ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಾಬೋಲ್ಕರ್ ಹತ್ಯೆ : ತಪ್ಪೊಪ್ಪಿಕೊಂಡ ಆರೋಪಿ ಹೇಳಿದ್ದೇನು?

|
Google Oneindia Kannada News

ಬೆಂಗಳೂರು, ಜೂನ್ 27 : ವಿಚಾರವಾದಿ ನರೇಂದ್ರ ದಾಬೋಲ್ಕರ್ ಹತ್ಯೆ ಪ್ರಕರಣದ ಆರೋಪಿ ಶರದ್ ಕಾಲಸ್ಕರ್ ತಪ್ಪೊಪ್ಪಿಕೊಂಡಿದ್ದಾನೆ. ಕರ್ನಾಟಕದ ಪೊಲೀಸರ ಮುಂದೆ ಶರದ್ ದಾಬೋಲ್ಕರ್ ಅವರನ್ನು ಹೇಗೆ ಹತ್ಯೆ ಮಾಡಿದೆ? ಎಂದು ಹೇಳಿದ್ದಾನೆ.

67 ವರ್ಷದ ನರೇಂದ್ರ ದಾಬೋಲ್ಕರ್ ಅವರನ್ನು 2013ರ ಆಗಸ್ಟ್‌ನಲ್ಲಿ ಪುಣೆಯಲ್ಲಿ ಹತ್ಯೆ ಮಾಡಿದ ಶರದ್ ಕಾಲಸ್ಕರ್ ಕರ್ನಾಟಕ ಪೊಲೀಸರ ವಶದಲ್ಲಿದ್ದಾನೆ. ಗೋವಿಂದ ಪನ್ಸಾರೆ ಮತ್ತು ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಸಂಚಿನಲ್ಲಿಯೂ ಶರದ್ ಭಾಗಿಯಾಗಿದ್ದಾನೆ.

ದಾಬೋಲ್ಕರ್ ಹತ್ಯೆಗೆ ಬೆಳಗಾವಿಯಿಂದ ಬೈಕ್ ಕಳವು!ದಾಬೋಲ್ಕರ್ ಹತ್ಯೆಗೆ ಬೆಳಗಾವಿಯಿಂದ ಬೈಕ್ ಕಳವು!

2013ರ ಆಗಸ್ಟ್‌ನಲ್ಲಿ ನರೇಂದ್ರ ದಾಬೋಲ್ಕರ್, 2015ರ ಫೆಬ್ರವರಿಯಲ್ಲಿ ಗೋವಿಂದ ಪನ್ಸಾರೆ, ಅದೇ ವರ್ಷದ ಆಗಸ್ಟ್ 30ರಂದು ಧಾರವಾಡದ ಕಲ್ಯಾಣ ನಗರದಲ್ಲಿ ಸಂಶೋಧಕ ಎಂ.ಎಂ.ಕಲಬುರ್ಗಿ ಹತ್ಯೆ ನಡೆದಿತ್ತು.

ಎಂ.ಎಂ.ಕಲಬುರ್ಗಿ ಹತ್ಯೆ, ಪ್ರಮುಖ ಆರೋಪಿ ಬಂಧಿಸಿದ ಎಸ್‌ಐಟಿಎಂ.ಎಂ.ಕಲಬುರ್ಗಿ ಹತ್ಯೆ, ಪ್ರಮುಖ ಆರೋಪಿ ಬಂಧಿಸಿದ ಎಸ್‌ಐಟಿ

ದಾಬೋಲ್ಕರ್, ಪನ್ಸಾರೆ, ಕಲಬುರ್ಗಿ, ಗೌರಿ ಲಂಕೇಶ್ ಹತ್ಯೆ ಪ್ರಕರಣಗಳಿಗೆ ಸಂಬಂಧವಿದೆ. ನರೇಂದ್ರ ದಾಬೋಲ್ಕರ್ ಹತ್ಯೆ ಪ್ರಕರಣದ ತನಿಖೆಯನ್ನು ಸಿಬಿಐ ನಡೆಸುತ್ತಿದೆ. ಎಂ.ಎಂ.ಕಲಬುರ್ಗಿ ಮತ್ತು ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖೆಯನ್ನು ಎಸ್‌ಐಟಿ ನಡೆಸುತ್ತಿದೆ.....

ಎಂ.ಎಂ.ಕಲಬುರ್ಗಿ ಹತ್ಯೆ : ಮಸಾಲಾವಾಲಾ ಸಿಕ್ಕಿಬಿದ್ದಿದ್ದು ಹೇಗೆ?ಎಂ.ಎಂ.ಕಲಬುರ್ಗಿ ಹತ್ಯೆ : ಮಸಾಲಾವಾಲಾ ಸಿಕ್ಕಿಬಿದ್ದಿದ್ದು ಹೇಗೆ?

