ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮನ್‌-ಕೀ-ಬಾತ್‌ನಲ್ಲಿ ಸೂಲಗಿತ್ತಿ ನರಸಮ್ಮನಿಗೆ ಮೋದಿ ನಮನ

|
Google Oneindia Kannada News

ನವದೆಹಲಿ, ಡಿಸೆಂಬರ್ 30: ಇತ್ತೀಚಿಗಷ್ಟೆ ನಿಧನರಾದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಸೂಲಗಿತ್ತಿ ನರಸಮ್ಮ ಅವರಿಗೆ ಪ್ರಧಾನಿ ಮೋದಿ ಅವರು ತಮ್ಮ ಮನ್‌-ಕೀ-ಬಾತ್‌ನಲ್ಲಿ ಮನಮ ಸಲ್ಲಿಸಿದ್ದಾರೆ.

ಸಾವಿರಾರು ಹೆರಿಗೆಗಳನ್ನು ಮಾಡಿಸಿ ದಾಖಲೆ ನಿರ್ಮಿನಿಸಿದ್ದ ಸೂಲಗಿತ್ತಿ ನರಸಮ್ಮ ಅವರು ಇತ್ತೀಚೆಷ್ಟೆ ಕಾಲವಾಗಿದ್ದು. ನಿನ್ನೆ ನಡೆದ ಮನ್‌-ಕೀ-ಬಾತ್‌ನಲ್ಲಿ ಮೋದಿ ಅವರು ಸೂಲಗಿತ್ತಿ ನರಸಮ್ಮ ಅವರನ್ನು ನೆನಪಿಸಿಕೊಂಡು ಅವರಿಗೆ ನಮನ ಸಲ್ಲಿಸಿದರು.

Narendra Modi pay respect to Sulagithi Narasamma in Man ki bath

'ಸೂಲಗಿತ್ತಿ ನರಸಮ್ಮ ಅವರು ಸಾವಿರಾರು ತಾಯಂದಿರಿಗೆ ತಾಯಿಯಾಗಿದ್ದರು, ಸಾವಿರಾರು ಗ್ರಾಮೀಣ ತಾಯಂದಿರ ಹೆರಿಗೆ ಸಮಯದಲ್ಲಿ ಮಹಾತಾಯಿಯಾಗಿ ಸೇವೆ ಮಾಡಿದ್ದಾರೆ ಎಂದು ಮೋದಿ ಅವರು ತಮ್ಮ ಮನ್‌-ಕೀ-ಬಾತ್‌ನಲ್ಲಿ ನೆನಪಿಸಿಕೊಂಡಿದ್ದಾರೆ.

ಪದ್ಮಶ್ರೀ ಪುರಸ್ಕೃತೆ ಸೂಲಗಿತ್ತಿ ನರಸಮ್ಮ ನಿಧನಪದ್ಮಶ್ರೀ ಪುರಸ್ಕೃತೆ ಸೂಲಗಿತ್ತಿ ನರಸಮ್ಮ ನಿಧನ

ಕರ್ನಾಟಕದಲ್ಲಿ ಅವರಿಗೆ ವಿಶೇಷ ಸ್ಥಾನ-ಮಾನಗಳಿತ್ತು. ತಮ್ಮ ಜೀವನವನ್ನು ಇತರರಿಗೆ ಮಾದರಿ ಆಗುವಂತೆ ಅವರು ಬದುಕಿದ್ದರು. ಸಮಾಜಕ್ಕೆ ದೊಡ್ಡ ಮಟ್ಟದ ಸೇವೆಯನ್ನು ಅವರು ಅರ್ಪಿಸಿದ್ದಾರೆ ಎಂದು ಮೋದಿ ಹೇಳಿದ್ದರು.

ಪದ್ಮಶ್ರೀ ಪುರಸ್ಕೃತೆ ಸೂಲಗಿತ್ತಿ ನರಸಮ್ಮ ನಿಧನಪದ್ಮಶ್ರೀ ಪುರಸ್ಕೃತೆ ಸೂಲಗಿತ್ತಿ ನರಸಮ್ಮ ನಿಧನ

ಸೂಲಗಿತ್ತಿ ನರಸಮ್ಮ ಅವರು ಡಿಸೆಂಬರ್ 25 ರಂದು ನಿಧನರಾದರು. ಡಿಸೆಂಬರ್ 26 ರಂದು ಅವರ ಪಾರ್ಥಿವ ಶರೀರವನ್ನು ತುಮಕೂರಿನ ಅವರ ಸ್ವಗ್ರಾಮದಲ್ಲಿ ಅಂತ್ಯಸಂಸ್ಕಾರ ಮಾಡಲಾಯಿತು.

English summary
Prime minister Narendra Modi pay respect to Karnataka's Sulagithi Narasamma in his man ki bath program. He said Narasamma's social work is well known in Karnataka and she is role model for future generations.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X