ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾಗಸಾಧುಗಳು ನುಡಿದ ಕರ್ನಾಟಕ ಚುನಾವಣಾ ಭವಿಷ್ಯವೂ ನಿಜವಾಗಿದೆ!

|
Google Oneindia Kannada News

Recommended Video

Karnataka Elections 2018 : ನಾಗಾಸಾಧುಗಳು ನುಡಿದ ಭವಿಷ್ಯ ಕೊನೆಗೂ ನಿಜವಾಯ್ತಾ? | Oneindia Kannada

ಕೋಡಿಮಠದ ಶ್ರೀಗಳು ಕರ್ನಾಟಕ ಚುನಾವಣೆಯ ಬಗ್ಗೆ ಸುಮಾರು ಒಂದು ವರ್ಷದ ಹಿಂದೆಯೇ ಭವಿಷ್ಯ ನುಡಿದಿದ್ದರು, ಅದು ನಿಜವಾಗಿಯೂ ಹೊರಹೊಮ್ಮಿದೆ. ಇದರ ಜೊತೆಗೆ, ಉತ್ತರ ಭಾರತದಿಂದ ಬಂದ ಶಿವನ ಆರಾಧಕರಾದ ನಾಗಾಸಾಧುಗಳು ಕೂಡಾ ಭವಿಷ್ಯ ನುಡಿದಿದ್ದರು.

ಈ ವರ್ಷದ ಫೆಬ್ರವರಿ ತಿಂಗಳಲ್ಲಿ ಬಳ್ಳಾರಿ ಜಿಲ್ಲೆಯ ಐತಿಹಾಸಿಕ ಸುಕ್ಷೇತ್ರ ಮೈಲಾರ ಲಿಂಗೇಶ್ವರನ ಕಾರ್ಣಿಕೋತ್ಸವ ನುಡಿಯಲ್ಲಿ 'ಆಕಾಶದ ಕೆಳಗೆ ಗಿಳಿ ಕುಂತಿತ್ತಲೇ ಪರಾಕ್‌' ಎಂದು ಕಾರ್ಣಿಕ ನುಡಿಯುವ ಗೊರವಪ್ಪಜ್ಜ ಉವಾಚಿಸಿದ್ದರು.

ಸಂಖ್ಯಾಶಾಸ್ತ್ರದ ಪ್ರಕಾರ ಯಡಿಯೂರಪ್ಪಗೆ ಕಷ್ಟ ಕಷ್ಟ ಕಷ್ಟ! ಸಂಖ್ಯಾಶಾಸ್ತ್ರದ ಪ್ರಕಾರ ಯಡಿಯೂರಪ್ಪಗೆ ಕಷ್ಟ ಕಷ್ಟ ಕಷ್ಟ!

ವಾರಣಾಸಿಯಿಂದ ಬಂದಿದ್ದ ಹದಿನೆಂಟು ನಾಗಸಾಧುಗಳು ಯಡಿಯೂರಪ್ಪನವರ ನಿವಾಸಕ್ಕೆ ದಿಢೀರ್ ಭೇಟಿ ನೀಡಿ, ಆಶೀರ್ವದಿಸಿ ಹೋಗಿದ್ದರು. ಇದಾದ ನಂತರ, ಉತ್ತರ ಭಾರತದ ಕೇದಾರನಾಥ್ ನಿಂದ ದೂರವಾಣಿ ಮೂಲಕ ಕರೆ ಮಾಡಿ, ಕುಮಾರಸ್ವಾಮಿಯವರ ಭವಿಷ್ಯವನ್ನೂ ನುಡಿದಿದ್ದರು.

