ಗದಗದಲ್ಲಿ ಅತ್ಯಾಧುನಿಕ ನಾಸಿಕ್‌ ಮಾದರಿ ಈರುಳ್ಳಿ ಗೋದಾಮು ನಿರ್ಮಾಣ

Subscribe to Oneindia Kannada

ಗದಗ, ಸೆಪ್ಟೆಂಬರ್ 11: ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಆವರಣದಲ್ಲಿ ರಾಜ್ಯದ ಮೊದಲ ಅತ್ಯಾಧುನಿಕ ಈರುಳ್ಳಿ ಗೋದಾಮು ತಲೆ ಎತ್ತಲಿದೆ.

ಅಂದುಕೊಂಡಂತೆ ನಡೆದರೆ 2018ಕ್ಕೆ ಗದಗದಲ್ಲಿ ನಾಸಿಕ್ ಮಾದರಿಯ ಈರುಳ್ಳಿ ಗೋದಾಮು ಗದಗದಲ್ಲಿ ತಲೆ ಎತ್ತಲಿದೆ.

Nashik model advanced onion warehouse in Gadag

2016-17ನೇ ಸಾಲಿನ ಬಜೆಟ್‌ನಲ್ಲಿ ಈರುಳ್ಳಿ ಗೋದಾಮು ನಿರ್ಮಾಣಕ್ಕೆ 5 ಕೋಟಿ ರೂ. ಎತ್ತಿಡಲಾಗಿತ್ತು. ಈ ಹಣದಲ್ಲಿ 11 ಸಾವಿರ ಚದರ ಅಡಿ ವಿಸ್ತೀರ್ಣದ ಬೃಹತ್ ಗೋದಾಮು ನಿರ್ಮಾಣವಾಗಲಿದೆ. ಈ ಗೋದಾಮಿನಲ್ಲಿ ಒಂದೂವರೆ ಸಾವಿರ ಟನ್‌ ಈರುಳ್ಳಿ ಸಂಗ್ರಹಿಸಬಹುದಾಗಿದೆ. ಈ ಅತ್ಯಾಧುನಿಕ ಗೋದಾಮು ನಿರ್ಮಾಣಕ್ಕೆ ಈಗಾಗಲೆ ಟೆಂಡರ್ ಕೂಡಾ ಕರೆಯಲಾಗಿದೆ.

ರೈತರಿಗೆ ಅನುಕೂಲ

ನಾಸಿಕ್ ಗೋದಾಮನ್ನು ಅಧ್ಯಯನ ನಡೆಸಿ ಇಲ್ಲಿಯೂ ಅದೇ ರೀತಿ ಗೋದಾಮು ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ. ಈ ಗೋದಾಮು ನಿರ್ಮಾಣವಾದರೆ ರೈತರಿಗೆ ಭಾರೀ ಅನುಕೂಲವಾಗಲಿದೆ.

ಸಾಮಾನ್ಯವಾಗಿ ಈರುಳ್ಳಿಗಳನ್ನು ಅಟ್ಟಿ ಇಟ್ಟರೆ ಮೊಳಕೆ ಬಂದು ಕೊಳೆತು ಹೋಗುತ್ತದೆ. ಇದಕ್ಕೆ ಪರಿಹಾರವಾಗಿ ಈ ಗೋದಾಮಿನಲ್ಲಿ ಅಟ್ಟಗಳನ್ನು ನಿರ್ಮಿಸಲಾಗುತ್ತದೆ. ಈ ಅಟ್ಟಗಳಲ್ಲಿ ಚೌಕಾಕಾರದ ಕಬ್ಬಿಣದ ಗ್ಯಾಲರಿ ಇರುತ್ತದೆ.

ಪ್ರತಿ ಗ್ಯಾಲರಿಯನ್ನು ಒಬ್ಬೊಬ್ಬರು ರೈತರಿಗೆ ನೀಡಲಾಗುತ್ತದೆ. ಅವುಗಳ ಕೀಲಿ ಕೈ ಕೂಡ ರೈತರ ಬಳಿಯೇ ಇರುತ್ತದೆ. ಈ ಗೋದಾಮಿನೊಳಗೆ ಸಾಕಷ್ಟು ಗಾಳಿ, ಬೆಳಕಿಗೆ ವ್ಯವಸ್ಥೆ ಇರುತ್ತದೆ. ರೈತರು ಉಚಿತವಾಗಿ ಇಲ್ಲಿ 15 ದಿನಗಳವರೆಗೆ ಈರುಳ್ಳಿಯನ್ನು ಇಡಲು ಅವಕಾಶವಿದೆ.

ಗೋದಾಮಿನಿಂದ ಖರೀದಿದಾರರಿಗೆ ಅನುಕೂಲವಾಗಿದ್ದು ನೇರವಾಗಿ ಗೋದಾಮಿಗೆ ಬಂದು ಖರೀದಿ ನಡೆಸಬಹುದಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Karnataka state's first sophisticated onion warehouse is setting up in Gadag's Agriculture Product Market Committee (APMC) premises. As per the expectation, the Nashik model onion warehouse will be start operation at Gadag in 2018.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