ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನರಗುಂದ ರಾಜ್ಯದ ಪ್ರಥಮ ಕಾಗದರಹಿತ ತಾಲ್ಲೂಕು ಪಂಚಾಯಿತಿ

By Mahesh
|
Google Oneindia Kannada News

ಬೆಂಗಳೂರು, ಜುಲೈ 04: ರಾಜ್ಯದ ಎಲ್ಲ ತಾಲ್ಲೂಕು ಪಂಚಾಯಿತಿಗಳನ್ನು ಕಾಗದರಹಿತ ಕಾರ್ಯಾಲಯಗಳನ್ನಾಗಿ ಪರಿವರ್ತನೆಗೊಳಿಸಲು ಸರ್ಕಾರ ಯೋಜನೆ ರೂಪಿಸಿದೆ. ಅದರಂತೆ, ಪ್ರಥಮ ಬಾರಿಗೆ ನರಗುಂದ ತಾಲ್ಲೂಕು ಪಂಚಾಯಿತಿ ಕಾಗದರಹಿತ ಕಾರ್ಯಾಲಯವಾಗಿ ಕಾರ್ಯನಿರ್ವಹಿಸಲಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ. ಪಾಟೀಲ್ ಹೇಳಿದ್ದಾರೆ.

ನರಗುಂದ ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಭವನದಲ್ಲಿ ಭಾನುವಾರ ಮಾತನಾಡಿದ ಸಚಿವರು, ರಾಜ್ಯದಲ್ಲಿ ಪ್ರಥಮ ಬಾರಿಗೆ ನರಗುಂದ ತಾಲ್ಲೂಕು ಪಂಚಾಯಿತಿ ಕಾಗದರಹಿತ ಕಾರ್ಯಾಲಯವಾಗಿ ಕಾರ್ಯನಿರ್ವಹಿಸಲಿದೆ. [ತಾ.ಪಂ ಫಲಿತಾಂಶ : ಯಾವ ಜಿಲ್ಲೆಯಲ್ಲಿ ಯಾರಿಗೆ ಗೆಲುವು?]

ಗ್ರಾಪಂನ ಆಡಳಿತಾತ್ಮಕ ವಿಷಯದ ಸಮಸ್ಯೆಗಳಿದ್ದಲ್ಲಿ ಪಿಡಿಒಗಳು ಮೇಲಧಿಕಾರಿಗಳೊಂದಿಗೆ ನೇರ ವಿಡಿಯೋ ಕಾನರೆನ್ಸ್ ಮುಖಾಂತರ ಪರಿಹಾರ ಕಂಡುಕೊಳ್ಳಬಹುದು ಎಂದರು. ['ಕರ್ನಾಟಕ ಮೊಬೈಲ್ ಒನ್' ಸೇವೆ ಪಡೆಯುವುದು ಹೇಗೆ?]

Naragunda in Gadag becomes Paperless Taluk Panchayat

2018ರ ಅಕ್ಟೋಬರ್ 2ರೊಳಗಾಗಿ ರಾಜ್ಯದ ಎಲ್ಲ ಗ್ರಾಮೀಣ ಪ್ರದೇಶಗಳನ್ನು ಸ್ವಚ್ಛ ಭಾರತ ಅಭಿಯಾನದಡಿ ಬಯಲು ಶೌಚ ಮುಕ್ತವಾಗಿಸಲು ನಿರ್ಧರಿಸಲಾಗಿದೆ ಎಂದು ಅವರು ತಿಳಿಸಿದರು. ಈ ಭಾಗದಲ್ಲಿ 11 ತಾಲೂಕು ಪಂಚಾಯತಿ ಕ್ಷೇತ್ರಗಳಲ್ಲಿ ಕಾಂಗ್ರೆಸ್ 8 ಸ್ಥಾನ ಹಾಗೂ ಬಿಜೆಪಿ ಮೂರರಲ್ಲಿ ಅಧಿಕಾರ ಹೊಂದಿವೆ. [30 ಜಿಲ್ಲೆಗಳ ಪಂಚಾಯ್ತಿ ಫಲಿತಾಂಶ ಸಂಪೂರ್ಣ ವಿವರ]

ಎಂ ಆಡಳಿತ ಜಾರಿ: ದಿನಬಳಕೆ ಬಿಲ್‌ಗಳನ್ನು, ಆಸ್ತಿ ತೆರಿಗೆಗಳನ್ನು ಪಾವತಿಸಬಹುದು. ರೈಲ್ವೆ, ಬಸ್ ಟಿಕೆಟ್‌ಗಳನ್ನು ಬುಕ್ ಮಾಡಬಹುದು. ಆದಾಯ ತೆರಿಗೆ ಪಾವತಿ, ಎಂ-ಪಾಸ್‌ಪೋರ್ಟ್, ಡ್ರೈವಿಂಗ್ ಲೈಸೆನ್ಸ್ ಮತ್ತು ಇತರೆ ಸೇವೆಗಳನ್ನು ತಮ್ಮ ಸ್ಮಾರ್ಟ್‌ಫೋನ್ ಮೂಲಕ ಪಡೆಯಬಹುದು. ಜಿ2ಸಿ, ಬಿ2ಸಿ ಮತ್ತು ಜಿ2ಬಿ ಸೇವೆಗಳು ಸೇರಿದಂತೆ 4500ಕ್ಕೂ ಅಧಿಕ ಸೇವೆಗಳು ಕರ್ನಾಟಕದ ನಾಗಕರಿಗೆ ಎಂ ಆಡಳಿತ ಮೂಲಕ ಸಿದ್ದರಾಮಯ್ಯ ಆರ ಸರ್ಕಾರ ನೀಡುತ್ತಿದೆ.

English summary
Naragunda in Gadag district set to become first paperless Taluk Panchayat in Karnataka announced rural development and panchayat raj minister HK Patil
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X