ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆರೆಸ್ಸೆಸ್ ಅವನತಿಗೆ ಮೋದಿ ಕಾರಣರಾಗ್ತಾರೆ: ಚಂಪಾ

By Mahesh
|
Google Oneindia Kannada News

ದಾವಣಗೆರೆ, ಜೂ.30: 'ರಾಜ್ಯದಲ್ಲಿ ಬಿಜೆಪಿ ಅಂತ್ಯ ಕಾಣಲು ಹೇಗೆ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಕಾರಣರಾದರೋ, ದೇಶದಲ್ಲಿ ಸಂಘ ಪರಿವಾರ ಅಂತ್ಯ ಕಾಣಲು ಪ್ರಧಾನಿ ನರೇಂದ್ರ ಮೋದಿ ಅವರು ಕಾರಣರಾಗುತ್ತ್ತಾರೆ' ಎಂದು ಹಿರಿಯ ಸಾಹಿತಿ, ವಿಚಾರವಾದಿ ಚಂದ್ರಶೇಖರ ಪಾಟೀಲರು ಭವಿಷ್ಯ ನುಡಿದಿದ್ದಾರೆ.

ಹರಿಹರದ ಮುಕ್ತಾಯಗೊಂಡ ಆರನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಚಂಪಾ ಅವರು ಈ ಮಾತುಗಳನ್ನಾಡಿದ್ದಾರೆ. ದೇಶದಲ್ಲಿ ನೆಹರೂ ಪರಿವಾರದ ಅಂತ್ಯವಾಗುತ್ತಿದ್ದಂತೆ, ಮುಂದೆ ಸಂಘ ಪರಿವಾರ ಅಂತ್ಯವಾಗುವ ಕಾಲವೂ ಬರುತ್ತದೆ. ನಾನು ಕೋಮುವಾದರ ವಿರೋಧಿಯಾಗಿದ್ದೇನೆ. ದೇಶದಲ್ಲಿ ಕೋಮುವಾದಿ ಎಂಬ ರಾಕ್ಷಸನನ್ನು ನಿರ್ನಾಮ ಮಾಡಲು ನಾವೆಲ್ಲ ಹೋರಾಡಬೇಕಾಗಿದೆ ಎಂದರು.

ಗಂಗಾ ನದಿ ಸ್ವಚ್ಛತೆ ಬಗ್ಗೆ: ವಾರಣಾಸಿಯಿಂದ ಸಂಸತ್ತಿಗೆ ಅಯ್ಕೆಯಾಗಿರುವ ಮೋದಿ ಅವರು ಸಹಜವಾಗಿ ಗಂಗಾ ನದಿ ಶುದ್ಧೀಕರಣಕ್ಕಾಗಿ ವಿಶೇಷ ಯೋಜನೆ ರೂಪಿಸಿದ್ದಾರೆ ಇದು ಸ್ವಾಗತಾರ್ಹ. ಆದರೆ, ಗಂಗಾನದಿ ಹಿಂದೂ ಸಂಸ್ಕೃತಿ ಸ್ವರೂಪ ಎಂದು ಜನರನ್ನು ಹಾದಿ ತಪ್ಪಿಸಬಾರದು. ನದಿ ಕಲುಷಿತಗೊಳಿಸಿದವರಿಗೆ ಶಿಕ್ಷೆಯಾಗಬೇಕು.

PM Narendra Modi will become reason behind Decline of RSS

ಸಂಸ್ಕೃತಿ ನಿಂತ ನೀರಲ್ಲ, ಹರಿಯುವ ನೀರು, ಸ್ಥಾವರವಲ್ಲ, ಜಂಗಮ ಎಂದ ಚಂಪಾ ಅವರು, ಸಂಸ್ಕೃತಿಯ ಪ್ರತಿಅಗಮಿ ಅಂಶಗಳನ್ನು ಹೊಡೆದು ಹಾಕಿ, ಪ್ರಗತಿ ಗಾಮಿ ಅಂಶಗಳನ್ನು ಸ್ವೀಕಾರ ಮಾಡಬೇಕು ಎಂದರು.

ಭಾಗಿರಥಿ ಕನ್ವೆನ್ಷನ್ ಹಾಲ್ ನಲ್ಲಿ ನಡೆದ ಸಮಾರಂಬಹ್ದಲ್ಲಿ ಸಮ್ಮೇಳನಾಧ್ಯಕ್ಷ ಡಾ. ಎಂಜಿ ಈಶ್ವರಪ್ಪ, ಹರಿಹರದ ಶಾಸಕ ಎಚ್.ಎಸ್ ಶಿವಶಂಕರ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎ.ಆರ್ ಉಜ್ಜಿನಪ್ಪ, ಮುಖ್ಯ ಅತಿಥಿಗಳಾಗಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಸಹನಾ ರವಿ, ಹನಗವಾಡಿ ವೀರೇಶ್,ಕೆಪಿ ಸಿದ್ದಬಸಪ್ಪ ಮುಂತಾದವರು ಉಪಸ್ಥಿತರಿದ್ದರು.

ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 10 ನಿರ್ಣಯಗಳನ್ನು ತೆಗೆದುಕೊಳ್ಳಲಾಗಿದ್ದು, ಮಾತೃಭಾಷಾ ವಿರೋಧಿ ನೀತಿ ವಿರೋಧಿಸುವುದು, ಕನ್ನಡ ಮಾಧ್ಯಮದಲ್ಲಿ ಓದಿದವರಿಗೆ ಹುದ್ದೆಗಳಲ್ಲಿ ಶೇ 50 ರಷ್ಟು ಮೀಸಲಾತಿ, ದಾವಣಗೆರೆಗೆ ಆಕಾಶವಾಣಿ ಕೇಂದ್ರ, ಪ್ರತಿದಿನ ಹರಿಹರ-ಬೆಂಗಳೂರು ಇಂಟರ್ ಸಿಟಿ ರೈಲು,ತುಂಗಭದ್ರಾ ನದಿಯಲ್ಲಿ ಮರಳು ಮಾಫಿಯಾ ಹತ್ತಿಕ್ಕುವುದು, ಹರಿಹರದಲ್ಲಿ ಜವಳಿ ಪಾರ್ಕ್ ಸ್ಥಾಪನೆ ಮುಂತಾದವು ಪ್ರಮುಖವಾಗಿವೆ.

English summary
PM Narendra Modi will become the reason behind Rashtriya Swayamsevak Sangh's Decline similar to the Former CM BS Yeddyurappa who become reason for decline of BJP in Karnataka said Kannada writer Chandrashekar Patil in Davangere
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X