ಲಿಯೂ ಪ್ರಸಾರವಾಗಲಿದೆ.

ಭಾರತದಲ್ಲಿ ಈಗಾಗಲೇ ಇಂಗ್ಲಿಷ್, ಹಿಂದಿ, ತಮಿಳು, ತೆಲುಗು ಮತ್ತು ಬಂಗಾಳಿ ಭಾಷೆಗಳಲ್ಲಿ ನ್ಯಾಷನಲ್ ಜಿಯೊಗ್ರಾಫಿಕ್ ವಾಹಿನಿ ಪ್ರಸಾರವಾಗುತ್ತಿದ್ದು, ಅದಕ್ಕೆ ಕನ್ನಡ ಹೊಸ ಸೇರ್ಪಡೆಯಾಗಿದೆ. ಈ ಟೆಲಿವಿಷನ್ ಚಾನೆಲ್ ಪ್ರಸ್ತುತ 172 ದೇಶಗಳಲ್ಲಿ ಒಟ್ಟು 43 ಭಾಷೆಗಳಲ್ಲಿ ಪ್ರಸಾರವಾಗುತ್ತಿದೆ. ಜನವರಿ 31ರಿಂದ ಇದು ಕನ್ನಡದಲ್ಲಿಯೂ ಲಭ್ಯ.

'ಪ್ರೈಮಲ್ ಸರ್ವೈವರ್, ಬಿಯರ್ ಗ್ರಿಲ್ಸ್ ಮಿಷನ್ ಸರ್ವೈವ್, ವೇಗಾಸ್ ರಾಟ್ ರಾಡ್ಸ್, ಗ್ರೇಟ್ ಹ್ಯೂಮನ್ ರೇಸ್‌ನಂತಹ ಜನಪ್ರಿಯ ಕಾರ್ಯಕ್ರಮ ಸರಣಿಗಳನ್ನು ಕನ್ನಡದ ವೀಕ್ಷಕರು ಇನ್ನು ತಮ್ಮ ಭಾಷೆಯಲ್ಲಿಯೇ ನೋಡಬಹುದು' ಎಂದು ವಾಹಿನಿ ತಿಳಿಸಿದೆ.

National Geographic India Will be Available For Kannada Speaking Viewers From Jan 31

'ಇತ್ತೀಚಿನ ವರ್ಷಗಳಲ್ಲಿ ಪ್ರಾದೇಶಿಕ ಮಾರುಕಟ್ಟೆಗಳಲ್ಲಿ ನಮ್ಮ ವಾಹಿನಿಯ ಕಾರ್ಯಕ್ರಮಗಳಿಗೆ ಆಸಕ್ತಿ ಹೆಚ್ಚಾಗುತ್ತಿದೆ. ಕರ್ನಾಟಕದಲ್ಲಿ ಕೂಡ ಇದು ಕಂಡುಬಂದಿದೆ. ಹೀಗಾಗಿ ಕನ್ನಡದಲ್ಲಿಯೂ ನಮ್ಮ ಕಾರ್ಯಕ್ರಮಗಳನ್ನು ಪ್ರಸಾರ ಮಾಡಲು ಉತ್ತಮ ಅವಕಾಶ ಎನಿಸಿತು' ಎಂದು ಸ್ಟಾರ್ ಆಂಡ್ ಡಿಸ್ನಿ ಇಂಡಿಯಾದ ಮಾಹಿತಿ-ಮನರಂಜನೆ ವಿಭಾಗದ ಮುಖ್ಯಸ್ಥ ಕೆವಿನ್ ವಾಜ್ ಹೇಳಿದ್ದಾರೆ.

'ಹಿಂದಿಯೇತರ ಪ್ರದೇಶಗಳ ಜನರು ನಮ್ಮ ಕಾರ್ಯಕ್ರಮಗಳನ್ನು ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗಿ ನೋಡುತ್ತಿದ್ದಾರೆ. ತಮ್ಮ ಮಾತೃಭಾಷೆಯಲ್ಲಿಯೇ ಕಾರ್ಯಕ್ರಮಗಳನ್ನು ನೋಡಲು ಜನರು ಬಯಸುತ್ತಾರೆ ಎಂಬುದನ್ನು ಅರ್ಥಮಾಡಿಕೊಂಡಿದ್ದೇವೆ. ಕರ್ನಾಟಕದಲ್ಲಿ ನಮ್ಮ ಕಾರ್ಯಕ್ರಮಗಳಿಗೆ ಹೆಚ್ಚಿನ ವೀಕ್ಷಕರು ಸಿಗುತ್ತಿದ್ದಾರೆ. ಇದು ಕನ್ನಡದಲ್ಲಿಯೂ ವಾಹಿನಿ ಆರಂಭಿಸಲು ಪ್ರೇರಣೆ ನೀಡಿದೆ' ಎಂದು ತಿಳಿಸಿದ್ದಾರೆ.

'ನಾವು ನಮ್ಮ ಇಂಗ್ಲಿಷ್ ಕಾರ್ಯಕ್ರಮಗಳನ್ನು ಪ್ರಾದೇಶಿಕ ಭಾಷೆಗಳಿಗೆ ಯಾಂತ್ರಿಕವಾಗಿ ಡಬ್ ಮಾಡುವುದಿಲ್ಲ. ಸ್ಥಳೀಯ ಭಾಷೆಗಳಲ್ಲಿನ ನಾಣ್ನುಡಿಗಳನ್ನು ಬಳಸಿಕೊಳ್ಳುವ ಮೂಲಕ ಜನರಿಗೆ ಮತ್ತಷ್ಟು ಹತ್ತಿರವಾಗುವಂತೆ ಮಾಡುತ್ತೇವೆ' ಎಂದಿದ್ದಾರೆ.

English summary
National Geographic India channel will be available for the Kannada speaking viewers from Jan 31.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X