ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಿಯು ಫಲಿತಾಂಶ, ಇದು ಸಿಎಂ ಕ್ಷಮೆ ಕೇಳುವ ಸಮಯ: ನಳಿನ್ ಕುಮಾರ್ ಕಟೀಲು

|
Google Oneindia Kannada News

Recommended Video

Lok Sabha Elections 2019 : ಕುಮಾರಸ್ವಾಮಿಯವರು ಕ್ಷಮೆ ಕೇಳುವ ಸಮಯವಿದು..

ಬೆಂಗಳೂರು, ಏ.15: ದ್ವಿತೀಯ ಪಿಯು ಫಲಿತಾಂಶ ಬಂದ ಬಳಿಕ ರಾಜಕೀಯ ತಿಕ್ಕಾಟ ಹೆಚ್ಚಾಗಿದೆ.

ಪಿಯುಸಿ ಫಲಿತಾಂಶವನ್ನೂ ಬಿಡದೆ ಅದಕ್ಕೂ ರಾಜಕೀಯ ಬಣ್ಣವನ್ನು ಹಚ್ಚಿಯೇ ಬಿಟ್ಟಿದ್ದಾರೆ.ಈ ಕುರಿತು ಸಂಸದ ನಳಿನ್ ಕುಮಾರ್ ಕಟೀಲು ಟ್ವೀಟ್ ಮಾಡಿದ್ದು, ಮುಖ್ಯಮಂತ್ರಿಗಳೇ ಪಿಯುಸಿ ಫಲಿತಾಂಶ ನೋಡಿಯೂ ಉಡುಪಿ-ದಕ್ಷಿಣ ಕನ್ನಡದ ಜನರು ತಳಿವಳಿಕೆ ಇಲ್ಲದವರು ಎಂದು ಹೇಳುತ್ತೀರಾ ಎಂದು ಪ್ರಶ್ನಿಸಿದ್ದಾರೆ.

ದ್ವಿತೀಯ ಪಿಯುಸಿ : ಶೇ.100 ಹಾಗೂ ಶೂನ್ಯ ಫಲಿತಾಂಶ ಪಡೆದ ಕಾಲೇಜುಗಳು ದ್ವಿತೀಯ ಪಿಯುಸಿ : ಶೇ.100 ಹಾಗೂ ಶೂನ್ಯ ಫಲಿತಾಂಶ ಪಡೆದ ಕಾಲೇಜುಗಳು

ಪದವಿಪೂರ್ವ ಶಿಕ್ಷಣ ಇಲಾಖೆಯು ಇಂದು(ಏ.15) ದ್ವಿತೀಯ ಪಿಯುಸಿ ಫಲಿತಾಂಶವನ್ನು ಪ್ರಕಟಿಸಿದೆ. ಅದರಲ್ಲಿ ಉಡುಪಿ ಪ್ರಥಮ ಸ್ಥಾನ ಪಡೆದರೆ ದಕ್ಷಿಣ ಕನ್ನಡ ದ್ವಿತೀಯ ಸ್ಥಾನ ಪಡೆದುಕೊಂಡಿದೆ.

ದ್ವಿತಿಯ ಪಿಯುಸಿ ಫಲಿತಾಂಶ: ಕೃತಿ, ವರ್ಷಿಣಿ, ಸ್ವಾತಿ ಟಾಪರ್ಸ್ದ್ವಿತಿಯ ಪಿಯುಸಿ ಫಲಿತಾಂಶ: ಕೃತಿ, ವರ್ಷಿಣಿ, ಸ್ವಾತಿ ಟಾಪರ್ಸ್

ಕುಮಾರಸ್ವಾಮಿ ಏನು ಹೇಳಿದ್ದರು?
ಉಡುಪಿ, ಕಾರ್ಕಳ ಸೇರಿದಂತೆ ಕರಾವಳಿ ಭಾಗದ ಜನರಿಗೆ ತಿಳುವಳಿಕೆ ಇಲ್ಲ. ಅಲ್ಲಿಯ ಜನ ಬಿಜೆಪಿಗೆ ಮಾತ್ರ ವೋಟ್ ಹಾಕ್ತಾರೆ. ಬಿಜೆಪಿಯನ್ನು ಗೆಲ್ಲಿಸುವ ಉಡುಪಿ, ಬ್ರಹ್ಮಾವರ, ಕಾಪು, ಕಾರ್ಕಳದ ಜನರಿಗೆ ಶಾಲೆ ಕಾಲೇಜು ಕಟ್ಟಿಸಿಕೊಡಲು ಕುಮಾರಸ್ವಾಮಿ, ರೇವಣ್ಣನೇ ಬೇಕು ಎಂದು ಹೀಯಾಳಿಸಿದ್ದರು.

Nalin kumar says HDK should ask sorry to Karavali people now

ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ, ಉಡುಪಿಗೆ ಪ್ರಥಮ ಸ್ಥಾನ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ, ಉಡುಪಿಗೆ ಪ್ರಥಮ ಸ್ಥಾನ

ನಳಿನ್ ಕುಮಾರ್ ಕಟೀಲು ಅವರ ಟ್ವೀಟಿನಲ್ಲೇನಿದೆ?
ಉಡುಪಿ - ದಕ್ಷಿಣ ಕನ್ನಡ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಮತ್ತೊಮ್ಮೆ ಮೇಲುಗೈ ಸಾಧಿಸಿದೆ. ರಾಜ್ಯದಲ್ಲೇ ಉಡುಪಿ ಪ್ರಥಮ ಸ್ಥಾನ ದಕ್ಷಿಣ ಕನ್ನಡ ದ್ವಿತೀಯ ಸ್ಥಾನ ಪಡೆದುಕೊಂಡಿದೆ. ಮುಖ್ಯಮಂತ್ರಿಯವರೇ. ಇದನ್ನೂ ನೋಡಿಯೂ ಉಡುಪಿ- ದಕ್ಷಿಣ ಕನ್ನಡದ ಜನಗಳು ತಿಳುವಳಿಕೆ ಇಲ್ಲದವರೂ ಅಂತೀರಾ. ಈಗ ನೀವು ಕ್ಷಮೆ ಕೇಳುವ ಸಮಯ ಬಂದಿದೆ ಎಂದು ಟ್ವೀಟ್ ಮಾಡಿದ್ದಾರೆ.

English summary
MP Nalin Kumar Kateel says that Chief Minister HD Kumaraswamy now ask sorry to Karavali people for his previous comment about Karavali people don't have knowledge.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X