ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನರೇಂದ್ರ ಮೋದಿ ಒಬ್ಬ ಡೋಂಗಿ ಪ್ರಧಾನಿ: ಸಿದ್ದರಾಮಯ್ಯ

|
Google Oneindia Kannada News

ಬೆಂಗಳೂರು ಮೇ 24: "ಪ್ರಧಾನಿ ನರೇಂದ್ರ ಮೋದಿ ಅವರು ಒಬ್ಬ ಡೋಂಗಿ ವ್ಯಕ್ತಿ'' ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಟೀಕೆ ಮಾಡಿದರು.

ಜಯನಗರದಲ್ಲಿ ಸೋಮವಾರ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು, "ಪ್ರಧಾನಿ ಸ್ಥಾನದ ಬಗ್ಗೆ ನನಗೆ ಗೌರವವಿದೆ. ಆದರೆ ನರೇಂದ್ರ ಮೋದಿ ಅವರು ಒಬ್ಬ ಡೋಂಗಿ ಪ್ರಧಾನಿ. ಅಚ್ಚೇ ದಿನ್ ಬರಲಿದೆ ಎಂದು ದೇಶದ ಜನರಿಗೆ ಅವರು ಹೇಳಿದ್ದರು. ಅಚ್ಚೇ ದಿನ್' ನಿಜವಾಗಿಯೂ ಬಂತೆ?'' ಎಂದು ವ್ಯಂಗ್ಯವಾಡಿದರು.

 ಭಾರತಕ್ಕೆ ಒಮ್ಮೆಯಾದರೂ ಬನ್ನಿ ಜಪಾನಿ ಯುವಕರಿಗೆ ಪ್ರಧಾನಿ ಮೋದಿ ಕರೆ ಭಾರತಕ್ಕೆ ಒಮ್ಮೆಯಾದರೂ ಬನ್ನಿ ಜಪಾನಿ ಯುವಕರಿಗೆ ಪ್ರಧಾನಿ ಮೋದಿ ಕರೆ

"ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಡೀಸೆಲ್ ಮೇಲಿನ ಅಬಕಾರಿ ಸುಂಕ 3.46 ರೂ. ಹಾಗೂ ಪೆಟ್ರೋಲ್ ಮೇಲಿನ ಅಬಕಾರಿ ಸುಂಕ 9.20 ರೂ. ಇತ್ತು. ನರೇಂದ್ರ ಮೋದಿ ಅವರು ಏಕೆ ಅಬಕಾರಿ ಸುಂಕವನ್ನು ಏರಿಸಿದರು?. ಕೇಂದ್ರ ಸರಕಾರಕ್ಕೆ ಕೇವಲ ಅಬಕಾರಿ ಸುಂಕ ಒಂದರಿಂದಲೇ 26 ಲಕ್ಷ ರೂ. ಆದಾಯ ಬಂದಿದೆ,'' ಎಂದು ಸಿದ್ದರಾಮಯ್ಯ ಹೇಳಿದರು.

Narendra Modi is Dhongi PM says Siddharamaiah

"ಇದರಿಂದ ತಿಳಿಯುವುದಿಲ್ಲವೇ ಕೇಂದ್ರ ಸರಕಾರ ಒಂದು ಡೋಂಗಿ ಸರಕಾರ ಎಂದು. ಬೆಲೆ ಏರಿಕೆ ನೆಪದಲ್ಲಿ ಅದು ನಾಗರಿಕರ ರಕ್ತ ಹೀರುತ್ತಿದೆ,'' ಎಂದು ದೂರಿದರು.

ರಾಜ್ಯ ಸರಕಾರದಿಂದ ಮಲತಾಯಿ ಧೋರಣೆ: "ಬೆಂಗಳೂರಿನ ವಿಧಾನಸಭೆ ಕ್ಷೇತ್ರಗಳಿಗೆ ಅನುದಾನ ಹಂಚಿಕೆ ವಿಷಯದಲ್ಲಿ ರಾಜ್ಯ ಸರಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಕಾಂಗ್ರೆಸ್ ಶಾಸಕರು ಇರುವ ಕ್ಷೇತ್ರಗಳಿಗೆ ಅನುದಾನ ಕಡಿತಗೊಳಿಸಲಾಗುತ್ತಿದೆ'' ಎಂದು ಆರೋಪಿಸಿದರು.