ನೂರಕ್ಕೆ ನೂರು ಸತ್ಯವಾಯಿತು ಕೋಡಿಶ್ರೀಗಳ ಚುನಾವಣಾ ಭವಿಷ್ಯ ನೂರಕ್ಕೆ ನೂರು ಸತ್ಯವಾಯಿತು ಕೋಡಿಶ್ರೀಗಳ ಚುನಾವಣಾ ಭವಿಷ್ಯ

ನಾಗಸಾಧು ನುಡಿದ ಪ್ರಕಾರ, ರಾಜ್ಯದ ಅಪ್ರತಿಮ ದೈವಭಕ್ತ ಕುಟುಂಬವಾದ ದೇವೇಗೌಡರಿಗೆ ಈ ಬಾರಿಯ ಚುನಾವಣೆ ಶುಭ ಸೂಚಕವಾಗಲಿದೆ ಎನ್ನುವ ಭವಿಷ್ಯ ಹೇಳಲಾಗಿತ್ತು. ತುಮಕೂರಿಗೆ ಕೇದಾರನಾಥ್ ನಿಂದ ಆಗಮಿಸಿದ್ದ ನಾಗಸಾಧುಗಳನ್ನು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಮತ್ತು ಎಚ್ ಡಿ ರೇವಣ್ಣ ಜೊತೆಯಾಗಿ ಹೋಗಿ ಭೇಟಿ ಮಾಡಿ, ಆಶೀರ್ವಾದ ಪಡೆದುಕೊಂಡಿದ್ದರು.

ಯಡಿಯೂರಪ್ಪ ಪ್ರಮಾಣ ವಚನ : ಲಾಭವೂ ಇದೆ, ದೋಷವೂ ಇದೆ ಯಡಿಯೂರಪ್ಪ ಪ್ರಮಾಣ ವಚನ : ಲಾಭವೂ ಇದೆ, ದೋಷವೂ ಇದೆ

ಕರ್ನಾಟಕ ಅಸೆಂಬ್ಲಿ ಚುನಾವಣೆಯ ಬಗ್ಗೆ ನಾಗಸಾಧುಗಳು, ಕುಮಾರಸ್ವಾಮಿ ಮತ್ತು ಯಡಿಯೂರಪ್ಪನವರ ಬಗ್ಗೆ ನುಡಿದ ಭವಿಷ್ಯ ನಿಜವಾಗಿ ಹೊರಬಿದ್ದಿರುವುದು ವಿಶೇಷ. ನಾಗಸಾಧುಗಳು ತರಹೇವಾರಿ ಭವಿಷ್ಯ ನುಡಿದಿದ್ದರು, ಮುಂದೆ ಓದಿ..

ಯಡಿಯೂರಪ್ಪನವರ ನಿವಾಸಕ್ಕೆ ಭೇಟಿ ನೀಡಿದ್ದ 18ನಾಗಸಾಧುಗಳು

ಯಡಿಯೂರಪ್ಪನವರ ನಿವಾಸಕ್ಕೆ ಭೇಟಿ ನೀಡಿದ್ದ 18ನಾಗಸಾಧುಗಳು

ಕಳೆದ ಅಕ್ಟೋಬರ್ ತಿಂಗಳ ಆದಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪನವರ ನಿವಾಸಕ್ಕೆ ಭೇಟಿ ನೀಡಿದ್ದ ಹದಿನೆಂಟು ನಾಗಸಾಧುಗಳು, ಯಡಿಯೂರಪ್ಪನವರನ್ನು ಆಶೀರ್ವದಿಸಿ ಹೋಗಿದ್ದರು. ಮತ್ತೆ ನೀವು ಮುಖ್ಯಮಂತ್ರಿಯಾಗುತ್ತೀರಿ, ಬಿಜೆಪಿಗೆ ಕರ್ನಾಟಕದಲ್ಲಿ ಉಜ್ವಲ ಭವಿಷ್ಯವಿದೆ ಎಂದು ಹೇಳಿದ್ದರು. ಅದರಂತೆ, ಬಿಎಸ್ವೈ 54ಗಂಟೆ ಸಿಎಂ ಆದರು, ಬಿಜೆಪಿ ರಾಜ್ಯದಲ್ಲಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತು.

ಬಿಎಸ್ವೈ ಬಹುಮತ ಸಾಬೀತು ಮಾಡ್ತಾರಾ? ಜ್ಯೋತಿಷಿ ಏನಂತಾರೆ? ಬಿಎಸ್ವೈ ಬಹುಮತ ಸಾಬೀತು ಮಾಡ್ತಾರಾ? ಜ್ಯೋತಿಷಿ ಏನಂತಾರೆ?

