ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಂದಿನಿ ಹಾಲಿನ ದರ 2-3 ರೂಪಾಯಿ ಏರಿಕೆ ಸಾಧ್ಯತೆ

|
Google Oneindia Kannada News

Recommended Video

ಮೂರು ವರ್ಷಗಳ ನಂತರ ನಂದಿನಿ ಹಾಲಿನ ದರ ಏರಿಕೆ ಸಾಧ್ಯತೆ | KMF | PRICE HIKE | ONEINDIA KANNADA

ಬೆಂಗಳೂರು, ಜನವರಿ 9: ಕರ್ನಾಟಕ ಹಾಲು ಉತ್ಪಾದಕರ ಮಹಾಮಂಡಳಿ ನಂದಿನಿ ಹಾಲಿನ ಮಾರಾಟ ದರವನ್ನು 2-3 ರೂ ಹೆಚ್ಚಳ ಮಾಡಲು ಚಿಂತನೆ ನಡೆಸಿದೆ.

ರಾಜ್ಯದ 14 ಹಾಲು ಒಕ್ಕೂಟಗಳು ಹಾಲಿನ ದರ ಹೆಚ್ಚಳ ಮಾಡುವಂತೆ ಕೆಎಂಎಫ್‌ಗೆ ಪ್ರಸ್ತಾವನೆ ಸಲ್ಲಿಸಿವೆ. ಜನವರಿ 17ರಂದು ಅಂತಿಮ ತೀರ್ಮಾನ ತೆಗೆದುಕೊಳ್ಳಲಿವೆ.ಕೆಎಂಎಫ್ ಕೈಗೊಳ್ಳುವ ನಿರ್ಧಾರವನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಒಕ್ಕೂಟಗಳು ತಿಳಿಸಿವೆ.

ಪ್ರತಿ ಲೀಟರ್ ಹಾಲಿಗೆ 2 ರೂ ಹೆಚ್ಚಳ: ರೈತರಿಗೆ ಬಮೂಲ್ ಸಿಹಿ ಸುದ್ದಿ ಪ್ರತಿ ಲೀಟರ್ ಹಾಲಿಗೆ 2 ರೂ ಹೆಚ್ಚಳ: ರೈತರಿಗೆ ಬಮೂಲ್ ಸಿಹಿ ಸುದ್ದಿ

ಒಕ್ಕೂಟಗಳ ನಿರ್ವಹಣೆ, ಹೈನುಗಾರರ ಉತ್ಪಾದನಾ ವೆಚ್ಚ , ನೌಕರರ ಸಂಬಳ, ಹಾಲು ಮತ್ತು ಹಾಲಿನ ಉತ್ಪನ್ನಗಳ ಸಾಗಾಣಿಕೆ ಸೇರಿದಂತೆ ಇನ್ನಿತರೆ ವೆಚ್ಚದಲ್ಲಿ ಹೆಚ್ಚಳವಾಗಿದೆ. ಹೀಗಾಗಿ ನಂದಿನಿ ಹಾಲಿನ ದರ ಏರಿಕೆ ಮಾಡಬೇಕು ಎಂಬುದು ಒಕ್ಕೂಟದ ಬಹಳ ದಿನಗಳ ಬೇಡಿಕೆಯಾಗಿದೆ.

 ಮೊಸರು, ಮಜ್ಜಿಗೆ ಬೆಲೆಯಲ್ಲೂ ಹೆಚ್ಚಳ

ಮೊಸರು, ಮಜ್ಜಿಗೆ ಬೆಲೆಯಲ್ಲೂ ಹೆಚ್ಚಳ

ಒಂದು ವೇಳೆ ಹಾಲಿನ ದರ ಹೆಚ್ಚಳಗೊಂಡರೆ ಮೊದಲು, ಮಜ್ಜಿಗೆ ಸೇರಿದಂತೆ ಹಾಲಿನ ಉತ್ಪನ್ನಗಳ ಬೆಲೆಯೂ ಏರಿಕೆಯಾಗಲಿದೆ.

ಕಳೆದ ಮೂರು ವರ್ಷಗಳ ಹಿಂದೆ ಹಾಲಿನ ದರವನ್ನು ಪ್ರತಿ ಲೀಟರ್‌ಗೆ 2 ರೂ. ಏರಿಕೆ ಮಾಡಲಾಗಿತ್ತು.
 ಮೂರು ವರ್ಷಗಳ ಹಿಂದೆ 2 ರೂ ಹೆಚ್ಚಳ ಮಾಡಲಾಗಿತ್ತು

ಮೂರು ವರ್ಷಗಳ ಹಿಂದೆ 2 ರೂ ಹೆಚ್ಚಳ ಮಾಡಲಾಗಿತ್ತು

ಆ ನಂತರ ಮೂರು ವರ್ಷಗಳಿಂದ ಯಾವುದೇ ದರ ಏರಿಕೆ ಮಾಡಿಲ್ಲ. ಈ ಬಾರಿ ಪ್ರತಿ ಲೀಟರ್‌ಗೆ 2-3 ರೂ ಹೆಚ್ಚಳ ಮಾಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅಂತಿಮ ನಿರ್ಧಾರವನ್ನು ಸರ್ಕಾರ ಕೈಗೊಳ್ಳಲಿದೆ.

 ರಾಜ್ಯದಲ್ಲಿ ಎಷ್ಟು ಲೀಟರ್ ಹಾಲು ಸಂಗ್ರಹ

ರಾಜ್ಯದಲ್ಲಿ ಎಷ್ಟು ಲೀಟರ್ ಹಾಲು ಸಂಗ್ರಹ

ರಾಜ್ಯದಲ್ಲಿ ಒಟ್ಟು 16,380 ಹಾಲು ಸಹಕಾರ ಸಂಘಗಳಿದ್ದು, ಪ್ರತಿದಿನ 78 ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತಿದ್ದು, 37 ಲಕ್ಷ ಲೀಟರ್ ಹಾಲನ್ನು ನಿತ್ಯ ಮಾರಾಟ ಮಾಡಲಾಗುತ್ತಿದೆ.

 ನಂದಿನಿ ಹಾಲಿನ ದರ ಏರಿಕೆಗೆ ಕಾರಣಗಳು

ನಂದಿನಿ ಹಾಲಿನ ದರ ಏರಿಕೆಗೆ ಕಾರಣಗಳು

ಒಕ್ಕೂಟಗಳ ನಿರ್ವಹಣೆ, ಹೈನುಗಾರರ ಉತ್ಪಾದನಾ ವೆಚ್ಚ , ನೌಕರರ ಸಂಬಳ, ಹಾಲು ಮತ್ತು ಹಾಲಿನ ಉತ್ಪನ್ನಗಳ ಸಾಗಾಣಿಕೆ ಸೇರಿದಂತೆ ಇನ್ನಿತರೆ ವೆಚ್ಚದಲ್ಲಿ ಹೆಚ್ಚಳವಾಗಿದೆ. ಹೀಗಾಗಿ ನಂದಿನಿ ಹಾಲಿನ ದರ ಏರಿಕೆ ಮಾಡಬೇಕು ಎಂಬುದು ಒಕ್ಕೂಟದ ಬಹಳ ದಿನಗಳ ಬೇಡಿಕೆಯಾಗಿದೆ.

English summary
The Karnataka Milk Federation has decided to increase the Nandini milk price by Rs 2-3.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X