ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

NAS Survey: ಕನ್ನಡ ಮಾಧ್ಯಮ ಕಲಿಕೆ ಪ್ರಮಾಣ ಕುಂಠಿತಕ್ಕೆ ನೆಟ್ಟಿಗರು ಕಳವಳ

|
Google Oneindia Kannada News

ಬೆಂಗಳೂರು ಜೂನ್ 25: ಕನ್ನಡ ಮಾಧ್ಯಮದಲ್ಲಿ ಕಲಿಯುವವರ ಪ್ರಮಾಣ ಕಡಿಮೆಯಾಗುತ್ತಿದ್ದು ನೆಟ್ಟಿಗರು ಆತಂಕ ವ್ಯಕ್ತಪಡಿಸಿದ್ದಾರೆ. ರಾಷ್ಟ್ರೀಯ ಸಾಧನ ಸಮೀಕ್ಷೆ ವರದಿಯ ಪ್ರಕಾರ ವರ್ಷದಿಂದ ವರ್ಷಕ್ಕೆ ಕನ್ನಡ ಮಾಧ್ಯಮದಲ್ಲಿ ಕಲಿಯುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಈ ಬಗ್ಗೆ ನೆಟ್ಟಿಗರು ಆತಂಕ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣ ಕೂ ನಲ್ಲಿ #ಕನ್ನಡಮಾಧ್ಯಮಕಲಿಕೆ ಎಂಬ ಹ್ಯಾಷ್ ಟ್ಯಾಗ್ ಅಡಿ ತಮ್ಮ ಆತಂಕವನ್ನು ಬಿಚ್ಚಿಟ್ಟಿದ್ದಾರೆ.

ಗೋಪಾಲ್ ಕೆಂಪೇಗೌಡ ಎನ್ನುವವರು ಕೂ ಮಾಡಿ 'ಕನ್ನಡ ಮಾದ್ಯಮದಲ್ಲಿ ಕಲಿತರೆ ಉದ್ಯೋಗ ಪಡೆಯಲು ಕಷ್ಟ ಎಂಬ ಮಿಥ್ಯೆ ಮತ್ತು ಬದಲಾದ ದಿನಗಳಲ್ಲಿ ಆಂಗ್ಲಭಾಷೆಗೆ ಸಿಗುತ್ತಿರುವ ಅನಗತ್ಯ ಆದ್ಯತೆ ಪ್ರಧಾನವಾಗಿ ನಮ್ಮ ಮಾತೃ ಭಾಷೆ ಕಲಿಕೆಗೆ ಅಡ್ಡಿಯಾಗಿದೆ' ಎಂದಿದ್ದಾರೆ.

ಇನ್ನೂ ವಾಹಿನಿ ಮಂಜರೇಕರ್ ಅವರು, 'ಕನ್ನಡ ಮಾಧ್ಯಮದಲ್ಲಿ ಕಲಿಸದೇ ಇರಲು ಕಾರಣಗಳಿವೆ, ಬಹುಮುಖ್ಯವಾದದ್ದು ಮಗು ಇನ್ನೂ ಚಡ್ಡಿ ಹಾಕುವಾಗಲೇ ಮುಂದೆ ಕಾಲೇಜಿನಲ್ಲಿ ಇಂಗ್ಲೀಷ್ ಸಮಸ್ಯೆ ಆಗಬಾರದು ಎನ್ನುವ ಗಾಬರಿ-Ness. ಪ್ರತಿಷ್ಠೆ ಎರಡನೆಯದ್ದು, ಪ್ರತಿಷ್ಠೆಗಾಗಿ ಇಂಗ್ಲೀಷ್ ನಲ್ಲಿ ಅದೇನು ಸಿಕ್ಕತ್ತೋ ಗೊತ್ತಿಲ್ಲ. ಆದ್ರೆ ಕನ್ನಡ ಕಲಿಯದೆ ಮಿಕ್ಕೆಲ್ಲಾ ಭಾಷೆ ಅಚ್ಚುಕಟ್ಟಾಗಿ ಬರಲು ಸಾಧ್ಯವೇ ಇಲ್ಲ, ನಮ್ಮ ವಾತಾವರಣಕ್ಕೆ!' ಎಂದು ಬರೆದಿದ್ದಾರೆ.

