ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತೀಯ ಅರಣ್ಯ ಸೇವೆಗೆ ಆಯ್ಕೆಯಾದ ಕರ್ನಾಟಕದ ಏಕೈಕ ಅಭ್ಯರ್ಥಿ ಲಕ್ಷ್ಮಿ

|
Google Oneindia Kannada News

ಬೆಂಗಳೂರು, ಫೆಬ್ರವರಿ 7: ಕೇಂದ್ರೀಯ ಲೋಕಸೇವಾ ಆಯೋಗವು ಭಾರತೀಯ ಅರಣ್ಯ ಸೇವೆಗೆ ನಡೆಸಿದ್ದ ಪರೀಕ್ಷೆ ಫಲಿತಾಂಶ ಬುಧವಾರ ಬಂದಿದೆ. ಇದರಲ್ಲಿ ದೇಶದ ಎಂಬತ್ತೊಂಬತ್ತು ಅಭ್ಯರ್ಥಿಗಳು ಆಯ್ಕೆ ಆಗಿದ್ದಾರೆ. ಹೆಮ್ಮೆಯ ವಿಷಯ ಏನೆಂದರೆ, ಕರ್ನಾಟಕದವರಾದ ಎನ್.ಲಕ್ಷ್ಮೀ ಅವರು ಐವತ್ತನೇ ಸ್ಥಾನ ಪಡೆದು, ಆಯ್ಕೆ ಆಗಿದ್ದಾರೆ.

ಯುಪಿಎಸ್ಸಿ ವಯೋಮಿತಿ ಬದಲಾವಣೆ ಬಗ್ಗೆ ಕೇಂದ್ರ ಸರ್ಕಾರದಿಂದ ಸ್ಪಷ್ಟನೆಯುಪಿಎಸ್ಸಿ ವಯೋಮಿತಿ ಬದಲಾವಣೆ ಬಗ್ಗೆ ಕೇಂದ್ರ ಸರ್ಕಾರದಿಂದ ಸ್ಪಷ್ಟನೆ

ಆ ಮೂಲಕ ಲಕ್ಷ್ಮೀ ಅವರು ಕರ್ನಾಟಕಕ್ಕೆ ಕೋಡು ಮೂಡಿಸಿದ್ದಾರೆ. ಇನ್ನೊಂದು ವಿಚಾರ ಏನೆಂದರೆ ಭಾರತೀಯ ಅರಣ್ಯ ಸೇವೆಗೆ ಆಯ್ಕೆಯಾದ ಕರ್ನಾಟಕದ ಏಕೈಕ ಅಭ್ಯರ್ಥಿ ಎನ್.ಲಕ್ಷ್ಮೀ. ಪರೀಕ್ಷೆ ಫಲಿತಾಂಶ ಹೊರ ಬಿದ್ದ ಹಿನ್ನೆಲೆಯಲ್ಲಿ ಗುರುವಾರದಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಭಾರತೀಯ ಅರಣ್ಯ ಸೇವೆಗೆ ಆಯ್ಕೆಯಾದ ಎಲ್ಲ ಅಭ್ಯರ್ಥಿಗಳಿಗೆ ಶುಭಾಶಯ ಕೋರಿದ್ದಾರೆ.

N Lakshmi

ಯುಪಿಎಸ್ ಸಿ ನಡೆಸುವ ಭಾರತೀಯ ಅರಣ್ಯ ಸೇವೆ (IFS) ಪರೀಕ್ಷೆಯಲ್ಲಿ ಆಯ್ಕೆಯಾಗಿರುವ ಎಲ್ಲ ಅಭ್ಯರ್ಥಿಗಳಿಗೆ ಶುಭಾಶಯಗಳು. ಇದರಲ್ಲಿ ಕರ್ನಾಟಕದ ಲಕ್ಷ್ಮಿ ಎನ್. ಅವರು 50ನೇ ಸ್ಥಾನ ಪಡೆದು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ. ಅರಣ್ಯ ಸಂಪತ್ತು ಉಳಿಸುವಲ್ಲಿ IFS ಅಧಿಕಾರಿಗಳ ಪಾತ್ರ ಮಹತ್ವದ್ದು. ಶುಭವಾಗಲಿ ಎಂದು ದೇವೇಗೌಡರು ಟ್ವೀಟ್ ಮಾಡಿದ್ದಾರೆ.

English summary
N Lakshmi Karnataka's only candidate appointed to IFS (Indian Forest Service). This selection done through UPSC exam. 89 candidates selected all over the country for IFS. Lakshmi got 51st rank. She is the only candidate from Karnataka. Former PM HD Deve Gowda wish her for success.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X