ಖಾಸಗಿ ಕಾರ್ಯಕ್ರಮವೊಂದಕ್ಕೆ ಕೇದಾರನಾಥ್ ನಿಂದ ಆಗಮಿಸಿದ್ದ ನಾಗಸಾಧು

ಖಾಸಗಿ ಕಾರ್ಯಕ್ರಮವೊಂದಕ್ಕೆ ಕೇದಾರನಾಥ್ ನಿಂದ ಆಗಮಿಸಿದ್ದ ನಾಗಸಾಧು

ತುಮಕೂರಿನ ಚಿಕ್ಕನಾಯಕನಹಳ್ಳಿಯಲ್ಲಿನ ಖಾಸಗಿ ಕಾರ್ಯಕ್ರಮವೊಂದಕ್ಕೆ ಕೇದಾರನಾಥ್ ನಿಂದ ಆಗಮಿಸಿದ್ದ ನಾಗಸಾಧುಗಳನ್ನು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಮತ್ತು ಎಚ್ ಡಿ ರೇವಣ್ಣ ಜೊತೆಯಾಗಿ ಹೋಗಿ ಭೇಟಿ ಮಾಡಿ ಆಶೀರ್ವಾದ ಪಡೆದುಕೊಂಡಿದ್ದರು. ಸಹೋದರರು ಭೇಟಿಯಾದ ಆರು ತಿಂಗಳ ನಂತರ, ಕುಮಾರಸ್ವಾಮಿ ಆಪ್ತರಿಗೆ ನಾಗಸಾಧುಗಳು ದೂರವಾಣಿ ಮೂಲಕ ಭವಿಷ್ಯ ನುಡಿದಿದ್ದರು.

ನೋಡೇ ಬಿಡುವಾ.. ಕೋಡಿಶ್ರೀಗಳು ನುಡಿದ ಭವಿಷ್ಯ ನಿಜವಾಗುತ್ತಾ ಎಂದು? ನೋಡೇ ಬಿಡುವಾ.. ಕೋಡಿಶ್ರೀಗಳು ನುಡಿದ ಭವಿಷ್ಯ ನಿಜವಾಗುತ್ತಾ ಎಂದು?

ಕೈ ಮುಷ್ಟಿಕಟ್ಟಿ, ಕಮಲ ಮುದುಡುವುದು, ಹೊಸ ತೆನೆಗೆ ದಾರಿಯಾಗುವುದು

ಕೈ ಮುಷ್ಟಿಕಟ್ಟಿ, ಕಮಲ ಮುದುಡುವುದು, ಹೊಸ ತೆನೆಗೆ ದಾರಿಯಾಗುವುದು

ಕೈ ಮುಷ್ಟಿಕಟ್ಟಿ, ಕಮಲ ಮುದುಡುವುದು, ಹೊಸ ತೆನೆಗೆ ದಾರಿಯಾಗುವುದು ಎಂದು ಒಗಟಿನ ರೂಪದಲ್ಲಿ ನಾಗಸಾಧು ಜೆಡಿಎಸ್ ಅಧಿಕಾರಕ್ಕೆ ಬರುತ್ತದೆ ಎಂದು ದೂರವಾಣಿ ಮೂಲಕ ಭವಿಷ್ಯ ನುಡಿದಿದ್ದರು. ಅದರಂತೇ, ಕಾಂಗ್ರೆಸ್ 78 ಸ್ಥಾನ ಪಡೆದು ಎರಡನೇ ಸ್ಥಾನಕ್ಕೆ ತೃಪ್ತಿ ಪಡಬೇಕಾಯಿತು. ಕಮಲ ದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ, ಸರಕಾರ ರಚಿಸುವಲ್ಲಿ ವಿಫಲವಾಯಿತು. ಕಾಂಗ್ರೆಸ್ ಬೆಂಬಲದೊಂದಿಗೆ ಜೆಡಿಎಸ್ ಇನ್ನೇನು ಸರಕಾರ ರಚಿಸಲಿದೆ.

ರಾಜೀನಾಮೆ ನೀಡಬೇಕಾಗಿದ್ದನ್ನು ಹೇಳಲು ಸಾಧುಗಳು ಮಿಸ್ ಮಾಡ್ಕೊಂಡ್ರಾ?

