ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಎಂ ಹುದ್ದೆ ಡೀಲ್ ಹೇಳಿಕೆ ನೀಡಿದ ಯತ್ನಾಳ್‌ಗೆ ಶಿಸ್ತು ಸಮಿತಿ ನೋಟಿಸ್: ಕಟೀಲ್ ಎಚ್ಚರಿಕೆ

|
Google Oneindia Kannada News

ತುಮಕೂರು, ಮೇ. 07: ''2500 ಕೋಟಿ ರೂ.ಗೆ ಕರ್ನಾಟಕ ಸಿಎಂ ಹುದ್ದೆ ಆಫರ್ ಕೊಟ್ಟಿದ್ದರು'' ಎಂಬ ಹೇಳಿಕೆ ನೀಡಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‌ಗೆ ಶಿಸ್ತು ಸಮಿತಿ ಮೂಲಕ ನೋಟಿಸ್ ನೀಡಲಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.

ಶನಿವಾರ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಕಟೀಲ್, ಮುಖ್ಯಮಂತ್ರಿ ಸ್ಥಾನ ನೀಡಲು 2500 ಕೋಟಿ ರೂ. ಹಣ ಕೇಳಿದ್ದಾಗಿ ಹೇಳಿಕೆ ನೀಡಿರುವ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ನೋಟಿಸ್ ನೀಡಿ ವಿವರ ಪಡೆಯಲಾಗುವುದು ಎಂದು ಕಟೀಲ್ ಸ್ಪಷ್ಟಪಡಿಸಿದ್ದಾರೆ.

Nalinkumar kateel clarification about MLA Basanagouda patil yatnal statement on CM post

ಅನಗತ್ಯ ಹೇಳಿಕೆ ನೀಡುವ ಯತ್ನಾಳ್ ಅವರಿಗೆ ಈವರೆಗೂ ಎರಡು ನೋಟಿಸ್ ಕೊಟ್ಟು ವಿವರಣೆ ಪಡೆದುಕೊಳ್ಳಲಾಗಿದೆ. ಈ ಭಾರಿಯೂ ಕೇಂದ್ರ ಶಿಸ್ತು ಸಮಿತಿ ಮೂಲಕ ನೋಟಿಸ್ ನೀಡಲಾಗುವುದು. ಈ ಬಗ್ಗೆ ವರಿಷ್ಠರಿಗೆ ದೂರು ನೀಡಲಾಗಿದೆ. ಅವರಿಂದ ಪೂರ್ಣ ವಿವರಣೆ ಪಡೆದ ಬಳಿಕ ಮುಂದಿನ ಕ್ರಮ ಜರುಗಿಸಲಾಗುವುದು ಎಂದು ಸ್ಪಷ್ಟ ಪಡಿಸಿದ್ದಾರೆ.

Nalinkumar kateel clarification about MLA Basanagouda patil yatnal statement on CM post

ಅನಗತ್ಯ ಹೇಳಿಕೆ ನೀಡುವ ಯತ್ನಾಳ್ ಪದೇ ಪದೇ ಈ ರೀತಿಯ ಅನಗತ್ಯ ಹೇಳಿಕೆ ನೀಡಿ ಗೊಂದಲ ಸೃಷ್ಠಿ ಮಾಡುತ್ತಿದ್ದಾರೆ. ಈ ಬಗ್ಗೆ ಈವರೆಗೂ ಎರಡು ನೋಟಿಸ್ ಕೊಟ್ಟು ವಿವರ ಪಡೆದುಕೊಳ್ಳಲಾಗಿದೆ. ಈ ಬಾರಿಯೂ ಕೇಂದ್ರ ಶಿಸ್ತು ಸಮಿತಿ ಮೂಲಕ ನೋಟಿಸ್ ನೀಡಲಗುವುದು. ಉತ್ತರ ಬಂದ ನಂತರ ಕ್ರಮ ಜರುಗಿಸಲಾಗುವುದು.

Nalinkumar kateel clarification about MLA Basanagouda patil yatnal statement on CM post

ಬಿಜೆಪಿಯಲ್ಲಿ ದೊಡ್ಡವರು, ಸಣ್ಣವರು ಎನ್ನುವ ಪ್ರಮೆಯವೇ ಇಲ್ಲ. ಎಲ್ಲರೂ ಶಿಸ್ತು ಸಮಿತಿ ವ್ಯಾಪ್ತಿಗೆ ಒಳಪಡುತ್ತಾರೆ ಎಂದು ಕಟೀಲ್ ಸ್ಪಷ್ಟನೆ ನೀಡಿದ್ದಾರೆ.

English summary
CM post for 2500 cr: BJP State president Nalin kumar kateel says that summons will issued to Basanavanagouda patil yatnal, know more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X