14 ಪುಟದ ತಪ್ಪೊಪ್ಪಿಗೆ

14 ಪುಟದ ತಪ್ಪೊಪ್ಪಿಗೆ

ಕರ್ನಾಟಕ ಪೊಲೀಸ್ ವಶದಲ್ಲಿರುವ ಶರದ್ ಕಾಲಸ್ಕರ್ 14 ಪುಟಗಳ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾನೆ. ಕಂಟ್ರಿ ಮೇಡ್ ಪಿಸ್ತೂಲ್ ಮೂಲಕ ಹಿಂಬದಿಯಿಂದ ದಾಬೋಲ್ಕರ್ ಅವರಿಗೆ ಮೊದಲ ಗುಂಡನ್ನು ಆತ ಹಾರಿಸಿದ್ದ. ಬಳಿಕ ಅವರ ಕೆಳಗೆ ಬಿದ್ದ ಮೇಲೆ, 2ನೇ ಗುಂಡು ಹಾರಿಸಿದ ಆದರೆ, ಗುಂಡು ಪಿಸ್ತೂಲ್‌ನಲ್ಲಿಯೇ ಸಿಕ್ಕಿ ಹಾಕಿಕೊಂಡಿತು. ಅದನ್ನು ತೆಗೆದು 3ನೇ ಗುಂಡನ್ನು ಅವರ ಬಲ ಗಣ್ಣಿನ ಮೇಲ್ಭಾಗಕ್ಕೆ ಹಾರಿಸಿದ್ದ.

2018ರಲ್ಲಿ ಬಂಧನ

2018ರಲ್ಲಿ ಬಂಧನ

ನರೇಂದ್ರ ದಾಬೋಲ್ಕರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ 2018ರಲ್ಲಿ ಶರದ್ ಕಾಲಸ್ಕರ್ ಬಂಧಿಸಲಾಗಿದೆ. ಮಹಾರಾಷ್ಟ್ರದ ಎಟಿಎಸ್ ನಾಡ ಬಂದೂಕು ತಯಾರಿಕಾ ಕೇಂದ್ರದ ಮೇಲೆ ದಾಳಿ ನಡೆಸಿದಾಗ ಶರದ್ ಕಾಲಸ್ಕರ್ ಬಂಧಿಸಿತ್ತು. ವಿಚಾರಣೆ ನಡೆಸಿದಾಗ ಬೇರೆ ವಿಚಾರವಾದಿಗಳ ಹತ್ಯೆಯಲ್ಲಿಯೂ ಶರದ್ ಕೈವಾಡ ಇರುವುದು ಪತ್ತೆಯಾಗಿತ್ತು.

ಬಲಪಂಥೀಯ ಸಂಘಟನೆಯಿಂದ ಕರೆ

ಬಲಪಂಥೀಯ ಸಂಘಟನೆಯಿಂದ ಕರೆ

ಶರದ್ ಕಾಲಸ್ಕರ್‌ಗೆ ಬಲ ಪಂಥೀಯ ಸಂಘಟನೆಯೊಂದರಿಂದ ಕರೆ ಬಂದಿತ್ತು. ಹಲವು ಸಾಹಿತ್ಯಗಳನ್ನು ಓದಲು ನೀಡಲಾಗಿತ್ತು. ಬಾಂಬ್ ತಯಾರು ಮಾಡುವುದು, ಬಂದೂಕು ಬಳಕೆ ಬಗ್ಗೆ ತರಬೇತಿ ನೀಡಲಾಗಿತ್ತು. ಬಳಿಕ ಆತನಿಗೆ ಕೊಲೆ ಮಾಡಬೇಕು ಎಂಬುದನ್ನು ಹೇಳಲಾಗಿತ್ತು. ದಾಬೋಲ್ಕರ್ ಹತ್ಯೆ ಸಂಚಿನ ಪ್ರಮುಖ ಆರೋಪಿ ವಿರೇಂದ್ರ ತಾವಡೆ ಹತ್ಯೆ ಮಾಡಲು ಶರದ್‌ಗೆ ಹೇಳಿದ್ದ.

ಅಮೋಲ್ ಕಾಳೆ ಪರಿಚಯ

ಅಮೋಲ್ ಕಾಳೆ ಪರಿಚಯ

ಶರದ್ ಕಾಲಸ್ಕರ್‌ಗೆ ವಿರೇಂದ್ರ ತಾವಡೆ ಅಮೋಲ್ ಕಾಳೆ ಪರಿಚಯ ಮಾಡಿಕೊಟ್ಟಿದ್ದ. ಅಮೋಲ್ ಕಾಳೆ ಗೌರಿ ಲಂಕೇಶ್, ಎಂ.ಎಂ.ಕಲಬುರ್ಗಿ ಹತ್ಯೆ ಸಂಚಿನ ಪ್ರಮುಖ ಆರೋಪಿಯಾಗಿದ್ದು, ಕರ್ನಾಟಕ ಪೊಲೀಸರ ವಶದಲ್ಲಿದ್ದಾನೆ. ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿಯಲ್ಲಿ ನಡೆದ ವಿವಿಧ ಸಭೆಗಳಲ್ಲಿ ಪಾಲ್ಗೊಂಡಿದ್ದೆ ಎಂದು ಶರದ್ ತಪ್ಪೊಪ್ಪಿಕೊಂಡಿದ್ದಾನೆ.

English summary
Sharad Kalaskar who accused in killing of rationalist Narendra Dabholkar confessed to Karnataka police how he shot the Dabholkar on August 2013 at Pune. Sharad Kalaskar also in the team who killed the Govind Pansare and journalist Gauri Lankesh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X