NAS Survey: people are worried in social medi about slowing learning of Kannada media

'ಕನ್ನಡದ ಅಸ್ಮಿತೆ, ಕನ್ನಡಿಗರೇ ಮಕ್ಕಳನ್ನು ಇಂಗ್ಲೀಷ್ ಮಾಧ್ಯಮಕ್ಕೆ ತಳ್ಳಿ ಕನ್ನಡ ಕಲಿಕೆಯಲ್ಲಿ ಹಿಂದೇಟುಹಾಕುವಂತೆ ಮಾಡುತ್ತಿದ್ದಾರೆ, ಇತ್ತ ಕನ್ನಡವನ್ನೂ ಸರಿಯಾಗಿ ಕಲಿಯದೆ ಇಂಗ್ಲೀಷ್ ಕಲಿಕೆಗೂ ಒಗ್ಗಲಾರದೆ ಮಕ್ಕಳು ಪರಿತಪಿಸುವುದು ಯಾರಿಗೂ ತಿಳಿಯದ ವಿಷಯವಲ್ಲ' ಎಂದು ದಿವ್ಯಾ ರಾಮಕೃಷ್ಣ ಎನ್ನುವವರು ಬರೆದುಕೊಂಡಿದ್ದಾರೆ.

'ಕಡ್ಡಾಯವಾಗದಿದ್ದರೆ ಕನ್ನಡಿಗರ ಮಕ್ಕಳು ಕನ್ನಡ ಹೊರತುಪಡಿಸಿ ಮತ್ತೆಲ್ಲ ಭಾಷೆಗಳನ್ನು ಕಲಿತು ಕನ್ನಡವನ್ನೇ ಮರೆಯುವ ಪರಿಸ್ಥತಿ ಎದುರಾಗಲಿದೆ.' ಎಂದು ಚಂದ್ರಿಕಾ ಹೆಗಡೆ ಅವರು ಭವಿಷ್ಯದ ಕಾಳಜಿಯನ್ನು ವ್ಯಕ್ತಪಡಿಸಿದ್ದಾರೆ.

ಇದರೊಂದಿಗೆ ವಿರೇಶ್ ಎಂಬುವವರು ಕೂ ಮಾಡಿ 'ಸರ್ಕಾರಿ ಶಾಲೆಗಳು ಉತ್ತಮ ವಿದ್ಯಾರ್ಥಿಗಳನ್ನು ತಯಾರು ಮಾಡುವುದರಲ್ಲಿ ಸಫಲರಾಗಿವೆ, ಕಾಲಮಾನದಲ್ಲಿ ತಮ್ಮನ್ನು ತಾವು ಉಳಿಸಿಕೊಳ್ಳಲು ವಿಫಲವಾಗಿವೆ. ಪ್ರೈವೇಟ್ ಶಾಲೆಗಳು ಕನ್ನಡ ಮಾಧ್ಯಮದಲ್ಲಿ ಬ್ಯುಸಿನೆಸ್ ಮಾಡಲು ಮುಂದಾಗುತ್ತವಾ? ಮಠ ಮಾನ್ಯಗಳು ಮಾಡಬಹುದು, ಅವುಗಳು ಮಾಡುವುದು ಬ್ಯುಸಿನೆಸ್ ಅಲ್ಲವಲ್ಲ..ಆ ಕಾರಣಕ್ಕೆ' ಎಂದಿದ್ದಾರೆ.

NAS Survey: people are worried in social medi about slowing learning of Kannada media

'ಉದ್ಯೋಗದ ಕೊರತೆ, ಕನ್ನಡ ಅನ್ನದ ಭಾಷೆಯಾಗಿಲ್ಲ ಎನ್ನುವ ಕೂಗು. ಕನ್ನಡದಲ್ಲಿ ಅನ್ನ ಉಣ್ಣುವ ಜನರೇ ಇಲ್ಲದಿರುವ ಪ್ರಸಂಗ ಬರುವ ಮುಂಚೆ ಕನ್ನಡದಿಂದ ಹಿಡಿದು ಬಡಿದಾಡಿ ತಿನ್ನಲು ಸಜ್ಜಾಗಿರುವ ಕ್ಷೇತ್ರಕ್ಕೆ ಸರ್ಕಾರ, ಉದ್ಯಮ ನೆರವಾಗಬೇಕು' ಎಂದು ಸಂಧ್ಯಾ ಎನ್ನುವವರು ಹೇಳಿದ್ದಾರೆ.

English summary
The decline in the number of learners in Kannada medium is worrisome.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X