ಕ್ವಾಡ್ ಶೃಂಗಸಭೆಯಲ್ಲಿ ಮೋದಿ-ಬೈಡನ್ ನಡುವೆ 'ಗೋಧಿ' ಚರ್ಚೆ! ಕ್ವಾಡ್ ಶೃಂಗಸಭೆಯಲ್ಲಿ ಮೋದಿ-ಬೈಡನ್ ನಡುವೆ 'ಗೋಧಿ' ಚರ್ಚೆ!

"2017-18ರಲ್ಲಿ ನಾನು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಜಯನಗರಕ್ಕೆ 316 ಕೋಟಿ ರು. ಅನುದಾನ ಹಂಚಿಕೆ ಮಾಡಿದ್ದೆ. ಆದರೆ ಬಿಜೆಪಿ ಸರಕಾರ ಕಳೆದ ಮೂರು ವರ್ಷಗಳಿಂದ ಕ್ಷೇತ್ರಕ್ಕೆ ಕೇವಲ 122 ಕೋಟಿ ರು. ಅನುದಾನ ಹಂಚಿಕೆ ಮಾಡಿದೆ,'' ಎಂದರು.

"ತೆರಿಗೆದಾರರ ಹಣದಲ್ಲಿ ನಗರೋತ್ಥಾನ ಯೋಜನೆಯಡಿ 15 ಮಂದಿ ಬಿಜೆಪಿ ಶಾಸಕರಿಗೆ 9,890 ಕೋಟಿ ರು. ಅನುದಾನ ಹಂಚಿಕೆ ಮಾಡಲಾಗಿದೆ. ಆದರೆ 12 ಮಂದಿ ಕಾಂಗ್ರೆಸ್ ಶಾಸಕರಿಗೆ ಕೇವಲ 2,165 ಕೋಟಿ ರು. ಅನುದಾನ ಹಂಚಿಕೆ ಮಾಡಿದೆ. ರಾಜ್ಯ ಸರಕಾರದಿಂದ ಈ ರೀತಿಯ ತಾರತಮ್ಯ ಮಾಡಲಾಗುತ್ತಿದೆ,'' ಎಂದು ಸಿದ್ದರಾಮಯ್ಯ ದೂರಿದರು.

Narendra Modi is Dhongi PM says Siddharamaiah

ಕಾಂಗ್ರೆಸ್ ಗೆಲುವಿಗೆ ಶ್ರಮಿಸಿ: "ಬಿಬಿಎಂಪಿ ಚುನಾವಣೆ ಆಗಸ್ಟ್‌ನಲ್ಲಿ ನಡೆಯುವ ಸಂಭವವಿದೆ. ಕಾಂಗ್ರೆಸ್‌ ಕಾರ್ಯಕರ್ತರು ಮನೆ ಮನೆಗೆ ತೆರಳಿ ಜನರನ್ನು ಭೇಟಿಯಾಗಿ ಬಿಜೆಪಿ ಸರಕಾರದ ವೈಫಲ್ಯಗಳನ್ನು ತಿಳಿಸಬೇಕು. ಬಿಬಿಎಂಪಿ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವು ಸಾಧಿಸುವ ನಿಟ್ಟಿನಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ಕೆಲಸ ಮಾಡಬೇಕು,'' ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಶಾಕಾಂಬರಿನಗರ ಮತ್ತು ಬೈರಸಂದ್ರ ವಾರ್ಡ್ ಗಳ ಸ್ಥಳೀಯ ಮುಖಂಡರು ಕಾಂಗ್ರೆಸ್ ಸೇರ್ಪಡೆಗೊಂಡರು. ಈ ವೇಳೆ ಕಾಂಗ್ರೆಸ್ ನಾಯಕರು, ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.

English summary
Karnataka leader of the opposition Siddaramaiah dubbed prime minister Narendra Modi as Dhongi in a convention of party workers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X