ರಾಜೀನಾಮೆ ನೀಡಬೇಕಾಗಿದ್ದನ್ನು ಹೇಳಲು ಸಾಧುಗಳು ಮಿಸ್ ಮಾಡ್ಕೊಂಡ್ರಾ?

ಚಿತ್ರದುರ್ಗ ಜಿಲ್ಲೆ, ಭರಮಸಾಗರದ ಬಿಜೆಪಿ ಕಾರ್ಯಕರ್ತರೊಬ್ಬರ ಮನೆಗೆ ಅಚಾನಕ್ ಆಗಿ ನಾಲ್ಕು ಜನ ನಾಗಸಾಧುಗಳು ಆಗಮಿಸಿದ್ದರು. ದೇಶ ಸಂಚಾರ ಮಾಡುತ್ತಾ ಈ ಸಾಧುಗಳು ಹರಿದ್ವಾರದಿಂದ ರಾಮೇಶ್ವರಕ್ಕೆ ತೆರಳುವ ಮಾರ್ಗಮಧ್ಯೆ ಕಿರಣ್ ಅನ್ನುವವರ ಮನೆಗೆ ಬಂದಿದ್ದರು. ಹಿಂದುತ್ವದ ಅಲೆಯುಳ್ಳ ಪಕ್ಷ ಚುನಾವಣೆಯಲ್ಲಿ ಪ್ರಚಂಡ ಜಯಭೇರಿ ಬಾರಿಸಲಿದೆ. ಯಡಿಯೂರಪ್ಪನವರು ಮುಖ್ಯಮಂತ್ರಿಯಾಗುವುದು ಖಚಿತ ಎನ್ನುವ ಭವಿಷ್ಯವನ್ನು ಈ ಸಾಧುಗಳು ನುಡಿದಿದ್ದರು. ಬಿಎಸ್ವೈ ಸಿಎಂ ಆದರೂ, ಅಷ್ಟೇ ವೇಗದಲ್ಲಿ ರಾಜೀನಾಮೆ ನೀಡಬೇಕಾಗಿದ್ದನ್ನು ಹೇಳಲು ಸಾಧುಗಳು ಮಿಸ್ ಮಾಡ್ಕೊಂಡ್ರೋ ಏನೋ..

ಪ್ರಸಕ್ತ ರಾಜ್ಯ ರಾಜಕೀಯದಲ್ಲಿ ನಿಯತ್ತು ಉಳಿದುಕೊಂಡಿಲ್ಲ

ಪ್ರಸಕ್ತ ರಾಜ್ಯ ರಾಜಕೀಯದಲ್ಲಿ ನಿಯತ್ತು ಉಳಿದುಕೊಂಡಿಲ್ಲ

ಪ್ರಸಕ್ತ ರಾಜ್ಯ ರಾಜಕೀಯದಲ್ಲಿ ನಿಯತ್ತು ಉಳಿದುಕೊಂಡಿಲ್ಲ. ಪ್ರಾಮಾಣಿಕ ರಾಜಕಾರಣಿಗಳಿಂದ ಅಧಿಕಾರವನ್ನು ಕಿತ್ತುಕೊಂಡು, ದುರಾಡಳಿತ ನಡೆಸುವವರು ಅಧಿಕಾರದಲ್ಲಿ ಕೂರುತ್ತಾರೆಂದು ಮೈಲಾರದ ಕಾರ್ಣಿಕವನ್ನು ಭಕ್ತರು ಅರ್ಥೈಸಿಕೊಂಡಿದ್ದರು ಮತ್ತು ಇದು ಭಾರೀ ಚರ್ಚೆಗೆ ಒಳಗಾಗಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ. 'ಆಕಾಶದ ಕೆಳಗೆ ಗಿಳಿ ಕುಂತಿತ್ತಲೇ ಪರಾಕ್‌' ಇದು ಮೈಲಾರದ ಕಾರ್ಣಿಕ ಎಂದು ಅಧಿಕೃತವಾಗಿ ಮುಜರಾಯಿ ಇಲಾಖೆ ಪ್ರಕಟಿಸಿತ್ತು.

English summary
Nagasadhus prediction on Karnataka Assembly Election almost came out accurately. Sadhus predicted BJP performance in the election and JDS will come to the power . Similarly Kodi Seer also predicted that HD Kumaraswamy will become CM of Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X